About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಫುಟ್ಬಾಲ್: ಪಾಕ್‌ಗೆ ಸೋಲುಣಿಸಿದ ಭಾರತ

ದೆಹಲಿ: ಆಕರ್ಷಣೀಯ ಪ್ರದರ್ಶನ ನೀಡಿದ ಭಾರತದ ಬಾಲಕಿಯರು ಎಎಫ್‌ಸಿ 16 ವಯೋಮಿತಿಯ ಮಹಿಳಾ ಚಾಂಪಿಯನ್‌ಶಿಪ್ ಅರ್ಹತಾ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಬುಧವಾರ ಮಂಗೋಲಿಯಾದ ಉಲಾನ್ ಬಾತೊರ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 4-0 ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿತು. 22 ನೇ ನಿಮಿಷದಲ್ಲಿ ಆವಿಕಾ ಸಿಂಗ್ ಭಾರತಕ್ಕೆ ಗೋಲಿನ ಖಾತೆ ತೆರೆದರು. ನಂತರ, 43 ನೇ ನಿಮಿಷದಲ್ಲಿ ಪಾಕಿಸ್ತಾನ ಭಾರತಕ್ಕೆ ಎರಡನೇ ಗೋಲು ಕೊಡುಗೆಯಾಗಿ ನೀಡಿತು. ಇದರೊಂದಿಗೆ, ಭಾರತ ಮೊದಲ ಅವಧಿ ಮುಕ್ತಾಯಕ್ಕೆ 2-0 ಮುನ್ನಡೆ ಪಡೆಯಿತು.

ಎರಡನೇ ಅವಧಿಯಲ್ಲಿ ಕಾರ್ಯ ಯೋಜನೆಯೊಂದಿಗೆ ಕಣಕ್ಕೆ ಇಳಿದ ಪಾಕಿಸ್ತಾನ, ಭಾರತಕ್ಕೆ ಪ್ರಬಲ ಪೈಪೋಟಿ ನೀಡುವಲ್ಲಿ ಯಶಸ್ವಿಯಾಯಿತು. ಆದರೆ, ಭಾರತದ ರಕ್ಷಣಾ ಕೋಟೆ ಎದುರಿಸಿ ಗೋಲು ಗಳಿಸುವಲ್ಲಿ ಪಾಕಿಸ್ತಾನ ಸಫಲವಾಗಲಿಲ್ಲ. ಆಕ್ರಮಣಾಕಾರಿ ಆಟ ಮುಂದುವರಿಸಿದ ಭಾರತಕ್ಕೆ 82 ನೇ ನಿಮಿಷದಲ್ಲಿ ಸುನೀತಾ ಮುಂಡಾ ಮೂರನೇ ಗೋಲು ತಂದುಕೊಡುವಲ್ಲಿ ಸಫಲರಾದರು.

ನಂತರ, ಇದರ 88ನೇ ನಿಮಿಷದಲ್ಲಿ ಶಿಲ್ಕಿ ದೇವಿ ಭಾರತಕ್ಕೆ ನಾಲ್ಕನೇ ಗೋಲು ತಂದುಕೊಟ್ಟರು. ಇದರೊಂದಿಗೆ ಭಾರತ 4-0 ಅಂತರದಲ್ಲಿ ಪಾಕಿಸ್ತಾನದ ಎದುರು ಭರ್ಜರಿ ಜಯ ದಾಖಲಿಸಿತು. ಇದರ ಫಲವಾಗಿ ಭಾರತ, ಎರಡು ಪಂದ್ಯಗಳಿಂದ ಆರು ಅಂಕಗಳನ್ನು ಕಲೆಹಾಕಿದ್ದು, ಗುಂಪು‘ಬಿ’ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದೆ. ಭಾರತ ಮುಂದಿನ ಪಂದ್ಯ ಮಂಗೋಲಿಯಾ ವಿರುದ್ಧ ಇದೇ 21 ರಂದು ಸೆಣಸಲಿದೆ.

 

Tags

Related Articles

Leave a Reply

Your email address will not be published. Required fields are marked *

Language
Close