ಅನಿವಾಸಿಯರಿಗೆ ಭಾರತ ಧರ್ಮಭೂಮಿಯಾಗಿದೆ: ಮೋದಿ

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 14ನೇ ಪ್ರವಾಸಿ ಭಾರತೀಯ ದಿವಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು.

ಪ್ರಧಾನಿ ಮೋದಿ ಆಶಯ ಭಾಷಣ ಮಾಡಿ, ಮೂರು ದಿನಗಳ ಕಾಲ ಸಮ್ಮೇಳನ ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಅನಿವಾಸಿ ಭಾರತೀಯರು ಹಾಗೂ ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಇನ್ನಿತರ ವಿಚಾರಗೋಷ್ಠಿಗಳು ನಡೆಯಲಿದೆ. ಸಂಜೆ ವೇಳೆಗೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಿದೇಶದಲ್ಲಿ ನೌಕರಿ ಹುಡುಕುವವರಿಗಾಗಿ ವಿಶೇಷ ತರಬೇತಿ ನೀಡಲಾಗುತ್ತಿದೆ. ನಮ್ಮವರು ಎಲ್ಲೇ ಇದ್ದರೂ ಆ ದೇಶದ ಸಂಸ್ಕೃತಿಗೆ ಒಗ್ಗಿಕೊಂಡಿದ್ದು, ನಮ್ಮ ದೇಶದ ಸಂಸ್ಕೃತಿಯನ್ನು ಮರೆತಿಲ್ಲ.  ಭಾರತ ಮತ್ತು ಪೋರ್ಚುಗಲ್ ಮಧ್ಯೆ ಉತ್ತಮ ಬಾಂಧವ್ಯವಿದೆ. ಈ ಬಾಂಧವ್ಯಕ್ಕೆ ಮಾರಿಯೋ ಸೋರೆಸ್ ಕಾರಣಕರ್ತರು. 30 ಮಿಲಿಯನ್ ಅನಿವಾಸಿ ಭಾರತೀಯರು ವಿಶ್ವದೆಲ್ಲೆಡೆ ಹರಡಿದ್ದಾರೆ. ದೇಶದಿಂದಲೇ ತಾಯಿನಾಡಿಗೆ ಕೊಡುಗೆ ಅಪಾರವಾಗಿದೆ. ಭಾರತದ ಅಭಿವೃದ್ದಿಯ ಪಥದಲ್ಲಿ ಅನಿವಾಸಿ ಭಾರತೀಯರ ಪಾಲುದಾರರಾಗಿದ್ದಾರೆ.

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಒಂದು ಮಾತು ಕೇಳಿದ್ದೆ ”ಬ್ರೇನ್ ಡ್ರೈನ್” ಪ್ರತಿಭಾವಂತರು ವಿದೇಶಕ್ಕೆ ಪಲಾಯನ ನಾನು ಕೇಳಿದ್ದೆ. ಪ್ರತಿಭೆಗಳು ವಿದೇಶಕ್ಕೆ ಹೋಗುತ್ತಿದ್ದಾರೆ ಅಂದರೆ, ಭಾರತದಲ್ಲಿ ಇರುವವರೆಲ್ಲರೂ ದಡ್ಡರು ಅಂತ ಅರ್ಥವಾ? ಆದರೆ, ಇಂದು ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತಿದೆ. ವಿದೇಶಕ್ಕೆ ಹೋಗಿದ್ದ ಪ್ರತಿಭೆಗಳು ಮರಳಿ ಬರಲಾರಂಭಿಸಿವೆ.

ಪೋರ್ಚುಗಲ್ ಪ್ರಧಾನಿ ಆಂಥೋನಿಯೋ ಕೋಸ್ಟಾ, ರಾಜ್ಯಪಾಲ ವಜುಭಾಯ್ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

three × one =

 
Back To Top