About Us Advertise with us Be a Reporter E-Paper

Breaking NewsUncategorizedದೇಶಪ್ರಚಲಿತ
Trending

ಪಾಕ್‌ನೊಂದಿಗೆ ಮಾತುಕತೆ ರದ್ದಾಗಲು ಐಎಸ್‌ಐ ಕುಯುಕ್ತಿಯೇ ಕಾರಣ

India-Pakistan Handshake

ಜಮ್ಮು ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ವಿಶೇಷ ಪೊಲೀಸ್‌ ಅಧಿಕಾರಿಗಳ ಕೊಲೆ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಬಲವಾದ ಶಂಕೆ ವ್ಯಕ್ತಪಡಿಸಿದೆ.

ಪಾಕಿಸ್ತಾನದ ಐಎಸ್‌ಐನ ಸಂದೇಶಗಳನ್ನು ಕದ್ದಾಲಿಸಿರುವ ಗುಪ್ತಚರ ಸಂಸ್ಥೆಗಳು ಈ ಸಂಬಂಧ ಮಾಹಿತಿಗಳನ್ನು ಕಲೆ ಹಾಕಿವೆ. ಪೊಲೀಸ್‌ ಅಧಿಕಾರಿಗಳನ್ನು ಅಪಹರಿಸಿ, ಅವರನ್ನು ಕೊಲ್ಲಲು ಆದೇಶಗಳನ್ನು ಭಯೋತ್ಪಾದಕರಿಗೆ ಐಎಸ್‌ಐ ಆದೇಶ ನಿಡಿರುವ ಕುರಿತಾಗಿ ಪಕ್ಕಾ ಮಾಹತಿ ಸಿಕ್ಕಿದೆ.

ಈ ಮಾಹಿತಿಗಳನ್ನು ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿದ ಕಾರಣ ಭಾರತ ಹಾಗು ಪಾಕಿಸ್ತಾನಗಳ ನಡುವಿನ ವಿದೇಶಾಂಗ ಸಚಿವರ ಮಟ್ಟದ ಮಾತುಕತೆಗಳು ರದ್ದಾಗಿವೆ. ವಿಶ್ವ ಸಂಸ್ಥೆಯ ವಾರ್ಷಿಕ ಮಹಾಸಭೆ ಸಂದರ್ಭ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೋದ್‌ ಖುರೇಷಿ ದ್ವಿಪಕ್ಷೀಯ ಮಟ್ಟದಲ್ಲಿ ಮಾತುಕತೆ ನಡೆಸಬೇಕಿತ್ತು.

ಯಾವ ಪೊಲೀಸ್‌ ಅಧಿಕಾರಿಗಳನ್ನು ಕೊಲ್ಲಬೇಕೆಂದು ದೂರವಾಣಿ ಕರೆ ಮೂಲಕ ಹೆಸರುಗಳನ್ನೂ ಹೇಳಿರುವ ವಿಚಾರವೂ ತಿಳಿದುಬಂದಿದೆ. ನಿಸಾರ್‌ ಅಹ್ಮದ್‌, ಫಿರ್ದೋಸ್ ಅಹ್ಮದ್ ಹಾಗು ಕುಲ್ವಂತ್‌ ಸಿಂಗ್ ಎಂಬ ಮೂವರು ಕಿರಿಯ ಪೊಲೀಸ್‌ ಅಧಿಕಾರಿಗಳನ್ನು ಕೊಲ್ಲಲಾಗಿದೆ.

ಮಾತುಕತೆ ರದ್ದಾದ ವಿಚಾರವಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹಾಗು ಪಾಕ್‌ ವಿದೇಶಾಂಗ ಸಚಿವ ಖುರೇಷಿ ಭಾರತ ಸರಕಾರದ ವಿರುದ್ಧ ಬೆಳರು ತೋರುವ ನಿರೀಕ್ಷಿತ ಕೆಲಸವನ್ನು ಮಾಡಿ ಕೈತೊಳೆದುಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close