ದೋಕ್ಲಮ್ ವಿಚಾರದಲ್ಲಿ ಭಾರತದ್ದು ಜಾಣ ನಡೆ: ಅಮೆರಿಕ

Posted In : ವಿದೇಶ

ವಾಷಿಂಗ್ಟನ್: ಸಿಕ್ಕಿಂ ಸೆಕ್ಟರ್‌ನ ದೋಕ್ಲಮ್ ನಿಲುವು ಕುರಿತಂತೆ, ಭಾರತ ಚೀನಾದ ತಾಳ್ಮೆಯನ್ನು ಪರೀಕ್ಷಿಸುವ ಮೂಲಕ ಜಾಣತನ ಮೆರೆದಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ರಸ್ತೆ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಿದ್ದ ನಂತರ ಭಾರತ ಮತ್ತು ಚೀನಾ ಸೇನೆಗಳು ದೋಕ್ಲಮ್‌ನಲ್ಲಿ ಕಳೆದ 50 ದಿನಗಳಿಂದ ತಳವೂರಿವೆ.ಪ್ರೊಫೆಸರ್ ಜೇಮ್ಸ್ ಆರ್.ಹೋಲ್ಮ್ಸ್, ಸೇನೆ ನಿಯೋಜನೆ ದಿನದಿಂದ ಇಂದಿನವರೆಗೆ ಚೀನಾದ ಬೆದರಿಕೆಗೆ ಬಗ್ಗದೆ, ಕುಗ್ಗದೆ, ತಾಳ್ಮೆಯನ್ನು ಪರೀಕ್ಷಿಸುತ್ತ ಸರಿಯಾದ ಹೆಜ್ಜೆ ಇಟ್ಟಿದೆ ಎಂದು ಹೇಳಿದೆ. ತನ್ನ ನೆರೆ ದೇಶದೊಂದಿಗೆ ಗಡಿ ವಿವಾದವನ್ನು ಜೀವಂತವಾಗಿಡಲು ಚೀನಾ ಯತ್ನಿಸುತ್ತಿರುವುದು ವಿಲಕ್ಷಣವಾಗಿದೆ.

ಒಂದು ವೇಳೆ ದೃಢವಾದ ಕಡಲ ಕಾರ್ಯತಂತ್ರ ರಚಿಸಲು ಚೀನಾ ಇಚ್ಛಿಸಿದರೆ, ತನ್ನ ಗಡಿ ಪ್ರದೇಶವನ್ನು ಭದ್ರಪಡಿಸಬೇಕು. ಇದರಿಂದ ಗಡಿ ಅತಿಕ್ರಮಣ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು. ಹಿಮಾಲಯದ ವಿವಾದ ಪರಿಹರಿಸಲು ಅಮೆರಿಕದ ಮಧ್ಯಸ್ಥಿಕೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಲಹೆಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ವಿವಾದ ಉಲ್ಬಣಿಸಿದಲ್ಲಿ ಭಾರತದ ಬೆಂಬಲಕ್ಕೆ ಅಮೆರಿಕ ಸಿದ್ದವಿದೆ ಎಂದು ಹೋಮ್ಸ್ ಹೇಳಿದರು.

Leave a Reply

Your email address will not be published. Required fields are marked *

3 × 1 =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top