About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ಭಾರತದ ರಾಷ್ಟ್ರಗೀತೆ ಹಾಡಿದ ಪಾಕಿಸ್ತಾನದ ವ್ಯಕ್ತಿ..!

ದುಬೈ: ಏಷ್ಯಾಕಪ್ 2018ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬುಧವಾರ ನಡೆದ ಇಂಡೋ-ಪಾಕ್ ಕದನ ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾದ ಘಟನೆ ನಿಮಗೆ ಗೊತ್ತೇ ಇದೆ. ಇದೀಗ ಮತ್ತೊಂದು ಹೃದಯಸ್ಪರ್ಶಿ ಘಟನೆ ನಡೆದಿದ್ದು, ಭಾರತೀಯರ ಮನಗೆದ್ದಿದೆ.

ಹೌದು, ಭಾರತ-ಪಾಕಿಸ್ತಾನ ಪಂದ್ಯ ಅಂದ್ರೆ ಅದು ಹೈವೋಲ್ಟೇಜ್ ಪಂದ್ಯ ಎಂದೇ ಬಿಂಬಿತಗೊಂಡಿದೆ. ಈ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತ್ತು. ಈ ವೇಳೆ ಮತ್ತೊಂದು ಹೃದಯಸ್ಪರ್ಶಿ ಘಟನೆ ನಡೆದಿದೆ. ದುಬೈವ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುವಾಗ ಪಾಕಿಸ್ತಾನದ ವ್ಯಕ್ತಿ ಭಾರತದ ರಾಷ್ಟ್ರಗೀತೆಯನ್ನು ಹಾಡುವ ಮುಖಾಂತರ ಗೌರವ ಸೂಚಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ.

ವಿಡಿಯೊದಲ್ಲಿರುವ ವ್ಯಕ್ತಿಯನ್ನು ಆದಿಲ್ ತಾಜ್ ಎಂದು ಗುರುತಿಸಲಾಗಿದೆ. ಅವರು ”ಆ ವ್ಯಕ್ತಿ ನಾನೇ ಸ್ನೇಹಿತರೆ, ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಶಾಂತಿ ಮಾತ್ರ. ಯುದ್ಧಗಳನ್ನು ಅಲ್ಲ. ಪ್ರೀತಿಯನ್ನು ಹಂಚಿರಿ” ಎಂದು ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಇದ್ದಕ್ಕೂ ಮುನ್ನ ಭಾರತ ತಂಡದ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಅವರು ಪಾಕ್ ತಂಡದ ದಾಂಡಿಗ ಉಸ್ಮಾನ್ ಖಾನ್ ಅವರ ಶೂಲೇಸ್ ಕಟ್ಟಿದ್ದು ಭಾರಿ ಸುದ್ದಿಯಾಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close