ಈಜಲು ಹೋದ ಬಾಲಕ ಸಾವು

Posted In : ರಾಜ್ಯ, ಶಿವಮೊಗ್ಗ

ಶಿವಮೊಗ್ಗ :ನಗರದ ಹೊರವಲಯದ ಪುರಲೇ ಲೇ ಔಟ್ ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಪುರಲೆಯ ಓಂಕಾರಪ್ಪ ಎಂಬುವರ ಪುತ್ರ ಮನು(12) ಬುಧವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಹೋಗಿದ್ದ. ಇದು ಮನೆಯವರಿಗೆ ತಿಳಿದಿರಲಿಲ್ಲ. ಸಂಜೆಯಾದರೂ ಮನು ಮನೆಗೆ ಬಾರದಿದ್ದರಿಂದ ಆತಂಕಕ್ಕೊಳಗಾದ ಕುಟುಂಬದವರು ಬಾಲಕನಿಗಾಗಿ ಹುಡುಕಾಟ ನಡೆಸಿದಾಗ ಮನು ಮೃತದೇಹ ಪುರಲೇ ಲೇ ಔಟ್ ಕೆರೆಯಲ್ಲಿ ಪತ್ತೆಯಾಗಿದೆ. ಬಾಲಕನ ಸಾವಿನ ಬಗ್ಗೆ ಅನುಮಾನವೂ ವ್ಯಕ್ತವಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

sixteen + 3 =

 
Back To Top