About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಏಷ್ಯನ್ ಹಾಕಿ: ಭಾರತ-ಪಾಕಿಸ್ತಾನ ಚಾಂಪಿಯನ್ಸ್

ಮಸ್ಕಟ್: ಭಾರತ ಮತ್ತು ಪಾಕಿಸ್ತಾನ ನಡುವಿನ ಐದನೇ ಆವೃತ್ತಿಯ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಮಳೆ ಅಡ್ಡಿಪಡಿಸಿದ್ದರಿಂದ ಉಭಯ ತಂಡಗಳು ಜಂಟಿ ಗೆಲುವು ದಾಖಲಿಸಿದವು.

ಭಾನುವಾರ ರಾತ್ರಿ 10:40ಕ್ಕೆ ನಡೆಯಬೇಕಿದ್ದ ಪಂದ್ಯ ಅತಿಯಾದ ಒಂದು ಗಂಟೆ ತಡವಾಯಿತು. ಇದ್ದರಿಂದ ಎರಡು ತಂಡಗಳ ಕೋಚ್‌ಗಳು ಹಾಗೂ ಟೂರ್ನಿಯ ಆಡಳಿತ ಮಂಡಳಿಯ ನಿರ್ಣಯದ ಮೇರೆಗೆ ಭಾರತ ಮತ್ತು ಪಾಕ್ ತಂಡಗಳಿಗೆ ಜಂಟಿ ಜಯ ತಮ್ಮದಾಗಿಸಿಕೊಂಡವು. ಲೀಗ್‌ನಲ್ಲಿ ಮನ್‌ಪ್ರೀತ್ ಬಳಗ ಪಾಕಿಸ್ತಾನವನ್ನು 3-2 ಗೋಲುಗಳಿಂದ ಪರಾಭಗೊಳಿಸಿತ್ತು. ಅಂತಿಮ ಸುತ್ತಿನಲ್ಲಿ ಎದುರಾಳಿ ಆಟಗಾರರ ಬೆವರಿಳಿಸುವ ಮೂಲಕ ಜಯ ಸಾಧಿಸುವ ವಿಶ್ವಾಸದಲ್ಲಿ ಮೈದಾನಕ್ಕೆ ಆಗಮಿಸಿದ ಭಾರತಕ್ಕೆ ಮಳೆಯಾರ ತಣ್ಣೀರೆರೆಚಿತು.

ಮೂರನೇ ಸ್ಥಾನದ ಪಂದ್ಯದಲ್ಲಿ ಮಲೇಷ್ಯಾ ಮತ್ತು ಏಷ್ಯಾ ಕ್ರೀಡಾಕೂಟದ ಚಿನ್ನದ ವಿಜೇತ ಜಪಾನ್ ತಂಡಗಳು ಮುಖಾಮುಖಿಗಳಾಗಿದ್ದವು. ಮಲೇಷ್ಯಾ ಆಟಗಾರರು ಉತ್ತಮ ಆವಾಡುವ ಮೂಲಕ ಜಪಾನ್ ತಂಡವನ್ನು 3-2 ಗೋಲುಗಳಿಂದ ಮಣಿಸುವಲ್ಲಿ ಯಶಸ್ವಿಯಾದರು. ಟೂರ್ನಿಯ ಶ್ರೇಷ್ಠ ಆಟಗಾರ ಎಂಬ ಖ್ಯಾತಿಗೆ ಆಕಾಶ್‌ದೀಪ್ ಭಾಜನರಾದರೆ, ಅತ್ಯುತ್ತಮ ಗೋಲ್ ಕೀಪರ್ ಸ್ಥಾನವನ್ನು ಶ್ರೀಜೇಶ್ ಅಲಂಕರಿಸಿದರು. ನವೆಂಬರ್ 28ರಿಂದ 2018ನೇ ಎಫ್‌ಐಎಚ್ ವಿಶ್ವಕಪ್ ಭುವೇಶ್ವರ್‌ನಲ್ಲಿ ಆರಂಭವಾಗಲಿದೆ.

Tags

Related Articles

Leave a Reply

Your email address will not be published. Required fields are marked *

Language
Close