About Us Advertise with us Be a Reporter E-Paper

ವಿವಾಹ್

ಸ್ವಾತಂತ್ರ್ಯೋತ್ಸವ ಎಂದರೆ ಮಜಾಕೀಯವೇ?

ಸಾಗರ್

‘ಬೆಳಿಗ್ಗೆ 6ಕ್ಕೆ ಧ್ವಜಾರೋಹಣ, ಎಲ್ಲಾ ಬಂದು ಬಿಡಿ, ಮತ್ತೆ ಸಂಜೆ ಆರಕ್ಕೆ ಧ್ವಜವನ್ನ ಕೆಳಗಿಳಿಸೋಕೆ ಯಾರಾದರೂ ಇಬ್ಬರು ಬನ್ನಿ’. ಅಲ್ಲಿಗೆ ಸ್ವಾತಂತ್ರ್ಯ ದಿನಾಚರಣೆ ಮುಗಿಯಿತು. ಇಷ್ಟೇ ಅಲ್ಲವೇ ಪ್ರತಿ ವರ್ಷದ ನಮ್ಮ ಸ್ವಾತಂತ್ರ್ಯ ದಿನಾಚರಣೆ. ಶಾಲೆಯಲ್ಲಿ ಇರುವಾಗ ಕಡ್ಡಾಯವಾಗಿ ಹೋಗಲೇಬೇಕಿತ್ತು. ಅದರ ಜತೆ ಏನೋ ಒಂದು ಖುಷಿ. ‘ಝಂಡಾ ಉಂಚಾ ರೆಹೇ ಹಮಾರ’ ಎನ್ನುತ್ತಾ ಧ್ವಜವನ್ನೇ ದಿಟ್ಟಿಸುವುದರಲ್ಲಿ ರೋಮಾಂಚನ ಇರುತ್ತಿತ್ತು. ಆದರೀಗ ದೊಡ್ಡವರಾಗುತ್ತಾ, ನಿಜ ಅರ್ಥದಲ್ಲಿ ದಡ್ಡರಾಗುತ್ತಿದ್ದೇವೆ. ಸ್ವಾತಂತ್ರ್ಯ ದಿನಕ್ಕೆ ಸಿಗುವ ಸರಕಾರಿ ರಜೆಗೆ ಪಿವಿಆರ್‌ನಲ್ಲಿ ಸಿನಿಮಾ ಸೀಟನ್ನು ವಾರದ ಮೊದಲೇ ಕಾದಿರಿಸುವಷ್ಟು ದೊಡ್ಡ ಮನುಷ್ಯರಾಗಿದ್ದೇವೆ.

ಹೈಸ್ಕೂಲ್ ಇತಿಹಾಸ ಪಾಠದಲ್ಲಿ ಓದಿದ ನೆನಪು. ಸ್ವಾತಂತ್ರ್ಯದ ಕಿಚ್ಚು 1857ರಲ್ಲಿ ಶುರುವಾಯಿತು. ಆದರೆ ಸ್ವಾತಂತ್ರ್ಯಕ್ಕಾಗಿ ಪರದಾಡಿದ, ನೆತ್ತರು ಹರಿಸಿದ, ಬಲಿದಾನ ಮಾಡಿದ ಅದೆಷ್ಟೋ ಜನರ ಪರಿಚಯವಿರಲಿ ಹೆಸರೂ ಸಹ ತಿಳಿಯದ ಪರಿಸ್ಥಿತಿ ನಮ್ಮದು. ವಸುದೇವ್ ಬಲವಂತರಾವ್ ಫಡಕೆ ಅಂತ ಧೀರರನ್ನ ಮರೆತು ಕೆಲವರನ್ನ ಮಾತ್ರ ಸ್ವಾತಂತ್ರ್ಯದ ರುವಾರಿಗಳು ಎಂದು ಕೇವಲ ದಿನದಂದು ಕೊಂಡಾಡುವ ಹೀನಾಯ ಪರಿಸ್ಥಿತಿ ನಮ್ಮದು.

ಅಂದು ದೇಶದಲ್ಲಿ ‘ಭಾರತ್ ಮಾತಾ ಕೀ ಜೈ’ ಎಂದರೆ ಕಟು ಶಿಕ್ಷೆಗೆ ಒಳಗಾಗಬೇಕಿತ್ತು. ಅದನ್ನ ಹೇಳುವ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಆದರೆ ಇಂದು ‘ಭಾರತ್ ಮಾತಾ ಕೀ ಜೈ’ ಎನ್ನುವ ಎಲ್ಲಾ ಸ್ವಾತಂತ್ರ್ಯವಿದ್ದರೂ, ಹೇಳುವವರೇ ಇಲ್ಲ. ಎಲ್ಲಿಂದಲೋ ಭಾರತದ ಸಂಪತ್ತು ನೋಡಿ ಕದ್ದುಂಡು ಹೋಗಲಿಕ್ಕೆ ಬಂದ ಪರಕೀಯರು ಸುಮಾರು 200 ವರ್ಷಗಳ ಕಾಲ ನಮ್ಮ ನ್ನಾಳ್ತಾರೆ. ಹಿಂದೂ ಪ್ರಧಾನ ದೇಶ ವಾಗಿದ್ದ ಭಾರತದಲ್ಲಿ ಧರ್ಮದ ಬೀಜ ಬಿತ್ತಿ, ಹಿಂದೂ ಗಳನ್ನು ತಮ್ಮ ಧರ್ಮಕ್ಕೆ ಬದಲಾ ಯಿಸುವ ಪ್ರಯತ್ನ ನಡೆಯುತ್ತದೆ. ಭಾರತವನ್ನು ಇಂಡಿಯಾವನ್ನಾಗಿ ಸುತ್ತಾರೆ. ಭೀಕರ ಕ್ಷಾಮ ಉಂಟಾದಾಗ ‘ಊಟ ಕೊಡುತ್ತೇವೆ, ನೀವು ನಮ್ಮ ಧರ್ಮದವರೇ ಆಗಿರಬೇಕು’ ಎನ್ನುವ ಷರತ್ತನ್ನಿಡುತ್ತಾರೆ. ನಾವು ಗುಲಾಮರು, ಅವರ ಮಾತಿಗೆ ಓಗೊಟ್ಟು ಭಾರತದ ಬದಲು ಇಂಡಿಯಾ ಕಟ್ಟುತ್ತೇವೆ. ವಿಶ್ವ ಗುರುವಾಗಿದ್ದ ಭಾರತವನ್ನು ಡೆವಲಪ್ಪಿಂಗ್ ಇಂಡಿಯಾ ಮಾಡಿ ಬೀಗುತ್ತೇವೆ.

ಆದರೆ ಇಂದಿಗೂ ವಿಚಾರವಂತರೂ ಇಂತಹ ವಿಚಾರಗಳಲ್ಲಿ ತಲೆ ಹಾಕದಿರುವುದು ನಿಜಕ್ಕೂ ಸಂಗತಿ. ಸ್ವಾತಂತ್ರ್ಯದ ದಿನಕ್ಕೆ ಧ್ವಜವೇರಿಸಿ, ದೈಹಿಕವಾಗಿ ವಂದಿಸಿದ ಮಾತ್ರಕ್ಕೆ ಅದು ಸ್ವಾತಂತ್ರ್ಯ ದಿನವಾಗದು. ಶುದ್ಧ ಮನಸ್ಸಿನಿಂದ ದೇಶದ ಉಳಿತಿಗಾಗಿ, ದೇಶದ ಬೆಳವಣಿಗೆಗಾಗಿ ನಾವು ಮಾಡಬೇಕಾಗಿರುವ ಕಾರ್ಯಗಳಿಗೇ ಇಂದೇ ನಾಂದಿ ಹಾಡಬೇಕು. ದೇಶ ನಮ್ಮದು, ಮನ ನಮ್ಮದು.. ದೇಶದ ಬೆಳವಣಿಗೆಯ ಛಲವೂ ನಮ್ಮದೇ ಆಗಬೇಕು.

Tags

Related Articles

Leave a Reply

Your email address will not be published. Required fields are marked *

Language
Close