About Us Advertise with us Be a Reporter E-Paper

ಅಂಕಣಗಳು
Trending

ವಿದೇಶಾಂಗ ನೀತಿಯಲ್ಲೀಗ ಭಾರತದ್ದೇ ಪರ್ಯಾಯ ಧ್ರುವ!

 ಹೇಮಂತ್ ಗೌಡ

ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲಿ ಕಂಡು ಕೇಳರಿಯದ ಮಟ್ಟದಲ್ಲಿ ತನ್ನ ವಿದೇಶಾಂಗ ನೀತಿಗೆ ಬಲ ನೀಡಿರುವ ಭಾರತ ಈ ನಿಟ್ಟಿನಲ್ಲಿ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಏಷ್ಯಾ  ಪ್ರದೇಶದಲ್ಲಿ ರಾಜಕೀಯ ನೈಪುಣ್ಯದ ಮೂಲಕ ಅಮೆರಿಕ, ರಷ್ಯಾ ಹಾಗೂ ಚೀನಾಗಳಿಗಿಂತಲೂ ಮುಂದಾಗಿ ಭಾರತವೇ ಗೇಮ್‌ಚೇಂಜರ್ ಆಗುವ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಜಾಗತಿಕ ಭೌಗೋಳಿಕ ರಾಜಕೀಯದ ಇತ್ತೀಚಿನ ವಿದ್ಯಮಾನಗಳು ಇದನ್ನು ಪುಷ್ಟೀಕರಿಸುತ್ತವೆ.

ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಾ ಕವಚದ ಖರೀದಿ ವಿಚಾರವಾಗಿ ಭಾರತದ ಮೇಲೆ ತಣ್ಣನೆಯ ಬ್ಲಾಕ್‌ಮೇಲ್ ಮಾಡಲು ನೋಡಿದ ಅಮೆರಿಕ ಇದೀಗ ತನ್ನ  CAATSA ನಿರ್ಬಂಧ ವ್ಯಾಪ್ತಿಯಿಂದ ವಿನಾಯಿತಿ ನೀಡಿದ್ದಲ್ಲದೇ ವ್ಯೂಹಾತ್ಮಕ ವ್ಯಾಪಾರ (ಎಸ್‌ಟಿಎ-1) ಸ್ಥಾನಮಾನ ನೀಡಿದೆ! ಈ  ಮೂಲಕ ತನ್ನಲ್ಲಿನ ಅತ್ಯಾಧುನಿಕ ಹಾಗು ಸುಧಾರಿತ ಮಿಲಿಟರಿ ಹಾಗು ನಾಗರಿಕ ತಂತ್ರಜ್ಞಾನಗಳನ್ನು ಹೀರಿಕೊಳ್ಳಲು ಭಾರತಕ್ಕೆ ಸುವರ್ಣಾವಕಾಶ ನೀಡಿದೆ. ತನ್ನ ನ್ಯಾಟೋ ಮಿತ್ರಪಡೆಗಳು ಹಾಗು ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ನೀಡುತ್ತಿರುವ ಸ್ಥಾನಮಾನವನ್ನು ಭಾರತಕ್ಕೆ ನೀಡಲು ಅಮೆರಿಕ ಈಗ ತುದಿಗಾಲಲ್ಲಿರುವಂತೆ ತೋರುತ್ತಿದೆ.

ತನಗೆ ಸರಿಸಮನಾಗಿ ನಿಂತಿರುವ ಚೀನಾದ ಪ್ರಭಾವಕ್ಕೆ ಪ್ರತಿಯಾಗಿ ತನ್ನ ಏಷ್ಯಾ ನೀತಿಯೆಂಬ ಭೌಗೋಳಿಕ ರಾಜಕೀಯ ಜಾಲ ಹೆಣೆಯಲು ಅಮೆರಿಕಕ್ಕೆ ಭಾರತ ಬೇಕೇ ಬೇಕು. ಅದಕ್ಕಾಗಿ ಭಾರತವನ್ನು ಸಂಪೂರ್ಣವಾಗಿ  ಕಸರತ್ತನ್ನು ಅಮೆರಿಕ 1947ರಿಂದಲೂ ಮಾಡುತ್ತಲೇ ಬಂದಿದೆ. ಆದರೆ ಭಾರತ ಮಾತ್ರ ಈ ವಿಚಾರವಾಗಿ ಜಾಣ ನಡೆ ಇಡುತ್ತಾ ಬಂದಿದೆ.

ಶೀತಲ ಸಮರದ ಉತ್ತುಂಗದ ದಿನಗಳಲ್ಲಿ ಯಾವ ಶಕ್ತಿ ಬಣದೆಡೆಗೂ ಸಂಪೂರ್ಣವಾಗಿ ವಾಲದೇ ತನ್ನದೇ ತಟಸ್ಥ ನೀತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿ, 1950ರ ದಶಕದಲ್ಲಿ ತಾನೇ ಮುನ್ನುಡಿ ಇಟ್ಟಿದ್ದ  ಭಾರತ, ಅತ್ತ ಅಮೆರಿಕ, ಇತ್ತ ರಷ್ಯಾಗಳೆರಡನ್ನೂ ಬುದ್ಧಿವಂತಿಕೆಯಿಂದ ಸಂಭಾಳಿಸಿ ಯಾರ ದಾಸ್ಯಕ್ಕೂ ಈಡಾಗಲಿಲ್ಲ. ಇಂತಿಪ್ಪ ಆಲಿಪ್ತ ನೀತಿಯ ಸರ್ವ ಸಾಧ್ಯತೆಗಳನ್ನೂ  ಸಮರ್ಪಕವಾಗಿ ಬಳಸಿಕೊಳ್ಳಲು ಮಹತ್ವದ ಹೆಜ್ಜೆಗಳನ್ನು ಭಾರತ ಇದೀಗ ಇಡಲಾರಂಭಿಸಿದೆ.

ಏನಾದರೂ ಮಾಡಿ, ಭಾರತವನ್ನು ತನ್ನ ವ್ಯೂಹಾತ್ಮಕ ಜಾಲದ ಭಾಗವನ್ನಾಗಿಸಲು ಶ್ವೇತಭವನ ಹವಣಿಸುತ್ತಿದೆ. ಇದಕ್ಕಾಗಿ ತನ್ನ ಶಸ್ತ್ರಾಸ್ತ್ರಗಳ ರಪ್ತು ನೀತಿ ಹಾಗು ನಿರ್ಬಂಧ ಕಾಯಿದೆಗಳಿಗೆ ತಿದ್ದುಪಡಿಗಳನ್ನು ತಂದು ಭಾರತಕ್ಕೆ ವಿನಾಯಿತಿಗಳನ್ನು ನೀಡಲು ಅಮೆರಿಕ ಮುಂದಾಗಿದೆ. ಇದರ ಫಲವಾಗಿ, ಅಣ್ವಸ್ತ್ರ ಪ್ರಸರಣ ತಡೆಗೆ ಸಹಿದಾರನಾಗದಿದ್ದರೂ, ಅಣ್ವಸ್ತ್ರ ಪೂರೈಕೆದಾರ ಒಕ್ಕೂಟ ಸೇರುವ ದಿಕ್ಕಿನಲ್ಲಿ ಭಾರತ ಬಹಳ ಸನಿಹದಲ್ಲಿದೆ. ಎನ್‌ಎಸ್‌ಜಿ ಒಕ್ಕೂಟಕ್ಕೆ ಸೇರಬೇಕೆಂದರೆ ಅಣ್ವಸ್ತ್ರ  ತಡೆ ಒಪ್ಪಂದಕ್ಕೆ ಸಹಿದಾರನಾಗಿರಬೇಕೆಂಬ ಮಾನದಂಡವನ್ನು ಬೈಪಾಸ್ ಮಾಡಿ, ಸದಸ್ಯತ್ವ ಪಡೆಯಲು ಭಾರತದ ಬಳಿ ಸಾಕಷ್ಟು ಮಾನದಂಡಗಳು ಸೃಷ್ಟಿಯಾಗಿವೆ.

 ರಫ್ತು ನಿಯಂತ್ರಣ ವ್ಯವಸ್ಥೆಗಳಾದ MTCR, Wasenaar Arrangement, Australia Groupಗಳ ಸದಸ್ಯತ್ವಗಳು ಕಳೆದೆರಡು ವರ್ಷದ ಅವಧಿಯಲ್ಲಿ ದೆಹಲಿಯ ಬತ್ತಳಿಕೆಗೆ ಸೇರಿವೆ. ಇಷ್ಟೇ ಅಲ್ಲದೇ ಅಣ್ವಸ್ತ್ರ  ಪ್ರಸರಣ ತಡೆಯಲ್ಲಿ ಭಾರತದ ಕ್ಲೀನ್ ಇಮೇಜ್‌ಅನ್ನು ಖುದ್ದು  ಎತ್ತಿಹಿಡಿಯುವಂತೆ ಅಮೆರಿಕ ಭಾರತದ ಬೆನ್ನಿಗೆ ನಿಂತಿದೆ. ಈ ಮೂಲಕ ಅಣ್ವಸ್ತ್ರ ಪೂರೈಕೆದಾರರ ಒಕ್ಕೂಟ(ಎನ್‌ಎಸ್‌ಜಿ) ಸೇರಲು ಭಾರತಕ್ಕೆ  ಮಾನದಂಡಗಳು ಸೇರ್ಪಡೆಯಾಗುತ್ತಿವೆ.

 ಈಶಾನ್ಯ ಏಷ್ಯಾದ ಆಸಿಯಾನ್ ಒಕ್ಕೂಟದೊಂದಿಗೆ ಸಂಬಂಧ ವೃದ್ಧಿಯಲ್ಲಿ ಹಿಂದೆಂದೂ ಕೇಳರಿಯದ ಮಟ್ಟದಲ್ಲಿ ಹೆಜ್ಜೆ ಹಾಕುತ್ತಿರುವ ಭಾರತ, ಅಮೆರಿಕದ ಇಂಡೋ-ಪೆಸಿಫಿಕ್ ವ್ಯೂಹದ ಬೆನ್ನೆಲುಬಾಗಲಿದೆ. ಈ ವರ್ಷದ ಗಣರಾಜ್ಯೋತ್ಸವದ ಪ್ರಮುಖ ಅತಿಥಿಗಳಾಗಿ ಆಸಿಯಾನ್ ಹತ್ತು ದೇಶಗಳ ನಾಯಕರನ್ನು ಆಹ್ವಾನಿಸಿದ್ದು, ಈ ವಿಚಾರವಾಗಿ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅಮೆರಿಕ, ಚೀನಾ ಅಥವಾ ರಷ್ಯಾಗಳನ್ನೂ ಮೀರಿದ ಚಾಣಾಕ್ಷ ಭೌಗೋಳಿಕ ರಾಜಕೀಯ ಮಾಡುತ್ತಿರುವುದು ಭಾರತವೇ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ.  ಚೀನಾ ಸಮುದ್ರ ಹಾಗು ಪೆಸಿಫಿಕ್ ಪ್ರದೇಶದ ಮೇಲೆ ಬೀಜಿಂಗ್ ಹಿಡಿತವನ್ನು ಸಡಿಲಗೊಳಿಸಲು, ವಾಷಿಂಗ್ಟನ್ ಆರಂಭಿಸಿರುವ ಮಹತ್ವಾಕಾಂಕ್ಷೆಯ ಈ ಇಂಡೋ-ಪೆಸಿಫಿಕ್ ವ್ಯೂಹದ ಬೆನ್ನೆಲುಬೇ ಭಾರತವಾಗಿದೆ!

ರಷ್ಯಾ ಮೇಲಿನ ತನ್ನ ನಿರ್ಬಂಧ ವ್ಯೂಹದಿಂದ ಭಾರತಕ್ಕೆ ವಿನಾಯಿತಿ ನೀಡಿರುವ ಅಮೆರಿಕ ಇರಾನ್ ವಿಚಾರದಲ್ಲೂ ಅದನ್ನೇ ಮಾಡಬೇಕಾಗುತ್ತದೆ! ಅಮೆರಿಕದ ನಿರ್ಬಂಧದ ಕಾರಣ ಇರಾನ್ ವಿಚಾರದಲ್ಲಿ ಪಾಶ್ಚಾತ್ಯ ಶಕ್ತಿಗಳು ಕೈಕಟ್ಟಿ ಕುಳಿತಲ್ಲಿ, ದೆಹಲಿಯೊಂದಿಗೆ ಸಾಕಷ್ಟು ವ್ಯೂಹಾತ್ಮಕ ಹೆಜ್ಜೆಗಳನ್ನಿಟ್ಟಿರುವ ಟೆಹರಾನ್ ಭಾರತದ ತಾಳಕ್ಕೆ ಕುಣಿಯಲೇಬೇಕಾಗುತ್ತದೆ. ಅಮೆರಿಕ ನಿರ್ಬಂಧದ  ಇರಾನ್‌ನ ವಿದೇಶೀ ವಿನಿಮಯದಲ್ಲಿ ಡಾಲರ್ ಕೆಲಸ ಮಾಡದೇ ಹೋದಲ್ಲಿ, ಭಾರತದ ರುಪಾಯಿಗೆ ಅಲ್ಲಿ ಅಧಿಕೃತ ಚಲಾವಣೆ ದೊರಕುವ ಜ್ವಲಂತ ಸಾಧ್ಯತೆ ಸಾಕಷ್ಟಿದೆ! ಇದೇ ವೇಳೆ, ತನ್ನ ತಟಸ್ಥ ನಿಲುವನ್ನು ಸಮರ್ಪಕವಾಗಿ ಬಳಸಿಕೊಂಡು, ಜಗತ್ತಿನ ಅತಿದೊಡ್ಡ ತೈಲ ಆಮದುದಾರ ರ್ಟ್ರಾಗಳಲ್ಲಿ ಒಂದಾದ ಚೀನಾದೊಂದಿಗೆ ಕೈಜೋಡಿಸಿ ಇರಾನ್‌ನಿಂದ ತೈಲದ ಆಮದು ಮುಂದುವರಿಸಿದಲ್ಲಿ ತೈಲದ ಬೆಲೆಯಲ್ಲಿ  ಚೌಕಾಶಿ ಮಾಡಿಕೊಳ್ಳಬಹುದು!

ಚಾಬಹಾರ್ ಬಂದರು ನಿರ್ಮಾಣದ ಮೂಲಕ ಕೇಂದ್ರ ಏಷ್ಯಾ ಹಾಗು ಕಾಕಾಸಿಯನ್ ಪ್ರದೇಶದೊಂದಿಗೆ ಸಂಪರ್ಕ  ತನ್ನ ಇಂಧನ ಭದ್ರತೆಯನ್ನು ಇನ್ನಷ್ಟು ಖಾತ್ರಿ ಪಡಿಸಿಕೊಳ್ಳುವ  ಅವಕಾಶ ಭಾರತದ ಮುಂದೆ ಇದೆ. ಅಷ್ಟೇ ಅಲ್ಲದೇ ಅಫ್ಘಾನಿಸ್ತಾನದಲ್ಲಿ ಚೀನಾದೊಂದಿಗೆ ಕೈಜೋಡಿಸಿ ಜಂಟಿ ಆರ್ಥಿಕ ಪಾಲುದಾರಿಕೆಗೆ ಭಾರತ ಮುಂದಾಗುವ ಸಾಧ್ಯತೆಯೂ ಇದೆ. ಹಾಗಾದಲ್ಲಿ ಪಾಕ್‌ನ ಗ್ವಾದರ್‌ನಂತೆ ಚಾಬಹಾರ್ ಬಂದರು ಸಹ ಚೀನಾಗೆ ಮಹತ್ವದ್ದಾಲಿದೆ! ಅಫ್ಘಾನಿಸ್ತಾನದ ಮರುನಿರ್ಮಾಣದಲ್ಲಿ ಅಗಾಧ ಪಾತ್ರ ವಹಿಸುತ್ತಿರುವ ಭಾರತವನ್ನು ಕಡೆಗಣಿಸಿ ಯಾವುದೇ ದೇಶ ಅಲ್ಲಿ ತನ್ನ ಪ್ರಭಾವ ಬೀರಲಾಗದು. ಇದು ಅಮೆರಿಕಕ್ಕಿಂತ ಚೆನ್ನಾಗಿ ಮತ್ಯಾರಿಗೂ ಗೊತ್ತಿಲ್ಲ!

ಪೂರ್ವಾರ್ಧ  ತನ್ನ ಚಾಣಾಕ್ಷ ರಾಜತಾಂತ್ರಿಕ ನಡೆ ಇಟ್ಟಿರುವ ಭಾರತ, ರಷ್ಯಾ ಹಾಗು ಚೀನಾಗಳೊಂದಿಗೆ ತಲೆದೋರಿದ್ದ ಭಿನ್ನಭಿಪ್ರಾಯಗಳನ್ನೂ ಸರಿಪಡಿಸಿಕೊಳ್ಳಲು ಐತಿಹಾಸಿಕ ಹೆಜ್ಜೆಗಳನ್ನು ಇಟ್ಟಿದೆ. ಜಾಗತಿಕ ವ್ಯವಹಾರಗಳ ಕುರಿತಂತೆ ತನ್ನದೇ ಸ್ಪಷ್ಟ ನಿಲುವನ್ನು ಬೆಳೆಸಿಕೊಂಡು, ಪ್ರತಿಪಾದಿಸಿ, ತನ್ನದೇ ಛಾಪು ಕಾಪಾಡಿಕೊಂಡು ಬಂದಿದ್ದು  ಇದೀಗ ತನ್ನ ನಿಲುವುಗಳಲ್ಲಿ ಇನ್ನಷ್ಟು ಮೊನಚುತನ ಹಾಗು ಸ್ಪಷ್ಟತೆ ತಂದುಕೊಳ್ಳುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಐತಿಹಾಸಿಕ ಸೋಚಿ ಭೇಟಿಯು ದೆಹಲಿ-ಮಾಸ್ಕೋಗಳ ನಡುವಿನ ಸಂಬಂಧವನ್ನು  ಎತ್ತರಕ್ಕೆ ಕೊಂಡೊಯ್ಯುವ ಸೂಚನೆ ನೀಡಿದೆ. ಇತ್ತೀಚಿನ ದಿನಗಳಲ್ಲಿ, ಅಮೆರಿಕದೊಂದಿಗೆ ವೃದ್ಧಿಸುತ್ತಿರುವ ದೆಹಲಿಯ ಸಂಬಂಧದಿಂದ ಮುನಿಸಿಕೊಂಡಿದ್ದ ರಷ್ಯಾವನ್ನೂ ಮುದ್ದುಗರೆಯುವ ಕೆಲಸಕ್ಕೆ ಭಾರತ ಕೈಹಾಕಿದೆ. ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಯಂಥ ಗೇಮ್ ಚೇಂಜಿಂಗ್ ಮಿಲಿಟರಿ ಡೀಲ್‌ಗೆ ಭಾರತ ಅಂತಿಮ ಸ್ಪರ್ಶ ನೀಡುತ್ತಿದೆ. ಚೀನಾದಿಂದ ಬೇಡಿ ಪಡೆದ ಕ್ಷಿಪಣಿಗಳಿಗೆ ಹಸಿರು ಬಣ್ಣ ಬಳಿದುಕೊಂಡು, ಭಾರತವನ್ನು ಬ್ಲಾಕ್‌ಮೇಲ್ ಮಾಡಲು ನಿಂತಿದ್ದ ಪಾಕ್‌ಗೆ ಇದರಿಂದ ಭ್ರಮನಿರಸವಾಗುವುದಂತೂ ಗ್ಯಾರಂಟಿ.

ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ತನ್ನ ಪ್ರಭಾವ ಮುಂದುವರಿಸಲು ಭಾರತದಂಥ  ಪಾಲುದಾರನ ಮಹತ್ವ ಏನೆಂದು ರಷ್ಯಾ ಕಳೆದ ಏಳು ದಶಕಗಳಲ್ಲಿ ಮನಗಂಡಿದೆ. ಅಲ್ಲದೇ ಅಮೆರಿಕನ್ ನಿರ್ಬಂಧದಿಂದ ಶಸ್ತ್ರಾಸ್ತ್ರ  ವ್ಯಾಪಾರ ಕಳೆಗುಂದಿದ್ದು, ಭಾರತದೊಂದಿಗಿನ ಈ ಮೆಗಾ ಡೀಲ್ ರಷ್ಯಾದ ಆತ್ಮವಿಶ್ವಾಸ ವೃದ್ಧಿಸಿದೆ. ಇನ್ನು, ಡೋಕ್ಲಮ್ ಬಿಕ್ಕಟ್ಟಿನ ಬಳಿಕ ತಮ್ಮ ನಡುವಿನ ಸಂಬಂಧ ಸುಧಾರಣೆಗೆ ಭಾರತ-ಚೀನಾ ಮುಂದಾಗಿವೆ. ಈ ವಿಚಾರವಾಗಿ,ಮೋದಿ ಹಾಗು ಚೀನಾ ಅಧ್ಯಕ್ಷ ಕ್ಸೀ ಝಿನ್ಪಿಂಗ್ ನಡುವೆ ವುಹಾನ್‌ನಲ್ಲಿ ನಡೆದ ಅನಧಿಕೃತ ಮಾತುಕತೆ ಹೊಸ ದಿಶೆಯನ್ನೇ ತೋರಿದೆ.

ಅಫ್ಘಾನಿಸ್ತಾನದ ಮರುನಿರ್ಮಾಣದ ವಿಚಾರದಲ್ಲಿ  ಜಂಟಿ ಪಾಲುದಾರಿಕೆಯಲ್ಲಿ ಕೆಲಸ ಮಾಡಲು ನಿರ್ಧರಿಸಿವೆ. ಮೊದಲೇ ಜಾಗತಿಕ ವೇದಿಕೆಯಲ್ಲಿ  ವಿಶ್ವಾಸ ಕಳೆದುಕೊಂಡು  ಅತಂತ್ರವಾಗುತ್ತಿರುವ ಪಾಕಿಸ್ತಾನಕ್ಕೆ ಈ ನಡೆಯಿಂದ ಇನ್ನಷ್ಟು ಚಿಂತೆ ಹೆಚ್ಚಿದೆ. ಚೀನಾದ ಶಿಯಾಮೆನ್‌ನಲ್ಲಿ ನಡೆದಿದ್ದ ಒಂಬತ್ತನೇ ಬ್ರಿಕ್‌ಸ್ ಶೃಂಗದ ಜಂಟಿ ಪ್ರಕಟಣೆಯಲ್ಲಿ, ಇಸ್ಲಾಮಿಕ್ ಸ್ಟೇಟ್‌ನಂತೆಯೇ ಪಾಕ್ ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೈಶೆ ಮೊಹಮ್ಮದ್ ಹಾಗು ಲಷ್ಕರೆ ತೊಯ್ಬಾಗಳ ಉಲ್ಲೇಖಿಸಿ, ಭಯೋತ್ಪಾದನೆ ವಿರುದ್ಧ  ಕಠಿಣ ಕ್ರಮ ತೆಗೆದುಕೊಳ್ಳಲು ಭವಿಷ್ಯದ ದಿನಗಳಲ್ಲಿ ಮುಂದಾಗಬೇಕು ಎಂದು ಹೇಳಲಾಯಿತು. ಈ ಮೂಲಕ   ನಿಗ್ರಹದ ವಿಚಾರವಾಗಿ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವ ಹೊಡೆತ ನೀಡುವಲ್ಲಿ ಭಾರತ ಸಫಲವಾಗಿತ್ತು. ವುಹಾನ್ ರೀತಿಯ ಮತ್ತೊಂದು ಅನೌಪಚಾರಿಕ ಭೇಟಿಯನ್ನು ಉಭಯ ನಾಯಕರು ಮುಂದಿನ ವರ್ಷ ಅಹಮದಾಬಾದ್‌ನಲ್ಲಿ ನಡೆಸಲು ತೀರ್ಮಾನಿಸಿದ್ದಾರೆ.

ಜಗತ್ತಿನ ಆರನೇ ಅತಿ ದೊಡ್ಡ ಆರ್ಥಿಕ ಶಕ್ತಿ, ನಾಲ್ಕನೇ ದೊಡ್ಡ ಮಿಲಿಟರಿ, ಮೂರನೇ ದೊಡ್ಡ ಮಾರುಕಟ್ಟೆ, ಅತಿ ದೊಡ್ಡ ಪ್ರಜಾಪ್ರಭುತ್ವ ವಾದ ಭಾರತದ ಬೃಹತ್ ಯುವಶಕ್ತಿ ಮುಂದಿಡುವ ವಿಪುಲ ಸಾಧ್ಯತೆಗಳಿಂದಾಗಿ ಜಾಗತಿಕ ಪವರ್ ಪಾಲಿಟಿಕ್ಸ್‌ನಲ್ಲಿ  ಭಾರತವೇ ಒಂದು ಪರ್ಯಾಯ ಧ್ರುವ.  ಇದಕ್ಕೆ ತಕ್ಕ ಹಾಗೆ ತನ್ನ ರಕ್ಷಣಾ ಉದ್ಯಮದ ಸಾಮರ್ಥ್ಯವನ್ನು ನಿರ್ಮಿಸಿಕೊಂಡಲ್ಲಿ, 21ನೇ ಶತಮಾನ ಭಾರತದ್ದೇ ಆಗಲಿದೆ.

ಪುರಾತನ ಕಾಲದಲ್ಲೇ ಕೊಳೆಯುತ್ತಿರುವ ದೇಶದ ರಕ್ಷಣಾ ಕೈಗಾರಿಕೋದ್ಯಮಕ್ಕೆ ಪುನಶ್ಚೇತನ ನೀಡಿ, ಖಾಸಗೀ ಹೂಡಿಕೆಯನ್ನು ಆಕರ್ಷಿಸಿ, ದೊಡ್ಡ ಮಟ್ಟದಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಿಸುವ ಭಾರತದ ದೀರ್ಘಕಾಲೀನ ಯೋಜನೆಯು ಪ್ರಸಕ್ತ ಸರಕಾರದ ಮಹಾತ್ವಾಕಾಂಕ್ಷೆ ಎಷ್ಟರಮಟ್ಟಿಗೆ ಇದೆ ಎಂದು ತೋರುತ್ತದೆ. ಇದಕ್ಕೊಂದು ಸಣ್ಣ ಉದಾಹರಣೆ:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ  ಧ್ಯೇಯೋದ್ದೇಶಕ್ಕೆ ಪೂರಕವಾಗಿ, ಇತ್ತೀಚಿನ ರಕ್ಷಣಾ ಸಾಮಗ್ರಿಗಳ ಖರೀದಿ ಒಪ್ಪಂದಗಳಲ್ಲಿ ಆಫ್‌ಸೆಟ್ ಕಾಂಟ್ರಾಕ್‌ಟ್ ಎಂಬ ಹೊಸ ಅಂಶವನ್ನು ಸೇರಿಸಿಕೊಳ್ಳಲಾಗುತ್ತಿದೆ. ಶಸ್ತ್ರಾಸ್ತ್ರ ಖರೀದಿಗೆ ತೆರುವ ಹಣದ ಅರ್ಧದಷ್ಟು ಅಥವಾ ಪೂರ್ವ ನಿಗದಿಪಡಿಸಿದಷ್ಟು ಮೊತ್ತದ ಹೂಡಿಕೆಯನ್ನು ರಫ್ತುದಾರ ಸಂಸ್ಥೆ ಭಾರತದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

59,000 ಕೋಟಿ ರು. ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತದಕ್ಕೆ ರಫ್ತು ಮಾಡುತ್ತಿರುವ ಫ್ರಾನ್‌ಸ್ನ ಡಸಾಲ್‌ಟ್ ಏವಿಯೇಷನ್ ಸಂಸ್ಥೆಯು  ಮುಂದಿನ ದಿನಗಳಲ್ಲಿ ಭಾರತದಲ್ಲಿ 31,000 ಕೋಟಿ ರುಗಳಷ್ಟು  ಮಾಡಬೇಕಿದೆ. ಈ ಮೂಲಕ, ಆಧುನಿಕ ತಂತ್ರಜ್ಞಾನವನ್ನು ಹೀರಿಕೊಳ್ಳಲು ಅತ್ಯಗತ್ಯವಾದ ಮೂಲ ಸೌಕರ್ಯವನ್ನು ದೇಶದಲ್ಲಿ ನಿರ್ಮಿಸುವುದಲ್ಲದೇ ಉದ್ಯೋಗ ಸೃಷ್ಟಿಗೂ ಉತ್ತೇಜನ ನೀಡಬಹುದಾಗಿದೆ.

ಏಳು ದಶಕಗಳ ದಿವ್ಯ ನಿರ್ಲಕ್ಷ್ಯ ಹಾಗು ಕಿಕ್ ಬ್ಯಾಕ್ ಶೂರರಿಗೆ ಅನುಕೂಲವಾಗುವಂತೆ ರೂಪಿಸಿಕೊಂಡಿರುವ ರಕ್ಷಣಾ ಹಾಗು ಶಸ್ತ್ರಾಸ್ತ್ರ ಸಂಬಂಧಿತ ನೀತಿ ಹಾಗು ನಿಯಮಗಳ ಕಾರಣ ಭಾರತದ ರಕ್ಷಣಾ ಕೈಗಾರಿಕೋದ್ಯಮ ಇನ್ನೂ ಭ್ರೂಣಾವಸ್ಥೆಯಲ್ಲೇ ಇದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ವಿಚಾರವಾಗಿ ಸಾಕಷ್ಟು ಶಾಸನ ಹಾಗು ನೀತಿ ಸಂಬಂಧ  ತಂದು, ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುತ್ತ ಸಮರೋಪಾದಿಯಲ್ಲಿ ಶಾಸನಾತ್ಮಕ ಹಾಗು ಕಾರ್ಯಾತ್ಮಕ ಹೆಜ್ಜೆಗಳನ್ನು ಭಾರತ ಇಡುತ್ತಿದೆ.

21ನೇ ಶತಮಾನದ ಬಹುಧ್ರುವಗಳ ಭೌಗೋಳಿಕ ರಾಜಕೀಯದಲ್ಲಿ ಭಾರತದ್ದೇ ಆದ ಧ್ರುವವೊಂದು  ನಿಧಾನವಾಗಿ, ಸ್ಥಿರವಾಗಿ ಸೃಷ್ಟಿಯಾಗುತ್ತಿದೆ. ಒಂದೊಂದು ಕಲ್ಲನ್ನೂ ಅತ್ಯಂತ ಚಾಣಾಕ್ಷತನದಿಂದ ಇಡುವ ಮೂಲಕ ಇದಕ್ಕೆ ಬೇಕಾದ ಭದ್ರ ತಳಪಾಯವನ್ನು ಕಳೆದ ನಾಲ್ಕು ವರ್ಷಗಳಲ್ಲಿ  ಮಾಡಿಕೊಂಡು ಬರಲಾಗುತ್ತಿದೆ. ನರೇಂದ್ರ ಮೋದಿಯವರ ಗುಜರಾತೀ ವ್ಯಾಪಾರೀ ಬುದ್ಧಿಯೊಂದಿಗೆ ಅಜಿತ್ ದೋವಲ್‌ರಂಥ ರಾಜತಾಂತ್ರಿಕ ನಿಪುಣನ ಅಸಾಧಾರಣವಾದ ಮುಂದಾಳತ್ವ  ನಿಟ್ಟಿನಲ್ಲಿ ಅದ್ಭುತ ಕೆಲಸ ಮಾಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.

Tags

Related Articles

Leave a Reply

Your email address will not be published. Required fields are marked *

Language
Close