About Us Advertise with us Be a Reporter E-Paper

ವಿವಾಹ್

ಸ್ವಾತಂತ್ರ್ಯ ಯುವ ಮನಸಿನ ಭಾವ ಬಣ್ಣ

ಕಿರಣ್ ಅಕ್ಕಿ

ಸ್ವಾತಂತ್ರ್ಯ ಅದೊಂದು ಅನುಭವ. ಅನುಭೂತಿ. ‘ಸ್ವಾತಂತ್ರ್ಯ’ದಲ್ಲಿ ‘ಸ್ವ’ ಎಂಬುದೂ ಇದೆ. ‘ಸ್ವ’ ಅಂದರೆ ನಾನು, ನನ್ನಿಂದ. ಈ ದೃಷ್ಟಿಯಲ್ಲಿ ಪ್ರತಿಯೊಂದು ಪ್ರಶ್ನಿಸಿಕೊಳ್ಳಬೇಕು, ಈ 72 ವರ್ಷಗಳ ಸ್ವತಂತ್ರ ಭಾರತದಲ್ಲಿ ದೇಶಕ್ಕೆ, ಸಮಾಜಕ್ಕೆ ನಾವೇನು ನೀಡಿದ್ದೇವೆ. ಸ್ವತಂತ್ರ ಭಾರತ, ಬಲಿಷ್ಠ ಭಾರತ, ಸ್ವಾವಲಂಬಿ ಭಾರತ, ಸುಂದರ ಭಾರತ, ಸಹ್ಯ ಭಾರತ ಹೀಗೆ ಏನೇನೆಲ್ಲಾ ಆಗಬಹುದಾಗಿದ್ದ, ಆಗಬೇಕಾಗಿದ್ದ ಕನಸಿನ ಭಾರತಕ್ಕೆ ನನ್ನ ಕೊಡುಗೆ ಏನು? ಅದು ಆಗಿಲ್ಲ, ಇದು ಆಗಿಲ್ಲ, ಏನೂ ಆಗಿಲ್ಲ, ಅವೆಲ್ಲವೂ ಸರಿ. ಆದರೆ ‘ಆಗಿಲ್ಲ’ ಅನ್ನುವಲ್ಲಿ, ಅವರಿವರು ಮಾಡಿಲ್ಲ ಅನ್ನುವ ಆಪಾದನೆ, ಜಾರಿಕೊಳ್ಳುವಿಕೆಯೇ ಏಕೆ? ಆ ಆಗಿಲ್ಲದಲ್ಲಿ ನಾನು, ಪಾತ್ರ? ಅದು ಬಹುದೊಡ್ಡ ಪಾತ್ರ ಅಲ್ಲವೇನು? ಸ್ವಾತಂತ್ರ್ಯ ‘ಸ್ವ’ ಪ್ರಜ್ಞೆಯಿಂದ ಆರಂಭ, ಅರ್ಥೈಸುವಿಕೆ, ಅನುಷ್ಠಾನ ಭಾವದಲ್ಲಿ ಎಂದು ಅವಲೋಕನಕ್ಕೆ ಒಳಪಡುತ್ತದೋ ಅಂದು ಭಾರತದಂತಹ ಅತಿವಿಶಿಷ್ಟ ಒಕ್ಕೂಟ ಸ್ವರೂಪಕ್ಕೆ ನಿಜವಾದ ಸ್ವಾತಂತ್ರ್ಯ ದಕ್ಕಬಹುದೇನೋ?

ಸ್ವಾತಂತ್ರ್ಯ ಹೊಸ ಅರ್ಥಗಳನ್ನು ಹೊಮ್ಮಿಸಬೇಕಿದೆ!

ನಿಮಗೆ ಗೊತ್ತೆ? ಭಾರತ ಸ್ವತಂತ್ರವಾಗಿ ಹದಿನಾಲ್ಕು ವರ್ಷಗಳಾದ ಮೇಲೆ ಗೋವಾ ಭಾರತಕ್ಕೆ ಸೇರ್ಪಡೆ ಆಗಿದ್ದಂತೆ, ಅಲ್ಲಿವರೆಗೂ ಅದು ಭಾರತಕ್ಕೆ ಸೇರಿರಲಿಲ್ಲ. ಸ್ವಾತಂತ್ರ್ಯ ಎಂದೊಡನೆ ಗೋವಾ ಯಾಕೆ ಮನಸಿಗೆ ಬಂತೋ ಪೂರ್ತಿಯಾಗಿ ಆಗಿಲ್ಲ, ಆಗ ದೆಯೇ ಇರಲಿ. ಅಂದಹಾಗೆ ಭಾರತಕ್ಕೆ ಹೊರಗಿನವರಿಂದ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳ ಮೇಲಾಯಿತು, ಒಳಗಿನ ನಮಗೆಲ್ಲ ಶುಭಾಶಯ. ಬೇಗ ಎದ್ದರೆ ಧ್ವಜಾರೋಹಣ ಅಟೆಂಡ್ ಮಾಡಿ, ಲೇಟ್ ಆಗಿ ಎದ್ದರೆ ್ಛ್ಝಜ-ಸೆಲ್ಫಿ ತಕ್ಕಳಿ, ಯಾರೋ ಬಿಳಿ ಬಟ್ಟೇಲಿ ಭಾಷಣ ಮಾಡಿದ್ರೆ ಕಿವಿ ಮುಚ್ಕೊಂಡು ಕೇಳಿ, ಸ್ವೀಟ್ ತಿನ್ನಿ. ಮರು ದಿನ ಮತ್ತೆ ಈ ದೇಶ ಯಾಕೆ, ಹೆಂಗ್ ಹೆಂಗೆ ಉದ್ಧಾರ ಆಗಲ್ಲ ಅಂತ ರಿವಿಶನ್ ಮಾಡ್ಕೊಳಿ, ಫೇಸ್ಬುಕ್‌ನಲ್ಲಿ ಹಿಂದೆ ತಗೊಳ್ಳಿ, ಇನ್‌ಸ್ಟಾಗ್ರಾಮ್‌ನಲ್ಲಿ ತುಟಿ ಮುಂದೆ ತನ್ನಿ, ಟ್ವಿಟ್ಟರ್‌ನಲ್ಲಿ ಯಾವ ನೊಂದಿಗೋ ಜಗಳಾಡಿ ಬ್ಲಾಕ್ ಮಾಡಿ… ಅಲ್ಲಿಗೆ ನಿಮ್ಮ ಜತೆ ಭಾರತಮಾತೆನೂ ಸುಸ್ತು. ಮೊನ್ನೆ ಬಸ್‌ಸ್ಟಾಪ್‌ನಲ್ಲಿದ್ದ ಅಂಕಲ್, ‘ನಮ್ಮ ಪುಣ್ಯ ಬ್ರಿಟಿಷರು ಮತ್ತೆ ದಾಳಿ ಮಾಡೋ ಯೋಚನೆ ಮಾಡಿಲ್ಲ. ಮಾಡಿದ್ರೆ ಈಗ ನಮ್ಮ ಕಥೆ ಅಷ್ಟೇ’ ಅಂದ್ರು. ಸುತ್ತಲಿದ್ದ ಕಾಲೇಜು ಹುಡುಗರೆಲ್ಲ ಅವರನ್ನ ನೋಡಿ ಮತ್ತೆ ತಮ್ಮ ಫೋನಿನಲ್ಲಿ ಸೇರಿಕೊಂಡರು. ಫೋನ್ ಬ್ಯಾಟರಿ ಖಾಲಿಯಾಗಿದ್ದ ನನಗೆ, ‘ಹಾಗೇ ನಾದರೂ ಅನ್ನೋ ಯೋಚನೆ ಬಂತು. ಕಿಟಕಿಯಲ್ಲಿ ‘ಒಮ್ಮೆ ಭಾರತಕ್ಕೆ ಬನ್ನಿ, ನಮ್ಮಲ್ಲೊಬ್ಬರಾಗಿ’ ಎಂಬ ಪೋಸ್ಟರ್ ಕಂಡಿತು.
‘ಭಾರತ ಬಿಟ್ಟು ತೊಲಗಿ’ ಅಂದವರನ್ನೆಲ್ಲಾ ‘ಭಾರತಕ್ಕೆ ಬನ್ನಿ’ ಎಂದು ಆತಿಥ್ಯ ನೀಡುತ್ತಿದ್ದೇವೆ. ಸಮಯದ ಜತೆ ಭಾವನೆ, ಲಕ್ಷ್ಯ, ನಿಲುವುಗಳೆಲ್ಲವೂ ಬದಲಾಗಿದೆ. ಇತಿಹಾಸವನ್ನು ಕೈಯ್ಯಲ್ಲಿ ಹಿಡಿದು ಭವಿಷ್ಯತ್ತನ್ನು ನೋಡದೇ ಇರುವುದು ಅಜ್ಞಾನವಲ್ಲ, ಅಪರಾಧ. ಗಾಂಧೀಜಿ ಸರಿನಾ, ಗೋಡ್ಸೆ ಸರಿನಾ, ನೆಹರುಗೆ ಏನೇನು ಕೆಟ್ಟ ಚಟಗಳಿದ್ದವಾ? ಅಂತ ಇನ್ನೂ ಚರ್ಚೆ ಮಾಡುತ್ತಿದ್ದರೆ ಸಮಯ ಪೋಲು. ಅವರೆಲ್ಲ ಸಮಯಕ್ಕೆ ಅವರಿಗೆ ಸರಿ ಅನಿಸಿದ್ದನ್ನ ಮಾಡಿ ಹೋಗಿಯಾಗಿದೆ. ನಮ್ಮ ಸಮಯಕ್ಕೆ ನಾವು ಮಾಡಬೇಕು, ಬರೀ ಮಾತಾಡಿದರೆ ಏನು ಬಂತು. ದೇಶ, ಪ್ರೇಮ, ದೇಶಪ್ರೇಮ ಗಳ ಅರ್ಥ ವಿಕಸಿತಗೊಂಡಿವೆ. ಇಂಟರ್ನೆಟ್ ಫ್ರೀ ಇದೆ ಅಂತ ಫೇಸ್ಬುಕ್‌ನಲ್ಲಿ ಹಗಲೂ-ರಾತ್ರಿ ಕೇಸರಿ ಬಣ್ಣ ಬಳಿದು ‘ಅಖಂಡ ಭಾರತ್’ ಎನ್ನುತ್ತಾ ಕೂತರೆ ಟೈಮ್ ವೇಸ್‌ಟ್. ಭಾವಗಳು, ನಂಬಿಕೆ ಗಳು ಆಯಾ ಕಾಲಕ್ಕೆ ಸೂಕ್ತ. ದೇಶಪ್ರೇಮವೂ ಹಾಗೆ. ಜಾತಿ, ಧರ್ಮ, ಭೂಗೋಳ, ಇತಿಹಾಸ ಇಂತಹ ವಿಷಯವಾಗಿ ಹೊಡೆದಾಟ, ಗುದ್ದಾಟಗಳೀಗ ತೀರಾ ಜ್ಟ್ಟಿಛ್ಝಿಛ್ಞಿಠಿ. ಎತ್ತಣ ಮಂಗಳ ಗ್ರಹಯಾನ, ಎತ್ತಣ ಹಜ್ ಸಬ್ಸಿಡಿ!
ಬದಲಾಗುತ್ತಿರುವ ಅರ್ಥ ಗಳ ನಡುವೆ ಹೊಸ ಅರ್ಥ ಗಳನ್ನು ಅರಿತು ಕೊಳ್ಳಲು, ಬೇಕಿರುವುದು ಸ್ವಾತಂತ್ರ್ಯ. ಈಗಿನ ಪೀಳಿಗೆಯ ಸ್ವಾತಂತ್ರ್ಯವದು. ಬೇಕಾದು ದನ್ನು ನೋಡಲು, ಕೇಳಲು, ಪರೀಕ್ಷಿ ಸಲು ಹಾಗೂ ಮಾಡಲು ಬೇಕಿರುವ ಸ್ವಾತಂತ್ರ್ಯ. ಎಡ, ಬಲ ಪಂಥಗಳಾಚೆ, ಜಾತಿ- ಧರ್ಮಗಳಾಚೆ, ನಾವು ನಾವಾಗಿರಲು ಬೇಕಿ ರುವ ಸ್ವಾತಂತ್ರ್ಯ. ಇದನ್ನು ಯಾರೂ ಕೊಡಲಾಗದು, ಕೊಟ್ಟರದು ಭಿಕ್ಷೆ. ಬಿಟ್ಟರದು ಅಜ್ಞಾನ. ಜಗತ್ತಿಗೆಲ್ಲ ಒಂದೇ ಸತ್ಯವೆಂದರೆ ಶುದ್ಧ ಸುಳ್ಳು. ಸತ್ಯ ಶೋಧನೆಗೆ ಬೇಕಿರುವ ಆಂತರಿಕ ಸ್ವಾತಂತ್ರ್ಯಕ್ಕೆ ಇನ್ನೊಂದು ಹೆಸರೇ ‘ಜವಾಬ್ದಾರಿ’. ಅದೇ ಸ್ವಾತಂತ್ರ್ಯ.
ನಾನು ಕೇಸರಿಯಲ್ಲ, 0ಹಸಿರೂ ಅಲ್ಲ, ಬರೀ ವಾಟ್ಸಾಪ್, ಫೇಸ್‌ಬುಕ್, ಟ್ವಿಟ್ಟರ್ ಅಲ್ಲ, ಬರೀ ನಂಬಿಕೆಯಲ್ಲ, ನಾಲ್ಕು ನದಿಗಳಲ್ಲ, ಐವತ್ತೆರಡು ಸೆಕೆಂಡ್‌ಗಳ ಹಾಡಲ್ಲ, ಕಳೆದು ಹೋದ ಇತಿಹಾಸವಲ್ಲ, ಅಳೆದು ನೋಡಬಲ್ಲ ಭವಿಷ್ಯವಲ್ಲ, ನಾನು ಸರಿಯಾಗಿದ್ದರೆ ನನ್ನ ಊರು, ದೇಶ ಸರಿ. ನಿನ್ನೆ ಕಂಡುಕೊಂಡು ಇವತ್ತು ಮರಳಿ ಸತ್ಯವೇ ನನಗೆ ಇವತ್ತಿನ ಧರ್ಮ. ಪರಿಶೀಲಿಸಿ, ಪ್ರಯತ್ನಿಸಿ, ಬಿದ್ದು ಮತ್ತೆ ನಿಂತ ಪಾಠಗಳೇ ನನಗೆ ಧರ್ಮ ಗ್ರಂಥ ಗಳು. ನಾನು ಭಾರತ. ನಾನೇ ಇವತ್ತಿನ ಭಾರತ.

ನಂದನ್, ನಟ

ನೆಮ್ಮದಿಯ ಬದುಕೇ ಸ್ವಾತಂತ್ರ್ಯ
ಯುವ ಜನತೆಗೆ ‘ಸ್ವಾತಂತ್ರ್ಯ’ ಎನ್ನು ವುದು,‘ಆಯ್ಕೆಯ ಸ್ವಾತಂತ್ರ್ಯ’ಕ್ಕಷ್ಟೇ ಸೀಮಿತ. ಬದುಕಿನ ಆಯ್ಕೆ, ತಮ್ಮದೇ ಜವಾಬ್ದಾರಿಯನ್ನು ರೂಪಿಸಿಕೊಳ್ಳುವ ಆಯ್ಕೆ, ಆಸಕ್ತಿ ಕ್ಷೇತ್ರದಲ್ಲಿನ ಸ್ವತಂತ್ರ ಆಯ್ಕೆ, ವಿದ್ಯಾಭ್ಯಾಸದ ಆಯ್ಕೆ, ಮದುವೆಯ ಆಯ್ಕೆ, ನಿರ್ಧಾರಗಳ ಪ್ರಶ್ನೆ ಎದುರಾದಾಗ ತಂತ್ರ್ಯ ಎಂಬುದು ಯಾವ ರೀತಿಯಲ್ಲೂ ನಮ್ಮಲ್ಲಿಲ್ಲ. ನಮ್ಮ ಹತ್ತಿ ರದಿಂದ ಇವೆಲ್ಲವನ್ನೂ ಕಂಡಾಗ ಯಾವ ಆಯ್ಕೆಗಳಲ್ಲೂ ಯುವ ಜನತೆಯ ಪಾಲು ಕಡಿಮೆ. ಬದಲಾಗಿ ನಮ್ಮ ಬ ದುಕಿನ ಆಯ್ಕೆ ಗಳನ್ನು ನಿರ್ಧರಿಸುವವರು ನಮ್ಮ ಕುಟುಂಬ, ತಂದೆ-ತಾಯಿ ಅಥವಾ ಗುರುಗಳೂ ಅಲ್ಲ. ಇವರೆಲ್ಲರೂ ನಮ್ಮ ಆಯ್ಕೆಯ ಬೆಂಬಲವಾಗಬೇಕು, ಒತ್ತಡಗಳಾಗಬಾರದು. ಯಾರದೋ ಆಸೆ, ಭಾವನಾತ್ಮಕ ನೆಲೆಗಳ ದೃಷ್ಟಿಯಲ್ಲಿ ‘ಮದುವೆ’ ಎಂಬ ಸಾಮಾಜಿಕ ವ್ಯವಸ್ಥೆಗೆ ಒಪ್ಪಿಗೆ ನೀಡುತ್ತೇವೆ. ಆದರೆ ಈ ಒಪ್ಪಿಗೆ, ಪ್ರತಿ ಆಯ್ಕೆಗಳೂ ನಮ್ಮದೇ ಆಗಿರಬೇಕು. ಮೊದಲು ನಮ್ಮನ್ನು ನಾವು ಮಾನಸಿಕವಾಗಿ, ಬೌದ್ಧಿಕವಾಗಿ, ನೈತಿಕವಾಗಿ ಬೆಳೆಸಿಕೊಂಡಾಗಲೇ ಆಯ್ಕೆಯೊಂದು ಅರ್ಥ ಬರುತ್ತದೆ.

 

ಗಿರೀಶ್ ವಿಠ್ಠಲ ಬಡಿಗೇರ

ಬದಲಾಗಲಿ ನಮ್ಮ ದೇಶ!
ಪ್ರತೀ ವರ್ಷ ಅಗಸ್‌ಟ್ 15 ಬಂತು ಅಂದ್ರೇ ಸಾಕು, ಎಲ್ಲೆಡೆ ದೇಶಭಕ್ತಿಯು ತುಂಬಿ ತುಳುಕುತ್ತದೆ. ಬಾನೆತ್ತರದಲಿ ತ್ರಿವರ್ಣ, ಬೃಹತ್ ಕಟ್ಟಡಗಳ ಮೇಲೆ ತ್ರಿವರ್ಣ, ಬಟ್ಟೆಗಳ ಮೇಲೆ ತ್ರಿವರ್ಣದ ಚಿತ್ತಾರ. ಆದರೆ, ಹೃದಯ ಮಾತ್ರ ಬತ್ತಿದ ಸರೋವರ! ಹೌದು, ವರ್ತಮಾನದಲ್ಲಿ ನಾವು ಬಂದ ಹಾಗೆ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತಿದ್ದೇವೆ. ಅರ್ಪಣಾ ಭಾವ ಕ್ಷೀಣಿಸುತ್ತಿದೆ. ದೇಶದ ಅಭಿವೃದ್ಧಿ ಅಧಃಪತನದ ಕಡೆಗೆ ಸಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದೊದಗಿ 71 ಸಂವತ್ಸರಗಳು ಉರುಳಿದರೂ ಇಲ್ಲಿನ ದಾರಿದ್ರ್ಯತನಕ್ಕೆ ಇತಿಶ್ರೀ ಹಾಡಲಾಗಲಿಲ್ಲ. ಅನಕ್ಷರತೆ, ಬಡತನ, ಅನಾರೋಗ್ಯ, ಆತ್ಮಹತ್ಯೆ, ಅತ್ಯಾಚಾರ, ಭಯೋತ್ಪಾದನೆ, ನಕ್ಸಲಿಸಂ ಹೀಗೆ ಅನೇಕ ಗಂಡಾಂತರಗಳು ಈ ದೇಶವನ್ನು ಕಿತ್ತು ತಿನ್ನುತ್ತಿವೆ. ಯುವ ಸಮುದಾಯ ಕುಡಿತ, ಜೂಜು, ಸೆಕ್‌ಸ್ ಮತ್ತು ಡ್ರಗ್‌ಸ್ ಗಳೆಂಬ ಕೆಟ್ಟ ಚಟಗಳಿಗೆ ದಾಸರಾಗಿ ಬಿಡುತ್ತಿದ್ದಾರೆ. ಡೋಲಾಯಮಾನ ಪರಿಸ್ಥಿತಿಯಲ್ಲಿ ಭಾರತವು ಭಾರತವಾಗಿ ಉಳಿಯುವುದೇ ಎಂಬ ಪ್ರಶ್ನೆ ನನ್ನಲ್ಲಿ ಮನೆಮಾಡಿದೆ.

 

ಕಾವ್ಯಾ ಸಂದೇಶ್

ಈ ದಿನ ನಿಜಕ್ಕೂ ಸಂಭ್ರಮ
1947ರ ಮೊದಲು ಸ್ವಾತಂತ್ರ್ಯವೆಂದರೆ ಪಾಶ್ಚಿಮಾತ್ಯರ ಹಂಗಿನಿಂದ ಹೊರ ಬರುವುದಾಗಿತ್ತು. ಅದಕ್ಕಾಗಿ ಲಕ್ಷಾಂತರ ಭಾರತೀಯರ ಪ್ರಾಣತ್ಯಾಗವೂ ನಡೆದಿ ತ್ತು. ಭಾರತಕ್ಕೆ ಸ್ವಾತಂತ್ರ್ಯವೂ ಸಿಕ್ಕಿತ್ತು. ಇಂದಿನ ಯುವ ಜನತೆ ಸ್ವಾತಂತ್ರ್ಯದ ಅರ್ಥವೇ ತಿಳಿಯದಷ್ಟು ಸ್ವೇಚ್ಛಾಚಾರಿಗಳಾಗಿ ಬಾಳು ಸಾಗಿಸುತ್ತಿದ್ದಾರೆ. ತಂದೆ-ತಾಯಿಯರ, ಗುರು-ಹಿರಿಯರ ಕಾಳಜಿ ಧಿಕ್ಕರಿಸಿ ಮನಸೋ ಇಚ್ಛೆ ಬಂದಂತೆ ವರ್ತಿಸುವುದೇ ವಾದ ಸ್ವಾತಂತ್ರ್ಯ ವೆಂದು ಮೂಢರಾಗಿ ಜೀವಿಸುತ್ತಿದ್ದಾರೆ. ಹಿಂದೆಲ್ಲಾ ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ಒಂದು ರೋಮಾಂಚನ ಜನರಲ್ಲಿರುತ್ತಿತ್ತು. ಆದರೆ ಇಂದಿನವರಲ್ಲಿ ಅಂತಹ ದೇಶಪ್ರೇಮ, ಸ್ವಾತಂತ್ರ್ಯದ ಸಂಭ್ರಮ ಕಾಣಸಿಗುತ್ತಿಲ್ಲ. ವರ್ಷಕ್ಕೊಮ್ಮೆ ಆಚರಿಸುವ ಸ್ವತಂತ್ರ ತಂದ ಸಂತೋಷದ ದಿನವನ್ನು ಬೆಚ್ಚಗೆ ಮನೆಯಲ್ಲಿಯೇ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ಆಚರಿಸುತ್ತಿದ್ದಾರೆ. ಬರಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೇವಲ ಸಂದೇಶ ರವಾನೆಯೊಂದಿಗೆ ಕಾರ್ಯಕ್ರಮ ಮುಗಿಯಿತು ಎಂಬಂತೆ ಕೈ ಕೊಡವಿಕೊಳ್ಳುತ್ತಿದ್ದಾರೆ.

 

ವಿನಾಯಕ ಭಟ್ ಮಾಗೋಡು

ಸ್ವಚ್ಛ ಭಾರತ ಭಾರತ
ಈ ದಿನ ಸ್ವಾತಂತ್ರ್ಯ ಗಳಿಸಿಕೊಂಡ 72ನೇ ವರ್ಷದ ಸಂಭ್ರಮಾಚರಣೆ. ಅಂದರೆ ಈಗಿನ ದಿನಗಳಲ್ಲಿ ಕೆಲವರಿಗೆ ಒಂದು ರಜಾ ದಿನ ಬಂತೆಂದು, ಹಲವ ರಿಗೆ ಫೇಸ್ಬುಕ್ ವಾಟ್ಸಾಪ್‌ಗಳಲ್ಲಿ ಸ್ವಾತಂತ್ರ್ಯ ಹೋರಾಟದ ಸಂದೇಶ ಗಳನ್ನು ಎಲ್ಲರಿಗೂ ಮರುಕಳಿಸಿದರೆ ಆ ವರ್ಷದ ಆಚರಣೆಗಳು ಮುಗಿದ ಹಾಗೆ. ಮೊದಲೆಲ್ಲ ಶಾಲೆಗಳಲ್ಲಿ ಬರಲೇ ಬೇಕಿದ್ದರಿಂದ ಆಚರಣೆಯಲ್ಲಿ ಭಾಗವಹಿಸುತ್ತಿದ್ದರು. ಈಗ ಆ ದಿನ ಕೇವಲ ಆ ವಾರದ ಅಳಿದುಳಿದ ಕೆಲಸ ಮಾಡಲು ಇರುವ ಅವಕಾಶ. ಹೋರಾಟ, ಗಳಿಸಿದ ಸ್ವಾತಂತ್ರ್ಯವನ್ನು ಸಂಭ್ರಮದಿಂದ ಆಚರಿಸಬೇಕು. ದೇಶವನ್ನು ಕಾಡುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರಮಿಸಬೇಕು. ಪ್ರಪಂಚ ದಲ್ಲೇ ಅತ್ಯುತ್ತಮ ಆರ್ಥಿಕ ವೃದ್ಧಿ ಹೊಂದಿರುವ ನಮ್ಮ ಭಾರತವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಿ, ಮುನ್ನಡೆಯಬೇಕಿದೆ. ಪ್ರಕೃತಿಯನ್ನು ಉಳಿಸಿ ಬೆಳೆಸಿ ಹಸಿರು ಭಾರತವನ್ನಾಗಿಸಬೇಕು. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿರ್ಮೂ ಲನೆ ಮಾಡಲು ಪರ್ಯಾಯ ಮಾರ್ಗಗಳನ್ನು ಪಾಲಿಸಬೇಕು.

 

ಗಗನ್ ಕಡೂರ್

ಸ್ವಾತಂತ್ರ್ಯ ಕ್ರಾಂತಿಯ ಪ್ರತೀಕ..!

ಇಂದು ಸ್ವಾತಂತ್ರ್ಯ ದಿನ. ದೇಶದ ಎಲ್ಲೆಡೆ ಆಚರಣೆ ನಡೆಯುತ್ತಿದೆ. ಸ್ವಾತಂತ್ರ್ಯವೆಂದರೆ ಅದು ಬರಿಯ ಪದವಲ್ಲ, ಅಥವಾ ಆಚರಣೆಯ ದಿನವಲ್ಲ. ಸ್ವಾತಂತ್ರ್ಯ ತ್ಯಾಗ ಬಲಿದಾನಗಳ ಹೋಮದ ಪ್ರತೀಕ. ಅಂದು ಮನೆ, ಸಂಸಾರ ಬಿಟ್ಟು ಬೀದಿಗೀಳಿದು, ಬ್ರಿಟಿಷರ ಕಣ್ಣಿಗೆ ಕಾಣದಂತೆ ಕದ್ದು ಮುಚ್ಚಿ, ಹೋರಾಡಿ ನೆತ್ತರು ಹರಿಸಿ ಬಂದದ್ದು ಸ್ವಾತಂತ್ರ್ಯ. ಆದರೆ ಇಂದು ಸ್ವಾತಂತ್ರ್ಯ ಅದು ಒಂದು ದಿನದ ಆಚರಣೆಗೆ ಸೀಮಿತ.

ಸಾವಿರಾರು ಜನರ ನೆತ್ತರಿಗೆ ನಮ್ಮ ಯುವಜನತೆ ಕೊಡುತ್ತಿರುವ ಬೆಲೆ ನೋಡಿದರೆ ನಿಜಕ್ಕೂ ತಲೆ ತಗ್ಗಿಸಬೇಕು. ಸ್ವಾತಂತ್ರ್ಯ
ಹೋರಾಡಿದವರನ್ನ ಸ್ಮರಿಸಿದ ಮಾತ್ರಕ್ಕೆ ಸ್ವಾತಂತ್ರ್ಯ ದಿನವಾಗು ವುದಿಲ್ಲ. ಅಂದು ಪರಾತಂತ್ರದಿಂದ ಸಿಕ್ಕ ಮುಕ್ತಿಗೆ ಇಂದಿಗೂ ಅಂದು ಸಿಕ್ಕಷ್ಟೇ ಬೆಲೆ ಸಿಗಬೇಕು. ಮತ್ತದೇ ಪರಕೀಯರ ವೇಷ ಭೂಷಣಗಳಿಗೆ ಮಾರಿ ಹೋಗಿ, ಸ್ವದೇಶದಲ್ಲಿಯೇ ಪರಕೀಯರಂತೆ ವರ್ತಿಸಿದರೆ ದೇಶದ ಸ್ವಾತಂತ್ರ್ಯದ ಮೌಲ್ಯ ಕಾಲಡಿಯಲ್ಲುಳಿಯುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close