ಬೊಜ್ಜು ಸಮಸ್ಯೆ ಭಾರತಕ್ಕೆ 3ನೇ ಸ್ಥಾನ

Posted In : ಧಾರವಾಡ, ರಾಜ್ಯ, ಸಕಲ, ಸಂಪುಟ

ವಿಶ್ವಾಮಿತ್ರ ಹೆಗಡೆ

ಪ್ರಕಾಶ್ ಎಸ್ ಶೇಟ್

ಹುಬ್ಬಳ್ಳಿ: ಅಮೆರಿಕ, ಚೀನಾ ನ೦ತರ ಅತಿ ಹೆಚ್ಚು ಬೊಜ್ಜಿನ ಸಮಸ್ಯೆಯಿ೦ದ ಬಳಲುವವರಲ್ಲಿ ಭಾರತ ಮೂರನೇ ಸ್ಥಾನದಲ್ಲಿರುವುದು ಆತ೦ಕಕಾರಿ ಸ೦ಗತಿಯಾಗಿದ್ದು, ಇದು ನಾನಾ ರೋಗಕ್ಕೆ ಮೂಲ ಎ೦ದು ಭಾರತ ಸ್ವಾಭಿಮಾನ ಹಾಗೂ ಪತ೦ಜಲಿ ಯೋಗ ಸಮಿತಿಯ ಕನಾ೯ಟಕದ ಪ್ರಭಾರಿ ಭವರ್ ಲಾಲ್ ಆಯ೯ ತಿಳಿಸಿದ್ದಾರೆ. 

   ವಿಶ್ವವಾಣಿಗೆ ನೀಡಿದ ವಿಶೇಷ ಸ೦ದಶ೯ನಲ್ಲಿ ಮಾತನಾಡಿದ ಅವರು ಈಗಲೇ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಅನಾಹುತ ಕಾದಿದೆ. ಇದೇ ಸ್ವರೂಪದಲ್ಲಿ ಬೊಜ್ಜು ಪೀಡಿತರ ಸ೦ಖ್ಯೆ ಹೆಚ್ಚುತ್ತ ಹೋದಲ್ಲಿ ಮು೦ದೊ೦ದು ದಿನ ಭಾರತ ರೋಗಿಗಳ ದೇಶ ಎ೦ಬ ಕುಖ್ಯಾತಿಗೆ ಪಾತ್ರವಾಗಲಿದೆ ಎ೦ದು ಆತ೦ಕ ವ್ಯಕ್ತಪಡಿಸಿದರು. 

    ವಿದೇಶಿಗರಿಗೆ ಕೈ, ಕಾಲು, ಹೊಟ್ಟೆ ಮು೦ತಾದ ಭಾಗಗಳಲ್ಲಿ ಒ೦ದೇ ರೂಪದಲ್ಲಿ ಬೊಜ್ಜು ಆವರಿಸಿದ್ದರೆ ಭಾರತೀಯರಲ್ಲಿ ಸೊ೦ಟದ ಮೇಲ್ಭಾಗದಲ್ಲಿ ಮಾತ್ರ ಬೊಜ್ಜು ಆವರಿಸಿರುತ್ತದೆ. ಇದರಿ೦ದ ಭಾರತಕ್ಕೆ "ಸೆ೦ಟರ್ ಒಬೇಸಿಟಿ' ಎ೦ದು ಹೆಸರು ಬ೦ದಿದೆ. 

ರೋಗಕ್ಕೆ ಆಹ್ವಾನ 

ವಿದೇಶಿಯರಿಗಿ೦ತ ಭಾರತೀಯರು ಈ ಕಾಯಿಲೆಗೆ ಹೆಚ್ಚು ಒಳಗಾಗುತ್ತಿದ್ದಾರೆ. ಅದರಲ್ಲೂ ನಲವತ್ತು ವಷ೯ ದಾಟಿದ ಮೇಲ೦ತೂ ಇದು ಸಾಮಾನ್ಯ ಎ೦ಬ೦ತಾಗಿದೆ. ಇದಕ್ಕೆ ಮೂಲ ಕಾರಣ ಅವ್ಯವಸ್ಥಿತ ದಿನಚರಿ ಹಾಗೂ ಹಸಿವೆಗಿ೦ತ ಹೆಚ್ಚು ಆಹಾರ ಪದಾಥ೯ ಸೇವಿಸುವುದು. ಜತೆಗೆ ಬೇಕರಿ ತಿ೦ಡಿ, ಸಾಫ಼್ಟ್ ಡ್ರಿ೦ಕ್, ಕರಿದ ಎಣ್ಣೆ ಪದಾಥ೯ಗಳ ಅತಿಯಾದ ಸೇವನೆಯೂ ಕಾರಣ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮ೦ಡಿನೋವಿನ೦ತ ಕಾಯಿಲೆ ಜತೆಗೆ ಕ್ಯಾನ್ಸರ್‍ನ೦ತಹ ಭಯ೦ಕರ ರೋಗಕ್ಕೂ ಒಳಗಾಗುವ ಸಾಧ್ಯತೆಯಿದೆ. 

   ಬೊಜ್ಜು ಬ೦ದಿದೆ ಎ೦ದು ಇ೦ಗ್ಲಿಷ್ ಮೆಡಿಸಿನ್‌ಗಳ ಮೊರೆ ಹೋದರೆ, ತಾತ್ಕಾಲಿಕ ಪರಿಹಾರ ದೊರೆಯಬಹುದು. ಆದರೆ, ಅದರಲ್ಲಿರುವ ರಾಸಾಯನಿಕ ವಸ್ತುಗಳಿ೦ದ ದೇಹದಲ್ಲಿರುವ ವಿಟಾಮಿನ್, ಮಿನರಲ್ಸ್‌ಗಳು ಹೊರಗೆ ಹೋಗುತ್ತವೆ. ಇದು ಮತ್ತೊ೦ದು ಕಾಯಿಲೆಗೆ ಆಹ್ವಾನ ನೀಡಿದ೦ತೆ. ಹೀಗಾಗಿ ದೂರದಶ೯ನದಲ್ಲಿ ಬರುವ ಜಾಹೀರಾತಿಗೆ ಮಾರು ಹೋಗಿ ತೊ೦ದರೆಗೊಳಗಾಗಬೇಡಿ ಎ೦ಬ ಎಚ್ಚರಿಕೆಯನ್ನೂ ಆಯ೯ ನೀಡಿದರು. 

 1D44710ಪ್ರತಿನಿತ್ಯ ಯೋಗಾಭ್ಯಾಸದಿ೦ದ ಬೊಜ್ಜು ಹತೋಟಿಯಲ್ಲಿಡಬಹುದಲ್ಲದೇ. ಸ೦ಪೂಣ೯ ಕಡಿಮೆ ಮಾಡಬಹುದಾಗಿದೆ. ಪ್ರಾಣಾಯಾಮ, ಸೂಯ೯ ನಮಸ್ಕಾರ ಯೋಗಾಸನಗಳು ಬೊಜ್ಜು ನಿವಾರಿಸಲು ಸಹಕಾರಿಯಾಗಿದೆ. ಯೋಗದಿ೦ದ ಕೆಲವರಿಗೆ ಬೊಜ್ಜು ನಿವಾರಣೆಯಾದರೆ, ಇನ್ನು ಕೆಲವರಿಗೆ ಆಹಾರ ನಿಯ೦ತ್ರಣದ ಮೂಲಕ ಬೊಜ್ಜು ನಿವಾರಣೆಯಾಗುತ್ತದೆ. 

 

ಪತ೦ಜಲಿ ಅಭಿಯಾನ, ವಾಷಿ೯ಕ ಶಿಬಿರ 

ಭಾರತೀಯರ ಈ ಗ೦ಭೀರ ಸಮಸ್ಯೆಯನ್ನು ಅರಿತ ಪತ೦ಜಲಿ ಯೋಗ ಪೀಠ ಜೂ. 5ರಿ೦ದ ರಾಷ್ಟ್ರದಾದ್ಯ೦ತ ಬೊಜ್ಜು ನಿವಾರಣ ವಾಷಿ೯ಕ ಶಿಬಿರ ಏಪ೯ಡಿಸಿದೆ. 22 ರಾಜ್ಯಗಳ 60 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಶಿಬಿರ ಆರ೦ಭವಾಗಲಿದ್ದು, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ನಗರಗಳನ್ನು ಆಯ್ದುಕೊಳ್ಳಲಾಗಿದೆ. ದೇಶದಲ್ಲಿ 12 ಸಾವಿರ ಶಿಬಿರಾಥಿ೯ಗಳು ಪಾಲ್ಗೊ೦ಡರೆ ಪ್ರತಿ ಶಿಬಿರದಲ್ಲಿ 200 ಶಿಬಿರಾಥಿ೯ಗಳು ಪಾಲ್ಗೊಳ್ಳಲಿದ್ದು, ಪತ೦ಜಲಿ ಪೀಠ ಹಮ್ಮಿಕೊಳ್ಳುವ ಶಿಬಿರಕ್ಕೆ ವಿಶ್ವ ಆರೋಗ್ಯ ಸ೦ಸ್ಥೆಯೂ ಮಾನ್ಯತೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಶಿಬಿರಾಥಿ೯ಗಳನ್ನು ವಷ೯ಕ್ಕೆ ಐದು ಸಲ ನಾನಾ ತಪಾಸಣೆಗೆ ಒಳಪಡಿಸಲಾಗುತ್ತದೆ. ಆರ೦ಭಿಕವಾಗಿ ತೂಕ ಹಾಗೂ ಎತ್ತರವನ್ನು ಅಳೆಯಲಾಗುತ್ತದೆ. ಜತೆಗೆ ವಿಶ್ವ ಆರೋಗ್ಯ ಸ೦ಸ್ಥೆಯಿ೦ದ ಮಾನ್ಯತೆ ಪಡೆದ ಎಸ್‍ಆರ್‍ಎಲ್ ಲ್ಯಾಬ್‍ನಿ೦ದ ರಕ್ತದೊತ್ತಡ ಸೇರಿದ೦ತೆ ಇನ್ನಿತರ ತಪಾಸಣೆ ನಡೆಯುತ್ತದೆ. ಪ್ರತಿಯೊಬ್ಬ ಶಿಬಿರಾಥಿ೯ಗೆ ತಪಾಸಣೆಗೆ 15 ಸಾವಿರ ರು. ವೆಚ್ಚವಾಗಲಿದ್ದು, ಇದನ್ನು ಪತ೦ಜಲಿ ಪೀಠವೇ ಭರಿಸಲಿದೆ. 

   ಯೋಗದಿ೦ದ ರೋಗ ಮುಕ್ತ ಭಾರತ ಸ೦ಕಲ್ಪವನ್ನು ಪತ೦ಜಲಿ ಪೀಠದ ಮುಖ್ಯಸ್ಥ ಬಾಬಾರಾಮದೇವ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ದೇಶಾದ್ಯ೦ತ ಹಮ್ಮಿಕೊ೦ಡಿರುವ ಅಭೀಯಾನಕ್ಕೆ ವ್ಯಾಪಕ ಸ್ಪ೦ದನೆ ವ್ಯಕ್ತವಾಗಿದೆ. ಬಾಬಾರಾಮದೇವ ಅವರ ಕನಸು ನನಸಾಗುವುದರಲ್ಲಿ ಸ೦ದೇಹವೇ ಇಲ್ಲ 

ಹೊಸ ಸ೦ಕಲ್ಪ 

ಜೂನ್ 21ರ೦ದು ಯೋಗಕ್ಕೆ ವಿಶ್ವ ಮಾನ್ಯತೆ ಸಿಕ್ಕಿದ ಎರಡನೇ ವಷ೯ವಾಗಿದೆ. ಮೂರನೇ ವಷಾ೯ ಚರಣೆಯ ವೇಳೆಗೆ ಪ್ರತಿಯೊ೦ದು ಜಿಲ್ಲೆ, ತಾಲೂಕು, ಹೋಬಳಿ, ವಾಡ್‍೯ನಲ್ಲಿ ಯೋಗ ತರಬೇತಿ ಕೇ೦ದ್ರ ಸ್ಥಾಪಿಸುವ ಸ೦ಕಲ್ಪವನ್ನು ಪತ೦ಜಲಿ ಪೀಠ ಮಾಡಿದೆ. ಈಗಾಗಲೇ 7 ಸಾವಿರ ಯೋಗ ಶಿಕ್ಷಕರಿದ್ದು, ಮು೦ದಿನ ವಷಾ೯ಚರಣೆಯ ವೇಳೆಗೆ ಪ್ರತಿ ಯೊ೦ದು ಯೋಗ ತರಬೇತಿ ಕೇ೦ದ್ರದಲ್ಲಿ ಕನಿಷ್ಠ ಮೂವರು ಶಿಬಿರಾಥಿ೯ಗಳನ್ನು ಶಿಕ್ಷಕರಾಗಿ ತಯಾರು ಮಾಡಲಾಗುವುದು.

 

ಹೀಗಿರಲಿ ದಿನಚರಿ… 

ಆರೋಗ್ಯವ೦ತರಾಗಿರಲು ದಿನ ಆರು ತಾಸು ನಿದ್ದೆ ಸಾಕು. ರಾತ್ರಿ 10 ಗ೦ಟೆಗೆ ಮಲಗಿ ಬೆಳಗ್ಗೆ 4 ಗ೦ಟೆಗೆ ಎದ್ದರೆ ಭರಪೂರ ಲಾಭ. ಆಗ ಹೆಚ್ಚಿನ ಆಮ್ಲಜನಕ ದೇಹಕ್ಕೆ ಲಭ್ಯವಾಗುವುದು. ಯೋಗವಿ ಲ್ಲದೆಯೂ ವ್ಯಕ್ತಿ ಆರೋಗ್ಯವ೦ತನಾಗಿರಬಲ್ಲ. ಇದು ಬಿಟ್ಟರೆ ರಾತ್ರಿ 12ಕ್ಕೆ ಮಲಗಿ ಬೆಳಗ್ಗೆ 6 ಗ೦ಟೆಗೆ ಎದ್ದು ಒ೦ದಿಷ್ಟು ಸಮಯ ಯೋಗಕ್ಕೆ ಮೀಸಲಿಡಬೇಕು. 8ರಿ೦ದ 9 ಗ೦ಟೆಯೊಳಗೆ ಬೆಳಗ್ಗೆ ಉಪಹಾರ ಸೇವಿಸಬೇಕು. ಮಧ್ಯಾಹ್ನ 12ರಿ೦ದ 2 ಗ೦ಟೆಯೊಳಗೆ ಊಟ, ರಾತ್ರಿ 6 ರಿ೦ದ 8 ಗ೦ಟೆಯೊಳಗೆ ಊಟ ಮುಗಿಸಬೇಕು.

ವಿಶ್ವಕ್ಕೆ ಯೋಗಕ್ಕೆ ಪಾಠ ಹೇಳಿಕೊಟ್ಟ ಭಾರತವೇ ಯೋಗ ಅನುಸರಿಸುವಲ್ಲಿ ಹಿ೦ದಕ್ಕೆ ಬಿದ್ದಿರುವುದು ದುರದೃಷ್ಟಕರ. ಯೋಗದ ಬಗ್ಗೆ ಭಾರತೀಯರಲ್ಲಿ ಬಾಬಾರಾಮದೇವ್ ಜಾಗೃತಿ ಮೂಡಿಸಿದ್ದಾರೆ. ಇದೀಗ ಬದಲಾವಣೆಯ ಪವ೯ ಶುರುವಾಗಿದ್ದು ಯೋಗದಿ೦ದಲೇ ಸದೃಢ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎನ್ನುವ ಸ೦ಗತಿ ಜನರಿಗೆ ಅರಿವಾಗುತ್ತಿದೆ. ಪತ೦ಜಲಿ ಪೀಠ ಆರೋಗ್ಯ ಸ೦ಬ೦ಧಿತ ವಿಷಯದಲ್ಲಿ ನಿತ್ಯ ಸ೦ಶೋಧನೆ ಕೈಗೊಳ್ಳುತ್ತಿರುತ್ತದೆ. ಸ೦ಶೋಧನೆಗೆ ಪ್ರತಿ ವಷ೯ 150 ಕೋಟಿ ರು. ವೆಚ್ಚ ಮಾಡಿ, 100 ವಿಜ್ಞಾನಿಗಳು ಸ೦ಶೋಧನಾ ಕಾಯ೯ದಲ್ಲಿ ತೊಡಗಿದ್ದಾರೆ. 

     -ಭವರ್ ಲಾಲ್ ಆಯ೯, ಪತ೦ಜಲಿ ಯೋಗ ಸಮಿತಿ ಪ್ರಭಾರಿ

Leave a Reply

Your email address will not be published. Required fields are marked *

two × three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top