About Us Advertise with us Be a Reporter E-Paper

Breaking Newsವಿದೇಶ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನೇಪಾಳಕ್ಕೆ ಭಾರತದ ಉಡುಗೊರೆ

ಕಾಠ್ಮಂಡು: 72ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ಭಾರತ ನೇಪಾಳಕ್ಕೆ ಉಡುಗೊರೆ ನೀಡಿದೆ. 30 ಆಂಬುಲೆನ್ಸ್, ಆರು ಬಸ್‍ಗಳನ್ನು ನೇಪಾಳದಲ್ಲಿರುವ ಆಸ್ಪತ್ರೆಗೆ ಭಾರತ ಉಡುಗೊರೆಯಾಗಿ ನೀಡಿದೆ.

ಭಾರತದ ರಾಯಭಾರಿ ಮನ್‍ಜೀವ್ ಸಿಂಗ್ ಪುರಿ ಅವರು, ಆಯಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಉಡುಗೊರೆ ಹಸ್ತಾಂತರಿಸಿದರು. ಅಲ್ಲದೆ 68 ಶಾಲೆಗಳು, ಲೈಬ್ರರಿಗಳಿಗೆ ಪುಸ್ತಕಗಳನ್ನು ಕೂಡ ಉಡುಗೊರೆಯಾಗಿ ಭಾರತ ನೀಡಿದೆ. ಭಾರತ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನೇಪಾಳದ ಕಾಠ್ಮಂಡುವಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮನ್‍ಜೀವ್ ಸಿಂಗ್ ಪುರಿ ಧ್ವಜಾರೋಹಣ ನೆರವೇರಿಸಿ, ಭಾರತದ ರಾಷ್ಟ್ರಪತಿಯ ಸಂದೇಶವನ್ನು ಓದಿ ಹೇಳಿದರು. ಭಾರತ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರ ಪತ್ನಿಯರಿಗೆ 53.5 ಮಿಲಿಯನ್ ನೇಪಾಳಿ ರೂಪಾಯಿಗಳನ್ನು ನೀಡಿ ಗೌರವಿಸಿದರು. ಈ ವೇಳೆ ನೂರಾರು ಮಂದಿ ಹಾಜರಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close