About Us Advertise with us Be a Reporter E-Paper

ವಿವಾಹ್

ಪತಿ ಮನೆಯೊಳಗೆ ಇಲ್ಲದಿದ್ದರೆ..?

ಭವಿ

Happy young woman holding kitchen ladle

ವರ್ಷದ 365 ದಿನವೂ ಮನೆಕೆಲಸ, ಅಡುಗೆ, ಗಂಡನ ಸೇವೆ ಇದರಲ್ಲೇ ನಮ್ಮ ಬದುಕು ಕಳೆದೋಯ್ತು.. ಬ್ಯಾಚುಲರ್ ಲೈಫ್‌ನಲ್ಲಿ ಎಂಜಾಯ್ ಮಾಡಿದ್ದೇ ಬಂತು. ಈಗ ಏನಿದ್ದರೂ  ಗಂಡನಿಗೋಸ್ಕರ ನಮ್ಮ ಬಾಳು ಸೀಮಿತ ಅಂತ ಕೆಲವರು ಗೋಳಾಡುತ್ತಿರುತ್ತಾರೆ. ಇನ್ನು ಉದ್ಯೋಗಸ್ಥ ಮಹಿಳೆಯರಿಗಂತೂ ಮನೆ, ಆಫೀಸು ಅಂತ ನಿಭಾಯಿಸುವುದರಲ್ಲೇ ಬದುಕು ಮುಗಿದು ಹೋಗುತ್ತದೆ. ಅವರು ಆ ರೀತಿ ಯೋಚಿಸುವುದರಲ್ಲೂ ತಪ್ಪಿಲ್ಲ. ಸೀಮಿತ ಚೌಕಟ್ಟಿನೊಳಗೆ ಸಿಲುಕಿ ಸಂತೋಷ ಕಂಡುಕೊಳ್ಳುವುದರಿಂದ ವಂಚಿತರಾಗಿರುವುದೇ ಇದಕ್ಕೆಲ್ಲಾ ಕಾರಣ. ಹಾಗಂತ ಇರುವುದರಲ್ಲೇ ಖುಷಿಕಂಡುಕೊಳ್ಳಲು ಸಾಧ್ಯವಿಲ್ಲವೇ? ಖಂಡಿತಾ ಇದೆ. ಪುಟ್ಟ ಪುಟ್ಟ ಸನ್ನಿವೇಶವೂ ಅಂತವರಿಗೆ ಭಾರೀ ಸಂತಸವನ್ನೇ ನೀಡಬಲ್ಲದು. ಗಂಡ ಪ್ರವಾಸ ಹೋಗಿರುವಾಗ ಅಥವಾ ಮನೆಯಲ್ಲಿ ಇಲ್ಲದಿರುವಾಗ  ಅದ್ಭುತ ಕ್ಷಣಗಳನ್ನು ಅದವಾದಿಸಬಹುದು.

ಇತ್ತೀಚೆಗೆ ನಡೆಸಲಾದ ಒಂದು ಸಮೀಕ್ಷೆಯಲ್ಲಿ ಪತಿಯ ಅನುಪಸ್ಥಿತಿಯನ್ನು ಹೇಗೆ ಕಳೆಯುತ್ತೀರಿ ಎಂದು ಕೇಳಿದಾಗ, 80% ಕ್ಕೂ ಹೆಚ್ಚು ಮಹಿಳೆಯರು ಸಂತೋಷದಿಂದ ಸ್ವೀಕರಿಸುತ್ತೇವೆ ಎಂದಿದ್ದಾರೆ. ಎಂಥವರಿಗೂ ಆದರೂ ಕೊಂಚ ವೇಳೆಯನ್ನು ತನ್ನ ಸ್ವಂತಕ್ಕಾಗಿ ಬಳಸಿಕೊಳ್ಳಬೇಕೆಂದು ಅನ್ನಿಸಿಯೇ ಇರುತ್ತದೆ.  ಅದಕ್ಕೆ ಮನೆಯಲ್ಲಿ ಪತಿಯಿಲ್ಲದ ಸಮಯವೇ ಸೂಕ್ತ.

ಗೆಳತಿಯರನ್ನು ಮನೆಗೆ ಆಹ್ವಾನಿಸಬಹುದು

ಹಳೆಯ ಮತ್ತು ಆತ್ಮೀಯ ಗೆಳತಿಯರನ್ನು ಮನೆಗೆ ಆಹ್ವಾನಿಸಿ ಕೆಲ ಹೊತ್ತು ಹರಟೆಯಲ್ಲಿ ಕಳೆಯುವುದು ಪ್ರತಿ ಮಹಿಳೆಗೂ  ಇಷ್ಟದ ವಿಷಯ. ಇದು ಮನಸ್ಸಿನ ಒತ್ತಡ, ನೋವನ್ನು ಹೊರಹಾಕುವ ವಿಧಾನವೂ ಹೌದು. ಪತಿ ಮನೆಯಲ್ಲಿರುವಾಗ ಇದೆಲ್ಲಾ ಅಸಾಧ್ಯ. ಹಾಗಾಗಿ ಪತಿಯ ಅನುಪಸ್ಥಿಯಲ್ಲಿ ಪತ್ನಿ ಸಂತಸದಿಂದಿದ್ದಾಳೆ ಎಂದರೆ ಆ ಸಮಯವನ್ನು ತನ್ನ ಆತ್ಮೀಯರೊಂದಿಗೆ ಕಳೆದು ಮನಸ್ಸಿನ ಒತ್ತಡಗಳನ್ನು ನಿವಾರಿಸಿಕೊಂಡಿದ್ದಾಳೆ ಎಂದು ಅರ್ಥೈಸಿಕೊಳ್ಳಬೇಕು.

ಅಡುಗೆಯ ಚಿಂತೆ ಇಲ್ಲ.

ಹೆಣ್ಣುಮಕ್ಕಳಿಗೆ ಮದುವೆಯಾದ ತಕ್ಷಣ ಅಡುಗೆ ಮನೆಯ ಜವಬ್ಧಾರಿ ಹೆಗಲ ಮೇಲೆ ಬಿತ್ತೆಂದೇ ಅರ್ಥ. ಜೀವಮಾನಪೂರ್ತಿ ಮನೆಯ ಸದಸ್ಯರಿಗೆ ರುಚಿರುಚಿಯಾಗಿ ಅಡುಗೆ ಮಾಡಿ ಬಡಿಸಬೇಕಾದ  ಅದರ ನಡುವೆ ಕೊಂಕುಮಾತುಗಳನ್ನು ಕೇಳಿಸಿಕೊಳ್ಳಬೇಕು. ಉಪ್ಪು ಕಡಿಮೆ, ಖಾರ ಹೆಚ್ಚು ಎಂದೆಲ್ಲಾ ಟೀಕೆಗಳು. ಹೀಗೆ ಎಲ್ಲರ ಮನ ಮೆಚ್ಚುವ ಅಡುಗೆಯನ್ನು ಮಾಡಲು ಗೃಹಿಣಿಗೆ ಸದಾ ಮಾನಸಿಕ ಒತ್ತಡವಿದ್ದೇ ಇರುತ್ತದೆ. ಆದರೆ ಪತಿಯ ಅನುಪಸ್ಥಿತಿಯಲ್ಲಿ ಅಡುಗೆ ಕೆಲಸಕ್ಕೆ ಬ್ರೇಕ್ ಸಿಕ್ಕಿಬಿಡುತ್ತದೆ. ಹೊರಗಿನಿಂದ ತಿಂಡಿ ತರಿಸಿಯೋ, ಅಥವಾ ಸ್ನೇಹಿತರೊಂದಿಗೆ ಹೊಟೇಲ್ ಊಟಮಾಡುತ್ತಲೋ ಕಾಲ ಕಳೆಯಬಹುದು. ತನಗೆ ಇಷ್ಟವಿರುವ ತಿನಿಸುಗಳನ್ನಷ್ಟೇ ತಿನ್ನಲು ಸದಾವಕಾಶ.

ನಿದ್ದೆಗೆ ಹೆಚ್ಚಿನ ಸಮಯ

ಸಾಮಾನ್ಯವಾಗಿ ಗೃಹಿಣಿಯರು ಎಲ್ಲರಿಗಿಂತ ತಡವಾಗಿ  ಎಲ್ಲರಿಗಿಂತ ಮೊದಲು ಎದ್ದು ಕೆಲಸವನ್ನು ಪ್ರಾರಂಭಿಸುತ್ತಾರೆ. ಅಂದರೆ ಉಳಿದವರಿಗಿಂತಲೂ ಕಡಿಮೆ ನಿದ್ದೆ ಇವರಿಗೆ. ಹಾಗಾಗಿ ಇವರ ಒಟ್ಟಾರೆ ನಿದ್ದೆ ಅಗತ್ಯಕ್ಕಿಂತಲೂ ಕಡಿಮೆಯೇ. ಪತಿಯ ಮನೆಯಲ್ಲಿಲ್ಲಾದಾಗ  ಬೆಳಗ್ಗಿನ ತಿಂಡಿ ಸಿದ್ದಗೊಳಿಸುವ, ಗಂಡನನನ್ನು ಆಫೀಸಿಗೆ ಹೊರಡಿಸುವ ಚಿಂತೆ ಇಲ್ಲ. ಹೀಗಾಗಿ ಈ ಸಂದರ್ಭದಲ್ಲಿ ನಿದ್ದೆಯ ಕೊರತೆ ನೀಗಿಸಿಕೊಳ್ಳಬಹುದು.

ತನ್ನಿಷ್ಟದ ಹವ್ಯಾಸಕ್ಕೆ ಸಕಾಲ

ಪತಿ ಮನೆಯಲ್ಲಿಲ್ಲದಿರುವಾಗ ಕೆಲಸವೂ ಕಡಿಮೆ. ಯಾವುದೇ ಒತ್ತಡವಿಲ್ಲ. ಆರಾಮವಾಗಿ ಊಟ, ತಿಂಡಿ ಮಾಡಿ ತನ್ನಿಷ್ಟದ ಹವ್ಯಾಸಕ್ಕೆ ಉಳಿದ ಸಮಯ  ನಿಟ್ಟಿಂಗ್, ಪೆಯಿಂಟಿಗ್, ಸಂಗೀತ ಕೇಳಲು, ಹಾಡಲು, ಟಿವಿ ನೋಡಲು ಬೇಕಾದಷ್ಟು ಸಮಯ ಸಿಗುತ್ತದೆ. ಕತೆ, ಕವನ, ಲೇಖನ ಬರೆಯುವವರಿಗೆ ಇದು ಸುಸಂದರ್ಭ.

ಆಫೀಸಿನ ಕೆಲಸಕ್ಕೆ ಹೆಚ್ಚಿನ ಗಮನ

ಒಂದು ವೇಳೆ ಈಕೆ ಉದ್ಯೋಗಸ್ಥೆಯಾಗಿದ್ದರೆ ತನ್ನ ಕಛೇರಿಯ ಕೆಲಸಕ್ಕೆ ಹೆಚ್ಚಿನ ಸಮಯ ಹಾಗೂ ಗಮನವನ್ನು ನೀಡುವ ಮೂಲಕ ಹೆಚ್ಚಿನ ಅಭಿವೃದ್ದಿಯನ್ನು ಸಾಧಿಸಬಹುದು. ಸಾಮಾನ್ಯವಾಗಿ ಪತಿ ಮನೆಗೆ ಬರುವ ಹೊತ್ತಿನಲ್ಲಿ ತಾನೂ ಮನೆಯಲ್ಲಿರಬೇಕೆಂಬ ಹಂಬಲದಿಂದ ಕೆಲಸವನ್ನು ಲಗುಬಗೆಯಿಂದ ಮುಗಿಸುತ್ತಾರೆ. ಪತಿ ಊರಿನಲ್ಲಿ  ಕೆಲಸವನ್ನು ಅವಸರದಲ್ಲಿ ಮುಗಿಸುವ ಧಾವಂತವಿಲ್ಲದೆ ಅಚ್ಚುಕಟ್ಟಾಗಿ ಪೂರೈಸಬೇಕಾಗುತ್ತದೆ.

ಪತಿ ಇಲ್ಲದಿದ್ದಲ್ಲಿ ಜಗಳವೂ ಇಲ್ಲ

ಪತಿ ಊರಿನಲ್ಲಿಲ್ಲದ ಸಮಯದಲ್ಲಿ ಗೃಹಿಣಿ ಆರಾಮವಾಗಿ ಕುಳಿತು ತನ್ನ ನೆಚ್ಚಿನ ಸಂಗೀತ ಆಲಿಸುವುದು, ತನ್ನಿಷ್ಟದ ಸಿನಿಮಾ ನೋಡುವುದು ಅಥವಾ ಸುಮ್ಮನೇ ಸೋಮಾರಿಯಾಗಿ ಕಾಲ ಕಳೆಯುವ ಮೂಲಕ ಮನಸ್ಸಿನ ನಿರಾಳತೆಯನ್ನು ಅನುಭವಿಸಬಹುದು. ಅಂದರೆ ಪತಿ ಪತ್ನಿಯರ ನಿತ್ಯದ ಚಿಕ್ಕ ಪುಟ್ಟ ಜಗಳಗಳಿಗೆಲ್ಲಾ ಅಲ್ಪ ವಿರಾಮ. ಅಪರೂಪಕ್ಕೊಮ್ಮೆ ಸಿಗುವ ಈ ಕ್ಷಣವನ್ನು ಸವಿಯುವ ಸುಖ ಇನ್ಯಾವುದೂ ನೀಡಲಾರದೇನೋ?

Tags

Related Articles

Leave a Reply

Your email address will not be published. Required fields are marked *

Language
Close