ದಕ್ಷಿಣ ಆಫ್ರಿಕಾ ಗೆಲುವಿಗೆ 275 ರನ್ ಗುರಿ

Posted In : ಕ್ರೀಡೆ

ಫೋರ್ಟ್’ಎಲಿಜಬೆತ್: ಆರಂಭಿಕ ರೋಹಿತ್ ಶರ್ಮಾ ಅವರ ಶತಕದ ನರವಿನಿಂದ ಭಾರತ ಏಳು ವಿಕೆಟ್ ನಷ್ಟಕ್ಕೆ 274 ರನ್ ಪೇರಿಸಿದೆ. ಈ ಮೂಲಕ ಹರಿಣಗಳು ಸರಣಿ ಸೋಲು ತಪ್ಪಿಸಲು ಜಯಗಳಿಸಲೇ ಬೇಕಿದೆ. ಭಾರತ ಈಗಾಗಲೇ 3-1 ಮುನ್ನಡೆಯ ಲ್ಲಿದೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಅವರ ಅಬ್ಬರದ ಆಟಕ್ಕೆ ಭಾರತದ ರನ್ 300 ಗಡಿ ದಾಟುವ ಸಾಧ್ಯತೆಯಿತ್ತು. ಆದರೆ ಹರಿಣ ವೇಗಿಗಳ ಕರಾರುವಾಕ್ ಬೌಲಿಂಗ್ ಹಾಗೂ ರೋಹಿತ್ ಔಟಾದ ಬೆನ್ನಲ್ಲೇ ವಿಕೆಟ್ ಉರುಳಿದ ಪರಿಣಾಮ, ಭಾರತದ ಬೃಹತ್ ಮೊತ್ತದ ಆದೆ ಕೈಗೂಡಲಿಲ್ಲ. ಹರಿಣಗಳ ಪರ ಲುಂಗಿ ಎನ್ಜಿಡಿ ನಾಲ್ಕು ವಿಕೆಟ್ ಕಿತ್ತು, ಭಾರತದ ಕುಸಿತಕ್ಕೆ ನಾಂದಿ ಹಾಡಿದರು.

ಭಾರತ 274/7 (50)
ಸ್ಕೋರ್ ವಿವರ:
ಧವನ್ 34, ರೋಹಿತ್ 115, ವಿರಾಟ್ 36, ಶ್ರೇಯಸ್ ಅಯ್ಯರ್ 30, ಭುವನೇಶ್ವರ್ ಕುಮಾರ್ 19 ಬ್ಯಾಟಿಂಗ್
ಬೌಲಿಂಗ್ ವಿವರ: ಲುಂಗಿ ಎನ್ಜಿಡಿ 51/4, ಕಗಿಸೋ ರಬಾಡಾ 58/1.

Leave a Reply

Your email address will not be published. Required fields are marked *

8 − six =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top