About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಖಾಲಿಸ್ತಾನ ಭಯೋತ್ಪಾದನಗೆ ಮರುಜೀವ ನೀಡಲು ಯತ್ನ: ಸರಕಾರ

ಪಂಜಾಬ್‌ನಲ್ಲಿ ಭಯೋತ್ಪಾದನೆ ಸಂಬಂಧ ಏಳು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(NIA), ರಾಜ್ಯದಲ್ಲಿ ಖಾಲಿಸ್ತಾನ ಸಂಬಂಧಿ ಭಯೋತ್ಪಾದನೆಗೆ ಮುಂದಡಿ ಇಡುತ್ತಿವೆ ಎಂದು ತಿಳಿಸಿದೆ.

ಈ ಕುರಿತು ಸಂಸತ್ತಿನಲ್ಲಿ ಮಾತನಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸ್ರಾಜ್‌ ಅಹಿರ್‌, ಕೊಲೆ ಸಂಬಂಧ ಐದು ಪ್ರಕರಣಗಳು ಹಾಗು ಕೊಲೆಗೆ ಯತ್ನದ ಎರಡು ಪ್ರಕರಣಗಳನ್ನು 2016-17ರಲ್ಲಿ ಪಂಜಾಬ್‌ನಲ್ಲಿ ದಾಖಲಿಸಲಾಗಿದ್ದು, “ಪಂಜಾಬ್‌ನಲ್ಲಿ ಕಾನೂನು ಸುವ್ಯಸ್ಥೆಯನ್ನು ಹಾಳುಗೆಡವಿ, ರಾಜ್ಯದಲ್ಲಿ ಖಾಲಿಸ್ತಾನ ಭಯೋತ್ಪಾದನೆಗೆ ಮರುಹುಟ್ಟು ನೀಡುವ ಉದ್ದೇಶವನ್ನು ಹೊಂದಲಾಗಿತ್ತು” ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ ತಿಳಿಸಿದ್ದಾರೆ.

ದೇಶದಲ್ಲಿ ಭಯೋತ್ಪಾದಕ ದಾಳಿಗಳನ್ನು ತಪ್ಪಿಸುವ ದೃಷ್ಟಿಯಲ್ಲಿ, ಗುಪ್ತಚರ ಹಾಗು ಭದ್ರತಾ ಏಜೆನ್ಸಿಗಳ ನಡುವೆ ಕೇಂದ್ರ ಹಾಗು ರಾಜ್ಯಗಳ ಮಟ್ಟದಲ್ಲಿ ಸಮರ್ಪಕವಾದ ಸಹಕಾರ ಇದೆ ಎಂದು ಅಹಿರ್‌ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close