About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಪಾಕ್‌ ಪ್ರಧಾನಿಯಾಗಿ ಇಮ್ರಾಣ್‌ ವಚನಸ್ವೀಕಾರ, ಸಮಾರಂಭದಲ್ಲಿ ಸಿಧು ಭಾಗಿ

ಪಾಕಿಸ್ತಾನದ 22ನೇ ಪ್ರಧಾನ ಮಂತ್ರಿಯಾಗಿ ಇಮ್ರಾನ್‌ ಖಾನ್‌ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ, 65 ವರ್ಷದ ಇಮ್ರಾನ್‌, “ಪಾಕಿಸ್ತಾನಕ್ಕೆ ಸರ್ವಸ್ವವನ್ನೂ ಅರ್ಪಿಸಿ, ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿ, ದೇಶದ ಸಾರ್ವಭೌಮತೆ, ಸಮಗ್ರತೆ ಹಾಗು ಸಮೃದ್ಧಿಗಾಗಿ ಶ್ರಮಿಸುತ್ತೇನೆ” ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಇಮ್ರಾನ್‌, “ದೇಶ ಕಾಯುತ್ತಿರುವ ಬದಲಾವಣೆಯನ್ನು ತರುವ ಮಾತು ನೀಡುತ್ತೇನೆ. ದೇಶವನ್ನು ಲೂಟಿ ಮಾಡಿದವರ ವಿರುದ್ಧ ಹೋರಾಟ ಮಾಡುವುದಾಗಿ ಮಾತು ನೀಡುತ್ತೇನೆ” ಎಂದಿದ್ದಾರೆ.

ಸಮಾರಂಭದಲ್ಲಿ ಮಾಜಿ ಕ್ರಿಕೆಟರ್‌ ನವಜೋತ್‌ ಸಿಂಗ್‌ ಸಿಧು ಭಾಗಿಯಾಗಿದ್ದರು

ಸಮಾರಂಭದಲ್ಲಿ ಇಮ್ರಾನ್ ಮೂರನೇ ಪತ್ನಿ ಬುಶ್ರಾ ಬೀಬಿ ಉಪಸ್ಥಿತರಿದ್ದರು. ಈ ವರ್ಷದ ಆರಂಭದಲ್ಲಿ ವಿವಾಹವಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಬುಶ್ರಾ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ನಿಕಾಬ್‌ನಲ್ಲಿ ಇದ್ದ ಬುಶ್ರಾರನ್ನು ಭಾರೀ ಭದ್ರತೆಯಲ್ಲಿ ಕರೆತರಲಾಗಿತ್ತು.

ಅಧ್ಯಕ್ಷ ಮಮ್ನೂನ್‌ ಹುಸೇನ್‌ ಇಮ್ರಾನ್‌ಗೆ ಪ್ರಮಾಣ ವಚನ ಬೋಧನೆ ಮಾಡಿದ್ದಾರೆ.

ಶುಕ್ರವಾರ ನಡೆದ ವಿಶ್ವಾಸಮತದಲ್ಲಿ ಗೆದ್ದ ಇಮ್ರಾನ್‌, ಪಿಎಂಎಲ್‌‌-ಎನ್‌ ಅಭ್ಯರ್ಥಿ ಶಹಬಾಝ್‌ ಶರೀಫ್‌ರನ್ನು ಹಿಂದಿಕ್ಕಿದ್ದಾರೆ.

ಕ್ರಿಕೆಟರ್‌ ಆಗಿ ಅಪಾರ ಖ್ಯಾತಿ ಗಳಿಸಿದ್ದ ಇಮ್ರಾನ್‌ ಖಾನ್‌ರ ಜನಪ್ರಿಯತೆ, 1992ರ ವಿಶ್ವಕಪ್‌ ಜಯಿಸಿದ ಬಳಿಕ ಉತ್ತುಂಗಕ್ಕೆ ಏರಿತ್ತು. ಜನಪ್ರಿಯತೆಯ ಅಲೆ ಮೇಲೆ 1996ರಲ್ಲಿ ಇಮ್ರಾನ್‌ ತಮ್ಮ ರಾಜಕೀಯ ಪಕ್ಷ ತೆಹ್ರೀಕ್‌ ಏ ಇನ್ಸಾಫ್‌ಅನ್ನು ಆರಂಭಿಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close