About Us Advertise with us Be a Reporter E-Paper

ವಿ +

ಸೈನಿಕನಾಗುವ ಕಾತುರದಲ್ಲಿ..

• ಭೀಮಾನಾಯ್ಕ ಎಸ್. ಶೀರಳ್ಳಿ

ಡಾಕ್ಟರ್, ಎಂಜಿನಿಯರ್, ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿ ಹಣ ಗಳಿಸಿ ಶ್ರೀಮಂತ ನಾಗ್ಬೇಕು ಅಂದುಕೊಂಡಿರುತ್ತಾರೆ. ಹಾಗೆಯೇ ಚಿಕ್ಕ ವನಿದ್ದಾಗಿನಿಂದಲೂ ನನಗೂ ಒಂದು ಕನಸಿತ್ತು. ನನ್ನ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರದ ಎಲ್ಲಾ ತರಗತಿಯ ಸರ್‌ಗಳೂ ನೀನು ಏನಾಗ್ಬೇಕು ಅಂತ ಕೇಳಿದಾಗ ನನ್ನ ಬಾಯಿಯಲ್ಲಿ ಬರುತ್ತಿದ್ದ ಮಾತು ನನ್ನ ಕಲ್ಪನೆಯ ಕನಸು ಒಂದೇ ಆಗಿತ್ತು.

ಹಾಗಾಗಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆ. ದೈಹಿಕ  ಮಾನಸಿಕವಾಗಿ ಸಿದ್ಧನಾದೆ. ಅಂದು ಕೊಂಡತೆ 2015 ರ ಜುಲೈಗೆ ನನ್ನ ಕನಸಿನ ಬಾಗಿಲಿಗೆ ಆಹ್ವಾನ ಪತ್ರ ಬಂದಿತ್ತು. ಅದಕ್ಕೆ ಅರ್ಜಿ ಸಲ್ಲಿಸಿ ದೈಹಿಕ ಪರೀಕ್ಷೆಯಲ್ಲಿ ಪಾಸಾದ ಮೂರು ತಿಂಗಳ ನಂತರ ಲಿಖಿತ ಪರೀಕ್ಷೆ ಬರೆದು ಅದರಲ್ಲಿಯೂ ಸಹ ಪಾಸಾದೆ. ನನ್ನ ಕನಸು ಅರ್ಧ ನನಸಾದಂತೆ ಅನ್ನಿಸಿತು. ವೈದ್ಯಕೀಯ ಪರೀಕ್ಷೆಯಲ್ಲೂ ಪಾಸಾದೆ. ಆಗ ನನ್ನ ಖುಷಿಗೆ ಪಾರವೇ ಇಲ್ಲದಂತಾಯಿತು. ಆದರೆ ಆ ಸಂತೋಷದ ಕ್ಷಣಗಳು ಬಹಳ ದಿನ ಉ ಳಿಯಲಿಲ್ಲ,  ವರ್ಷವಾದರೂ ಜಾಯಿನಿಂ ಗ್  ಲೆಟರ್ ಬರಲೇ ಇಲ್ಲ. ಕಾದು ಕಾದು ಸುಸ್ತಾದೆ.  ಆದರೆ ಜುಲೈ 23 ರಂದು ಆ ಲೆಟರ್ ಸಹ ಬಂತು. ಆ ದಿನ ಸಂತೋಷಕ್ಕಿಂತ ದುಃಖವೇ ಮುಗಿಲು ಮುಟ್ಟಿತ್ತು.

ಏಕೆಂದರೆ ನಾನು ಸೇರಿಕೊಳ್ಳುವ ದಿನಾಂಕದಂದೇ ನನ್ನ ಪತ್ರಿಕೋದ್ಯಮದ ಕೊನೆಯ ಸೆಮಿಸ್ಟರ್‌ನ ಕೊನೆಯ ಪರೀಕ್ಷೆ ಇತ್ತು. ಆ ಪರೀಕ್ಷೆ ಬರೆದರೆ ನನ್ನ ಪತ್ರಿಕೋದ್ಯಮ ಕೋರ್ಸ್ ಹೇಗೋ ಮುಗಿಯುತಿತ್ತು. ನನ್ನ ಕನಸಿನ ಹುದ್ದೆ ಮಾತ್ರ ಕನಸಾಗೆ ಉಳಿ ಯುತಿತ್ತು.  ಸಂಪರ್ಕಿಸಿ ಸಲಹೆ ಕೇಳಿದೆ. ಯಾರಿಂದಲೂ ಸರಿಯಾದ ಪ್ರತಿಕ್ರಿಯೆ ಬರಲೇ ಇಲ್ಲ. ಇನ್ನೊಂದು ವಿಪರ್ಯಾಸವೆಂದರೆ ಈ ಹುದ್ದೆ ಗಾಗಿ ನಾನು ನನ್ನ ಎರಡನೇ ಸೆಮಿಸ್ಟರ್‌ನ ಒಂದು ವಿಷಯದ ಪರೀಕ್ಷೆ ಬರೆದಿರಲಿಲ್ಲ. ಕಾಕತಾಳಿಯ ಎಂಬಂತೆ ಪರೀಕ್ಷೆ ನಡೆದ ಸರಿಯಾದ ಒಂದು ವರ್ಷಕ್ಕೆ ಅದೇ ದಿನಾಂಕಕ್ಕೆ ಕೆಲಸಕ್ಕೆ ಸೇರಬೇಕೆಂಬ ಪತ್ರ ಬಂದಿತ್ತು ಆಗಲೂ ಸಹ ನನ್ನ ಕೊನೆಯ ಸೆಮಿಸ್ಟರ್‌ನ ಕೊನೆಯ ಒಂದು ಪರೀಕ್ಷೆ ಇತ್ತು. ಹಾಗಾಗಿ ಪರೀಕ್ಷೆ ಮತ್ತು ನನ್ನ ಕನಸಿನ ಹುದ್ದೆ  ಯಾವುದು ಮುಖ್ಯ ಎನ್ನುವುದು ತಿಳಿಯುವಷ್ಟರಲ್ಲಿ ಜಾಯ್‌ನಿಂಗ್ ದಿನ ಕೊನೆಯದಾಗಿತ್ತು. ಆ 23ನೇ ಜುಲೈ ದಿನಾಂಕದಂದೇ ರಿ ಪೋರ್ಟ್ ಮಾಡಿಕೊಳ್ಳಲು ಒಡಿಸ್ಸಾ ತೆರಳಬೇಕಿತ್ತು. ಆದರೆ ಆ ದಿನ ತಲುಪಲಾಗಲಿಲ್ಲ. ಅದನ್ನ ಕಳೆ ದುಕೊಂಡೆ. ಚಳಿ, ಗಾಳಿ, ಮಳೆ ಎನ್ನದೆ ತನ್ನವರ ನ್ನೆಲ್ಲಾ ದೇಶದ ಗಡಿ ಕಾಯುವ ಸೈನಿಕ ಹುದ್ದೆ ಅದಾಗಿತ್ತು.

ವೀರ ಯೋಧನಾಗಿ ಕೈಯಲ್ಲಿ ಗನ್ ಹಿಡಿದು ಗಡಿಯಲ್ಲಿನ ಉಗ್ರರನ್ನ ಸೆದೆ ಬಡಿ ಯ ಬೇಕಾ ದ ನಾನು, ಇಂದು  ಕೈಯಲ್ಲಿ ಪೆನ್, ಮೈಕ್ ಹಿಡಿ ದುಕೊಂಡು ಟಿವಿ ಚಾನೆಲ್‌ನಲ್ಲಿ ರಾಜ್ಯದ ಭ್ರಷ್ಟರನ್ನ ಸೆರೆ ಹಿಡಿಯುವ ಹಂಬಲದಲ್ಲಿ ಕೆಲಸ ಮಾಡು ತ್ತಿದ್ದೇನೆ. ಕ್ಷಮಿಸಿ ಬಿಡು ಭಾರತಾಂಬೆ, ನಿನ್ನ ಮಡಿಲ ಲ್ಲಿ ನಾನು ಮತ್ತೆ ವೀರಯೋಧ ಎನ್ನಿಸಿಕೊಳ್ಳಬೇಕು.

Tags

Related Articles

Leave a Reply

Your email address will not be published. Required fields are marked *

Language
Close