About Us Advertise with us Be a Reporter E-Paper

Breaking NewsUncategorizedದೇಶ

2+2 ಮಾತುಕತೆ: H-1B ವಿಸಾ, ಭಯೋತ್ಪಾದನೆ, ಎನ್‌ಎಸ್‌ಜಿ ಬಗ್ಗೆ ಚರ್ಚೆ

ದೆಹಲಿ: ಅಮೆರಿಕ ಹಾಗೂ ಭಾರತದ ನಡುವೆ ಅತ್ಯಂತ ಮಹತ್ವದ ದ್ವಿ ಪಕ್ಷೀಯ ಮಾತುಕತೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆಯಾಯಿತು. ರಕ್ಷಣೆ, H-1B ವಿಸಾ, ಭಯೋತ್ಪಾದನೆ ಮತ್ತು ಭಾರತ ಪರಮಾಣು ಪೂರೈಕೆ ಒಕ್ಕೂಟ  ಸೇರ್ಪಡೆ ಸೇರಿ ಮುಂತಾದ ವಿಷಯಗಳ ಬಗ್ಗೆ ಮಾತುಕತೆ ನಡೆಯಿತು.

ಅಮೆರಿಕ ಸರಕಾರದ ಕಾರ್ಯದರ್ಶಿ ಮೈಕ್ ಪೋಂಪಿಯೋ, ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಮತ್ತು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ನಡೆದ 2+2 ಮಾತುಕತೆಯಲ್ಲಿ ನಡೆಸಿದರು.

ಎರಡೂ ದೇಶಗಳು ಮುಕ್ತ ವಾಯು ಹಾಗೂ ಸಮುದ್ರ ಮಾರ್ಗದ ನೀತಿಗಳನ್ನು ಮುಂದುವರೆಸುತ್ತಿವೆ. ವಿವಾದಗಳನ್ನು ಶಾಂತಿಯುತ ತೀರ್ಮಾನಗಳ ಮೂಲಕ ಎತ್ತಿಹಿಡಿಯುತ್ತಾ, ಮಾರುಕಟ್ಟೆ ಆಧಾರಿತ ಆರ್ಥಿಕತೆ ಹಾಗೂ ಉತ್ತಮ ಆಡಳಿತವನ್ನು ಮುಂದುವರೆಸುತ್ತೇವೆ ಎಂದು ಯುಎಸ್‌ ಕಾರ್ಯದರ್ಶಿ ಮೈಕ್ ಫೋಂಪಿಯೋ ಹೇಳಿದ್ದಾರೆ.

ಎರಡೂ ದೇಶಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಯುವ ಕಾರಣದಿಂದಾಗಿ ಒಂದಾಗಿವೆ. ಪ್ರತಿಯೊಬ್ಬರ ಹಕ್ಕನ್ನು ಗೌರವಿಸುವ, ಹಾಗೂ ಸ್ವಾತಂತ್ರ್ಯ ನೀಡುವ ವಿಷಯವೇ ಭಾರತ ಹಾಗೂ ಅಮೆರಿಕದ ಪ್ರಮುಖ ಆದ್ಯತೆಗಳಾಗಿವೆ ಎಂದು ಮೈಕ್ ಪೋಂಪಿಯೋ ಹೇಳಿದರು.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿ, ನಮ್ಮ ಮಾತುಕತೆ ಮತ್ತು ನಿರ್ಧಾರಗಳು ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಹತ್ತಿರ ತರುವಲ್ಲಿ ಹಾಗೂ ವಿವಿಧ ವಿಭಾಗಗಳಲ್ಲಿ ನಮ್ಮ ಪಾಲುದಾರಿಕೆಯನ್ನು ಹೆಚ್ಚು ಮಾಡಲಿದೆ ಎಂದು ಹೇಳಿದರು.

ಕ್ಲಿಂಟನ್ ಎನ್ನುತ್ತಲೇ ಸಂದರ್ಶನದಿಂದ ಎದ್ದುಹೋದ ಮೋನಿಕಾ ಲೆವಿನ್ ಸ್ಕಿ ಭಾರತದ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಫ್ ಅವರು ಭಾರತ-ಅಮೆರಿಕ ಬಾಂಧವ್ಯಕ್ಕೆ ನಿರ್ದಿಷ್ಟತೆಯನ್ನು ನೀಡಿದ್ದಾರೆ. ಎರಡೂ ದೇಶಗಳ ನಡುವಿನ ಬಾಂಧವ್ಯ ನಿರ್ದಿಷ್ಟ ವಿಭಾಗಗಳಲ್ಲಿ ಮುಂಚೆಗಿಂತಲೂ ಉತ್ತಮವಾಗಿ ನಡೆಯುತ್ತಿದೆ ಎಂದು ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close