About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಏಕದಿನ ಸರಣಿ ಗೆದ್ದು ‘ಹೌ ಈಸ್‌ ದಿ ಜೋಶ್‌..?’ ಎಂದ ಬ್ಲೂ ಬಾಯ್ಸ್ (ವಿಡಿಯೊ)

ವೆಲ್ಲಿಂಗ್ಟನ್: ನ್ಯೂಜಿಲೆಂಡ್​ ವಿರುದ್ಧದ 5ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 35 ರನ್​ಗಳಿಂದ ಭರ್ಜರಿ ಜಯ ಸಾಧಿಸಿದೆ. ತವರು ನೆಲದಲ್ಲೇ ಕೇನ್‌ ವಿಲಿಯಮ್ಸನ್‌ ಪಡೆಯನ್ನ ಬಗ್ಗು ಬಡೆದ ಟೀಮ್‌ ಇಂಡಿಯಾ ನಾಲ್ಕನೇ ಪಂದ್ಯದ ಸೋಲಿನ ತೀರಿಸಿಕೊಂಡಿದೆ. 4-1 ಅಂತರರಿಂದ ಸರಣಿ ಗೆದ್ದು ಬೀಗಿತು.

ಈ ವೇಳೆ ಬಾಲಿವುಡ್ ಚಲನಚಿತ್ರ “ಉರಿ ದಿ ಸರ್ಜಿಕಲ್ ಸ್ಟ್ರೈಕ್”ನ ಪ್ರಸಿದ್ಧ ಸಂಭಾಷಣೆ  “ಹೌ ಈಸ್ ದಿ ಜೋಶ್!” ಎಂಬ ಸಾಲುಗಳನ್ನು ಇದೀಗ ನ್ಯೂಜಿಲ್ಯಾಂಡ್‍ನಲ್ಲಿ ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಸಹ ಅಳವಡಿಸಿಕೊಂಡಿದೆ.

ವಿಜೇತ ತಂಡಕ್ಕೆ ಟ್ರೋಫಿ ಹಸ್ತಾಂತರಿಸಿದ ನಂತರ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೇದಾರ್ ಜಾಧವ್ “ಹೌ ಈಸ್ ದಿ ಜೋಶ್!” ಎಂದು “ಉರಿ” ಚಿತ್ರದಲ್ಲಿ ವಿಕಿ ಕೌಶಲ್ ಹೇಳಿದಂತೆಯೇ ಕೂಗಿ ಹೇಳಿದ್ದಾರೆ.ಇದೇ ವೇಳೆ ಉಳಿದ ಸದಸ್ಯರೂ ಸಹ “ಹೈ ಸರ್” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದೆ.

Tags

Related Articles

Leave a Reply

Your email address will not be published. Required fields are marked *

Language
Close