About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ವರ್ಷದೊಳಗೆ ಸೇನೆಗೆ ಸಿಗಲಿವೆ 72,000 ಸಿಗ್‌ ಸಾಯೆರ್‌ ರೈಫಲ್‌ಗಳು

ತ್ವರಿತ ಮಾರ್ಗದಲ್ಲಿ 72,000 ಸಿಗ್‌ ಸಾಯೆರ್‌ ರೈಫಲ್‌ಗಳನ್ನು ಖರೀದಿ ಮಾಡಲು ಮುಂದಾಗಿರುವ ರಕ್ಷಣಾ ಸಚಿವಾಲಯ ಭಾರತೀಯ ಸೇನಾ ಸಿಬ್ಬಂದಿಗೆ ಇನ್ನಷ್ಟು ಬಲ ತುಂಬಲಿದೆ.

ಪದಾತಿ ದಳವನ್ನು ಆಧುನೀಕರಣಗೊಳಿಸಲು ಉದ್ದೇಶಿಸಿರುವ ಭಾರತ, ಈ ವಿಚಾರವಾಗಿ ಅಸಾಲ್ಟ್‌ ರೈಫಲ್‌ಗಳ ಖರೀದಿಗೆ ಕಾಂಟ್ರಾಕ್ಟ್‌ಗೆ ಸಹಿ ಮಾಡಿಕೊಂಡಿದೆ. ಈ ಸಿಗ್‌ ಸಾಯೆರ್‌ ರೈಫಲ್‌ಗಳನ್ನು ಅಮೆರಿಕ ಹಾಗು ಐರೋಪ್ಯ ದೇಶಗಳ ಸಶಸ್ತ್ರ ಪಡೆಗಳ ಯೋಧರು ಬಳಸುತ್ತಿದ್ದಾರೆ. ಈ ವರ್ಷದೊಳಗೆ ರೈಫಲ್‌ಗಳನ್ನು ಅಮೆರಿಕದ ಸಂಸ್ಥೆ ಭಾರತಕ್ಕೆ ಪೂರೈಕೆ ಮಾಡಬೇಕಿದೆ.

ಈ ಅಸಾಲ್ಟ್‌ ರೈಫಲ್‌ಗಳನ್ನು ಚೀನಾ ಗಡಿಯಲ್ಲಿ ಜಪಹರೆ ಕಾಯುವ ಯೋಧರಿಗೆ ನೀಡುವ ಸಾಧ್ಯತೆ ಇದೆ. ಚೀನಾ ಮತ್ತು ಪಾಕಿಸ್ತಾನಗಳಿಂದ ಭದ್ರತಾ ಸಂಬಂಧಿ ಭೀತಿಗಳು ಜೋರಾದ ಕಾರಣ ಇಂಥ ಅತ್ಯಾಧುನಿಕ ರೈಫಲ್‌ಗಳ ಅಗತ್ಯವಿತ್ತು.

ತೀವ್ರ ವಾತಾವರಣದಲ್ಲಿ ಬಳಸಲು ಸೂಕ್ತವಾದ ಈ ಸಿಗ್‌ ಸಾಯೆರ್‌ ರೈಫಲ್‌ಗಳು ತಮ್ಮ ಫೈರ್‌ಪವರ್‌ನಿಂದ ಪ್ರಖ್ಯಾತಿ ಪಡೆದುಕೊಂಡಿವೆ. ವ್ಯೂಹಾತ್ಮಕ ಕಾರ್ಯಾಚರಣೆಗಳಿಗೆ ಈ ಅಸಾಲ್ಟ್‌ ರೈಫಲ್‌ಗಳು ಅತ್ಯಂತ ಸೂಕ್ತವಾಗಿವೆ ಎಂದು ತಿಳಿದುಬಂದಿದೆ.

ಈ ಮುನ್ನ, ಇಶಾಪುರದ ರೈಫಲ್‌ ಕಾರ್ಖಾನೆಯಿಂದ ಬಂದಿದ್ದ ರೈಫಲ್‌ಗಳನ್ನು ಭಾರತೀಯ ಸೇನೆ ನಿರಾಕರಿಸಿತ್ತು.

 

Tags

Related Articles

Leave a Reply

Your email address will not be published. Required fields are marked *

Language
Close