About Us Advertise with us Be a Reporter E-Paper

ಅಂಕಣಗಳು

ಹಣವಿದ್ದು ಜ್ಞಾನವಿರಲಿಲ್ಲವೆಂದರೆ ದುರಂತವೇ ಸರಿ..!

ವಿದ್ಯಮಾನ: ಸಿದ್ಧಾರ್ಥ ವಾಡೆನ್ನವರ

ಎಲ್ಲವನ್ನು ದೇವರಿಂದಲೇ ಬಯಸುವುದು ಮಹಾ ತಪ್ಪು.  ಸೃಷ್ಟಿಕರ್ತ ತನ್ನ ಕರ್ತವ್ಯವನ್ನು ಮಾಡಿ ಮುಗಿಸಿದ್ದಾನೆ.  ಸೃಷ್ಟಿಕರ್ತ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದಾನೆ ಜೊತೆಗೆ ಮನುಷ್ಯನಿಗೆ ‘ಕಲ್ಪನೆ’ ಮಾಡುವ ಬುದ್ಧಿಶಕ್ತಿಯನ್ನು ನೀಡಿದ್ದಾನೆ.  ಆ ಕಲ್ಪನೆ ಮಾಡುವ ಬುದ್ಧಿಶಕ್ತಿಯಿಂದ, ಮನುಷ್ಯ ಇಂದು ದುಃಖ ನಿರಾಶೆ ಆತಂಕ ಉದ್ವೇಗ ಸೃಷ್ಟಿಸಿಕೊಂಡಿದ್ದಾನೆ. ಜತೆಗೆ ಸಂತೋಷ, ಆನಂದ, ಉಲ್ಲಾಸ ಸೃಷ್ಟಿಸಿಕೊಂಡಿದ್ದಾನೆ. ಸುಖ-ದುಃಖಗಳಲ್ಲಿ ಜಗದೊಡೆಯನ ಪಾತ್ರ ಇಲ್ಲ ಅಲ್ಲಿರುವುದು ನಿನ್ನ ಪಾತ್ರ.  ನಿನ್ನ ಶಿಸ್ತುಬದ್ಧ ಜೀವನದ ದಾರಿಯನ್ನು  ಕಂಡುಕೊಳ್ಳಬೇಕು. ದೇವರ ದಯೆಗಾಗಿ ಕಾಯಬೇಡ ಅವನ ಕೆಲಸ ಮುಗಿದಾಗಿದೆ. ನಿನ್ನ ಜೀವನದ ಪಯಣ ನಿನ್ನ ಕೈಯಲ್ಲಿದೆ ಅದನ್ನು ಬೇರೆಯವರಿಂದ ಬಯಸುವುದು ತರವಲ್ಲ. ಬೇರೆಯವರಿಗೆ ಅವರದೇ ಆದ ಯೋಚನೆಗಳಿವೆ, ಅವು ನಿಮ್ಮ ಯೋಚನೆಗಳಾಗುವುದಿಲ್ಲ. ಅರಿತುಕೊಳ್ಳಿ ಅದು ಹೇಗೆಂದರೆ…..

ಜ್ಞಾನವಿದ್ದು ಹಣ ಇರದೇ ಇದ್ದರೆ ಮನುಷ್ಯನು ಯಶಸ್ವಿಯಾಗಬಹುದು, ಜ್ಞಾನವಿದ್ದೂ ಹಣವೂ ಇದ್ದರೇ ಮನುಷ್ಯ ಖಂಡಿತವಾಗಿಯೂ ಯಶಸ್ವಿಯಾಗುತ್ತಾನೆ. ಹಣವಿದ್ದು ಜ್ಞಾನ ಇರಲಿಲ್ಲವೆಂದರೆ ಮನುಷ್ಯನ ಜೀವನದಲ್ಲಿ ಒಂದು ದುರಂತವೇ ಸರಿ ಇಂತಹ ಒಂದು ಸಮೀಕರಣವನ್ನು  ಮಾಡುವುದರೊಂದಿಗೆ

ಜ್ಞಾನಕ್ಕೆ ಮಹತ್ವ ನೀಡುವುದು ಅಗತ್ಯವಾಗಿದೆ. ನಿನ್ನ ಹಣೆಬರಹದ ನಾಯಕ ನೀನೇ, ನಿನ್ನ ಆತ್ಮ ಸಾಕ್ಷಿಯ ನಾಯಕ ನೀನೇ, ನಿನ್ನ ಚಿಂತನೆಗಳಲ್ಲಿ ಬೇರೆಯವರಿಗೆ ಅವಕಾಶ ಬೇಡ. ಮಾಹಿತಿಗಳನ್ನು ಎಲ್ಲಾ ಮೂಲಗಳಿಂದ ಸಂಗ್ರಹಿಸಬೇಕು ಮತ್ತು ಅಧ್ಯಯನ ಮಾಡಬೇಕು ಆದರೆ ಗಟ್ಟಿಯಾದ ನಿರ್ಧಾರಗಳನ್ನು ನೀನೇ ತೆಗೆದುಕೊಳ್ಳಬೇಕು.

ಸಾಧನೆ ಹೇಗೆ ಮಾಡಬೇಕು ಎನ್ನುವ ಪ್ರಶ್ನೆಗೆ ತಂದೆ, ತಾಯಿ, ಗೆಳೆಯ, ಗುರು ನಿಮ್ಮ ಸುತ್ತಲಿರುವ ಜನರಿಂದಲೇ ಶೇ.100ರಷ್ಟು ಕೇಳಬಾರದು. ಜೀವನದಲ್ಲಿ ಯಶಸ್ವಿಯಾದ ನಾಯಕರ ಸಂರ್ಶನ  ಯಶಸ್ವಿ ದಿಗ್ಗಜರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಬೇಕು. ನೀವು ಮಾಡುವ ಅಧ್ಯಯನ ಯಶಸ್ಸನ್ನು ಹೇಗೆ ಸಾಧಿಸಬೇಕು ಎಂಬುದಕ್ಕೆ ಉತ್ತರ ನೀಡುತ್ತದೆ. ಹಲವು ಜನರು ಸಲಹೆ ಪಡೆಯುತ್ತಿರುವುದು ಯಾರಿಂದ? ಯಾರಿಂದ ಎಂದರೆ ಯಾರು ತಮ್ಮ ಜೀವನದಲ್ಲಿ ವಿಫಲರಾಗಿದ್ದಾರೋ ಅರಿಂದವೆಂದರೆ ತಪ್ಪಾಗಲಾರದು. ಜೀವನದಲ್ಲಿ ವಿಫಲರಾದವರು ಹೇಳುತ್ತಿರುವುದು ಮತ್ತು ಉಪದೇಶಿಸುತ್ತಿರುವುದು ಯಶಸ್ಸಿಗೆ ಅದೃಷ್ಟ ಬೇಕು, ದೇವರ ದಯೆಬೇಕು, ಪೂರ್ವಜರ ಆಶೀರ್ವಾದಬೇಕು. ಇಂತಹ ಯೋಗ್ಯತೆ ಇಲ್ಲದ ಸಲಹೆಗಳನ್ನು ನೀಡಿ ನಿಮ್ಮನ್ನು ಅಂಧಕಾರದಲ್ಲಿ ಮುಳುಗಿಸುತ್ತಿದ್ದಾರೆ. ಆದರೆ  ಬೇಡಿಕೆಗಳನ್ನು ಇಡಬಾರದು. ಯಶಸ್ಸು ಅಡಗಿರುವುದು ಸತತ ಪರಿಶ್ರಮ, ಬಿಡದ ಛಲ, ದೃಢ ನಿರ್ಧಾರ ಮತ್ತು ಸಮಯದ ವಿನಿಯೋಗದಲ್ಲಿ. ಮಾನವೀಯತೆಯ ಆಧಾರದ ಮೇಲೆ ಜರುಗಿದ ಹೋರಾಟಗಳನ್ನು ಅಧ್ಯಯನ ಮಾಡಬೇಕು. ಅವು ನಮಗೆ ಸ್ಪೂರ್ತಿ ನೀಡುತ್ತವೆ. ಕಟ್ಟಡದ ಎತ್ತರಕ್ಕೆ ಹೋಗಲು ಎಲ್ಲಾ ಮೆಟ್ಟಿಲುಗಳನ್ನು ನೋಡಬಾರದು. ಎಲ್ಲಾ ಮೆಟ್ಟಿಲುಗಳನ್ನು ನೋಡುವುದರಿಂದ ‘ಇದು ನನ್ನಿಂದ ಸಾಧ್ಯವಿದೆ. ಇದು ನನ್ನಿಂದ ಸಾಧ್ಯವಿಲ್ಲ’ ಎನ್ನುವ ಗೊಂದಲದ ನಿರ್ಧಾರಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಹಾಗಾಗಿ ನಾವು ಮಾಡಬೇಕಾಗಿರುವ ಪ್ರಥಮ ಕೆಲಸವೇನೆಂದರೆ, ಮೊದಲನೆಯ  ಹತ್ತುವುದು, ಹೀಗೆ ಒಂದೊಂದೇ ಮೆಟ್ಟಿಲನ್ನು ಹತ್ತುವುದರಿಂದ ಕಟ್ಟಡದ ಅತೀ ಎತ್ತರಕ್ಕೆ ಹೋಗಲು ಸಾಧ್ಯವಿದೆ. ನಾವು ಮುಂದೆ ಸಾಗಲು ಹಿಂದಿನ ಮೆಟ್ಟಿಲುಗಳು ನಮಗೆ ಸ್ಪೂರ್ತಿ ನೀಡುತ್ತವೆ. ಸಾಮಾನ್ಯವಾಗಿ ಎಲ್ಲರಲ್ಲಿಯೂ ಒಂದು ಅಭ್ಯಾಸವಿದೆ. ಪ್ರಯತ್ನ ಪಡದೇ, ಯೋಚನೆ ಮಾಡದೇ, ಪೂರ್ವ ತಯಾರಿ ಮಾಡದೇ ಅಯೋಗ್ಯ ಚಿಂತನೆಗಳಿಂದ ಹಲವು ಜನರು ಜೀವನದಲ್ಲಿ ವಿಫಲರಾಗುತ್ತಿದ್ದಾರೆ.

ಮನಸ್ಸಿನ ಆಳದಲ್ಲಿರುವ ಶಕ್ತಿ ಹಾಗೂ ಅಪಾರವಾದ ಆಸೆ ಹೃದಯದಿಂದ ಜ್ವಾಲೆಯಾಗಿ ಹೊರಹೊಮ್ಮಬೇಕು. ಜೀವನದಲ್ಲಿ ಗೆಲ್ಲುವ ಮನಸ್ಸು ಬೇಕು. ಆ  ಪೂರಕ ಮಾಹಿತಿಗಳು ಬೇಕು ಆ ಮಾಹಿತಿಗಳನ್ನು ಯಾರಿಂದಲಾದರೂ ಪಡೆದುಕೊಳ್ಳಬಹುದು. ಆದರೆ ನಿರ್ಧಾರಗಳು ಅಂತರಂಗದಿಂದಲೇ ಬರಬೇಕು. ಜೀವನ ಒಂದು ಹೋರಾಟ ಅಲ್ಲಿ ಕೇವಲ ಜಯವಿರುವುದಿಲ್ಲ. ಸೋಲು-ಗೆಲುವುಗಳೆರಡೂ ಇರುತ್ತವೆ. ಒಂದು ಸೋಲು ಮುಂದಿನ ಗೆಲುವಿಗೆ ಮೆಟ್ಟಿಲಾಗುತ್ತದೆ. ಅದೇ ಮೆಟ್ಟಿಲು ಮತ್ತೊಂದು ಗೆಲುವಿಗೆ ಸಹಕಾರಿಯಾಗುತ್ತದೆ.

ಜಗತ್ಪ್ರಸಿದ್ಧ ಮಹಾನ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜು. ಹೀಗೆ ಹೇಳುತ್ತಾರೆ,

‘ನಿಮಗೆ ಹಾರಾಡಲಿಕ್ಕೆ ಸಾಧ್ಯವಾಗದಿದ್ದರೆ ಓಡುತ್ತಾ ಇರಿ.

ನಿಮಗೆ ಓಡಲಿಕ್ಕೆ ಸಾಧ್ಯವಾಗದಿದ್ದರೆ ಕಾಲ್ನಡಿಗೆಯಲ್ಲಿ ಸಾಗಿ.

ನಿಮಗೆ  ಸಾಧ್ಯವಾಗದಿದ್ದರೆ ಅಂಬೆಗಾಲನ್ನಾದರೂ ಇಡಿ. ಆದರೆ ನೀವು ಏನಾದರೂ ಮಾಡಿ, ನಿರಂತರವಾಗಿ ಮುಂದೆ ಸಾಗುತ್ತಲೇ ಇರಿ’ ಎಂದು ಹೇಳಿದ ಮಾತು ಸದಾಕಾಲ ನೆನಪಿಡಬೇಕು.

ಹೇನ್ರಿ ಪೋರ್ಡ, ಆಂಡ್ರೀವ್ ಕಾರ್ನೆಜ್ ನೆಪೋಲಿಯನ್ ಹಿಲ್‌ರಂತಹ ಹಲವು ಸಾಧಕರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಬೇಕು ಇದರಿಂದ ಪ್ರೇರಣೆ ಸಿಗುತ್ತದೆ. ಇವರ ಸಂದೇಶಗಳು ಸಾಧನೆಯ ದಾರಿಯಲ್ಲಿ ಸಾಗಲು ಸ್ಪೂರ್ತಿದಾಯಕವಾಗುತ್ತವೆ. ಜೀವನದಲ್ಲಿ ವಿಫಲರಾದ ಹಲವು ಜನರನ್ನು ಸಂಪರ್ಕಿಸಿ ವಿಫಲತೆಗೆ ಏನು ಕಾರಣ? ಎಂದು ಪ್ರಶ್ನೆ ಮಾಡಿದಾಗ ಸಾಮಾನ್ಯವಾಗಿ  ಈ ರೀತಿಯಾದ ಉತ್ತರ ನೀಡುತ್ತಾರೆ.

ನನ್ನ ಅದೃಷ್ಟ ಚೆನ್ನಾಗಿಲ್ಲ, ಅದೃಷ್ಟ ಚೆನ್ನಾಗಿ ಇದ್ದಿದ್ದರೆ ಯಶಸ್ಸಿನ ಪಥದಲ್ಲಿ ತೇಲಾಡುತ್ತಿದ್ದೆ ಅದೃಷ್ಟವಂತರು ನಾವಲ್ಲ ಅವರು.ನನಗೆ ಉನ್ನತ ಮಟ್ಟದ ಶಿಕ್ಷಣ ಇಲ್ಲ ಶಿಕ್ಷಣದ ಕೊರತೆಯಿಂದ ನನಗೆ ಸಾಧನೆ ಮಾಡಲು ಸಾಧ್ಯವಾಗಲಿಲ್ಲ ನನ್ನದು ಅಸಹಾಯಕ ಸ್ಥಿತಿ.ಮಡದಿ ಮತ್ತು ಮಕ್ಕಳು ಎಂಬ ಕುಟುಂಬ ಚಕ್ರದಲ್ಲಿ ನಾನು ಸಿಲುಕದೇ ಹೋಗಿದ್ದರೆ ಏನಾದರು ಸಾಧನೆ ಮಾಡುತ್ತಿದ್ದೆ ಅದುವೇ ನನ್ನ ವಿಫಲತೆಗೆ ಕಾರಣವಾಯಿತು.ನನ್ನ ಆರೋಗ್ಯ ನನಗೆ ಬೆಂಬಲ ಕೊಡುತ್ತಿಲ್ಲ ಅನುಕೂಲಕರ  ನಿರ್ಮಾಣವಾಗುತ್ತಿಲ್ಲ. ಒಂದು ವೇಳೆ ನನ್ನ ಆರೋಗ್ಯ ಸರಿಯಾಗಿದ್ದರೆ ಏನಾದರೂ ಸಾಧನೆ ಮಾಡುತ್ತಿದ್ದೆ. ನನ್ನ ಗೆಳೆಯರು ನನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ, ಒಂದು ವೇಳೆ ಅವರು ನನ್ನನ್ನು ಅರ್ಥಮಾಡಿಕೊಂಡಿದ್ದರೆ ಇಂದು ಸಾಧನೆಯ ಶಿಖರದಲ್ಲಿರುತ್ತಿದ್ದೆ ಅವರ ಸಹಕಾರ ಸಿಗದೇ ಹೋಗಿದ್ದು ನನ್ನ ವಿಫಲತೆಗೆ ಕಾರಣ. ನನ್ನ ತಂದೆ ತಾಯಿ ನನಗೋಸ್ಕರ ಸಂಪತ್ತನ್ನು ಕ್ರೂಢೀಕರಿಸಲಿಲ್ಲ ಅವರು ಏನಾದರೂ ಸಂಪತ್ತನ್ನು ಕ್ರೂಡೀಕರಿಸಿದ್ದರೆ ನನಗೆ ಸಹಾಯವಾಗುತಿತ್ತು ಬಡತನವೇ ನನ್ನ ಸಾಧನೆಗೆ ಮುಳುವಾಯಿತು.

ನನ್ನ ಸುತ್ತಲಿರುವ ವಾತಾವರಣ ಸರಿಯಾಗಿಲ್ಲ ನನಗೆ  ಯಾರೂ ಬಯಸುತ್ತಿಲ್ಲ ಅವರು ವ್ಯಕ್ತಪಡಿಸುವ ಭಾವನೆಗಳಿಂದಲೇ ನಾನು ವಿಫಲನಾದೆ. ಇನ್ನೊಂದು ಜನ್ಮದಲ್ಲಿ ಈ ಭೂಮಿಯ ಮೇಲೆ ಜನಿಸಿದರೆ ಖಂಡಿತಾ ಯಶಸ್ವಿಯಾಗುತ್ತೇನೆ. ಈಗ ಸಮಯ ಕಳೆದು ಹೋಗಿದೆ ಏನೂ ಮಾಡಲು ಸಾಧ್ಯವಿಲ್ಲ. ಯೌವ್ವನ ತುಂಬಿದ ವಯಸ್ಸು ನನಗೆ ಇಲ್ಲ, ಅದು ಇದ್ದಿದ್ದರೆ ಯಸ್ಸಿನ ಪಥದಲ್ಲಿ ಸಾಗುತ್ತಿದ್ದೆ, ವಯಸ್ಸು ಆಗಿ ಹೋಗಿದೆ ಇವಾಗ ಏನು ಮಾಡಲು ಸಾಧ್ಯ?

ಉದ್ದಿಮೆ ಸ್ಥಾಪಿಸಲು ನನಗೆ ಬ್ಯಾಂಕಿನಲ್ಲಿ ಸಾಲ ಸಿಗಲಿಲ್ಲ ಒಂದು ವೇಳೆ ಬ್ಯಾಂಕಿನಿಂದ ಸಾಲ  ನನ್ನ ಜೀವನದ ದಿಕ್ಕೇ ಬದಲಾಗುತ್ತಿತ್ತು ವಿಫಲತೆಗೆ ಇದೇ ಕಾರಣ. ಸರಕಾರದಿಂದ ಯಾವುದೇ ಸೌಲತ್ತುಗಳು ಸಿಗುತ್ತಿಲ್ಲ, ನಾನೇನಾದರೂ ಮೀಸಲಾತಿ ಅಡಿಯಲ್ಲಿ ಪಲಾನುಭವಿಯಾಗಿದ್ದರೆ ಜೀವನದ ದಾರಿ ಬದಲಾಗುತ್ತಿತ್ತು.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ವಿಫಲತೆಗೆ ಕಾರಣಗಳು ಸಾಕಷ್ಟಿವೆ. ಇಂತಹ ಯೋಗ್ಯತೆ ಇಲ್ಲದ ಉತ್ತರಗಳನ್ನು ವಿಫಲ ನಾಯಕರುಗಳಿಂದ ಮತ್ತು ಸುತ್ತುವರೆದವರಿಂದ ಕೇಳಿ ಮುಂದೆ ಸಾಗುವುದು ಸರಿಯಾದ ಮಾರ್ಗವಲ್ಲ ಅದು ತುಂಬಾ ಅಪಾಯಕಾರಿ. ಜೀವನದಲ್ಲಿ ಜಯಗಳಿಸಿದ್ದು ಹೇಗೆ ಎಂದು ಯಶಸ್ವಿ ನಾಯಕನ ಹತ್ತಿರ ಹೋಗಿ  ಕೇಳಿದಾಗ ಅಥವಾ ಯಶಸ್ವಿ ನಾಯಕನ ಜೀವನ ಚರಿತ್ರೆಗಳನ್ನು ಓದಿದಾಗ ಸುಮಾರ ಜನರ ಅಭಿಪ್ರಾಯಗಳು ಮತ್ತು ಅವರಿಂದ ಸಿಗುವ ಉತ್ತರ ಮತ್ತು ಸಂದೇಶಗಳು ಹೀಗಿರುತ್ತವೆ.

‘ಸಾಧನೆ ಅದು ನನ್ನ ಕಠಿಣ ಪರಿಶ್ರಮದಿಂದ, ಸಾಧನೆ ಅದು ನನ್ನ ಬಿಡದ ಛಲದಿಂದ, ಸಾಧನೆ ಅದು ನನ್ನ ಅಗಾಧವಾದ ಜ್ಞಾನದಿಂದ, ಸಾಧನೆ ಅದು ನನ್ನಲ್ಲಿರುವ ಸಹಕಾರ ಮನೋಭಾವನೆಯಿಂದ, ಸಾಧನೆ ಅದು ನನ್ನ ಸಮಯದ ಸಂಪೂರ್ಣ ವಿನಿಯೋಗದಿಂದ, ಸಾಧನೆ ಅದು ಯಾರಿಗೂ ಅನ್ಯಾಯಮಾಡದೆ ಇರುವುದರಿಂದ’ ಎಂದು  ಯುವ ಸಮುದಾಯಕ್ಕೆ ಸ್ಫೂರ್ತಿ ನೀಡುತ್ತಾರೆ. ‘ಸಮಸ್ಯೆಗಳಲ್ಲಿ ಅವಕಾಶಗಳನ್ನು ಹುಡುಕಿದವರು ನಾವು. ಅವಕಾಶಗಳು ನಮ್ಮನ್ನರಸಿ ಬರುವುದಿಲ್ಲ’ ಎಂದು ಹೇಳಿ ಹಲವರಿಗೆ ಮಾದರಿಯಾಗುತ್ತಾರೆ.

ಯುವಕರು ಯಶಸ್ವಿ ನಾಯಕರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಿ ಅವರ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆೆ. ಸೃಷ್ಟಿಯಾಗುವ ಸಮಸ್ಯೆಗಳಲ್ಲಿ ಅವಕಾಶಗಳನ್ನು ಹುಡುಕಿ ಸಾಧನೆ ಮಾುವುದು ಹೇಗೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಸರಕಾರಳಿಂದ ಎಲ್ಲಾ ರೀತಿ ಸವಲತ್ತುಗಳು ಸಿಗುತ್ತವೆ ಎಂಬ ಭ್ರಮೆಯಲ್ಲಿ ಬದುಕಬಾರದು. ಸರಕಾರಗಳನ್ನು 100%ರಷ್ಟು ನಂಬಲೇಬಾರದು.  ಅಪಾಯ. ಅವಕಾಶಗಳು ಎಲ್ಲ ಕಡೆಗೂ ಇವೆ. ಆ ದಿಕ್ಕಿನಲ್ಲಿ ಯೋಚಿಸಬೇಕಾಗಿದೆ. ನಾನು ಸರಕಾರಿ ನೌಕರಿಯನ್ನು ಪಡದೇ ತೀರುತ್ತೇನೆ ಎಂದು ಹಠಕ್ಕೆ ಬಿದ್ದು ಅಮೂಲ್ಯವಾದ ಸಮಯವನ್ನು ಹಾಳುಮಾಡಿಕೊಳ್ಳಬೇಡಿ. ಜಗತ್ತಿನಲ್ಲಿ ಮಾಹಿತಿಗಳು ಕ್ಷಣಕ್ಷಣಕ್ಕೂ ಸಿಗುತ್ತವೆ. ಸರಕಾರದ ಸಹಾಯವಿಲ್ಲದೆ ಯಶಸ್ವಿಯಾದ ನಾಯಕರು ಹಲವರಿದ್ದಾರೆ. ಅಂತವರ ಯಶಸ್ಸಿಗೆ ಅನುಸರಿಸಿದ ತಂತ್ರಗಳನ್ನು ಗೂಗಲ್ ಸರ್ಚ್‌ನಲ್ಲಿ ಹುಡುಕಿ ಅಧ್ಯಯನ ಮಾಡಿದರೆ ಪ್ರೇರಣೆ ಸಿಗುತ್ತದೆ. ಸಾಧನೆ ಎನ್ನುವುದು ನೀವಿರುವೆಡೆೆಗೆ ಬರುವುದಿಲ್ಲ, ಅದು ಇರುವೆಡೆಗೆ ನಾವು ಹೋಗಬೇಕಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close