About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕರ್ನಾಟಕದ ಕಣಕಣದಲ್ಲೂ ಅಟಲ್ ಜೀ : ಕೇಂದ್ರ ಸಚಿವ ಅನಂತ್ ಕುಮಾರ್

ಮಂಡ್ಯಕರ್ನಾಟಕದ ಕಣಕಣದಲ್ಲೂ ಅಟಲ್ ಬಿಹಾರಿ ವಾಜಪೇಯಿ ಜೀ ಇದ್ದಾರೆ ಮತ್ತು ಅಟಲ್ ಜೀ ಅವರ ಕಣಕಣದಲ್ಲೂ ಕರ್ನಾಟಕವಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಹೇಳಿದ್ದಾರೆ

ಕಾವೇರಿ ನದಿಗೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಮಾಜಿ ಪ್ರಧಾನಿ ದಿವಂಗತಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿಯನ್ನು ವಿಸರ್ಜಿಸಿ ಮಾತನಾಡಿದ ಅವರು ಕರ್ನಾಟಕದೊಂದಿಗಿನ ಅವರ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು.ಅಟಲ್ ಬಿಹಾರಿ ವಾಜಪೇಯಿಯವರು ನೂರಾರು ಬಾರಿ ಕರ್ನಾಟಕಕ್ಕೆ ಬಂದಿದ್ದಾರೆರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರವಾಸ ಮಾಡಿದ್ದಾರೆದಶಕಗಳ ಕಾಲ ಲಕ್ಷಾಂತರ ಜನರನ್ನು ತಮ್ಮಪ್ರೇರಣಾ ಭರಿತ ಮಾತುಗಳಿಂದ ಸಂಭೋಧಿಸಿ ಉದ್ದೀಪನಗೊಳಿಸಿದ್ದಾರೆ ಎಂದು ಕರ್ನಾಟಕದೊಂದಿಗಿನ ಅವರ ನಂಟನ್ನು ಕೇಂದ್ರ ಸಚಿವ ಅನಂತಕುಮಾರ್ ಮೇಲುಕುಹಾಕಿದರುವಿಶ್ವಮಾನ್ಯರಾಗಿರುವ ಅವರ ಸಮಾನತೆಸಮಾಜಿಕ ನ್ಯಾಯ ಮತ್ತು ಅವರ ಜೀವನ ವಿಚಾರ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿರುತ್ತದೆ ಎಂದರು.

ವಿಶ್ವ ಚೇತನಅಜಾತ ಶತ್ರುವಿಶ್ವ ಮಾನ್ಯಪಕ್ಷಾತೀತಜಾತ್ಯತೀತಅಟಲ್ ಜೀಯವರ ಅಸ್ಥಿಯನ್ನು ಕಾವೇರಿ ನದಿಯ ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಲಾಗಿದೆ ಎಂದರುನಾಳೆಯೂ ಸಹ ವಿವಿಧ ಬಿಜೆಪಿ ಮುಖಂಡರುಗಳು ರಾಜ್ಯದ ಎಂಟು ನದಿಗಳಲ್ಲಿ ಅಂದರೆ ನೇತ್ರಾವತಿತುಂಗಭದ್ರಮಲಪ್ರಭಾಕೃಷ್ಣಾ ನದಿಗಳಲ್ಲಿ ಅಸ್ಥಿ ವಿಸರ್ಜಿಸಲಿದ್ದಾರೆ ಎಂದು ತಿಳಿಸಿದರು.

ಉತ್ತರ ಮತ್ತು ದಕ್ಷಿಣದ ನದಿಗಳ ಜೋಡಣೆ ಅಟಲ್ ಜೀ ಅವರ ಕನಸಾಗಿತ್ತುಕಾವೇರಿ ಮತ್ತು ಗಂಗಾ ಸೇರಿದಂತೆ 36 ನದಿಗಳನ್ನು ಜೋಡಿಸುವ ಕನಸನ್ನು ಹೊಂದಿದ್ದರು ಮೂಲಕ ಇಡೀದೇಶದ ರೈತರಿಗೆ ಸುಜಲಾಂ ಸುಫಲಾಂ ಸಾಧಿಸುವ ಸಂಕಲ್ಪಹೊಂದಿದ್ದರು ಎಂದು ಅಟಲ್ ಜೀ ಅವರ ಯೋಜನೆಗಳನ್ನ ಅನಂತಕುಮಾರ್ ಸ್ಮರಿಸಿದರು.

 ವೇಳೆ ಅಸ್ಥಿ ಕಳಸ ಯಾತ್ರೆ ಯುದ್ದಕ್ಕೂ ಅಟಲ್ ಜೀ ಅಮರವಾಗಲೀ ಮತ್ತು ಚಿರಾಯುವಾಗಲಿ ಎಂಬ ಘೋಷಣೆಯ ಮೂಲಕ ಸಾವಿರಾರು ಜನರು ಶ್ರದ್ಧಾಂಜಲಿಯನ್ನು ಮತ್ತು ಪುಷ್ಪಾಂಜಲಿ ಅರ್ಪಿಸಿದರು.  ಅಟಲ್ ಜೀ ಅವರ ಬಗೆಗಿನ ಜನರ ಅಭಿಮಾನಕ್ಕೆ ಕೇಂದ್ರ ಸಚಿವರು ಗದ್ಗದಿತರಾಗಿ ಭಾವಂಜಲಿಯನ್ನು ಅರ್ಪಿಸಿದರು

3 Attachments
Tags

Related Articles

Leave a Reply

Your email address will not be published. Required fields are marked *

Language
Close