About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಫೇಲ್‌, ಎಸ್‌-400 ಖರೀದಿ ಸಮರ್ಥಿಸಿದ ವಾಯುಪಡೆ ಮುಖ್ಯಸ್ಥ

ದೆಹಲಿ: ರಫೇಲ್‌ ಯುದ್ಧ ವಿಮಾನಗಳು ಹಾಗು ಎಸ್‌-400 ಟ್ರಯಂಫ್‌ ಕ್ಷಿಪಣಿ ರಕ್ಷಾ ಕವಚಗಳ ಖರೀದಿಯನ್ನು ವಾಯುಪಡೆ ಮುಖ್ಯಸ್ಥ ಬಿ ಎಸ್‌ ಧಾನೋವಾ ಸಮರ್ಥಿಸಿದ್ದಾರೆ.

ಶತ್ರು ದೇಶಗಳು ತಮ್ಮ ಮಿಲಿಟರಿ ಬಲವನ್ನು ಶೀಘ್ರಗತಿಯಲ್ಲಿ ಆಧುನೀಕರಣಗೊಳಿಸುತ್ತಿರುವ ಸಂದರ್ಭ ಭಾರತ ಸುಮ್ಮನೇ ಕೂರಲು ಸಾಧ್ಯವಿಲ್ಲ ಎಂದ ಧಾನೋವಾ, “ಜಗತ್ತಿನ ಮತ್ಯಾವುದೇ ದೇಶಕ್ಕಿಂತಲೂ ಭಾರತದಕ್ಕೆ ತನ್ನ ಶತ್ರುಗಳಿಂದ ಹೆಚ್ಚಿನ ಅಪಾಯವಿದೆ. ಈ ಸಂದರ್ಭದಲ್ಲಿ ವಾಯುಪಡೆಯ ಸಾಮರ್ಥ್ಯ ವೃದ್ಧಿಗಾಗಿ ಭಾರತ ರಫೇಲ್‌ ಯುದ್ಧ ವಿಮಾನ ಹಾಗು ಟ್ರಯಂಫ್‌ ಕ್ಷಿಪಣಿ ರಕ್ಷಾ ಕವಚ ಖರೀದಿ ಮಾಡುತ್ತಿದೆ. ನಮ್ಮ ಶತ್ರುಗಳು ಸುಮ್ಮನೇ ಕುಳಿತಿಲ್ಲ, ಚೀನಾ ತನ್ನ ವಾಯುಪಡೆಯನ್ನು ತ್ವರಿತಗತಿಯಲ್ಲಿ ಆಧುನೀಕರಣಗೊಳಿಸುತ್ತಿದೆ” ಎಂದಿದ್ದಾರೆ.

“ಶತ್ರುಗಳ ಮನಸ್ಥಿತಿ ಆಹೋರಾತ್ರಿ ಬದಲಾಗಬಹುದು, ಅವರ ಸಾಮರ್ಥ್ಯಕ್ಕೆ ಪ್ರತಿಯಾಗಿ ನಮ್ಮ ಹೋರಾಟಬಲವನ್ನು ವೃದ್ಧಿಸಿಕೊಳ್ಳುವ ಅಗತ್ಯವಿದೆ. ನಮ್ಮ ಸಂಖ್ಯಾಬಲ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಈ ಖರೀದಿ ಮಹತ್ವ ಪಡೆದಿದೆ” ಎಂದ ಧಾನೋವಾ, ವಾಯುಪಡೆಯಲ್ಲಿ ಯುದ್ಧವಿಮಾನಗಳ ಕೊರತೆಯನ್ನು ಎತ್ತಿಹಿಡಿದಿದ್ದಾರೆ.

“ಅಗತ್ಯವಿರುವ 42 ಸ್ಕ್ವಾಡರ್ನ್‌‌ಗಳಿಗೆ ಪ್ರತಿಯಾಗಿ ನಮ್ಮಲ್ಲಿ ಕೇವಲ 31 ಸ್ಕ್ವಾಡರ್ನ್‌‌ಗಳು ಮಾತ್ರ ಇವೆ. 42 ಸ್ಕ್ವಾಡರ್ನ್‌‌ಗಳಿದ್ದರೂ ಸಹ ನಮ್ಮ ಪ್ರಾದೇಶಿಕ ಶತ್ರುಗಳ ಒಟ್ಟಾರೆ ಬಲಾಬಲಕ್ಕಿಂತ ನಮ್ಮ ಸಾಮರ್ಥ್ಯ ಕಡಿಮೆಯೇ ಇರಲಿದೆ” ಎಂದು ಧಾನೋವಾ ತಿಳಿಸಿದ್ದಾರೆ.

ಏಕಕಾಲದಲ್ಲಿ ಶತ್ರುಗಳ ಸಂಘಟಿತ ದಾಳಿಯನ್ನು ಎದುರಿಸಬೇಕಾದಲ್ಲಿ ಭಾರತೀಯ ವಾಯುಪಡೆ ಬಳಿ 42 ಸ್ಕ್ವಾಡರ್ನ್‌ಗಳಿರಬೇಕು. ಸದ್ಯ ಮುಂಚೂಣಿ ಯುದ್ಧ ವಿಮಾನ ಸುಖೋಯ್ 30 ಎಂಕೆಐನ 11, ಮಿಗ್‌-29ನ ಮತ್ತು ಮಿರೇಜ್‌ 2000ನ ಮೂರು, ಜಾಗ್ವಾರ್‌ನ ಆರು ಹಾಗು ಮಿಗ್‌-21ನ ಆರು ಸ್ಕ್ವಾಡರ್ನ್‌‌ಗಳು ಭಾರತೀಯ ವಾಯುಪಡೆ ಬಳಿ ಇದೆ.

ಕೊರತೆ ನೀಗಿಸಿಕೊಳ್ಳಲು ಹೆಚ್ಚುವರಿಯಾಗಿ ಸುಖೋಯ್‌ 30ಎಂಕೆಐನ ಮೂರು, ರಫೇಲ್‌ ಮತ್ತು ತೇಜಸ್‌ನ ಎರಡು ಸ್ಕ್ವಾಡರ್ನ್‌ಗಳಿಗೆ ವಾಯುಪಡೆ ಆರ್ಡರ್‌ ನೀಡಿದೆ.

Tags

Related Articles

Leave a Reply

Your email address will not be published. Required fields are marked *

Language
Close