About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ನಾಲ್ಕನೇ ಏಕದಿನ ಪಂದ್ಯ: ವಿಂಡೀಸ್‌ಗೆ ಹೀನಾಯ ಸೋಲು

ಖಲೀಲ್, ಕುಲ್ದೀಪ್‌ಗೆ ತಲಾ 3 ವಿಕೆಟ್

ಮುಂಬೈ: ಕಳೆದ 23 ವರ್ಷಗಳ ಸುದೀರ್ಘ ಅವಧಿಯ ಬಳಿಕ ಇದೇ ಮೊದಲ ಬಾರಿಗೆ ಬ್ರಾಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸುವ ಮೂಲಕ ನೆರೆದಿದ್ದ ಅಪಾರ ಅಭಿಮಾನಿಗಳ ಪ್ರೀತಿಗೆ ಪಾತ್ರವಾಯಿತು.

ರೋಹಿತ್ ಶರ್ಮಾ(162) ಹಾಗೂ ಅಂಬಾಟಿ ರಾಯುಡು(100) ಅವರ ಶತಕಗಳು ಹಾಗೂ ಖಲೀಲ್ ಅಹಮದ್(3) ಅವರ ಮಾರಕ ಬೌಲಿಂಗ್ ನೆರವಿನಿಂದ ಭಾರತ, ನಾಲ್ಕನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 224 ರನ್‌ಗಳ ಭಾರಿ ಅಂತರದಲ್ಲಿ ಜಯ ಸಾಧಿಸಿತು. ಇದರೊಂದಿಗೆ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಪಡೆಯಿತು.

ಇಲ್ಲಿನ ಬ್ರಾಬೌರ್ನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 50 ಓವರ್‌ಗಳಿಗೆ 377 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಭಾರತಕ್ಕೆ ಆರಂಭಿಕರಾದ ರೋಹಿತ್ ಹಾಗೂ ಶಿಖರ್ ಧವನ್ ಜೋಡಿ 71 ರನ್‌ಗಳ ಜತೆಯಾಟದೊಂದಿಗೆ ಉತ್ತಮ ಆರಂಭ ನೀಡಿತು. ಬಳಿಕ, ಶಿಖರ್ ಧವನ್(38) ಕಿಮೋ ಪಾಲ್‌ಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯಗಳಲ್ಲಿ ಸತತ ಮೂರು ಶತಕಗಳು ಸಿಡಿಸಿದ್ದ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಕೇವಲ 16 ರನ್ ಗಳಿಸಿ ಔಟ್ ಆದರು.

ರೋಹಿತ್-ರಾಯುಡು ಜುಗಲ್‌ಬಂದಿ: ರೋಹಿತ್ ಶರ್ಮಾ ಹಾಗೂ ಅಂಬಾಟಿ ರಾಯುಡು ಜೋಡಿ ಒಟ್ಟು 211 ರನ್‌ಗಳ ಅಮೋಘ ಜತೆಯಾಟದೊಂದಿಗೆ ಭಾರತದ ಮೊತ್ತ ರ ಗಡಿ ದಾಟಲು ನೆರವಾಯಿತು. ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 137 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ 20 ಬೌಂಡರಿಯೊಂದಿಗೆ ಏಕದಿನ ವೃತ್ತಿ ಜೀವನದಲ್ಲಿ 21ನೇ ಶತಕ(162) ಪೂರೈಸಿದರು. ಮತ್ತೊಂದು ತುದಿಯಲ್ಲಿ ಅಂಬಾಟಿ ರಾಯುಡು 81 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಎಂಟು ಬೌಂಡರಿಯೊಂದಿಗೆ ಮೂರನೇ ಶತಕ ದಾಖಲಿಸಿದರು. ಭಾರತ ನಿಗದಿತ 50 ಓವರ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು 377 ರನ್ ದಾಖಲಿಸಿತು. ಇದರೊಂದಿಗೆ ವಿಂಡೀಸ್‌ಗೆ ರನ್ ಬೃಹತ್ ಗುರಿ ನೀಡಿತು.

ಬೃಹತ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 153 ರನ್‌ಗಳಿಗೆ ಸರ್ವ ಪತನವಾಯಿತು. ಇದರೊಂದಿಗೆ ಭಾರತದ ಎದುರು 224 ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ವಿಂಡೀಸ್ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಜೇಸನ್ ಹೋಲ್ಡರ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆಡಿದ 70 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರು. ಮತ್ತೊಂದು ತದಿಯಲ್ಲಿ ಬ್ಯಾಟ್‌ಸ್ಮನ್‌ಗಳು ಪೆವಿಲಿಯನ್‌ಗೆ ಪೆರೆಡ್ ನಡೆಸಿದರು. ಕಳೆದ ಪಂದ್ಯಗಳಲ್ಲಿ ಉತ್ತಮ ಮಾಡಿದ್ದ ಶಾಯ್ ಹೋಪ್ ಹಾಗೂ ಶಿಮ್ರೊನ್ ಹೆಟ್ಮೇರ್ ಕೂಡ ಬಹುಬೇಗನೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇನ್ನುಳಿದ ಬ್ಯಾಟ್‌ಸ್ಮನ್‌ಗಳು ವೈಯಕ್ತಿಕ 20ರ ಗಡಿ ದಾಟುವಲ್ಲಿ ವಿಫಲರಾದರು.

ಸಚಿನ್ ಹಿಂದಿಕ್ಕಿದ ರೋಹಿತ್ ಶರ್ಮಾ: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್‌ಸ್ಮನ್ ರೋಹಿತ್ ಶರ್ಮಾ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ ಐತಿಹಾಸಿಕ ದಾಖಲೆ ಸಮೀಪ ತಲುಪಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ ರೋಹಿತ್ ಒಟ್ಟು 196 ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(195 ಸಿಕ್ಸರ್) ಅವರನ್ನು ಹಿಂದಿಕ್ಕಿದರು. ಮಹೇಂದ್ರ ಸಿಂಗ್ ಧೋನಿ 211 ಸಿಕ್ಸರ್‌ಗಳೊಂದಿಗೆ ಆಟಗಾರರಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ ಐದು ಶತಕ ಸಿಡಿಸುವ ಮೂಲಕ ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟ್‌ಸ್ಮನ್ ಆಗಿದ್ದಾರೆ. ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಸ್ಕೋರ್ ವಿವರ
ಭಾರತ: 377/5(50)
ರೋಹಿತ್ ಶರ್ಮಾ-162
ಅಂಬಾಟಿ ರಾಯುಡು-100
ಶಿಖರ್ ಧವನ್-38
ಬೌಲಿಂಗ್: ಕೆಮರ್ ರೋಚ್ 74 ಕ್ಕೆ 2.

ವೆಸ್ಟ್ ಇಂಡೀಸ್: 153(36.2)
ಜೇಸನ್ ಹೋಲ್ಡರ್-54*
ಕಿಮೋ ಪಾಲ್-19
ಬೌಲಿಂಗ್: ಖಲೀಲ್ ಅಹಮದ್ 13ಕ್ಕೆ 3, ಯಾದವ್ 42ಕ್ಕೆ 3.

Tags

Related Articles

Leave a Reply

Your email address will not be published. Required fields are marked *

Language
Close