About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ವಿರಾಟ್‌ ಅಬ್ಬರ, ಭಾರತಕ್ಕೆ ಭರ್ಜರಿ ಜಯ: 1-1 ರಿಂದ ಸರಣಿ ಸಮಬಲ

ಸಿಡ್ನಿ: 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಸರಣಿಯನ್ನು 1-1ರಿಂದ ಸಮಬಲ ಸಾಧಿಸಿದೆ. ನಾಯಕ ವಿರಾಟ್‌ ಕೊಹ್ಲಿ ಅರ್ಧ ಶತಕ ಬಾರಿಸುವ ಮೂಲಕ ಭಾರತವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿದೆ. ಈ ಮೂಲಕ ಭಾರತದ ಗೆಲುವಿಗೆ 165 ರನ್ ಟಾರ್ಗೆಟ್ ನೀಡಿತು.

ಉತ್ತಮ ಆರಂಭ ಪಡೆಯಿತು. ನಾಯಕ ಆಯರೋನ್ ಫಿಂಚ್ ಹಾಗೂ ಡಾರ್ಕಿ ಶಾರ್ಟ್ ಅರ್ಧಶತಕದ ಜೊತೆಯಾಟ ನೀಡಿದರು. ಫಿಂಚ್ 28 ರನ್ ಸಿಡಿಸಿ ಔಟಾದರೆ, ಶಾರ್ಟ್ 33 ರನ್‌ಗಳಿಸಿ ಪೆವಿಲಿಯನ್ ಸೇರಿದರು. ಬೆನ್ ಮೆಕ್‌ಡೆಮೊರ್ಟ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಆಸರೆಯಾಗಲಿಲ್ಲ. ಆದರೆ ಆಲೆಕ್ಸ್ ಕ್ಯಾರಿ 27 ರನ್ ಸಿಡಿಸಿದರು. ಕ್ರಿಸ್ ಲಿನ್ 13 ರನ್‌ಗಳಿಸಿ ಔಟಾದರು. ಮಾರ್ಕಸ್ ಸ್ಟೊಯಿನಿಸ್ ಅಜೇಯ 25 ಹಾಗೂ ನತನ್ ಕೌಲ್ಟರ್ ನೈಲ್ ಅಜೇಯ 13 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿತು.

ಸರಣಿಯಲ್ಲಿ ದುಬಾರಿಯಾಗಿದ್ದ ಕ್ರುನಾಲ್ ಪಾಂಡ್ಯ ನಿರ್ಣಾಯಕ ಪಂದ್ಯದಲ್ಲಿ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಕುಲ್ದೀಪ್ ಯಾದವ್ 1 ವಿಕೆಟ್ ಕಬಳಿಸಿದರು.

ಆಸ್ಟ್ರೇಲಿಯಾ ನೀಡಿದ 165ರನ್‌ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ದೊರೆಯಿತು. ರೋಹಿತ್‌-ಧವನ್‌ ಆಸಿಸ್‌ ಬೌಲರ್‌ಗಳನ್ನು ಬೆವರಿಳಿಸಿದರು. ಈ ಜೋಡಿ 67ರನ್‌ ಜೊತೆಯಾಟ ಆಡುವ ಮೂಲಕ ಭದ್ರ ಭುನಾದಿ ಹಾಕಿತು. ದವನ್‌ 41, ರೋಹಿತ್‌ 23 ರನ್‌ ಸಿಡಿಸಿದರು. ಶಿಖರ್‌ ದವನ್‌(41)  ಔಟಾಗುತ್ತಿದ್ದಂತೆ, ಹಿಟ್‌ ಮ್ಯಾನ್‌ ರೋಹಿತ್‌(23) ಸಹ ಪೆವಿಲಿನ್‌ ಸೇರಿದರು. ಈ ಜೋಡಿ ಬೇರ್ಪಡುತ್ತಿದ್ದಂತೆ ನಂತರ ಕ್ರೀಸ್‌ಗಿಳಿದ ನಾಯಕ ಕೊಹ್ಲಿ, ಕನ್ನಡಿಗ ಕೆ.ಎಲ್‌.ರಾಹುಲ್‌ ಉತ್ತಮ ಜೊತೆಯಾಟ ಆಡಿದರು. 14 ರನ್‌ ಗಳಿಸಿದ್ದ ರಾಹುಲ್‌ ಕೂಡಾ ಕೌಲ್ಟರ್‌ ನೈಲ್‌ ಎಸೆತಕ್ಕೆ ಬಲಿಯಾದರು.

ಇದಾದ ಬಳಿಕ ಬಂದ ರಿಷಭ್‌ ಪಂತ್‌ ಶೂನ್ಯಕ್ಕೆ ಔಟಾದರು. ನಂತರ ಜೊತೆಯಾದ ವಿರಾಟ್‌ (61) -ದಿನೇಶ್‌ ಕಾರ್ತಿಕ್‌(21)  ಭಾರತವನ್ನು ಗೆಲುವಿನ ದಡ ಸೇರಿಸಿದರು.

ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟ್ರಾಕ್‌, ಆಡಂ ಜಂಪಾ, ಟೈ, ಕೌಲ್ಟರ್‌ ನೈಲ್‌ ತಲಾ ಒಂದು ವಿಕೆಟ್‌ ಪಡೆದರು.

Tags

Related Articles

Leave a Reply

Your email address will not be published. Required fields are marked *

Language
Close