About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಕಿರಿಯರ ಟೆಸ್ಟ್: ಶ್ರೀಲಂಕಾ ಸೆದೆಬಡಿದ ಭಾರತ

ಕೊಲಂಬೋ: ಆಯುಶ್ ಬೊಧಾನಿ (ಅಜೇಯ 185) ರವರ ಉತ್ತಮ ಬ್ಯಾಟಿಂಗ್‌ ಹಾಗೂ ಮೋಹಿತ್‌ ಜಾಂಗ್ರಾ (5/72) ರವರ ಮಾರಕ ಬೌಲಿಂಗ್‌ಗೆ ನೆರವಿನಿಂದ ಭಾರತ ಶ್ರೀಲಂಕಾ ವಿರುದ್ಧದ ಅಂಡರ್‌ 19 ಟೆಸ್ಟ್ ಪಂದ್ಯಾವಳಿಯಲ್ಲಿ ಇನ್ನಿಂಗ್ಸ್ ಹಾಗೂ 21 ರನ್‌ಗಳ ಜಯಭೇರಿ ಬಾರಿಸಿದೆ. ಇದರಿಂದ ಸರಣಿಯಲ್ಲಿ  1-0  ಮುನ್ನಡೆ ಪಡೆದುಕೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ಕಿರಿಯರ ತಂಡ 244 ರನ್‌ ಬಾರಿಸಿ ಆಲೌಟ್‌ ಆಯಿತು. ಇದಕ್ಕೆ ಉತ್ತರಿಸಿದ ಭಾರತ ಆಯುಷ್‌ ಬೊಧಾನಿ ( 185*, 19ಭೌಂಡರಿ ಹಾಗೂ 4ಸಿಕ್ಸರ್‌), ಹಾಗೂ ಅತಾರ್ವ ಟೈಡೆ (113) ಭರ್ಜರಿ ಶತಕದ ನೆರವಿನಿಂದ 589 ರನ್‌ಗಳ ಬೃಹತ್‌ ಮೊತ್ತ ಪೇರಿಸಿ ಆಲೌಟ್‌ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 345 ಹಿನ್ನಡೆ ಅನುಭವಿಸಿ, ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆರಂಭಿಸಿದ ಶ್ರೀಲಂಕಾ ಮೋಹಿತ್‌ ಜಾಗ್ರಾರ (5/72)  ದಾಳಿಗೆ ತತ್ತರಿಸಿ  324 ರನ್‌ಗಳಿಗೆ ಆಲೌಟ್‌ ಆಯಿತು.ಈ ಜಯದಿಂದ ಭಾರತ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.

ಸಂಕ್ಷಿಪ್ತ ಸ್ಕೋರ್‌

ಮೊದಲ ಇನ್ನಿಂಗ್ಸ್

ಶ್ರೀಲಂಕಾ: 244 ಆಲೌಟ್‌

ಸೂರ್ಯ ಬಂಧ್ರ (69)

ಬದೋನಿ (4/24)

ಹರ್ಷ ತ್ಯಾಗಿ (4/92)

ಭಾರತ: 589 ಆಲೌಟ್‌

ಬದೋನಿ (185*)

ತೈದೆ (113)

ವಧೇರ (82)

ಅನೂಜ್ ರಾವತ್‌ (63)

ಸೇನರತ್ನೆ (6/170)

ದ್ವಿತೀಯ ಇನ್ನಿಂಗ್ಸ್

ಶ್ರೀಲಂಕಾ 324 ಆಲೌಟ್‌

ಕೆನ್‌ಎಮ್‌ ಫೆರ್ನಾಂಡೋ (104)

ಎಂಎನ್‌ಕೆ ಫೆರ್ನಾಂಡೋ (78)

ಜಾಂಗ್ರ (5/72)

ಫಲಿತಾಂಶ: ಭಾರತೀಯ ಕಿರಿಯರ ತಂಡಕ್ಕೆ ಇನ್ನಿಂಗ್ಸ್ ಹಾಗೂ 21 ರನ್‌ಗಳ ಜಯ

 

Tags

Related Articles

Leave a Reply

Your email address will not be published. Required fields are marked *

Language
Close