About Us Advertise with us Be a Reporter E-Paper

ಅಂಕಣಗಳು

ಭರಪೂರ ಬೆಳೆದಿರುವ ಭಾರತದ ಮನರಂಜನೆ ಉದ್ಯಮ

ವಿಕ್ರಮ ಜೋಷಿ

ಇಪ್ಪತ್ತೈದು ವರ್ಷಗಳ ಹಿಂದೆ ಮನರಂಜನೆ ಎನ್ನುವುದಕ್ಕೆ ಏನಿತ್ತು? ಊರಲ್ಲಿ ಒಂದು ಟಿವಿ ಇರುತ್ತಿತ್ತು, ವಾರಕ್ಕೆ ಒಂದು ರಾಮಾಯಣ ಧಾರಾವಾಹಿ ಬರುತ್ತಿತ್ತು, ರೇಡಿಯೋದಲ್ಲಿ ವಾರ್ತೆ ಕೇಳುತ್ತಿದ್ದರು, ಅದರ ಹಾಡುಗಳೂ ಬರುತ್ತಿದ್ದವು. ನಂತರ ಶುರುವಾಗಿದ್ದು ಲೈವ್ ಟೆಲಿಕಾಸ್ಟ್. ಎ ನಡೆಯುತ್ತಿದ್ದುದ್ದನ್ನು ಇಲ್ಲಿ ಕೂತು ನೋಡ ಬಹುದಿತ್ತು. ಟಿವಿಯಲ್ಲಿ ಒಂದೇ ಚಾನೆಲ. ಕ್ರೀಡೆ, ಕಾರ್ಟೂನ್, ವಾರ್ತೆ, ಧಾರಾವಾಹಿ, ಭಜನೆ, ಭಾಷಣ ಎಲ್ಲದಕ್ಕೂ ಒಂದೇ. ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದರೆ ಉಳಿದ ಕಾರ್ಯಕ್ರಮ ನೋಡುವ ಹಾಗಿರಲಿಲ್ಲ. ವಾರ್ತೆಯ ಸಮಯದಲ್ಲಿ  ಮ್ಯಾಚ್ ನೋಡುವುದು ತಪ್ಪಿ ಹೋಗುತ್ತಿತ್ತು.

ಆದರೆ ಇಂದು ಸನ್ನಿವೇಶ ಸಂಪೂರ್ಣ ಬದಲಾಗಿದೆ. ಒಂದು ಚಾನೆಲ್ ಇದ್ದ ದೇಶದಲ್ಲಿ ಇಂದು ಒಂದು ಸಾವಿರಕ್ಕೂ ಹೆಚ್ಚು ಚಾನೆಲ್ ಗಳಾಗಿವೆ. ಅಷ್ಟೇ ಅಲ್ಲ ವಿದೇಶಿ ಚಾನೆಲ್‌ಗಳು, ವಿದೇಶಿ ಸಿನಿಮಾಗಳು, ವಿದೇಶಿ ರಿಯಾಲಿಟಿ ಷೋ ಕೂಡ ಭಾರತೀಯ ವೀಕ್ಷಕರಿಗೆ ಲಭ್ಯ. ಲೈವ್ ಟೆಲಿಕಾಸ್ಟ್ ಜತೆ ರೆಕಾರ್ಡೆಡ್ ಟೆಲಿಕಾಸ್ಟ್, ರಿಪೀಟ್ ಟೆಲಿಕಾಸ್ಟ್ ಹೀಗೆ ನೀವು ಕೇಳಿದ್ದು ಕೊಡುವ ಕಾಮಧೇನುವಿನಂತಾಗಿದೆ.

ಯಾವಾಗ ಟಿವಿ ಮನೆ ಮನೆಗೆ ತಲುಪುತ್ತಾ ಹೋಯಿತೋ ಹಾಗೆ ಹೊಸ ಹೊಸ ಖಾಸಗಿ ಚಾನೆಲ್ ಗಳು, ಹೊಸ ಹೊಸ ಕಾರ್ಯಕ್ರಮಗಳು  ಬರುತ್ತಾ ಹೋದವು. ಟಿವಿ ಇಂಡಸ್ಟ್ರಿ ಗೆ ಮಹತ್ವದ ತಿರುವು ಸಿಕ್ಕಿದ್ದು ೨೦೦೦ರಲ್ಲಿ. ಏಕ್ತಾ ಕಪೂರ್ ಅವರ ’ಕಭೀ ಸಾಸ್ ಭೀ ಬಹು ಥೀ’ ಎನ್ನುವ ಧಾರವಾಹಿ ಸಣ್ಣ ಪರದೆಯ ಮೇಲೆ ಶುರುವಾದಾಗ. ಇದು ಎಷ್ಟು ಜನಪ್ರಿಯ ಆಯಿತು ಅಂದರೆ ಭಾರತದ ಮನರಂಜನಾ ಉದ್ಯಮದಲ್ಲಿ ಒಂದು ಕ್ರಾಂತಿಕಾರಕ ಪಲ್ಲಟವನ್ನೇ ಅದು ಉಂಟುಮಾಡಿತು.  ‘ಕಭೀ..’ ಯ ೧೮೩೩ ಸಂಚಿಕೆಗಳು ಪ್ರಸಾರವಾಗಿದ್ದವು. ಇಂದು ಭಾರತದಲ್ಲಿ ಅಷ್ಟೇ ಅಲ್ಲ ವಿಶ್ವಾದ್ಯಂತ ಭಾರತೀಯ ‘ಡೇಲಿ ಸೋಪ್ ಓಪ್ರಾ’ ಅತ್ಯಂತ ಜನಪ್ರಿಯ. ಪಾಕಿಸ್ತಾನ, ಬಾಂಗ್ಲಾದೇಶ, ಅ-ನಿಸ್ತಾನ, ಗಲ ಅಲ್ಲದೇ ಇನ್ನೂ ಹಲವಾರು ದೇಶಗಳಲ್ಲಿ ಅವರ ಭಾಷೆಗೆ ಅನುವಾದ ಮಾಡಿ ನಮ್ಮ ದೇಶದ ಕೆಲವು ಜನಪ್ರಿಯ ‘ಟೆಲಿಕತೆ’ಗಳನ್ನು ಜನರು ನೋಡುತ್ತಾರೆ. ಚೀನಾದಲ್ಲಿ ಕೂಡ ಅವು ಸಾಕಷ್ಟು ಜನಪ್ರಿಯ.

ಇನ್ನು ಚಲನಚಿತ್ರದ ವಿಷಯಕ್ಕೆ ಬಂದರೆ, ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮಗಳೆನ್ನದೆ ನಮ್ಮ ದೇಶದ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಒಂದು ವಿದ್ಯಮಾನವೇ ಹಿಂದಿ ಚಿತ್ರರಂಗ ಅಥವಾ ಬಾಲಿವುಡ್ ಎನ್ನಬಹುದು. ಅಲ್ಲಿಯ ದುಬಾರಿ ಸೆಟ್, ಅದರಲ್ಲಿ ತುಂಬಿರುವ ಭಾರತೀಯ ಸಂಸ್ಕೃತಿ, ಹಾಡು, ಸಂಗೀತ, ಭಾವನಾತ್ಮಕ ಕಥೆಗಳು ಜಗತ್ತನ್ನೇ ಗೆದ್ದಿದೆ. ಜಪಾನಿನಲ್ಲಿ ರಜನಿಕಾಂತ್ -ಮಸ್ ಆದರೆ, ಶಾಹ್‌ರುಖ್ ಖಾನ್ ಇಂಗ್ಲೆಂಡಿನಲ್ಲಿ. ಹೀಗೆ ಭಾರತದ ಸಿನಿಮಾ ಇಂಡಸ್ಟ್ರಿ ನಡೆದು ಬಂದ ದಾರಿ ಬಹಳ ದೂರ. ಭಾರತದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಸಿಗುವ ಮನರಂಜನೆ ಅಂದರೆ ಸಿನಿಮಾ ಎನ್ನುವ ಮಾತೊಂದಿದೆ. ನಿಜಕ್ಕೂ ಅದು ಒಪ್ಪತಕ್ಕ ಮಾತು.  ಒಂದು ಕಾಲದಲ್ಲಿ ಸಿನಿಮಾ ನೋಡಬೇಕು ಅಂದರೆ ಪೇಟೆಗೆ ಹೋಗಬೇಕಿತ್ತು. ಮುಂಬಯಿಯಲ್ಲಿ ಇಂದು ಸಿನಿಮಾ ರಿಲೀಸ್ ಆದರೆ ನಮ್ಮೂರಿಗೆ ಬರಲು ಒಂದು ತಿಂಗಳು ಬೇಕಿತ್ತು.

 ಇನ್ನು ಹಾಲಿವುಡ್ ಮೂವೀಸ್ ಪ್ರಶ್ನೆಯೇ ಇಲ್ಲ. ಟೈಟಾನಿಕ್ ಸಿನಿಮಾದ ಉದಾಹರಣೆ ತೆಗೆದುಕೊಂಡರೆ ವಿದೇಶಗಳಲ್ಲಿ ಅದು ರಿಲೀಸ್ ಆಗಿ, ಆಸ್ಕರ್ ಪ್ರಶಸ್ತಿಯನ್ನು ಪಡೆದು ಎಷ್ಟೋ ಸಮಯ ಕಳೆದ ಮೇಲೆ ಭಾರತಕ್ಕೆ ಬಂದಿತ್ತು. ಇದು ನಿಮ್ಮ ಗಮನಕ್ಕೂ ಬಂದಿರಬಹುದು. ಈಗ ಕೆಲವೊಂದು ಚಲನಚಿತ್ರ ಭಾರತದಲ್ಲಿ ಮೊದಲು, ಆಮೇಲೆ ಅಮೆರಿಕದಲ್ಲಿ ರಿಲೀಸ್ ಆಗುತ್ತದೆ. ಇಂದು ಫಿಲ್ಮ ಹಾಗೂ ಟಿವಿ ಉದ್ಯಮಗಳು ಎಷ್ಟು ಬೆಳೆದಿವೆ ಅಂದರೆ ಹಾಲಿವುಡ್ ನಟ, ನಟಿಯರು ಭಾರತದಲ್ಲಿಯೇ ಬೀಡು ಬಿಟ್ಟಿzರೆ! ಇಲ್ಲಿಂದ ಹಾಲಿವುಡ್‌ಗೆ ಹಾರಿದ ಪ್ರಿಯಾಂಕಾ ಚೋಪ್ರಾ ಸೇರಿ ಹಲವಾರು ಬಾಲಿವುಡ್ ನಟ ನಟಿಯರು ವಿದೇಶಿ ಚಿತ್ರಗಳಲ್ಲಿ-ಟೆಲಿ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ. ಹಾಲಿವುಡ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾರತದ ಕಲಾವಿದರು ಅತಿಥಿಯಾಗಿ ಹೋಗುತ್ತಿzರೆ.

ಆಶ್ಚರ್ಯ ಎನಿಸಬಹುದು, ಭಾರತದ ಸಾಕಷ್ಟು ಸಿನಿಮಾಗಳಲ್ಲಿ ಬಳಸುವ ತಂತ್ರeನ ವಿದೇಶದಿಂದ ಬರುತ್ತದೆ. ಮರಾಠಿಯಲ್ಲಿ ಇತ್ತೀಚಿನ ಬಹಳ ಯಶಸ್ವಿ ಸಿನಿಮಾ ‘ಸೈರಾಟ್’. ಅದರ ಸಂಗೀತವಂತೂ ತುಂಬಾನೇ ಜನಪ್ರಿಯ. ಸಂಗೀತದ ಸಂಯೋಜನೆ, ಸಂಸ್ಕರಣೆ ಎ ಆಗಿದ್ದು ಅಮೆರಿಕಾದಲ್ಲಿರುವ ಸೋನಿ ಲ್ಯಾಬ್ಸ್‌ನಲ್ಲಿ. ಅವರ್ತಾ ಎನ್ನುವ ಒಂದು ಅದ್ಭುತ ಹಾಲಿವುಡ್ ಸಿನಿಮಾದ ಅನಿಮೇಷನ್ ಮಾಡಲು ಸಹಾಯ ಮಾಡಿದ್ದು ನಮ್ಮ ಬೆಂಗಳೂರಿನ ಐಟಿಪಿಎಲ್ ನಲ್ಲಿರುವ ಒಂದು ಕಂಪನಿ ಎನ್ನುವ ವಿಷಯ ಗೊತ್ತಾದರೆ ನಿಮಗೆ ಅಚ್ಚರಿಯಾದೀತು. ಆದರೆ ಈ ವೇಳೆ ಆ ಅಚ್ಚರಿ ಮುಗಿದುಹೋಗಿ, ಭಾರತ ಹಾಗೂ ವಿಶ್ವದ ಮನರಂಜನಾ ಸಂಸ್ಥೆಗಳು ಸಹಯೋಗದಲ್ಲಿ ಕೆಲಸ ಮಾಡುತ್ತಿವೆ. ಐಟಿಯಲ್ಲಿ ಭಾರತದ ಏನು ಸಾಧನೆ ಇದೆಯೋ ಅದನ್ನು ಬಾಲಿವುಡ್ ಹಾಗೂ ಹಾಲಿವುಡ್ ಎರಡೂ ಬಳಸಿಕೊಳ್ಳುತ್ತಿವೆ. ಭಾರತದ ಫಿಲ್ಮ ಇಂಡಸ್ಟ್ರಿ ಹಾಲಿವುಡ್‌ಗಿಂತ ಬಹಳ ದೊಡ್ಡದು!

ಜಗತ್ತಿನ ಅತ್ಯಂತ ಹಳೆಯ ಉದ್ಯಮಗಳಲ್ಲಿ ಭಾರತದ ಸಿನಿಮಾ ಕೂಡ ಒಂದು ಎನ್ನಲಾಗುತ್ತದೆ. ವಿಶ್ವ ಸಿನಿಮಾ ಶುರುವಾದಾಗಲೇ ಅದು ಭಾರತದಲ್ಲಿ ಸಹ ಚಾಲನೆಗೊಂಡಿತ್ತು. ಸ್ವಾತಂತ್ರ್ಯದ ಮೊದಲೇ ಭಾರತದಲ್ಲಿ ಚಲನಚಿತ್ರ ಜನಪ್ರಿಯ ಆಗಿದ್ದರೂ ಕೂಡ ದೇಶವ್ಯಾಪಿಯಾಗಿದ್ದು ಸ್ವಾತಂತ್ರ್ಯದ ನಂತರ. ಇಂದು ಜಗತ್ತಿನ ಅತೀ ದೊಡ್ಡ ಸಿನಿಮಾ ಉದ್ಯಮವು ಭಾರತದಲ್ಲಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ ಭಾರತದ ಸಿನಿಮಾದ ೩೯೦,೦೦,೦೦,೦೦೦ ಟಿಕೆಟ್ ಗಳು ಮಾರಾಟವಾಗುತ್ತವೆ. ಅಂದರೆ ಹಾಲಿವುಡ್ ಗಿಂತ ಹತ್ತು ಲಕ್ಷ ಹೆಚ್ಚು! ಹಿಂದಿನ ವರ್ಷ ಎ ಭಾಷೆಗಳ ಒಟ್ಟೂ ೧,೯೮೬ ಸಿನಿಮಾ ಬಿಡುಗಡೆಯಾಗಿದೆ. ದೇಶಾದ್ಯಂತ ಹನ್ನೊಂದು ಸಾವಿರಕ್ಕೂ ಹೆಚ್ಚು ಸಿನಿಮಾ ಮಂದಿರಗಳಿವೆ. ಇಡೀ ಉದ್ಯಮ ಸೇರಿ ಸುಮಾರು ಎರಡು ಶತಕೋಟಿ ಡಾಲರ್ ವ್ಯಾಪಾರ ವಹಿವಾಟು ನಡೆಸುತ್ತವೆ. ಜಗತ್ತಿನ ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್‌ಗಳು ಇಂದು ಭಾರತದಲ್ಲಿವೆ. ಸೋನಿ, ಡಿಸ್ನಿ, ಪಾಕ್ಸ್, ವಾನರ್… ಹಾಲಿವುಡ್‌ನ್ನು ಆಳುತ್ತಿದ್ದ  ಇವರೆಲ್ಲ ಇಂದು ಭಾರತದಲ್ಲಿ ಹಣ ಹೂಡಿzರೆ.

ಅವೆಂಜರ್ಸ್ ಸಿನಿಮಾ ಭಾರತದಲ್ಲಿ ಸುಮಾರು ಇನ್ನೂರಾ ಐವತ್ತು ಕೋಟಿ ರು. ಬಾಕ್ಸ್ ಆಫೀಸ್ ದೋಚಿತು. ಅವರ ಬ್ಯುಸಿನೆಸ್ ಮಾಡಲ್ ಸಿಂಪಲ್ – ಭಾರತದಲ್ಲಿ ಸಿನಿಮಾವನ್ನು ಮಂದಿರಗಳಲ್ಲಿ ವಿತರಣೆ ಮಾಡುವುದು! ಭಾರತದ ಎಂಟರ್ಟೈನ್ಮೆಂಟ್ ಇಂಡಸ್ಟ್ರಿ  ಮೇಲೆ ವಿಶ್ವಾದ್ಯಂತ ಇರುವ  ಚಿತ್ರ ನಿರ್ಮಾಣ ಸಂಸ್ಥೆಗಳು ಕಣ್ಣಿಟ್ಟಿವೆ, ಯಾಕೆ ಗೊತ್ತೇ? ಅಷ್ಟು ಗಳಿಕೆ ಭಾರತದಲ್ಲಿ ಇದೆ!

೨೦೦೦ರ ತನಕ ಸಿನಿಮಾ ಇಂಡಸ್ಟ್ರಿಯ ಆದಾಯ ೧.೩ ಬಿಲಿಯನ್ ಡಾಲರ್ ಆಗಿತ್ತು. ಕೇವಲ ಎರಡು ದಶಕಗಳಲ್ಲಿ ಅದು ಡಬಲ್ ಆಗಿದೆ. ಭಾರತದ ಸಿನಿಮಾ ಜೊತೆ ಹಾಡುಗಳು ಕೂಡ ಅಷ್ಟೇ ಜನಪ್ರಿಯ. ಒಟ್ಟೂ ಆದಾಯದ ೫% ಮ್ಯೂಸಿಕ್ ಇಂಡಸ್ಟ್ರಿಯಿಂದ ಬರುತ್ತದೆ. ಪ್ರಿಂಟ್, ಟಿವಿ, ಮೀಡಿಯಾ,  ಸಿನಿಮಾ, ಮ್ಯೂಸಿಕ್ ಹೀಗೆ ಇಂಡಸ್ಟ್ರಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಬಹಳ ದೂರ ಬಂದಿದೆ. ಇವತ್ತು ಫಿಲ್ಮ್ಸ ಹಾಗೂ ಮೀಡಿಯಾದಿಂದಾಗಿ ಭಾರತದಲ್ಲಿ ಸುಮಾರು ಅರವತ್ತು ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ವಿದೇಶಿ ಬಂಡವಾಳ ಏಳು ಬಿಲಿಯನ್ ಡಾಲರ್ ತಲುಪಿದೆ. ಭಾರತದಲ್ಲಿ ಏನಾದರೂ ಜಿಗಿತದ ಬೆಳವಣಿಗೆ ಆಗಿದೆ ಅಂದರೆ ಅದನ್ನು ನಾವು ಸಿನಿಮಾ ಉದ್ಯಮದಲ್ಲಿ ಕಾಣಬಹುದು.

ಪ್ರತಿ ವರ್ಷ ಪ್ರಿಂಟ್ ಮೀಡಿಯಾ ೧೨% ನಷ್ಟು ಬೆಳೆಯುತ್ತಿದೆ. ಉಳಿದ ಪಾಶ್ಚಿಮಾತ್ಯದ ಪ್ರಜಾಪ್ರಭುತ್ವ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಪ್ರತಿ ವರ್ಷ ಪತ್ರಿಕೆಗಳ ಮುದ್ರಣ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಹೆಚ್ಚುತ್ತಿರುವ ಜನಸಂಖ್ಯೆ ಕೂಡ ಕಾರಣ. ಅದಲ್ಲದೆ ನಮ್ಮ ದೇಶದ ಸರಾಸರಿ ವಯಸ್ಸು ಬಹಳ ಕಡಿಮೆ ಇದೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಭಾರತದ ಸಾಕ್ಷರತೆ ಕೂಡ ಹೆಚ್ಚಿದೆ. ಹೇಗೆ ಭಾರತ ಬೆಳೆಯುತ್ತಿದೆಯೋ ಹಾಗೆಯೇ ಜಾಹೀರಾತು ಕೂಡ ಹೆಚ್ಚುತ್ತಿದೆ. ಪಾಕಿಸ್ತಾನದ ಪತ್ರಿಕೆಯ ಬೆಲೆ ೨೦-೨೫ ರುಪಾಯಿ, ನಮ್ಮ ದೇಶದಲ್ಲಿ ಪತ್ರಿಕೆಯ ಬೆಲೆ ಐದರಿಂದ ಆರು ರುಪಾಯಿ. ಈ ನಾಲ್ಕು ಪಟ್ಟು ಹೆಚ್ಚಳಕ್ಕೆ ಕಾರಣ ಜಾಹೀರಾತು ಹಾಗೂ ಹಂಚಿಕೆ. ವಲ್ಡ ಎಕನಾಮಿಕ್ -ರಮ್ ಪ್ರಕಾರ ಜಗತ್ತಿನಲ್ಲಿ ಎ ಕಡೆ ಪ್ರಿಂಟ್ ಮೀಡಿಯಾ ಅಳಿವಿನ ಅಂಚಿನಲ್ಲಿದೆ ಆದರೆ ಭಾರತದಲ್ಲಿ ಮಾತ್ರ ಅದು ಬೆಳೆಯುತ್ತಿದೆ! ಇಂದು ಜಗತ್ತಿನಲ್ಲಿ ಅತೀ ಹೆಚ್ಚು ಪತ್ರಿಕೆಗಳು ಭಾರತದಲ್ಲಿವೆ. ಅಮೇರಿಕಾದಲ್ಲಿ ಪ್ರತಿ ವರ್ಷವೂ ಒಂದಿಷ್ಟು ಸುದ್ದಿ ಮನೆ ಮುಚ್ಚಿ ಹೋದರೆ, ಭಾರತದಲ್ಲಿ ಅದರ ಹತ್ತು ಪಟ್ಟು ಸುದ್ದಿ ಮನೆಗಳು ಬಾಗಿಲು ತೆರೆಯುತ್ತವೆ. ಆಡಿಟ್ ಬ್ಯೂರೋ ಆ- ಸರ್ಕ್ಯುಲೇಷನ್ ಪ್ರಕಾರ ಇಪ್ಪತ್ತು ವರ್ಷಗಳಲ್ಲಿ ಪತ್ರಿಕೆಗಳ ವಿತರಣೆ ೬೦% ಹೆಚ್ಚಿದೆ. ೨೦೧೬ರಲ್ಲಿ ಒಂದು ದಿನಕ್ಕೆ ಆರು ಕೋಟಿಗಿಂತಲೂ ಹೆಚ್ಚು ಪತ್ರಿಕೆಗಳು ಮುದ್ರಣಗೊಂಡಿವೆ ಎನ್ನುತ್ತದೆ ಅಂಕಿ-ಅಂಶ.

ನಮ್ಮ ದೇಶ ಪೇಜರ್ ಎನ್ನುವುದು ಏನು ಎಂದು ನೋಡುವುದರೊಳಗೆ ಮೊಬೈಲ್ ಬಂದಿತ್ತು. ರೇಡಿಯೋ ಕೇಳಿದ್ದಕ್ಕಿಂತ ಹೆಚ್ಚು ಜನ ಇಲ್ಲಿ ಟಿವಿ ನೋಡಿzರೆ. ಕಂಪ್ಯೂಟರ್ ನಲ್ಲಿ ಇಂಟರ್ನೆಟ್ ಬಳಸಿದ್ದಕ್ಕಿಂತ ಹೆಚ್ಚು ಜನರು ಮೊಬೈಲ್ ನಲ್ಲಿ ಇಂಟರ್ನೆಟ್ ಬಳಸುತ್ತಿzರೆ. ಇಂದು ಭಾರತ ವಿಶ್ವ ಮಟ್ಟದಲ್ಲಿ ಡಿಜಿಟಲ್ ಎಂಟರ್ಟೈನ್ಮೆಂಟ್ ನ ಹೊಸ ಬೇಡಿಕೆಯನ್ನು ಸೃಷ್ಟಿಸಿದೆ. ಇವತ್ತು ಭಾರತ ಗೂಗಲ, -ಸ್ಬುಕ, ಟ್ವಿಟರ್‌ಗಳನ್ನು ಬಳಸುವುದನ್ನು ನಿಲ್ಲಿಸಿತು ಅಂದರೆ ಆ ಕಂಪನಿಗಳು ಒಂದು ತಿಂಗಳು ಕೂಡ ಬದುಕುಳಿಯುವುದು ಕಷ್ಟ. ಇಂಟರ್ನೆಟ್ ದರ ಕಡಿಮೆಯಾದಾಗಿನಿಂದ ಭಾರತದಲ್ಲಿ ಪ್ರಿಂಟ್ ಮೀಡಿಯಾ, ಸಿನಿಮಾ, ಟಿವಿ ಎಲ್ಲವೂ ಮೊಬೈಲ್ ನ ಸೇರಿ ಹೋಗಿದೆ. ಎ ನೋಡಿದರೂ ಜನರು ಮೊಬೈಲ್ ಮನರಂಜನೆಯ ದಾಸರಾಗಿzರೆ.  ಇದಕ್ಕಾಗಿಯೇ ಜಗತ್ತಿನ ಅತೀ ದೊಡ್ಡ ಟೆಕ್ನಾಲಜಿ ಕಂಪನಿಗಳಾದ ಆಪಲ, ಅಮೆಜಾನ್, ಯು-ಟ್ಯೂಬ, ನೆಟ್ ಫ್ಲಿಕ್ಸ್ ಎಲ್ಲವೂ ಭಾರತವನ್ನು ಟಾರ್ಗೆಟ್ ಮಾಡಿರುವುದು. ಈ ಲೇಖನ ಓದುತ್ತಿರುವವರಲ್ಲಿ ೫೦% ಓದುಗರು ನೆಟ್ ಫ್ಲಿಕ್ಸ್  ಬಳಸುತ್ತಿದ್ದೀರಿ, ೩೦% ಓದುಗರು ಅಮೆಜಾನ್ ಪ್ರೈಂ ಬಳಸುತ್ತಿದ್ದೀರಿ ಎಂದು ಧಾರಾಳವಾಗಿ ಊಹೆ ಮಾಡಬಹುದು. ಈ ಸಂಖ್ಯೆ ಇನ್ನೂ ಹೆಚ್ಚಲಿದೆ.

ಇಂದು ನೆಟ್ ಫ್ಲಿಕ್ಸ ತರಹದ ಕಂಪನಿಗಳು ಭಾರತದಲ್ಲಿ ಹೇರಳವಾಗಿ ಹೂಡಿಕೆ ಮಾಡುತ್ತಿರಲು ಕಾರಣ, ಭಾರತ ಬೆಳೆಯುತ್ತಿದೆ. ಅದರ ಜೊತೆ ಜನರ ‘ತಲೆ ಆದಾಯ’ ಕೂಡ ಹೆಚ್ಚಾಗುತ್ತಿದೆ. ಅದರಿಂದಾಗಿ ಅವರ ವೆಚ್ಚ ಮಾಡುವ ಸಾಮರ್ಥ್ಯ ಅಽಕವಾಗುತ್ತಿದೆ. ನೀರು, ಗಾಳಿ, ಆಹಾರ ಹೇಗೆಯೋ ಹಾಗೆ ಮನುಷ್ಯನಿಗೆ ಮನರಂಜನೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಭಾರತವು ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಉತ್ಕೃಷ್ಟತೆಯನ್ನು ತಲುಪಿದೆ. ಅಮೆರಿಕಾದಲ್ಲಿ ಬಾಹುಬಲಿ ಸಿನಿಮಾ ನೋಡುತ್ತಾರೆ, ಭಾರತದಲ್ಲಿ ನೆಟ್ ಫ್ಲಿಕ್ಸ್ ಮೂಲಕ ಇಂಗ್ಲೀಷ್ ಸೀರಿಯಲ್ ವೀಕ್ಷಿಸುತ್ತಾರೆ, ಬ್ರೆಜಿಲ್ ತನಕ ದೆಹಲಿಯ ನ್ಯೂಸ್ ತಲಪುತ್ತದೆ, ಚೀನಾದ ಕಂಪನಿಗಳು ಭಾರತದ ಪತ್ರಿಕೆಗಳ ತುಂಬಾ ಜಾಹೀರಾತು ಪ್ರಕಟಿಸುತ್ತವೆ, ಎಲ್ಲರ ಕೈಲಿ ಮೊಬೈಲ್ ಇದೆ… ಅಂದ ಮೇಲೆ ಬಾಕಿ ಉಳಿದಿದ್ದೇನು ಎಂಬ ಹೆಮ್ಮೆಯಲ್ಲಿ ಬೀಗುವಂತೆ ಮಾಡಿದೆ, ಭಾರತದ ಮನರಂಜನಾ ಉದ್ಯಮ. ಇ

ಪ್ಪತ್ತೈದು ವರ್ಷಗಳ ಹಿಂದೆ ಮನರಂಜನೆ ಎನ್ನುವುದಕ್ಕೆ ಏನಿತ್ತು? ಊರಲ್ಲಿ ಒಂದು ಟಿವಿ ಇರುತ್ತಿತ್ತು, ವಾರಕ್ಕೆ ಒಂದು ರಾಮಾಯಣ ಧಾರಾವಾಹಿ ಬರುತ್ತಿತ್ತು, ರೇಡಿಯೋದಲ್ಲಿ ವಾರ್ತೆ ಕೇಳುತ್ತಿದ್ದರು, ಅದರ ಹಾಡುಗಳೂ ಬರುತ್ತಿದ್ದವು. ನಂತರ ಶುರುವಾಗಿದ್ದು ಲೈವ್ ಟೆಲಿಕಾಸ್ಟ್. ಎ ನಡೆಯುತ್ತಿದ್ದುದ್ದನ್ನು ಇಲ್ಲಿ ಕೂತು ನೋಡ ಬಹುದಿತ್ತು. ಟಿವಿಯಲ್ಲಿ ಒಂದೇ ಚಾನೆಲ. ಕ್ರೀಡೆ, ಕಾರ್ಟೂನ್, ವಾರ್ತೆ, ಧಾರಾವಾಹಿ, ಭಜನೆ, ಭಾಷಣ ಎಲ್ಲದಕ್ಕೂ ಒಂದೇ. ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದರೆ ಉಳಿದ ಕಾರ್ಯಕ್ರಮ ನೋಡುವ ಹಾಗಿರಲಿಲ್ಲ. ವಾರ್ತೆಯ ಸಮಯದಲ್ಲಿ  ಮ್ಯಾಚ್ ನೋಡುವುದು ತಪ್ಪಿ ಹೋಗುತ್ತಿತ್ತು.

ಆದರೆ ಇಂದು ಸನ್ನಿವೇಶ ಸಂಪೂರ್ಣ ಬದಲಾಗಿದೆ. ಒಂದು ಚಾನೆಲ್ ಇದ್ದ ದೇಶದಲ್ಲಿ ಇಂದು ಒಂದು ಸಾವಿರಕ್ಕೂ ಹೆಚ್ಚು ಚಾನೆಲ್ ಗಳಾಗಿವೆ. ಅಷ್ಟೇ ಅಲ್ಲ ವಿದೇಶಿ ಚಾನೆಲ್‌ಗಳು, ವಿದೇಶಿ ಸಿನಿಮಾಗಳು, ವಿದೇಶಿ ರಿಯಾಲಿಟಿ ಷೋ ಕೂಡ ಭಾರತೀಯ ವೀಕ್ಷಕರಿಗೆ ಲಭ್ಯ. ಲೈವ್ ಟೆಲಿಕಾಸ್ಟ್ ಜತೆ ರೆಕಾರ್ಡೆಡ್ ಟೆಲಿಕಾಸ್ಟ್, ರಿಪೀಟ್ ಟೆಲಿಕಾಸ್ಟ್ ಹೀಗೆ ನೀವು ಕೇಳಿದ್ದು ಕೊಡುವ ಕಾಮಧೇನುವಿನಂತಾಗಿದೆ.

ಯಾವಾಗ ಟಿವಿ ಮನೆ ಮನೆಗೆ ತಲುಪುತ್ತಾ ಹೋಯಿತೋ ಹಾಗೆ ಹೊಸ ಹೊಸ ಖಾಸಗಿ ಚಾನೆಲ್ ಗಳು, ಹೊಸ ಹೊಸ ಕಾರ್ಯಕ್ರಮಗಳು  ಬರುತ್ತಾ ಹೋದವು. ಟಿವಿ ಇಂಡಸ್ಟ್ರಿ ಗೆ ಮಹತ್ವದ ತಿರುವು ಸಿಕ್ಕಿದ್ದು ೨೦೦೦ರಲ್ಲಿ. ಏಕ್ತಾ ಕಪೂರ್ ಅವರ ’ಕಭೀ ಸಾಸ್ ಭೀ ಬಹು ಥೀ’ ಎನ್ನುವ ಧಾರವಾಹಿ ಸಣ್ಣ ಪರದೆಯ ಮೇಲೆ ಶುರುವಾದಾಗ. ಇದು ಎಷ್ಟು ಜನಪ್ರಿಯ ಆಯಿತು ಅಂದರೆ ಭಾರತದ ಮನರಂಜನಾ ಉದ್ಯಮದಲ್ಲಿ ಒಂದು ಕ್ರಾಂತಿಕಾರಕ ಪಲ್ಲಟವನ್ನೇ ಅದು ಉಂಟುಮಾಡಿತು.  ‘ಕಭೀ..’ ಯ ೧೮೩೩ ಸಂಚಿಕೆಗಳು ಪ್ರಸಾರವಾಗಿದ್ದವು. ಇಂದು ಭಾರತದಲ್ಲಿ ಅಷ್ಟೇ ಅಲ್ಲ ವಿಶ್ವಾದ್ಯಂತ ಭಾರತೀಯ ‘ಡೇಲಿ ಸೋಪ್ ಓಪ್ರಾ’ ಅತ್ಯಂತ ಜನಪ್ರಿಯ. ಪಾಕಿಸ್ತಾನ, ಬಾಂಗ್ಲಾದೇಶ, ಅ-ನಿಸ್ತಾನ, ಗಲ ಅಲ್ಲದೇ ಇನ್ನೂ ಹಲವಾರು ದೇಶಗಳಲ್ಲಿ ಅವರ ಭಾಷೆಗೆ ಅನುವಾದ ಮಾಡಿ ನಮ್ಮ ದೇಶದ ಕೆಲವು ಜನಪ್ರಿಯ ‘ಟೆಲಿಕತೆ’ಗಳನ್ನು ಜನರು ನೋಡುತ್ತಾರೆ. ಚೀನಾದಲ್ಲಿ ಕೂಡ ಅವು ಸಾಕಷ್ಟು ಜನಪ್ರಿಯ.

ಇನ್ನು ಚಲನಚಿತ್ರದ ವಿಷಯಕ್ಕೆ ಬಂದರೆ, ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮಗಳೆನ್ನದೆ ನಮ್ಮ ದೇಶದ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಒಂದು ವಿದ್ಯಮಾನವೇ ಹಿಂದಿ ಚಿತ್ರರಂಗ ಅಥವಾ ಬಾಲಿವುಡ್ ಎನ್ನಬಹುದು. ಅಲ್ಲಿಯ ದುಬಾರಿ ಸೆಟ್, ಅದರಲ್ಲಿ ತುಂಬಿರುವ ಭಾರತೀಯ ಸಂಸ್ಕೃತಿ, ಹಾಡು, ಸಂಗೀತ, ಭಾವನಾತ್ಮಕ ಕಥೆಗಳು ಜಗತ್ತನ್ನೇ ಗೆದ್ದಿದೆ. ಜಪಾನಿನಲ್ಲಿ ರಜನಿಕಾಂತ್ -ಮಸ್ ಆದರೆ, ಶಾಹ್‌ರುಖ್ ಖಾನ್ ಇಂಗ್ಲೆಂಡಿನಲ್ಲಿ. ಹೀಗೆ ಭಾರತದ ಸಿನಿಮಾ ಇಂಡಸ್ಟ್ರಿ ನಡೆದು ಬಂದ ದಾರಿ ಬಹಳ ದೂರ. ಭಾರತದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಸಿಗುವ ಮನರಂಜನೆ ಅಂದರೆ ಸಿನಿಮಾ ಎನ್ನುವ ಮಾತೊಂದಿದೆ. ನಿಜಕ್ಕೂ ಅದು ಒಪ್ಪತಕ್ಕ ಮಾತು.  ಒಂದು ಕಾಲದಲ್ಲಿ ಸಿನಿಮಾ ನೋಡಬೇಕು ಅಂದರೆ ಪೇಟೆಗೆ ಹೋಗಬೇಕಿತ್ತು. ಮುಂಬಯಿಯಲ್ಲಿ ಇಂದು ಸಿನಿಮಾ ರಿಲೀಸ್ ಆದರೆ ನಮ್ಮೂರಿಗೆ ಬರಲು ಒಂದು ತಿಂಗಳು ಬೇಕಿತ್ತು.

 ಇನ್ನು ಹಾಲಿವುಡ್ ಮೂವೀಸ್ ಪ್ರಶ್ನೆಯೇ ಇಲ್ಲ. ಟೈಟಾನಿಕ್ ಸಿನಿಮಾದ ಉದಾಹರಣೆ ತೆಗೆದುಕೊಂಡರೆ ವಿದೇಶಗಳಲ್ಲಿ ಅದು ರಿಲೀಸ್ ಆಗಿ, ಆಸ್ಕರ್ ಪ್ರಶಸ್ತಿಯನ್ನು ಪಡೆದು ಎಷ್ಟೋ ಸಮಯ ಕಳೆದ ಮೇಲೆ ಭಾರತಕ್ಕೆ ಬಂದಿತ್ತು. ಇದು ನಿಮ್ಮ ಗಮನಕ್ಕೂ ಬಂದಿರಬಹುದು. ಈಗ ಕೆಲವೊಂದು ಚಲನಚಿತ್ರ ಭಾರತದಲ್ಲಿ ಮೊದಲು, ಆಮೇಲೆ ಅಮೆರಿಕದಲ್ಲಿ ರಿಲೀಸ್ ಆಗುತ್ತದೆ. ಇಂದು ಫಿಲ್ಮ ಹಾಗೂ ಟಿವಿ ಉದ್ಯಮಗಳು ಎಷ್ಟು ಬೆಳೆದಿವೆ ಅಂದರೆ ಹಾಲಿವುಡ್ ನಟ, ನಟಿಯರು ಭಾರತದಲ್ಲಿಯೇ ಬೀಡು ಬಿಟ್ಟಿzರೆ! ಇಲ್ಲಿಂದ ಹಾಲಿವುಡ್‌ಗೆ ಹಾರಿದ ಪ್ರಿಯಾಂಕಾ ಚೋಪ್ರಾ ಸೇರಿ ಹಲವಾರು ಬಾಲಿವುಡ್ ನಟ ನಟಿಯರು ವಿದೇಶಿ ಚಿತ್ರಗಳಲ್ಲಿ-ಟೆಲಿ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ. ಹಾಲಿವುಡ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾರತದ ಕಲಾವಿದರು ಅತಿಥಿಯಾಗಿ ಹೋಗುತ್ತಿzರೆ.

ಆಶ್ಚರ್ಯ ಎನಿಸಬಹುದು, ಭಾರತದ ಸಾಕಷ್ಟು ಸಿನಿಮಾಗಳಲ್ಲಿ ಬಳಸುವ ತಂತ್ರeನ ವಿದೇಶದಿಂದ ಬರುತ್ತದೆ. ಮರಾಠಿಯಲ್ಲಿ ಇತ್ತೀಚಿನ ಬಹಳ ಯಶಸ್ವಿ ಸಿನಿಮಾ ‘ಸೈರಾಟ್’. ಅದರ ಸಂಗೀತವಂತೂ ತುಂಬಾನೇ ಜನಪ್ರಿಯ. ಸಂಗೀತದ ಸಂಯೋಜನೆ, ಸಂಸ್ಕರಣೆ ಎ ಆಗಿದ್ದು ಅಮೆರಿಕಾದಲ್ಲಿರುವ ಸೋನಿ ಲ್ಯಾಬ್ಸ್‌ನಲ್ಲಿ. ಅವರ್ತಾ ಎನ್ನುವ ಒಂದು ಅದ್ಭುತ ಹಾಲಿವುಡ್ ಸಿನಿಮಾದ ಅನಿಮೇಷನ್ ಮಾಡಲು ಸಹಾಯ ಮಾಡಿದ್ದು ನಮ್ಮ ಬೆಂಗಳೂರಿನ ಐಟಿಪಿಎಲ್ ನಲ್ಲಿರುವ ಒಂದು ಕಂಪನಿ ಎನ್ನುವ ವಿಷಯ ಗೊತ್ತಾದರೆ ನಿಮಗೆ ಅಚ್ಚರಿಯಾದೀತು. ಆದರೆ ಈ ವೇಳೆ ಆ ಅಚ್ಚರಿ ಮುಗಿದುಹೋಗಿ, ಭಾರತ ಹಾಗೂ ವಿಶ್ವದ ಮನರಂಜನಾ ಸಂಸ್ಥೆಗಳು ಸಹಯೋಗದಲ್ಲಿ ಕೆಲಸ ಮಾಡುತ್ತಿವೆ. ಐಟಿಯಲ್ಲಿ ಭಾರತದ ಏನು ಸಾಧನೆ ಇದೆಯೋ ಅದನ್ನು ಬಾಲಿವುಡ್ ಹಾಗೂ ಹಾಲಿವುಡ್ ಎರಡೂ ಬಳಸಿಕೊಳ್ಳುತ್ತಿವೆ. ಭಾರತದ ಫಿಲ್ಮ ಇಂಡಸ್ಟ್ರಿ ಹಾಲಿವುಡ್‌ಗಿಂತ ಬಹಳ ದೊಡ್ಡದು!

ಜಗತ್ತಿನ ಅತ್ಯಂತ ಹಳೆಯ ಉದ್ಯಮಗಳಲ್ಲಿ ಭಾರತದ ಸಿನಿಮಾ ಕೂಡ ಒಂದು ಎನ್ನಲಾಗುತ್ತದೆ. ವಿಶ್ವ ಸಿನಿಮಾ ಶುರುವಾದಾಗಲೇ ಅದು ಭಾರತದಲ್ಲಿ ಸಹ ಚಾಲನೆಗೊಂಡಿತ್ತು. ಸ್ವಾತಂತ್ರ್ಯದ ಮೊದಲೇ ಭಾರತದಲ್ಲಿ ಚಲನಚಿತ್ರ ಜನಪ್ರಿಯ ಆಗಿದ್ದರೂ ಕೂಡ ದೇಶವ್ಯಾಪಿಯಾಗಿದ್ದು ಸ್ವಾತಂತ್ರ್ಯದ ನಂತರ. ಇಂದು ಜಗತ್ತಿನ ಅತೀ ದೊಡ್ಡ ಸಿನಿಮಾ ಉದ್ಯಮವು ಭಾರತದಲ್ಲಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ ಭಾರತದ ಸಿನಿಮಾದ ೩೯೦,೦೦,೦೦,೦೦೦ ಟಿಕೆಟ್ ಗಳು ಮಾರಾಟವಾಗುತ್ತವೆ. ಅಂದರೆ ಹಾಲಿವುಡ್ ಗಿಂತ ಹತ್ತು ಲಕ್ಷ ಹೆಚ್ಚು! ಹಿಂದಿನ ವರ್ಷ ಎ ಭಾಷೆಗಳ ಒಟ್ಟೂ ೧,೯೮೬ ಸಿನಿಮಾ ಬಿಡುಗಡೆಯಾಗಿದೆ. ದೇಶಾದ್ಯಂತ ಹನ್ನೊಂದು ಸಾವಿರಕ್ಕೂ ಹೆಚ್ಚು ಸಿನಿಮಾ ಮಂದಿರಗಳಿವೆ. ಇಡೀ ಉದ್ಯಮ ಸೇರಿ ಸುಮಾರು ಎರಡು ಶತಕೋಟಿ ಡಾಲರ್ ವ್ಯಾಪಾರ ವಹಿವಾಟು ನಡೆಸುತ್ತವೆ. ಜಗತ್ತಿನ ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್‌ಗಳು ಇಂದು ಭಾರತದಲ್ಲಿವೆ. ಸೋನಿ, ಡಿಸ್ನಿ, ಪಾಕ್ಸ್, ವಾನರ್… ಹಾಲಿವುಡ್‌ನ್ನು ಆಳುತ್ತಿದ್ದ  ಇವರೆಲ್ಲ ಇಂದು ಭಾರತದಲ್ಲಿ ಹಣ ಹೂಡಿzರೆ.

ಅವೆಂಜರ್ಸ್ ಸಿನಿಮಾ ಭಾರತದಲ್ಲಿ ಸುಮಾರು ಇನ್ನೂರಾ ಐವತ್ತು ಕೋಟಿ ರು. ಬಾಕ್ಸ್ ಆಫೀಸ್ ದೋಚಿತು. ಅವರ ಬ್ಯುಸಿನೆಸ್ ಮಾಡಲ್ ಸಿಂಪಲ್ – ಭಾರತದಲ್ಲಿ ಸಿನಿಮಾವನ್ನು ಮಂದಿರಗಳಲ್ಲಿ ವಿತರಣೆ ಮಾಡುವುದು! ಭಾರತದ ಎಂಟರ್ಟೈನ್ಮೆಂಟ್ ಇಂಡಸ್ಟ್ರಿ  ಮೇಲೆ ವಿಶ್ವಾದ್ಯಂತ ಇರುವ  ಚಿತ್ರ ನಿರ್ಮಾಣ ಸಂಸ್ಥೆಗಳು ಕಣ್ಣಿಟ್ಟಿವೆ, ಯಾಕೆ ಗೊತ್ತೇ? ಅಷ್ಟು ಗಳಿಕೆ ಭಾರತದಲ್ಲಿ ಇದೆ!

೨೦೦೦ರ ತನಕ ಸಿನಿಮಾ ಇಂಡಸ್ಟ್ರಿಯ ಆದಾಯ ೧.೩ ಬಿಲಿಯನ್ ಡಾಲರ್ ಆಗಿತ್ತು. ಕೇವಲ ಎರಡು ದಶಕಗಳಲ್ಲಿ ಅದು ಡಬಲ್ ಆಗಿದೆ. ಭಾರತದ ಸಿನಿಮಾ ಜೊತೆ ಹಾಡುಗಳು ಕೂಡ ಅಷ್ಟೇ ಜನಪ್ರಿಯ. ಒಟ್ಟೂ ಆದಾಯದ ೫% ಮ್ಯೂಸಿಕ್ ಇಂಡಸ್ಟ್ರಿಯಿಂದ ಬರುತ್ತದೆ. ಪ್ರಿಂಟ್, ಟಿವಿ, ಮೀಡಿಯಾ,  ಸಿನಿಮಾ, ಮ್ಯೂಸಿಕ್ ಹೀಗೆ ಇಂಡಸ್ಟ್ರಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಬಹಳ ದೂರ ಬಂದಿದೆ. ಇವತ್ತು ಫಿಲ್ಮ್ಸ ಹಾಗೂ ಮೀಡಿಯಾದಿಂದಾಗಿ ಭಾರತದಲ್ಲಿ ಸುಮಾರು ಅರವತ್ತು ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ವಿದೇಶಿ ಬಂಡವಾಳ ಏಳು ಬಿಲಿಯನ್ ಡಾಲರ್ ತಲುಪಿದೆ. ಭಾರತದಲ್ಲಿ ಏನಾದರೂ ಜಿಗಿತದ ಬೆಳವಣಿಗೆ ಆಗಿದೆ ಅಂದರೆ ಅದನ್ನು ನಾವು ಸಿನಿಮಾ ಉದ್ಯಮದಲ್ಲಿ ಕಾಣಬಹುದು.

ಪ್ರತಿ ವರ್ಷ ಪ್ರಿಂಟ್ ಮೀಡಿಯಾ ೧೨% ನಷ್ಟು ಬೆಳೆಯುತ್ತಿದೆ. ಉಳಿದ ಪಾಶ್ಚಿಮಾತ್ಯದ ಪ್ರಜಾಪ್ರಭುತ್ವ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಪ್ರತಿ ವರ್ಷ ಪತ್ರಿಕೆಗಳ ಮುದ್ರಣ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಹೆಚ್ಚುತ್ತಿರುವ ಜನಸಂಖ್ಯೆ ಕೂಡ ಕಾರಣ. ಅದಲ್ಲದೆ ನಮ್ಮ ದೇಶದ ಸರಾಸರಿ ವಯಸ್ಸು ಬಹಳ ಕಡಿಮೆ ಇದೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಭಾರತದ ಸಾಕ್ಷರತೆ ಕೂಡ ಹೆಚ್ಚಿದೆ. ಹೇಗೆ ಭಾರತ ಬೆಳೆಯುತ್ತಿದೆಯೋ ಹಾಗೆಯೇ ಜಾಹೀರಾತು ಕೂಡ ಹೆಚ್ಚುತ್ತಿದೆ. ಪಾಕಿಸ್ತಾನದ ಪತ್ರಿಕೆಯ ಬೆಲೆ ೨೦-೨೫ ರುಪಾಯಿ, ನಮ್ಮ ದೇಶದಲ್ಲಿ ಪತ್ರಿಕೆಯ ಬೆಲೆ ಐದರಿಂದ ಆರು ರುಪಾಯಿ. ಈ ನಾಲ್ಕು ಪಟ್ಟು ಹೆಚ್ಚಳಕ್ಕೆ ಕಾರಣ ಜಾಹೀರಾತು ಹಾಗೂ ಹಂಚಿಕೆ. ವಲ್ಡ ಎಕನಾಮಿಕ್ -ರಮ್ ಪ್ರಕಾರ ಜಗತ್ತಿನಲ್ಲಿ ಎ ಕಡೆ ಪ್ರಿಂಟ್ ಮೀಡಿಯಾ ಅಳಿವಿನ ಅಂಚಿನಲ್ಲಿದೆ ಆದರೆ ಭಾರತದಲ್ಲಿ ಮಾತ್ರ ಅದು ಬೆಳೆಯುತ್ತಿದೆ! ಇಂದು ಜಗತ್ತಿನಲ್ಲಿ ಅತೀ ಹೆಚ್ಚು ಪತ್ರಿಕೆಗಳು ಭಾರತದಲ್ಲಿವೆ. ಅಮೇರಿಕಾದಲ್ಲಿ ಪ್ರತಿ ವರ್ಷವೂ ಒಂದಿಷ್ಟು ಸುದ್ದಿ ಮನೆ ಮುಚ್ಚಿ ಹೋದರೆ, ಭಾರತದಲ್ಲಿ ಅದರ ಹತ್ತು ಪಟ್ಟು ಸುದ್ದಿ ಮನೆಗಳು ಬಾಗಿಲು ತೆರೆಯುತ್ತವೆ. ಆಡಿಟ್ ಬ್ಯೂರೋ ಆ- ಸರ್ಕ್ಯುಲೇಷನ್ ಪ್ರಕಾರ ಇಪ್ಪತ್ತು ವರ್ಷಗಳಲ್ಲಿ ಪತ್ರಿಕೆಗಳ ವಿತರಣೆ ೬೦% ಹೆಚ್ಚಿದೆ. ೨೦೧೬ರಲ್ಲಿ ಒಂದು ದಿನಕ್ಕೆ ಆರು ಕೋಟಿಗಿಂತಲೂ ಹೆಚ್ಚು ಪತ್ರಿಕೆಗಳು ಮುದ್ರಣಗೊಂಡಿವೆ ಎನ್ನುತ್ತದೆ ಅಂಕಿ-ಅಂಶ.

ನಮ್ಮ ದೇಶ ಪೇಜರ್ ಎನ್ನುವುದು ಏನು ಎಂದು ನೋಡುವುದರೊಳಗೆ ಮೊಬೈಲ್ ಬಂದಿತ್ತು. ರೇಡಿಯೋ ಕೇಳಿದ್ದಕ್ಕಿಂತ ಹೆಚ್ಚು ಜನ ಇಲ್ಲಿ ಟಿವಿ ನೋಡಿzರೆ. ಕಂಪ್ಯೂಟರ್ ನಲ್ಲಿ ಇಂಟರ್ನೆಟ್ ಬಳಸಿದ್ದಕ್ಕಿಂತ ಹೆಚ್ಚು ಜನರು ಮೊಬೈಲ್ ನಲ್ಲಿ ಇಂಟರ್ನೆಟ್ ಬಳಸುತ್ತಿzರೆ. ಇಂದು ಭಾರತ ವಿಶ್ವ ಮಟ್ಟದಲ್ಲಿ ಡಿಜಿಟಲ್ ಎಂಟರ್ಟೈನ್ಮೆಂಟ್ ನ ಹೊಸ ಬೇಡಿಕೆಯನ್ನು ಸೃಷ್ಟಿಸಿದೆ. ಇವತ್ತು ಭಾರತ ಗೂಗಲ, -ಸ್ಬುಕ, ಟ್ವಿಟರ್‌ಗಳನ್ನು ಬಳಸುವುದನ್ನು ನಿಲ್ಲಿಸಿತು ಅಂದರೆ ಆ ಕಂಪನಿಗಳು ಒಂದು ತಿಂಗಳು ಕೂಡ ಬದುಕುಳಿಯುವುದು ಕಷ್ಟ. ಇಂಟರ್ನೆಟ್ ದರ ಕಡಿಮೆಯಾದಾಗಿನಿಂದ ಭಾರತದಲ್ಲಿ ಪ್ರಿಂಟ್ ಮೀಡಿಯಾ, ಸಿನಿಮಾ, ಟಿವಿ ಎಲ್ಲವೂ ಮೊಬೈಲ್ ನ ಸೇರಿ ಹೋಗಿದೆ. ಎ ನೋಡಿದರೂ ಜನರು ಮೊಬೈಲ್ ಮನರಂಜನೆಯ ದಾಸರಾಗಿzರೆ.  ಇದಕ್ಕಾಗಿಯೇ ಜಗತ್ತಿನ ಅತೀ ದೊಡ್ಡ ಟೆಕ್ನಾಲಜಿ ಕಂಪನಿಗಳಾದ ಆಪಲ, ಅಮೆಜಾನ್, ಯು-ಟ್ಯೂಬ, ನೆಟ್ ಫ್ಲಿಕ್ಸ್ ಎಲ್ಲವೂ ಭಾರತವನ್ನು ಟಾರ್ಗೆಟ್ ಮಾಡಿರುವುದು. ಈ ಲೇಖನ ಓದುತ್ತಿರುವವರಲ್ಲಿ ೫೦% ಓದುಗರು ನೆಟ್ ಫ್ಲಿಕ್ಸ್  ಬಳಸುತ್ತಿದ್ದೀರಿ, ೩೦% ಓದುಗರು ಅಮೆಜಾನ್ ಪ್ರೈಂ ಬಳಸುತ್ತಿದ್ದೀರಿ ಎಂದು ಧಾರಾಳವಾಗಿ ಊಹೆ ಮಾಡಬಹುದು. ಈ ಸಂಖ್ಯೆ ಇನ್ನೂ ಹೆಚ್ಚಲಿದೆ.

ಇಂದು ನೆಟ್ ಫ್ಲಿಕ್ಸ ತರಹದ ಕಂಪನಿಗಳು ಭಾರತದಲ್ಲಿ ಹೇರಳವಾಗಿ ಹೂಡಿಕೆ ಮಾಡುತ್ತಿರಲು ಕಾರಣ, ಭಾರತ ಬೆಳೆಯುತ್ತಿದೆ. ಅದರ ಜೊತೆ ಜನರ ‘ತಲೆ ಆದಾಯ’ ಕೂಡ ಹೆಚ್ಚಾಗುತ್ತಿದೆ. ಅದರಿಂದಾಗಿ ಅವರ ವೆಚ್ಚ ಮಾಡುವ ಸಾಮರ್ಥ್ಯ ಅಽಕವಾಗುತ್ತಿದೆ. ನೀರು, ಗಾಳಿ, ಆಹಾರ ಹೇಗೆಯೋ ಹಾಗೆ ಮನುಷ್ಯನಿಗೆ ಮನರಂಜನೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಭಾರತವು ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಉತ್ಕೃಷ್ಟತೆಯನ್ನು ತಲುಪಿದೆ. ಅಮೆರಿಕಾದಲ್ಲಿ ಬಾಹುಬಲಿ ಸಿನಿಮಾ ನೋಡುತ್ತಾರೆ, ಭಾರತದಲ್ಲಿ ನೆಟ್ ಫ್ಲಿಕ್ಸ್ ಮೂಲಕ ಇಂಗ್ಲೀಷ್ ಸೀರಿಯಲ್ ವೀಕ್ಷಿಸುತ್ತಾರೆ, ಬ್ರೆಜಿಲ್ ತನಕ ದೆಹಲಿಯ ನ್ಯೂಸ್ ತಲಪುತ್ತದೆ, ಚೀನಾದ ಕಂಪನಿಗಳು ಭಾರತದ ಪತ್ರಿಕೆಗಳ ತುಂಬಾ ಜಾಹೀರಾತು ಪ್ರಕಟಿಸುತ್ತವೆ, ಎಲ್ಲರ ಕೈಲಿ ಮೊಬೈಲ್ ಇದೆ… ಅಂದ ಮೇಲೆ ಬಾಕಿ ಉಳಿದಿದ್ದೇನು ಎಂಬ ಹೆಮ್ಮೆಯಲ್ಲಿ ಬೀಗುವಂತೆ ಮಾಡಿದೆ, ಭಾರತದ ಮನರಂಜನಾ ಉದ್ಯಮ.

Tags

Related Articles

Leave a Reply

Your email address will not be published. Required fields are marked *

Language
Close