About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಸಚ್ಚಿನ್‌, ಸೆಹ್ವಾಗ್‌, ದ್ರಾವಿಡ್‌ ದಾಖಲೆ ಮುರಿದ ಕೊಹ್ಲಿ

ಸೌಥಂಪ್ಟನ್: ದಾಖಲೆಗಳ ಸರದಾರ ನಾಯಕ ವಿರಾಟ್‌ ಕೊಹ್ಲಿ ಇದೀಗ ಟೆಸ್ಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ ಮಾಜಿ ಕ್ರಿಕೆಟಿಗರಾದ ಸಚ್ಚಿನ್‌ ತೆಂಡುಲ್ಕರ್‌, ವಿರೇಂದ್ರ ಸೆಹ್ವಾಗ್‌, ರಾಹುಲ್‌ ದ್ರಾವಿಡ್‌ ಮತ್ತು ಮೊಹಮದ್‌ ಅಜರುದ್ದೀನ್‌ ದಾಖಲೆ ಮುರಿದಿದ್ದಾರೆ.

ಭಾರತ-ಇಂಗ್ಲೆಂಡ್‌ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಕೊಹ್ಲಿ 6000 ರನ್‌  ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದರು. ಈ ಮೂಲಕ 6 ಸಾವಿರ ರನ್ ಪೂರೈಸಿದ ಭಾರತದ 10ನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿಗೆ ಆರು ಸಾವಿರ ರನ್ ಪೂರೈಸಲು ಕೇವಲ 6 ರನ್’ಗಳ ಅವಶ್ಯಕತೆಯಿತ್ತು. ಜೇಮ್ಸ್ ಆ್ಯಂಡರ್’ಸನ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವುದರೊಂದಿಗೆ ಆರು ಸಾವಿರ ರನ್ ಪೂರೈಸಿದರು.

ವಿರಾಟ್‌ ಕಡಿಮೆ ಇನ್ನಿಂಗ್ಸ್‌ನಲ್ಲಿ ವೇಗವಾಗಿ 6000 ರನ್‌ ಗಳಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೊದಲು ಸುನಿಲ್‌ ಗವಾಸ್ಕರ್‌ 117 ಇನ್ನಿಂಗ್ಸ್‌ನಲ್ಲಿ 6000 ರನ್‌ ಗಳಿಸಿದ್ದರು. ವಿರಾಟ್‌ ಕೊಹ್ಲಿ 119 ಇನ್ನಿಂಗ್ಸ್‌ಗಳಲ್ಲಿ 6000 ರನ್‌ ಪೂರೈಸಿದ್ದಾರೆ.

ವಿರಾಟ್ ಕೊಹ್ಲಿ ಕೇವಲ 119 ಇನ್ನಿಂಗ್ಸ್’ಗಳಲ್ಲಿ 54.54ರ ಸರಾಸರಿಯಲ್ಲಿ 6000 ರನ್ ಪೂರೈಸಿದ್ದಾರೆ. ವಿರಾಟ್ ಕೊಹ್ಲಿಯ ಸಾಧನೆಯನ್ನು ಹರ್ಭಜನ್ ಸಿಂಗ್ ಸೇರಿದಂತೆ ಹಲವರು ಟ್ವಿಟರ್ ಮೂಲಕ ಗುಣಗಾನ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close