About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಾಹುಲ್ ಗಾಂಧಿ ವಿಮಾನ ಪೂರೈಕೆದಾರ ಸಂಸ್ಥೆಗಳ ಲಾಬಿದಾರ: ರವಿಶಂಕರ್‌ ಪ್ರಸಾದ್

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ದೊಡ್ಡ ಮಟ್ಟದಲ್ಲಿ ವಾಗ್ದಳಿ ನಡೆಸಿರುವ ಬಿಜೆಪಿ, ಆತನನ್ನು ಪ್ರತಿಷ್ಠಿತ ಯುದ್ಧವಿಮಾನ ಪೂರೈಕೆ ಸಂಸ್ಥೆಗಳ ಲಾಬಿದಾರ ಎಂದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ್ರೋಹವೆಸಗಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, “ಪೂರ್ಣ ಮಟ್ಟದ ಜವಾಬ್ದಾರಿಯೊಂದಿಗೆ ನಾವು ಇದನ್ನು ಹೇಳಲು ಬಯಸುತ್ತೇವೆ– ವಿಮಾನಗಳ ಪೂರೈಕೆ ಸಂಸ್ಥೆಗಳ ಲಾಬಿದಾರನಾಗಿ ರಾಹುಲ್‌ ಗಾಂಧಿ ಕೆಲಸ ಮಾಡುತ್ತಿದ್ದಾರೆ” ಎಂದು ಆಪಾದನೆ ಮಾಡಿದ್ದಾರೆ.

“ಅಧಿಕಾರದಲ್ಲಿದ್ದಾಗ ಬ್ರೋಕರ್‌ಗಳಾಗುವ ಕಾಂಗ್ರೆಸ್‌ ನಾಯಕರು, ವಿರೋಧ ಪಕ್ಷದಲ್ಲಿದ್ದ ವೇಳೆ ಲಾಬಿದಾರರಾಗುತ್ತಾರೆ” ಎಂದು ಗಂಭೀರ ಆಪಾದನೆ ಮಾಡಿದ ರವಿಶಂಕರ್‌ ಪ್ರಸಾದ್‌, “ಏರ್‌ಬಸ್‌ ಸಂಸ್ಥೆಯ ಆಂತರಿಕ ಇ ಮೇಲ್‌ಅನ್ನು ಎಲ್ಲಿಂದ ಪಡೆದರು ಎಂದು ಮೊದಲು ರಾಹುಲ್‌ ಗಾಂಧಿ ವಿವರಿಸಲಿ. ಅವರಿಗೆ ಯಾರು ಪೂರೈಕೆ ಮಾಡುತ್ತಿದ್ದಾರೆ?” ಎಂದಿದ್ದಾರೆ.

“ಕಾಂಗ್ರೆಸ್ ನೇತೃತ್ವದ UPA ಅಧಿಕಾರಾವಧಿಯಲ್ಲಿ ಇಡೀ ಸಂಪುಟವೇ ಮೈಕೆಲ್‌ ಮಾಮಾರನ್ನು ತಲುಪುತ್ತಿತ್ತು” ಎಂದ ರವಿಶಂಕರ್‌ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

“UPA ಸರಕಾರದ ನಿಕಟವರ್ತಿ ರವಿ ತಲ್ವಾರ್‌ನಿಗೆ ಸಿಂಗಪುರದಲ್ಲಿ ಏರ್‌ಬಸ್‌ 100 ಕೋಟಿ ರುಗಳಿಗಿಂತ ಹೆಚ್ಚು ಹಣವನ್ನು ವರ್ಗಾವಣೆ ಮಾಡಿದೆ” ಎಂದು ಪ್ರಸಾದ್‌ ವಿಶ್ಲೇಷಣೆ ನೀಡಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ರಾಹುಲ್‌ ಗಾಂಧಿ, ಏರ್‌ಬಸ್‌ ಸಂಸ್ಥೆಯ ಎಕ್ಸಿಕ್ಯೂಟಿವ್‌ ಅಧಿಕಾರಿಗಳು ಫ್ರೆಂಚ್‌ ಅಧಿಕಾರಿಗಳಿಗೆ ಕಳುಹಿಸಿದ ಇಮೇಲ್‌ ತಮಗೆ ಸಿಕ್ಕಿದೆಯೆಂದು ಹೇಳಿಕೊಂಡು, “ಗೂಢಾಚರರು ಮಾಡುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಈ ರಹಸ್ಯಗಳನ್ನು ಕಾಪಾಡಲು ಅವರು ಪ್ರಮಾಣವಚನ ಸ್ವೀಕಾರ ಮಾಡಿಕೊಂಡು ಬಂದಿದ್ದಾರೆ. ಈ ಕ್ರಿಮಿನಲ್‌ ಕೆಲಸಕ್ಕೆ ಅವರನ್ನು ಜೈಲಿಗಟ್ಟಬಹುದು” ಎಂದು ಹೇಳಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close