About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಪ್ರತೀಕಾರ ತೀರಿಸಿಕೊಂಡ ಭಾರತೀಯ ಸೇನೆ: ಪಾಕ್ ಸೇನಾ ಆಡಳಿತ ಕಚೇರಿ ಮೇಲೆ ಫೈರಿಂಗ್

ಜಮ್ಮು: ಭಾರತದ ಮೇಲೆ ಪಾಕಿಸ್ತಾನ ಇತ್ತೀಚೆಗೆ ನಡೆಸಿದ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ನಿಯಂತ್ರಣ ರೇಖೆಯ ಆಚೆಗೆ ಇರುವ ಪಾಕಿಸ್ತಾನ ಸೇನೆಯ ಆಡಳಿತ ಕಚೇರಿ ಮೇಲೆ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.

”ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಖುಯಿರಟ್ಟಾ ಮತ್ತು ಸಮನಿಯಲ್ಲಿರುವ ಪಾಕ್ ಸೇನಾ ಕೇಂದ್ರದ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 23ರಂದು ಪೂಂಛ್ ಮತ್ತು ಝಲ್ಲಾಸ್‍ನ ಭಾರತೀಯ ಸೇನಾ ಕೇಂದ್ರದ ಮೇಲೆ ಪಾಕ್ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು ಪ್ರತೀಕಾರ ತೀರಿಸಿಕೊಂಡಿದ್ದಾರೆ.

”2016ರಲ್ಲಿ ಪಾಕ್ ವಿರುದ್ಧ ಭಾರತ ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿತ್ತು. ಇದರಿಂದ ಪಾಕ್ ಸೇನೆಯ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಗಡಿಯಾಚೆಯಿಂದ ದಾಳಿಗಳು ಹೆಚ್ಚಾಗಿವೆ” ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ”ಎಲ್‍ಒಸಿ ಸಮೀಪವಿರುವ ಜನವಸತಿ ಪ್ರದೇಶದಲ್ಲಿ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಿ ದಾಳಿ ಮಾಡಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close