About Us Advertise with us Be a Reporter E-Paper

Breaking Newsರಾಜ್ಯ

ಸಿದ್ಧಗಂಗಾ ಮಠದಲ್ಲಿ ಮಕ್ಕಳೊಂದಿಗೆ ಇಂದ್ರಜಿತ್ ಲಂಕೇಶ್ ಹುಟ್ಟುಹಬ್ಬ ಆಚರಣೆ

ತುಮಕೂರು: ನಟ, ನಿದೇರ್ಶಕ ಇಂದ್ರಜಿತ್ ಲಂಕೇಶ್ ಶ್ರೀ ಸಿದ್ಧಗಂಗಾ ಮಠದಲ್ಲಿ ಡಾ. ಶ್ರೀ ಶಿವಕುಮಾರಸ್ವಾಮೀಜಿಯವರಿಗೆ ಲಂಕೇಶ್ ಬರೆದಿರುವ ಪುಸ್ತಕಗಳನ್ನು ನೀಡಿ, ಆಶೀರ್ವಾದ ಪಡೆದು ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಶ್ರೀಗಳು ಸಹ ಇಂದ್ರಜಿತ್ ಲಂಕೇಶ್‌ಗೆ ಹಾರ ಹಣ್ಣನ್ನು ನೀಡಿ ಆಶೀರ್ವದಿಸಿದರು.

ಮಠದಲ್ಲಿನ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಲಂಕೇಶ್ ಬರೆದಿರುವ ಅಕ್ಕ, ಆಟ, ಜೂಜು, ಮೋಜು, ಟೀಕೆ ಟಿಪ್ಪಣಿ, ಲಂಕೇಶರ ನಾಟಕಗಳು ಸೇರಿದಂತೆ ಹಲವು ಪುಸ್ತಕಗಳನ್ನು ವಿತರಿಸಿದರು. ಹುಟ್ಟುಹಬ್ಬ ಆಚರಣೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಇದುವರೆಗೂ ಹುಟ್ಟುಹಬ್ಬ ಆಚರಣೆಗಾಗಿ ಪಾರ್ಟಿ, ಕೇಕ್ ಕಟ್ ಮಾಡುವುದಾಗಲಿ ಮಾಡಿಲ್ಲ. ಬುದ್ಧಿಮಾಂದ್ಯ ಮಕ್ಕಳು, ಅನಾಥ ಮಕ್ಕಳೊಂದಿಗೆ ಆಚರಿಸಿಕೊಂಡಿದ್ದೇನೆ ಎಂದರು.

ಲಂಕೇಶ್ ಪತ್ರಿಕೆ, ಲಂಕೇಶ್‌ರವರ ಬರವಣಿಗೆ ಓದಿಕೊಂಡು ಹಲವರು ಉನ್ನತ ಸ್ಥಾನದ್ಲಲಿದ್ದಾರೆ. ಇಲ್ಲಿನ ಮಕ್ಕಳಿಗೆ ತಂದೆಯ ಬರವಣಿಗೆ ಸ್ಪೂರ್ತಿಯಾಗಲಿ ಎಂಬ ಆಶಯ ನನ್ನದಾಗಿದೆ ಎಂದು ನುಡಿದರು.

ತನಿಖೆ ಚುರುಕುಗೊಳಿಸಲು ಒತ್ತಡ: ನನ್ನ ಅಕ್ಕ ಇಲ್ಲದೆ ಹುಟ್ಟುಹಬ್ಬ ಆಚರಸಿಕೊಳ್ಳಲು ಮನಸ್ಸಿಲ್ಲ. ಗೌರಿ ಹತ್ಯೆ ಬಹಳ ನೋವನ್ನು ತಂದಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ನಿಧಾನಗೊಂಡಾಗ ತನಿಖೆ ಚುರುಕಾಗಲಿ ಎಂದು ಎಸ್ಐಟಿ ಮತ್ತು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದೆ. ಇದೀಗ ಪ್ರಕರಣದ ಕುರಿತು ಹಲವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತೀರ್ಪು ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ, ಈಗಾಗಲೇ ಸಾಕಷ್ಟು ಒತ್ತಡ ಹಾಕಿದ್ದೇನೆ ಎಂದು ಹೇಳಿದರು.

ಇಂದ್ರಜಿತ್ ಲಂಕೇಶ್ ಡಾ. ಶ್ರೀ ಶಿವಕುಮಾರಸ್ವಾಮೀಜಿಯವರ ಆಶೀರ್ವಾದ ಪಡೆದು ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

Tags

Related Articles

Leave a Reply

Your email address will not be published. Required fields are marked *

Language
Close