ಇಗ್ನೋಬೆಲ್ ಪ್ರಶಸ್ತಿ

Posted In : ವಿರಾಮ

ನೋಬೆಲ್ ಪ್ರಶಸ್ತಿಯನ್ನು ಅಣಕ ಮಾಡಿ ರಂಜಿಸಲೆಂದು ಹುಟ್ಟಿಕೊಂಡ ಪ್ರಶಸ್ತಿಯಿದು. ಪ್ರತಿ ವರ್ಷ ಜಗತ್ತಿನ ಹತ್ತು ಅತ್ಯಂತ ಅಸಂಬದ್ಧ ಸಂಶೋಧನೆಗಳನ್ನು ಹುಡುಕಿ ಅವುಗಳ ಶೋಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. 1991ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

‘ಜನರನ್ನು ಚಿಂತನೆಗೆ ಹಚ್ಚಲಿಕ್ಕೆ ಮೊದಲು ಜನರನ್ನು ನಗಿಸುವ ಸಂಶೋಧನೆ’ಗಳನ್ನು ಗುರುತಿಸುವ ಉದ್ದೇಶವನ್ನಿಟ್ಟುಕೊಂಡು ಈ ಪ್ರಶಸ್ತಿಯನ್ನು
ನೀಡಲಾಗುತ್ತಿದೆ. ವಿಜ್ಞಾನ ವಿನೋದ ಪತ್ರಿಕೆ ‘ಅನ್ನಲ್‌ಸ್‌ ಆಫ್ ಇಂಪ್ರೊಬೇಬಲ್ ರಿಸರ್ಚ್’ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸುತ್ತದೆ. ಆ ಸಮಾರಂಭಕ್ಕೆ ನೋಬೆಲ್ ವಿಜೇತ ಗಣ್ಯರು ಮುಖ್ಯ ಅತಿಥಿಗಳಾಗಿರುತ್ತಾರೆ.

ಪ್ರಶಸ್ತಿಗೆ ಆಯ್ಕೆಯಾದ ಸಂಶೋಧನೆಗಳು ಕೇಳಲಿಕ್ಕೆ ತುಂಬಾ ತಮಾಷೆಯಾಗಿರುತ್ತವೆ. 2016ರ ವೈದ್ಯವಿಜ್ಞಾನ ಕ್ಷೇತ್ರ ಇಗ್ನೋಬೆಲ್ ಪ್ರಶಸ್ತಿ ಕ್ರಿಸ್ಟೋಫ್ ಹೆಮ್ಚೆನ್ ಮತ್ತು ಆತನ ಸಂಗಡಿಗರ ಪಾಲಾಯಿತು. ನಿಮಗೇನಾದರೂ ದೇಹದ ಎಡಭಾಗದಲ್ಲಿ ತುರಿಕೆಯಿದ್ದರೆ ಕನ್ನಡಿ ನೋಡಿಕೊಂಡು ನಿಮ್ಮ ದೇಹದ ಬಲಭಾಗದಲ್ಲಿ ತುರಿಸಿಕೊಂಡರೆ ನವೆ ಕಡಿಮೆಯಾಗುತ್ತದೆ ಎಂಬ ಸಂಶೊಧನೆಯೇ ಅವರಿಗೆ ಇಗ್ನೋಬೆಲ್ ತಂದು ಕೊಟ್ಟದ್ದು. ಆಕಾಶದ ಬಣ್ಣ ನೀಲಿ ಏಕಿದೆ ಎಂಬ ಪ್ರಶ್ನೆ ನಿಮ್ಮಲ್ಲಿದೆಯಾ? ಹಾಗಾದರೆ ಇಲ್ಲಿದೆ ಸರಳ ಉತ್ತರ. ಸೂರ್ಯನ ಬೆಳಕು ಏಳು ಬಣ್ಣಗಳಿಂದ ಮಾಡಲ್ಪಟ್ಟಿದೆ.

(ಬಿಸಿಲಲ್ಲಿ ಮಳೆ ಬಂದಾಗ ಮೂಡುವ ಕಾಮನಬಿಲ್ಲಿನಲ್ಲಿ ಆ ಏಳು ಬಣ್ಣಗಳನ್ನು ನೋಡಬಹುದು) ಬೆಳಕಿನ ಶಕ್ತಿಯು ಸಮುದ್ರದಲ್ಲಿನ ಅಲೆಗಳಂತೆ ಚಲಿಸುತ್ತದೆ. ಅದರೊಳಗಿನ ನೀಲಿ ಅಲೆಗಳ ವೇಗ ಉಳಿದ ಬಣ್ಣದ ಅಲೆಗಳಿಗಿಂತ ಕಡಿಮೆ. ತುಂಬಾ ನಿಧಾನ. ಸೂರ್ಯನ ಬೆಳಕನ್ನು ವಾತಾವರಣದಲ್ಲಿನ ಅಣುಗಳು ಚದುರಿಸುತ್ತವೆ. ತುಂಬಾ ಕಡಿಮೆ ವೇಗದ ನೀಲಿ ಅಲೆಗಳು ಉಳಿದ ಬಣ್ಣದ ಅಲೆಗಳಿಗಿಂತ ಜಾಸ್ತಿ ಚದುರುತ್ತವೆ. ಹಾಗಾಗಿ ನಮಗೆ ಆಕಾಶ ಬಹುತೇಕ ಸಮಯಗಳಲ್ಲಿ ನೀಲಿ ಕಾಣುತ್ತದೆ.

Leave a Reply

Your email address will not be published. Required fields are marked *

5 × 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Friday, 23.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಅಷ್ಟಮಿ, ಶುಕ್ರವಾರ, ನಿತ್ಯ ನಕ್ಷತ್ರ-ಕೃತ್ತಿಕಾ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 7.30-9.00 3.00-4.30

Read More

 

Friday, 23.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಅಷ್ಟಮಿ, ಶುಕ್ರವಾರ, ನಿತ್ಯ ನಕ್ಷತ್ರ-ಕೃತ್ತಿಕಾ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 7.30-9.00 3.00-4.30

Read More

Back To Top