About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಮೈಜುಮ್ಮೆನಿಸುವ ಯೋಧರ ಸಾಹಸ ಬೈಕ್ ಪ್ರದರ್ಶನ

ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಪಥಸಂಚಲನ ಪ್ರೇಕ್ಷಕರ ಗಮನ ಸೆಳೆಯುತು ದ್ವಿಚಕ್ರ ವಾಹನದ ಸ್ಟಂಟ್ ಜತೆಗೆ ಈ ಬಾರಿ ಮತ್ತೊಂದು ಸಾಹಸ ಕ್ರೀಡೆ ಸೇರಿಕೊಂಡಿದ್ದು, ನೆರೆದಿದ್ದ ಜನರನ್ನು ರೋಮಾಂಚನಗೊಳಿಸಿತು.

ಪ್ರತಿ ಬಾರಿ ದ್ವಿಚಕ್ರ ವಾಹನ ಸ್ಟಂಟ್ ನೋಡೆಲೆಂದೇ, ಕೆಲವರು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವಕ್ಕೆೆ ಆಗಮಿಸುತ್ತಾರೆ. ಆದರೆ, ಈ ಬಾರಿ ಬೈಕ್ ಸ್ಟಂಟ್ ಜತೆಗೆ ಇನ್ನೊಂದು ಸಾಹಸ ಪ್ರದರ್ಶನ ಸೇರ್ಪಡೆಯಾಗಿದ್ದು, ಅದೇ ಜಿಮ್ನಾಸ್ಟಿಕ್ ಸಾಹಸ ಕ್ರೀಡೆ.
ಹೌದು ವಿದೇಶದಲ್ಲಿ ತುಂಬಾ ಪ್ರಚಲಿತದಲ್ಲಿರುವ ಜಿಮ್ನಾಸ್ಟಿಕ್‌ಅನ್ನು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನೆರೆದಿದ್ದ ಜನರು ಹುಬ್ಬೇರಿಸುವಂತೆ ಮಾಡಿತು. ಅಮೇರಿಕಾ, ಕೋರಿಯಾ, ಚೀನಾ ಹಾಗೂ ಇತರ ದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಸಾಹಸ ಪ್ರದರ್ಶನವನ್ನು ಸಾದರಪಡಿಸಿದರು. ಜತೆಗೆ ಸಂಸ್ಕೃತಿ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.

72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಣೆಕ್ ಷಾ ಪರೇಡ್ ಮೈದಾನ‌ಲ್ಲಿ ಸೇನಾ ಸೇವಾ ದಳದ (ಎಎಸ್‌ಸಿ) ದಕ್ಷಿಣ ವಿಭಾಗದ ಯೋಧರು ನಡೆಸಿಕೊಟ್ಟ ಸಾಹಸ ಬೈಕ್ ಪ್ರದರ್ಶನ ಪ್ರೇಕ್ಷಕರ ಮೈಜುಮ್ಮೆನಿಸಿತು.

ಮೇಜರ್ ಎಸ್.ಎಸ್.ರಾಥೋಡ್ ನೇತೃತ್ವದಲ್ಲಿ 20 ಯೋಧರು ಬೈಕ್ ಸಾಹಸ ಪ್ರದರ್ಶಿಸಿದರು. ಬುಲೆಟ್ ಬೈಕ್‌ಗಳ ಮೇಲೆ ಒಂಟಿ ಕಾಲಿನಲ್ಲಿ ನಿಂತು, ಕಾಲು ಮೇಲೆ ಮಾಡಿ, ಚಲಿಸುತ್ತಿರುವ ಬೈಕ್ ಮೇಲೆ ಏಣಿ ಏರುವ ಮೂಲಕ ಯೋಧರು ನೆರದವರನ್ನು ರೋಮಾಂಚನಗೊಳಿಸಿದರು.

ಬೈಕ್‌ಗಳ ಮೇಲೆ ಮಾನವ ಪಿರಮಿಡ್, ಹೂವಿನ ಹಾಗೂ ಮರದ ಮಾದರಿಗಳನ್ನು ಸೃಷ್ಟಿಸಿ ನೆರೆದ ಪ್ರೇಕ್ಷಕರನ್ನು ಚಕಿತಗೊಳಿಸಿದರು. ಟ್ಯೂಬ್ ಲೈಟ್ ಜಂಪ್ ಹಾಗೂ ಬೆಂಕಿ ಚಕ್ರದ ಜಿಗಿತದ ಕಸರತ್ತುಗಳು ನೋಡುಗರನ್ನು ನಿಬ್ಬೆರಗಾಗಿಸಿದವು. 72ನೇ ಸ್ವಾತಂತ್ರ್ಯ ದಿನಾಚರಣೆಗೆ ಮಾಣೆಕ್ ಷಾ ಪರೇಡ್ ಮೈದಾನ‌ಸಾಕ್ಷಿಯಾಯಿತು. ಸಮಾರಂಭದಲ್ಲಿ ಗಡಿ ಭದ್ರತಾ ಪಡೆ, ರಾಜ್ಯ ಪೊಲೀಸ್ ಪಡೆ ಹಾಗೂ ವಿದ್ಯಾರ್ಥಿ ತಂಡಗಳು ಚಿತ್ತಾಕರ್ಷಕ ಪಥ ಸಂಚಲನ ನಡೆಸಿದರೆ, ವಿವಿಧ ಶಾಲೆಗಳ ಮಕ್ಕಳು ದೇಶಭಕ್ತಿ ಗೀತೆಗಳಿಗೆ ಹೆಜ್ಜೆಯಾದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಅದೇ ವೇಳೆಗೆ ವಾಯುಪಡೆಯ ಹೆಲಿಕಾಪ್ಟರ್ ಆಗಸದಿಂದ ಗುಲಾಬಿ ಹೂ ದಳಗಳನ್ನು ಸುರಿಸಿತು. ನಂತರ ಮೈಸೂರು ಇಂಗ್ಲಿಷ್ ಬ್ಯಾಂಡ್’  ಸಾರೆ ಜಹಾಸೆ ಅಚ್ಚಾ ವಾದ್ಯಕ್ಕೆ ಗಡಿ ಭದ್ರತಾ ಪಡೆ, ರಾಜ್ಯ ಪೊಲೀಸ್ ಪಡೆ, ಎನ್‌ಸಿಸಿ, ಗೃಹ ರಕ್ಷಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಶ್ವಾನ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿ ತಂಡಗಳು ಚಿತ್ತಾಕರ್ಷಕ ಪಥ ಸಂಚಲನ ನಡೆಸಿ, ಮುಖ್ಯಮಂತ್ರಿಗಳಿಗೆ ಗೌರವ ವಂದನೆ ಸಲ್ಲಿಸಿದವು.

Tags

Related Articles

Leave a Reply

Your email address will not be published. Required fields are marked *

Language
Close