About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪಾಕ್‌ ಭಯೋತ್ಪಾದನೆ ನಿಲ್ಲಿಸಿದರೆ ನಾವು ಚಿನ್ನದ ಹುಡುಗ ನೀರಜ್‌ರಂತೆ ಆಗುತ್ತೇವೆ: ರಾವತ್‌

ದೆಹಲಿ: ಪಾಕಿಸ್ತಾನ ಒಂದು ವೇಳೆ ಭಯೋತ್ಪಾದನೆ ನಿಲ್ಲಿಸಿದರೆ ನಾವು ಕೂಡ ಚಿನ್ನದ ಪದಕ ವಿಜೇತ್ ನೀರಜ್ ಚೋಪ್ರಾರಂತೆ ಆಗುತ್ತೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಸೇನೆಯ ವತಿಯಿಂದ ಏಷ್ಯನ್ ಗೇಮ್ಸ್ ಪದಕ ವಿಜೇತರನ್ನು ಸಮ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ – ಪಾಕ್ ಗಡಿಯಲ್ಲಿ ನೀವು ಕ್ರೀಡಾ ಮನೋಭಾವವನ್ನು ತೋರುವಿರಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸುತ್ತಿದ್ದ ಜನರಲ್ ರಾವತ್ ಅವರು, ಪಾಕಿಸ್ಥಾನ ಒಂದೊಮ್ಮೆ ನಿಲ್ಲಿಸಿದರೆ ನಾವು ಕೂಡ ನೀರಜ್ ಚೋಪ್ರಾ ಆಗುವೆವು ಎಂದು ಮಾರ್ಮಿಕವಾಗಿ ಹೇಳಿದರು.

 

ಏಷ್ಯನ್ ಗೇಮ್ಸ್ ಜಾವಲಿನ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರು ತನ್ನ ಪಾಕ್ ಪ್ರತಿಸ್ಪರ್ಧಿ ವಿರುದ್ಧ ಸದ್ಭಾವನೆ ತೋರುವ ಮೂಲಕ ಉಭಯ ದೇಶಗಳ ಅಭಿಮಾನಿಗಳನ್ನು ಗೆದ್ದಿದ್ದಾರೆ ಹಾಗೂ ಜವೆಲಿನ್ ಕಂಚು ಗೆದ್ದಿದ್ದಕ್ಕೆ ಪಾಕಿಸ್ಥಾನದ ಅರ್ಷದ್ ನದೀಮ್ ಅವರನ್ನು ನೀರಜ್ ಚೋಪ್ರಾ ಕೈಕುಲುಕಿ ಅಭಿನಂದಿಸಿದ್ದರು. ಆ ಸನ್ನಿವೇಶದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close