About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

NZ / Ind ಅಂತಿಮ T-20: ರೋಹಿತ್‌, ಪಾಂಡ್ಯ, ಧೋನಿ ಔಟ್‌; ಸಂಕಷ್ಟದಲ್ಲಿ ಭಾರತ

ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ನೀಡಿದ್ದ  213 ರನ್ನುಗಳ ಬೃಹತ್‌ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಇದೀಗ ಸಂಕಷ್ಟ ಎದುರಾಗಿದೆ. ತಾಳ್ಮೆಯ ಆಟವಾಡುತ್ತಿದ್ದ ರೋಹಿತ್‌ (38) ರನ್‌ ಗಳಿಸಿ ಕೀಪರ್‌ಗೆ ಕ್ಯಾಚಿತ್ತು ಪೆವಿಲಿನ್‌ ಕಡೆ ಹೆಜ್ಜೆ ಹಾಕಿದರು.

ವಿರುದ್ಧ ಅವರದೇ ನೆಲದಲ್ಲಿ ಟಿ20 ಸರಣಿಯನ್ನು ಗೆದ್ದು ಬೀಗಲು ಟೀಂ ಇಂಡಿಯಾಗೆ ಕಠಿಣ ಸವಾಲು ಲಭಿಸಿದೆ. ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಗೆಲುವಿಗೆ 213 ರನ್ನುಗಳ ಗುರಿ ನೀಡಿದೆ.

ಈ ಸವಾಲನ್ನು ಬೆನ್ನತ್ತಿರುವ ಟೀಂ ಇಂಡಿಯಾ ಆರಂಭದಲ್ಲೇ ಶಿಖರ್‌ ಧವನ್‌ ವಿಕೆಟ್‌ ಒಪ್ಪಿಸಿ ಪೆವಿಲಿನ್‌ ಹಾದಿ ಹಿಡಿದರು. ನಂತರ ಹಿಟ್‌ ಮ್ಯಾನ್‌ ರೋಹಿತ್‌(29) ಜೊತೆಗೂಡಿದ ವಿಜಯ್‌ ಶಂಕರ್‌ ಕೀವೀಸ್‌ ಬೌಲರ್‌ಗಳನ್ನು ದಂಡಿಸಿ ಗೆಲುವಿನ ಆಸೆ ಚಿಗುರಿಸಿದರು.

ಆದರೆ ಸ್ಯಾಂಟರ್‌ ಎಸೆತದಲ್ಲಿ ವಿಜಯ್‌(28 ಎಸೆತಗಳಲ್ಲಿ 43 ರನ್‌) ಗ್ರಾಂಡ್‌ಹೋಮ್‌ಗೆ ಕ್ಯಾಚಿತ್ತು ಹೊರ ನಡೆದರು. ಬಳಿಕ ಕ್ರೀಸ್‌ಗೆ ಬಂದ ರಿಷಬ್‌ ಪಂತ್‌( 12 ಎಸೆತಗಳಲ್ಲಿ ಮೂರು ಸಿಕ್ಸ್‌, ಸೇರಿದಂತೆ 28 ರನ್‌) ಕೂಡಾ ಅಬ್ಬರಿಸಿ ಹೊರ ನಡೆದರು.

ನಂತರ ಬಂದ ಆಲ್‌ರೌಂಡರ್‌ ಹಾರ್ದಿಕ್‌ ಪಾಂ

ಡ್ಯ ಉತ್ತಮವಾಗಿ ಬ್ಯಾಟಿಂಗ್‌ ನಡೆಸುತ್ತಿದ್ದರು ಆದರೆ 21 ರನ್‌ ಸಿಡಿಸಿ ಔಟಾದರು. ನಂತರ ಬಂದ ಕೂಲ್‌ ಮ್ಯಾನ್‌ ಎಂ.ಎಸ್‌.ಧೋನಿ ಬಂದ ವೇಗದಲ್ಲೇ ಹೊರನಡೆದರು. ಇದೀಗ ಕ್ರೀಸ್‌ನಲ್ಲಿ ದಿನೇಶ್‌ ಕಾರ್ತಿಕ್‌ ಮತ್ತು ಕೃನಾಲ್‌ ಪಾಂಡ್ಯ ಇದ್ದಾರೆ. ಟೀಂ ಇಂಡಿಯಾ 17 ಒವರ್‌ಗಳಲ್ಲಿ ಭಾರತ 6 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿದೆ.

ಟೀಂ ಇಂಡಿಯಾ ಬ್ಯಾಟ್ಸ್ ಮನ್ಸ್ ಯಶಸ್ವಿಯಾಗಿ ಗುರಿ ಬೆನ್ನತ್ತಿದ್ದೇ ಆದಲ್ಲಿ ಕಿವೀಸ್ ನೆಲದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ.

ಟಾಸ್ ಗೆದ್ದ ರೋಹಿತ್ ಶರ್ಮಾ ಆತಿಥೇಯರಿಗೆ ಮೊದಲು ಬ್ಯಾಟಿಂಗ್ ಅವಕಾಶವನ್ನು ಬಿಟ್ಟುಕೊಟ್ಟರು. ಉತ್ತಮ ಪ್ರಾರಂಭ ಪಡೆದ ಕಿವೀಸ್ ಆರಂಭಿಕ ಆಟಗಾರರ ಭರವಸೆಯ ಆಟದ ನೆರವಿನಿಂದ ಮತ್ತು ಮಧ್ಯಮ ಕ್ರಮಾಂಕದ ಬಿರುಸಿನ ಆಟದ ನೆರವಿನಿಂದ ನಿಗದಿತ 20 ಓವರುಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 212 ರನ್ನುಗಳನ್ನು ಕಲೆಹಾಕಿತು.

ಆರಂಭಿಕ ಆಟಗಾರ ಕಾಲಿನ ಮನ್ರೋ ಅವರ ಜಬರ್ದಸ್ತ್ ಅರ್ಧಶತಕದ ನೆರವಿನಿಂದ ಕಿವೀಸ್ ಸ್ಪರ್ಧಾತ್ಮಕ ಮೊತ್ತ ಪೇರಿಸುವಂತಾಯಿತು. 40 ಎಸೆತಗಳಲ್ಲಿ 72 ರನ್ನುಗಳನ್ನು ಬಾರಿಸಿದ ಮನ್ರೋ ಅವರು ತಮ್ಮ ಈ ಬಿರುಸಿನ ಇನ್ನಿಂಗ್ಸ್ ನಲ್ಲಿ 5 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರೆ, 5 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿ ಮಿಂಚಿದರು.

ಕಿವೀಸ್ ಪರ ಆರಂಭಿಕ ಆಟಗಾರರಾದ ಲೂಯಿಸ್ ಸೀಫರ್ಟ್ (43) ಮತ್ತು ಕಾಲಿನ್ ಮನ್ರೋ (72) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಕಪ್ತಾನ ಕೇನ್ ವಿಲಿಯಮ್ಸನ್ 27 ರನ್, ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಅಂತಿಮ ಹಂತದಲ್ಲಿ ಬಿರುಸಿನ ಆಟವಾಡಿ 16 ಎಸೆತಗಳಲ್ಲಿ 30 ರನ್ನುಗಳನ್ನು ಹೊಡೆದರು. ಮಿಶೆಲ್ (19), ರಾಸ್ ಟೇಲರ್ 14 ರನ್ನುಗಳನ್ನು ಸಿಡಿಸಿದರು.

ಭಾರತದ ಬೌಲರ್ ಗಳ ಪ್ರದರ್ಶನ ಇಂದು ನಿರಾಶಾದಾಯಕವಾಗಿತ್ತು. ವೇಗಿಗಳ ಸಹಿತ ಎಲ್ಲಾ ಬೌಲರ್ ಗಳು ಇವತ್ತು ದುಬಾರಿಯಾದರು. ಸ್ಪಿನ್ನರ್ ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಖಲೀಲ್ ಅಹಮ್ಮದ್ ಮತ್ತು ಭುನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.

Tags

Related Articles

Leave a Reply

Your email address will not be published. Required fields are marked *

Language
Close