About Us Advertise with us Be a Reporter E-Paper

Breaking Newsದೇಶಪ್ರಚಲಿತ

ಉಗ್ರರ ದಾಳಿ: ಸಂತ್ರಸ್ಥರ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ….!

ಭಯೋತ್ಪಾದಕರ ದಾಳಿಗೆ ಅನೇಕ ರಾಷ್ಟ್ರಗಳು ಸಂಪೂರ್ಣವಾಗಿ ತತ್ತರಿಸಿಗೆ. ಇರಾನ್ ಹಾಗೂ ಅಫ್ಘಾನಿಸ್ತಾನವಂತೂ ರೋಗಗ್ರಸ್ತ ದೇಶವಾಗಿ ಪರಿಣಮಿಸಿವೆ.

ಭಾರತದಲ್ಲಿ ಅದರಲ್ಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಅಚ್ಚರಿಯ ಸಂಗತಿ ಭಯೋತ್ಪಾದಕರ ದಾಳಿಗೆ ನಲುಗಿರುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನ ಪಡೆದಿದೆ…! ಹೌದು, ಅಮೆರಿಕದ ಅಂಕಿ ಅಂಶಗಳ ಪ್ರಕಾರ ಉಗ್ರರ ದಾಳಿಗೆ ಇರಾನ್, ಅಫ್ಘಾನಿಸ್ತಾನದ ನಂತರ ಹೆಚ್ಚು ಸಮಸ್ಯೆ ಎದುರಿಸಿರುವ ರಾಷ್ಟ್ರ ಎಂದರೆ ಭಾರತವಂತೆ. ಅಮೆರಿಕದ ಗೃಹ ಸಚಿವಾಲಯ ಭಯೋತ್ಪಾದನೆ ಹಾಗೂ ನಿಗ್ರಹಕ್ಕೆ ಸಂಬಂಧಿಸಿದಂತೆ ಅಧ್ಯಯನವನ್ನು ನಡೆಸಿದ್ದು ನ್ಯಾಷನಲ್ ಕಾನ್‌ಸೊರ್ಟಿಯಮ್ ಈ ವರದಿಯ ಅಂಕಿ ಅಂಶಗಳನ್ನು ಕಲೆಹಾಕಿದೆ. ಪ್ರತಿ ವರ್ಷ ಈ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ವರದಿಯ ಅಂಶಗಳು ಹೀಗಿವೆ…

ಸತತ ಎರಡನೇ ವರ್ಷ ಮೂರನೇ ಸ್ಥಾನ
2016ರ ವರ್ಷದ ವರದಿಯ ಅಂಕಿ ಅಂಶಗಳ ಪ್ರಕಾರವೂ ಭಾರತ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನ ಪಡೆದಿದ್ದು, 2017ರಲ್ಲೂ ಅದೇ ಸ್ಥಾನದಲ್ಲಿ ಮುಂದುವರಿದಿದೆ. 2015ರವರೆಗೂ ಭಯೋತ್ಪಾದನೆಗೆ ತುತ್ತಾದ ರಾಷ್ಟ್ರಗಳ ಪೈಕಿ ಪಾಕಿಸ್ತಾನ ಮೂರನೇ ಸ್ಥಾನದಲ್ಲಿತ್ತು. ಈಗ ಪಾಕಿಸ್ತಾನ ಕೆಳಗಿಳಿದಿದ್ದು, ಭಾರತ ಈ ಸ್ಥಾನಕ್ಕೆ ಹೋಗಿದೆ.

ಜಮ್ಮು ಕಾಶ್ಮೀರದಲ್ಲಿ ಹೆಚ್ಚಿದ ದಾಳಿ
2017ರಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಭಯೋತ್ಪಾದಕರ ದಾಳಿ, ಈ ದಾಳಿಯಲ್ಲಿ ಮೃತಪಟ್ಟವರ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಕಳೆದ ವರ್ಷ ಭಯೋತ್ಪಾದಕರ ದಾಳಿ ಪ್ರಮಾಣದಲ್ಲಿ ಶೇ.24 ರಷ್ಟು ಹೆಚ್ಚಾದರೆ, ದಾಳಿಯಲ್ಲಿ ಮೃತಪಟ್ಟ ಜನರ ಸಂಖ್ಯೆಯಲ್ಲಿ ಶೇ.89ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ನಡೆದ 860 ಭಯೋತ್ಪಾದಕ ದಾಳಿಗಳಲ್ಲಿ ಶೇ.25ರಷ್ಟು ಜಮ್ಮು ಕಾಶ್ಮೀರದಲ್ಲೇ ನಡೆದಿದೆ ಎಂದು ಈ ವರದಿ ಹೇಳಿದೆ.

ಭಯತ್ಪಾದಕರ ಪೈಕಿ ಮಾವೋವಾದಿಗಳಿಗೆ ನಾಲ್ಕನೇ ಸ್ಥಾನ
ಇನ್ನು ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಸಂಘಟನೆಗಳ ಪೈಕಿ ಸಿಜಿಐ ಉಗ್ರಸಂಘಟನೆ ನಾಲ್ಕನೇ ಸ್ಥಾನ ಪಡೆದಿದೆ. ಇಸ್ಲಾಮಿಕ್ ಸ್ಟೇಟ್ ಮೊದಲ ಸ್ಥಾನ ಪಡೆದರೆ, ತಾಲಿಬಾನ್ ಎರಡನೇ ಸ್ಥಾನ ಪಡೆದಿದೆ, ಅಲ್ ಶಬಾದ್ ಮೂರನೇ ಸ್ಥಾನ ಪಡೆದರೆ, ಮೊವೋವಾದಿ ನಕ್ಸಲರು ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಯಾವರ ರಾಷ್ಟ್ರಗಳಲ್ಲಿ ಎಷ್ಟು ದಾಳಿ
ಇರಾಕ್                 1,951
ಅಫ್ಘಾನಿಸ್ತಾನ      1,171
ಭಾರತ                  860

ಭಾರತದಲ್ಲಿ ಭಯೋತ್ಪಾದನೆ ಹಾಗೂ ಮಾವೋವಾದಿಗಳ ಕ್ರೌರ್ಯ
2016ರಲ್ಲಿ ಭಾರತದಲ್ಲಿ ಒಟ್ಟು 931 ಭಯೋತ್ಪಾದಕ ದಾಳಿಗಳಾಗಿದ್ದವು. ಇದರ ಪ್ರಮಾಣ 860ಕ್ಕೆ ಇಳಿದಿದ್ದು, ಆ ಮೂಲಕ ಶೇ.8ರಷ್ಟು ಕಡಿಮೆಯಾಗಿದೆ. ಆದರೆ ಭಾರತ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದು, ಅದಕ್ಕೆ ಪ್ರಮುಖ ಕಾರಣಗಳು ಹೀಗಿವೆ…
* ಶೇ.74 ರಷ್ಟು ದಾಳಿಗಳಲ್ಲಿ ಪ್ರಾಣಹಾನಿ.
* ಭಾರತದಲ್ಲಿ ಸುಮಾರು 43 ಭಯೋತ್ಪಾದಕ ಸಂಘಟನೆಗಳು ಕಾರ್ಯನಿರ್ವಹಣೆ.
* 2017ರಲ್ಲಿ ಭಾರತದಲ್ಲಿ ನಡೆದ ದಾಳಿಗಳಲ್ಲಿ ಶೇ. 53ರಷ್ಟು ದಾಳಿ ಮೊವೋವಾದಿಗಳು ನಡೆಸಿದ್ದಾರೆ.
* ಡಾರ್ಜಲಿಂಗ್ ಗಲಭೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದಕ ಕೃತ್ಯದಲ್ಲಿ ಶೇ.215ರಷ್ಟು ಏರಿಕೆ.
* ದೇಶದಲ್ಲಿ ಒಟ್ಟಾರೆ ದಾಳಿಗಳಲ್ಲಿ ಶೇ. 50ರಷ್ಟು ದಾಳಿ ಮೂರು ರಾಜ್ಯಗಳಲ್ಲಿ ನಡೆದಿವೆ. ಜಮ್ಮು ಕಾಶ್ಮೀರ (ಶೇ.25), ಛತ್ತೀಸ್‌ಗಢ (ಶೇ.15), ಪಶ್ಚಿಮ ಬಂಗಾಳ (ಶೇ.10)
* ವಿಶ್ವದಾದ್ಯಂತ 2017ರಲ್ಲಿ ಒಟ್ಟು 8,584 ಭಯೋತ್ಪಾದಕ ದಾಳಿ ನಡೆದಿದ್ದು, ಅದರಲ್ಲಿ 18,753 ಮಂದಿ ಸತ್ತರೆ, 19,461 ಮಂದಿ ಗಾಯಗೊಂಡಿದ್ದಾರೆ.
* 2016ರಲ್ಲಿ ಭಾರತದಲ್ಲಿ ಉಗ್ರರ ದಾಳಿಯಿಂದ 344 ಮಂದಿ ಸತ್ತರೆ, 2017ರಲ್ಲಿ 380 ಮಂದಿ ಮೃತಪಟ್ಟಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close