About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಭಾರತ-ಇಂಗ್ಲೆಂಡ್‌ 4ನೇ ಟೆಸ್ಟ್‌: ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ

ಸೌತ್ಯಾಮ್ಟನ್: ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ದುಕೊಂಡಿದೆ.

ನಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ 203 ರನ್‌ಗಳ ಬೃಹತ್ ಅಂತರದಲ್ಲಿ ಗೆದ್ದು ವಿಶ್ವಾಸದಲ್ಲಿರುವ ಭಾರತ, ಇಂದು ನಡೆಯುವ ನಾಲ್ಕನೇ ಪಂದ್ಯದಲ್ಲಿ ಜಯಿಸಿ ಸರಣಿ ಉಳಿಸಿಕೊಳ್ಳುವ ತವಕದಲ್ಲಿದೆ. ಈಗಾಗಲೇ, ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿರುವ ಇಂಗ್ಲೆಂಡ್ ಈ ಪಂದ್ಯ ಗೆದ್ದು ಸರಣಿ ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ತುಡಿತದಲ್ಲಿದೆ.

ಸೌತ್ಯಾಮ್ಟನ್ ಫಿಚ್‌ನ ಮೇಲ್ಬಾಗ ಚಿಗುರು ಹುಲ್ಲು ಇದ್ದು, ಇದು ವೇಗಿಗಳಿಗೆ ಸಂಪೂರ್ಣ ನೆರವಾಗಲಿದೆ. ಆದ್ದರಿಂದ ಬ್ಯಾಟಿಂಗ್ ಮಾಡಲು ಕಷ್ಟವಾಗಬಹುದು. ಹಾಗಾಗಿ, ಆತಿಥೇಯರು ವೇಗಿಗಳಿಗೆ ಮಣೆ ಹಾಕಲಿದ್ದಾರೆ. ಜತೆಗೆ, ಭಾರತ ಕೂಡ ಪಿಚ್‌ಗೆ ತಕ್ಕಂತೆ ವೇಗಿಗಳಿಗೆ ಹೆಚ್ಚು ಮೊರೆ ಹೋಗಬಹುದು.

ಭಾರತ 2014ರ ಸೌತ್ಯಾಮ್ಟನ್ ಪಂದ್ಯದಲ್ಲಿ 266 ರನ್‌ಗಳಿಂದ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close