About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಕೊಹ್ಲಿ ಪಡೆ ವೈಫಲ್ಯದ ಮೇಲೆ ಎಲ್ಲರ ಕಣ್ಣು…!

ಲಂಡನ್: ಭಾರತ ತಂಡ ಇಂಗ್ಲೆಂಡ್ ಎದುರು ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಕಾರಣ ಜಗತ್ತಿನ ಕಣ್ಣು ಇದೀಗ ಮೂರನೇ ಪಂದ್ಯದ ಮೇಲೆ ಬಿದ್ದಿದೆ. ಭಾರತ ತಂಡದ ವೈಫಲ್ಯದ ಬಗ್ಗೆ ಮಾಜಿ ಆಟಗಾರರು, ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇಂಗ್ಲೆಂಡ್‌ನಲ್ಲಿರುವ ಭಾರತದ ಅಭಿಮಾನಿಗಳು ಕೂಡ ಮುಂದಿನ ಪಂದ್ಯಕ್ಕೆ ಟಿಕೆಟ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವಿದ್ಯಮಾನಗಳ ನಡುವೆ ಕೊಹ್ಲಿ, ಕೆಲವೊಮ್ಮ ನಾವು ಗೆಲುವು ಸಾಧಿಸುತ್ತೇವೆ, ಹಾಗೆಯೇ ಮತ್ತೊಮ್ಮೆ ಸೋತು ಕಲಿಯುತ್ತೇವೆ. ಹಾಗಾಗಿ, ಅಭಿಮಾನಿಗಳ ಪ್ರೊತ್ಸಾಹ ಸದಾ ತಂಡದ ಮೇಲಿರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು.

ಇನ್ನೂಅಭ್ಯಾಸ ನಡೆಸದ ಟೀಂ ಇಂಡಿಯಾ: ವಿರುದ್ಧ ಲಾರ್ಡ್‌ಸ್ನಲ್ಲಿ ಎರಡನೇ ಪಂದ್ಯ ಮುಗಿದು ಎರಡು ದಿನ ಕಳೆದರೂ ಭಾರತ ತಂಡ ಇನ್ನೂ ಅಭ್ಯಾಸ ಮಾಡಲು ಮೈದಾನಕ್ಕೆ ಇಳಿದಿಲ್ಲ. ಬುಧವಾರ ತಂಡ ಲಂಡನ್‌ನಿಂದ ನಾಟಿಂಗ್‌ಹ್ಯಾಮ್‌ಗೆ ಪ್ರಯಾಣ ಬೆಳಸಲಿದೆ. ಗುರುವಾರ ಅಭ್ಯಾಸಕ್ಕೆ ಇಳಿಯುವ ಸಾಧ್ಯತೆ ಇದೆ.

ಭಾರತ ತಂಡದ ಇತರೆ ಆಟಗಾರರಾದ ಕೆ.ಎಲ್.ರಾಹುಲ್, ಮುರಳಿ ವಿಜಯ್, ರಹಾನೆ, ಸೇರಿದಂತೆ ಉಳಿದ ಬ್ಯಾಟ್ಸ್‌ಮನ್‌ಗಳು ಇಲ್ಲಿನ ಫಿಚ್‌ಗಳಲ್ಲಿ ಚೆಂಡಿನ ಸ್ವಿಂಗ್ ಹಾಗೂ ರಿವರ್ಸ್ ಸ್ವಿಂಗ್ ಬಗ್ಗೆ ಇನ್ನೂ ಸುಳಿವು ಇಲ್ಲ. ಹೆಚ್ಚಿನ ಅಭ್ಯಾಸ ಮಾಡುವುದಕ್ಕಿಂತ ಹಿಂದಿನ ಪಂದ್ಯಗಳಲ್ಲಿ ಮಾಡಿದ ತಪ್ಪು ತಿದ್ದಿಕೊಳ್ಳುವುದರ ಮೇಲೆ ಅಧಿಕ ಅಭ್ಯಾಸ ಮಾಡುವಂತೆ ಟೀಂ ಇಂಡಿಯಾದ ತರಬೇತುದಾರರು ತಂಡಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಕೊಹ್ಲಿ ಮೇಲೆ ಭಾರತ ಅವಲಂಬನೆ: ಪ್ರಸ್ತುತ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಒಬ್ಬರ ಮೇಲೆಯೇ ಅವಲಂಬಿತವಾಗಿದೆ ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ ವಿಷಾದಿಸಿದರು.

ಈಗಾಗಲೇ, ಇಂಗ್ಲೆಂಡ್ ಬರ್ಮಿಂಗ್‌ಹ್ಯಾಮ್ ಮತ್ತು ಲಾರ್ಡ್ಸ್‌ ಮೈದಾನದಲ್ಲಿ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ, ಈ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಕೊಹ್ಲಿ ಮಾತ್ರ ರನ್ ಗಳಿಸಿದ್ದಾರೆ. ಇವರು ಒಬ್ಬರ ಮೇಲೆಯ ಮುಂದಿನ ಪಂದ್ಯಗಳ ಫಲಿತಾಂಶ ಅವಲಂಬಿತವಾಗಿದೆ ಎಂದು ಹೇಳುವುದು ಅನಿವಾರ್ಯ ಎಂದು ತಿಳಿಸಿದರು.

ಚೇತೇಶ್ವರ ಪೂಜಾರ ಹಾಗೂ ರಹಾನೆ ಇಬ್ಬರೂ ಅತ್ಯುತ್ತಮ ಆಟಗಾರರು. ಇವರಿಬ್ಬರೂ ಟೆಸ್ಟ್ ರನ್ ಸರಾಸರಿ 50 ರಷ್ಟಿದೆ. ರಾಹುಲ್ ಲಯದಲ್ಲಿದ್ದಾಗ ಅವರ ಆಟ ಬುದ್ಧಿವಂತಿಕೆಯಿಂದ ಕೂಡಿರುತ್ತದೆ. ಆದರೆ, ವಿಜಯ್, ಧವನ್ ಹಾಗೂ ಕಾರ್ತಿಕ್ ಇವರು ಎಂದರು.

ವೈಟ್‌ವಾಶ್ ಸನಿಹದಲ್ಲಿ ಭಾರತ: ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಭಾರತ ತಂಡ 5-0 ಅಂತರದಲ್ಲಿ ಸೋತು , ಇನ್ನೇನು ಸರಣಿ ವೈಟ್ ವಾಶ್ ಸನಿಹದಲ್ಲಿದೆ ಎಂದು ಇಂಗ್ಲೆಂಡ್ ತಂಡದ ಜಾನಿ ಬೈರ್‌ಸ್ಟೋ ವ್ಯಂಗ್ಯವಾಡಿದ್ದಾರೆ.

ಇಲ್ಲಿನ ನೆಲದಲ್ಲಿ ಹೇಗೆ ಆಡಬೇಕು ಎಂಬುದು ನಮಗೆ ತಿಳಿದಿದೆ. ಆದರೆ, ವಿಶ್ವಾದ್ಯಂತ ಸುಮಾರು ಪಂದ್ಯಗಳನ್ನು ಆಡಿರುವ ಅಗ್ರ ಕ್ರಮಾಂಕದ ಪ್ರವಾಸಿ ಭಾರತ ತಂಡಕ್ಕೆ ಇದು ಹೇಗೆ ಅನ್ವಯಿಸುತ್ತಿದೆ ಎಂಬುದು ನನಗೆ  ಮುಂದಿನ ಪಂದ್ಯಗಳಲ್ಲಿ ನಮ್ಮ ತಂಡವೇ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close