About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಮಕ್ಕಳ ಅಶ್ಲೀಲ ಫೋಟೊ ಮತ್ತು ವಿಡಿಯೊ ಸಂಗ್ರಹ: ಭಾರತೀಯ ಮೂಲದ ವ್ಯಕ್ತಿ ಬಂಧನ

ನ್ಯೂಯಾರ್ಕ್: ಅಪ್ರಾಪ್ತ ಮಕ್ಕಳ ಚಿತ್ರಗಳನ್ನು ಬಳಸಿಕೊಂಡು  ತಂತ್ರಜ್ಞಾನದ ಮೂಲಕ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ಸಂಗ್ರಹಿಸಿ ಮಕ್ಕಳ ನೀಲಿ ಚಿತ್ರಗಳಿಗೆ ಪ್ರಚೋಧನೆ ನೀಡುತ್ತಿದ್ದ ಆರೋಪದಡಿ ಭಾರತದ ಯುವಕನಿಗೆ ಅಮೇರಿಕ ಫೆಡರಲ್‌ ನ್ಯಾಯಾಲಯ 4 ವರ್ಷ ಶಿಕ್ಷೆ ವಿಧಿಸಿದೆ.

28 ವರ್ಷದ ಅಭಿಜಿತ್ ದಾಸ್‌ಗೆ 52 ತಿಂಗಳು ಶಿಕ್ಷೆ ವಿಧಿಸಿ, 10 ವರ್ಷಗಳ ಕಾಲ ಪೋಲಿಸರ ಕಣ್ಗಾವಲಿನಲ್ಲಿ ಇರಿಸಲು ನ್ಯಾಯಾಲಯ ಸೂಚಿಸಿದೆ. ಈತನ ಬಳಿ ಅಕ್ರಮವಾಗಿ ಸುಮಾರು ಮಕ್ಕಳ 1000 ಅಶ್ಲೀಲ ಚಿತ್ರಗಳು ಮತ್ತು 380 ವಿಡಿಯೊಗಳನ್ನು ಸಂಗ್ರಹಣೆ ಮಾಡಿಟ್ಟುಕೊಂಡಿದ್ದ.

ಅಮೆರಿಕದ ಕಾನೂನಿನ ಪ್ರಕಾರ 18 ವರ್ಷದೊಳಗಿನ ಮಕ್ಕಳ ಚಿತ್ರಗಳನ್ನು ನಕಲಿ ಮಾಡಿ ಬೆತ್ತಲೆ ಚಿತ್ರಗಳನ್ನಾಗಿಸಿ ಲೈಂಗಿಕ ತೃಷೆಗಾಗಿ ಬಳಸಿಕೊಳ್ಳುವುದು ಕಾನೂನು ಬಾಹಿರ. ಇಂತಹ ಅಶ್ಲೀಲ ಫೋಟೊ ಮತ್ತು ವಿಡಿಯೊಗಳಿದ್ದರೆ ಅಂಥವರಿಗೆ ಶಿಕ್ಷೆ ವಿಧಿಸಲಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close