ಅಫ್ಘಾನಿಸ್ತಾನ ಮರುನಿರ್ಮಾಣದಲ್ಲಿ ಭಾರತದ ಪಾತ್ರ ಮಹತ್ವದ್ದು: ಅಮೆರಿಕ

Posted In : ವಿದೇಶ

ವಾಷಿಂಗ್‌ಟನ್‌: ಗಲಭೆ ಪೀಡಿತ ಅಫ್ಘಾನಿಸ್ತಾನದ ಮರುನಿರ್ಮಾಣದಲ್ಲಿ ಭಾರತದ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಪೆಂಟಗನ್‌ ತಿಳಿಸಿದ್ದು ಪ್ರದೇಶದಲ್ಲಿ ಭಾರತದೊಂದಿಗೆ ಕೆಲಸ ಮಡಲು ಉತ್ಸುಕತೆ ತೋರಿದೆ.

“ದಕ್ಷಿಣ ಏಷ್ಯಾ ವ್ಯೂಹ ನಿರ್ಮಿಸಲು ಭಾರತ ಪಾಲುದಾರಿಕೆ ಕುರಿತು ಸಂತುಷ್ಟ ರಾಗಿದ್ದೇವೆ. ಪ್ರಾದೇಶಿಕ ಭದ್ರತೆ ವಿಚಾರದಲ್ಲಿ ಭಾರತ ಪ್ರಮುಖ ಪಾಲುದಾರ ನಾಗಿದ್ದು 2018ರಲ್ಲಿ ದೆಹಲಿಯೊಂದಿಗೆ ಇನ್ನಷ್ಟು ನಿಕಟತೆಯಿಂದ ಕೆಲಸ ಮಾಡಲು ಉತ್ಸುಕರಾಗಿದ್ದೇವೆ” ಎಂದು ಪೆಂಟಗನ್‌ ಪ್ರಧಾನ ವಕ್ತಾರ ಡಾನಾ ವೈಟ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಅಫ್ಘಾನಿಸ್ತಾನದ ಅಭಿವೃದ್ಧಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ” ಎಂದು ವೈಟ್‌ ತಿಳಿಸಿದ್ದಾರೆ. ಇದೇ ವೇಳೆ, ತನ್ನ ಎಲ್ಲೆ ಯೊಳಗಿನ ಭಯೋತ್ಪಾದನೆಯನ್ನು ಮಟ್ಟ ಹಾಕಲು ಪಾಕ್‌ ಸಮರ್ಥ ವಾಗಿದೆ ಎಂದು ವೈಟ್‌ ಇದೇ ಸಂದರ್ಭ ತಿಳಿಸಿದ್ದಾರೆ.

ವಾಷಿಂಗ್‌ಟನ್‌ ನೀಡುತ್ತಿದ್ದ ಭದ್ರತಾ ನೆರವು ನಿಲ್ಲಿಸಿದ ಮೇಲೆ ಅಮೆರಿಕದೊಂದಿಗೆ ಗುಪ್ತಚರ ಹಾಗೂ ಮಿಲಿಟರಿ ಸಹಕಾರ ನಿಲ್ಲಿಸು ವುದಾಗಿ ಪಾಕ್‌ ರಕ್ಷಣಾ ಸಚಿವರು ನೀಡಿದ್ದ ಹೇಳಿಕೆಗೆ ಪೆಂಟಗನ್‌ ಪ್ರತಿಕ್ರಿಯಿಸಿದೆ.

“ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಪಾಕ್‌ ಈಗ ಅವಕಾಶ ಸಿಕ್ಕಿದೆ. ಕ್ರಮ ತೆಗೆದುಕೊಳ್ಳಲು ಪಾಕ್‌ಗೆ ಪ್ರೋತ್ಸಾಹ ನೀಡಲು ನೋಡುತ್ತಿದ್ದೇವೆ” ಎಂದು ಅಮೆರಿಕ-ಪಾಕ್‌ ನಡುವಿನ ಇತ್ತೀಚಿನ ಸಂಬಂಧಗಳ ಕುರಿತು ಕೇಳಿದ ಪ್ರಶ್ನೆಗೆ ವೈಟ್‌ ಉತ್ತರಿಸಿದ್ದಾರೆ.

Leave a Reply

Your email address will not be published. Required fields are marked *

2 × four =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top