About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಮೊದಲ ಏಕದಿನ ಪಂದ್ಯ: ಆಸೀಸ್‌ ವಿರುದ್ಧ ಮುಗ್ಗರಿಸಿದ ಭಾರತ

ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ಒಡ್ಡಿರುವ 289 ರನ್ ಬೆನ್ನತ್ತಿದ್ದ ಟೀಮ್ ಇಂಡಿಯಾ, ರೋಹಿತ್ ಶರ್ಮಾ ಅಮೋಘ ಶತಕ ಹಾಗೂ ಮಹೇಂದ್ರ ಸಿಂಗ್ ಧೋನಿ ಸಮಯೋಚಿತ ಅರ್ಧಶತಕದ ನಡುವೆಯೂ ಆಸೀಸ್‌ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ.

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ 289 ರನ್ ನೀಡಿದ್ದ ಗುರಿಯನ್ನು ನಿಗಧಿತ 50 ಒವರ್‌ಗಳಲ್ಲಿ ಭಾತರ 9 ವಿಕೆಟ್‌ ನಷ್ಟಕ್ಕೆ 254 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಪ್ರಥಮ ಓವರ್‌ನಲ್ಲೇ ಜೇಸನ್‌ ಬೆಹ್ರೆನ್‌ಡಾರ್ಫ್‌ ಶಿಖರ್ ಧವನ್ (0) ಶೂನ್ಯಕ್ಕೆ ಹೊರಗಟ್ಟಿದರು. ನಾಯಕ ವಿರಾಟ್ ಕೊಹ್ಲಿ (3) ಜತೆಗೆ ಅಂಬಟಿ ರಾಯುಡು (0) ಅವರನ್ನು ಬೆನ್ನು ಬೆನ್ನಿಗೆ ಪೆವಿಲಿಯನ್‌ಗಟ್ಟಿದ ಜೇ ರಿಚರ್ಡ್ಸನ್ ಭಾರತಕ್ಕೆ ತೀವ್ರ ಆಘಾತ ನೀಡಿದರು. ಇದರೊಂದಿಗೆ 3.5 ಓವರ್‌ಗಳಲ್ಲೇ 4 ರನ್ ಗಳಿಸುವುದರೆಡೆಗೆ ಪ್ರಮುಖ ಮೂರು ವಿಕೆಟುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಮೊದಲೈದು ಓವರ್‌ಗಳಲ್ಲಿ ಭಾರತ 11 ಹಾಗೂ ಮೊದಲ ಪವರ್ ಪ್ಲೇ ಅಂತ್ಯಕ್ಕೆ 10 ಓವರ್ ವೇಳೆಗೆ ಮೂರು ವಿಕೆಟ್ ನಷ್ಟಕ್ಕೆ 21 ರನ್‌ಗಳನ್ನಷ್ಟೇ ಗಳಿಸಿತ್ತು. ಇದರಿಂದ ಆರಂಭದಲ್ಲೇ ತೀವ್ರ ಹಿನ್ನಡೆಗೊಳಗಾಯಿತು.

ಧೋನಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ ರೋಹಿತ್ ಕೆಟ್ಟ ಚೆಂಡುಗಳನ್ನು ದಂಡಿಸಿದರು. ಅಲ್ಲದೆ ಏಕದಿನದಲ್ಲಿ 38ನೇ ಅರ್ಧಶತಕ ಸಿಡಿಸಿದರು. ಈ ಮೂಲಕ ಭಾರತ ತಿರುಗೇಟು ನೀಡಲು ನೆರವಾದರು. ಅಂತಿಮ 25 ಓವರ್‌ಗಳಲ್ಲಿ ಭಾರತದ ಗೆಲುವಿಗೆ 190 ರನ್‌ಗಳ ಅವಶ್ಯಕತೆಯಿತ್ತು. ಅತ್ತ ರೋಹಿತ್-ಧೋನಿ ಜೋಡಿಯು ಶತಕದ ಜತೆಯಾಟವನ್ನು ನೀಡಿದರು.

ಏಕದಿನದಲ್ಲಿ 68ನೇ ಫಿಫ್ಟಿ; ರೋಹಿತ್ ಬೆನ್ನಲ್ಲೇ ಮಹಿ ಕೂಡಾ ಅರ್ಧಶತಕವನ್ನು ಬಾರಿಸಿದರು. ಧೋನಿ ಫಿಫ್ಟಿ 93 ಎಸೆತಗಳಲ್ಲಿ ದಾಖಲಾಗಿದ್ದವು. ಈ ಮೂಲಕ ತಮ್ಮ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದರು. ಆದರೆ ಅರ್ಧಶತಕದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದ ಧೋನಿ ನಿರಾಸೆ ಅನುಭವಿಸಿದರು. 96 ಎಸೆತಗಳನ್ನು ಎದುರಿಸಿದ ಮಹಿ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಅಲ್ಲದೆ ರೋಹಿತ್ ಜತೆ ನಾಲ್ಕನೇ ವಿಕೆಟ್‌ಗೆ 137 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು. ಧೋನಿ ವಿಕೆಟ್ ಸಹ ಡೆಬ್ಯು ವೇಗಿ ಬೆಹ್ರೆನ್‌ಡಾರ್ಫ್ ಪಾಲಾಯಿತು.

ಧೋನಿ ಪತನದ ಬಳಿಕವೂ ಹಿಟ್‌ಮ್ಯಾನ್ ಅಮೋಘ ಆಟವನ್ನು ಮುಂದುವರಿಸಿದರು. ಇವರಿಗೆ ದಿನೇಶ್ ಕಾರ್ತಿಕ್‌ರಿಂದ (12) ಉತ್ತಮ ಬೆಂಬಲ ಸಿಗದೇ ಹೋಯಿತು. ಇನ್ನೊಂದೆಡೆ ಕೆಚ್ಚೆದೆಯ ಹೋರಾಟ ನೀಡಿದ ರೋಹಿತ್, ಏಕದಿನದಲ್ಲಿ 22ನೇ ಶತಕ ಸಾಧನೆ ಮಾಡಿದರು. ರೋಹಿತ್ ಶತಕವು 110 ಎಸೆತಗಳಲ್ಲಿ ದಾಖಲಾಗಿತ್ತು. ಜಡೇಜ 8 ರನ್‌ ಗಳಿಸಿ ಔಟಾದರು.

133 ರನ್‌ ಗಳಿಸಿ ರೋಹಿತ್ ಶರ್ಮಾ ಔಟ್‌ ಆಗುತ್ತಿದ್ದಂತೆ ಭಾರತ ಸೋಲಿನ ಸುಳಿಗೆ ಸಿಲುಕಿತು. ನಂತರ ಭುವನೇಶ್ವರ್‌ ಕುಮಾರ್‌ 23 ಎಸೆತ ಗಳಲ್ಲಿ 4 ಬೌಂಡರಿ ಬಾರಿಸುವ ಮೂಲಕ 29 ರನ್‌ ಗಳಿಸಿ ಅಜೇಯರಾಗುಳಿದರು. ಇನ್ನ ಕುಲ್ದೀಪ್‌ ಮೂರು ರನ್‌ ಗಳಿಸಿ ಔಟ್‌ ಆದರು. ಮೊಹಮದ್ ಶಮಿ ಒಂದು ರನ್‌ ಗಳಿಸಿ ಪೆವಿಲಿನ್‌ ಸೇರಿದರು. ಈ ಮೂಲಕ ಭಾರತ ಆಸೀಸ್‌ ವಿರುದ್ಧ ಮಂಡಿಯೂರಿತು.

ಆಸೀಸ್‌ ಪರ ಝ್ಯೇ ರಿಚರ್ಡ್‌ಸನ್‌ ಮೂರು, ಮಾರ್ಕ್ ಸ್ಟೋನೀಸ್‌ ಎರೆಡು, ಬ್ರೆಹನ್‌ ಡ್ರಾಫ್ಟ್‌ ಒಂದು ವಿಕೆಟ್‌ ಪಡೆದರು.

Tags

Related Articles

Leave a Reply

Your email address will not be published. Required fields are marked *

Language
Close