About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಇಮ್ರಾನ್‌ ಖಾನ್‌ಗೆ ಬ್ಯಾಟ್‌ ಗಿಫ್ಟ್‌ ಕೊಟ್ಟ ಭಾರತ!

ಇಸ್ಲಮಾಬಾದ್‌: ಪಾಕಿಸ್ತಾನದ ನಿಯೋಜಿತ ಪ್ರಧಾನಿ  ಇಮ್ರಾನ್​ ಖಾನ್​ಗೆ ಭಾರತೀಯ ಕ್ರಿಕೆಟ್​ ತಂಡದ ಆಟಗಾರರ ಸಹಿಯಿರುವ ಬ್ಯಾಟನ್ನು ಉಡುಗೊರೆಯಾಗಿ ನೀಡಲಾಗಿದೆ. ಪಾಕಿಸ್ತಾನದ ಭಾರತ ಹೈ ಕಮೀಷನರ್​ ಅಜಯ್​ ಬಿಸಾರಿಯ  ಇಮ್ರಾನ್​ ಖಾನ್​ ಭೇಟಿ ಮಾಡಿ ಬ್ಯಾಟ್ ನೀಡಿದ್ದಾರೆ.

 ಉಭಯ ದೇಶಗಳ ನಡುವೆ ಇರುವ ಸಮಸ್ಯೆ ಹಾಗೂ  ಶಾಂತಿ ಸೌಹಾರ್ದತೆ ಕಾಪಾಡುವ ಬಗ್ಗೆ ಸುಮಾರು ಅರ್ಧ ಗಂಟೆಗಳ ಕಾಲ ಇಮ್ರಾನ್​ ಖಾನ್​ ಮತ್ತು ಅಜಯ್​ ಬಿಸಾರಿಯ  ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಸಮಸ್ಯೆ, ಉಗ್ರ ಚಟುವಟಿಕೆ ನಿಗ್ರಹ, ಎರಡು ದೇಶಗಳ ನಡುವಿನ ಬಾಂಧವ್ಯ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಭಾರತದ ಕ್ರಿಕಟ್​ ತಂಡದ ಆಟಗಾರರ ಸಹಿ ಇರುವ  ಬ್ಯಾಟ್​ ಗಿಫ್ಟ್‌ ನೀಡುವ ಮೂಲಕ , ಭಾರತ ಪಾಕಿಸ್ತಾನದ ಜತೆ ಉತ್ತಮ ಬಾಂಧವ್ಯ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕೆಲ ಅಂಶಗಳನ್ನು ಅಜಯ್​ ಬಿಸಾರಿಯ ಅವರಿಗೆ ಇಮ್ರಾನ್​ ಖಾನ್​ ಭೇಟಿ ವೇಳೆ ಪ್ರಸ್ತಾಪಿಸುವಂತೆ ತಿಳಿಸಿದ್ದರು ಎನ್ನಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close