About Us Advertise with us Be a Reporter E-Paper

ಗೆಜೆಟಿಯರ್

ಜೈವಿಕ ಇಂಧನ ಕ್ಷೇತ್ರದಲ್ಲಿ ಭಾರತದ ಮೈಲುಗಲ್ಲು

ಶ್ರೀನಿವಾಸ. ನಾ. ಪಂಚಮುಖಿ  

27, 2018. ಶ್ರೀ ರಾಘ ದ್ರಸ್ವಾಮಿಗಳ ಪೂರ್ವ ಅರಾಧನೆಯ ದಿನದಂದು ಭಾರತ ಜೈವಿಕ ಇಂಧನ  ಕ್ಷೇತ್ರದಲ್ಲಿ ಮಹತ್ವದ  ಗಲ್ಲೊಂದನ್ನು ದಾಟಿತು. ಈ ಸುದಿನ ಭಾರತೀಯ ವಿಮಾನಯಾನ ಮತ್ತು ಇಂಧನದ ಇತಿಹಾಸದ ಪುಟ ಸೇರಿತು. ಡೆಹ್ರಾಡೂನ್‌ನ ಜಾಲಿಗ್ರ್ಯಾಂಟ್  ವಿಮಾನ ನಿಲ್ದಾಣದಿಂದ ದಿಲ್ಲಿಗೆ ಹಾರಿದ ಸ್ಪೈಸ್ ಜೆಟ್‌ನ ಕಿ-400 ಬಂಬಾರ್ಡೀಯರ್ ವಿಮಾನ ಅಂಶಿಕವಾಗಿ ಬಯೋಫುಯೆಲ್ (ಜೈವಿಕ ಇಂಧನ) ಸಂಚಾಲಿತ ಪ್ರಥಮ ಭಾರತೀಯ ವಿಮಾನ ವಾಯಿತು. ಡೆಹ್ರಾಡೂನ್‌ನ ಭಾರತೀಯ ಪೆಟ್ರೋ ಲಿಯಮ್ ಸಂಸ್ಥಾನ (IIP) ತಯಾರಿಸಿದ ಇಂಧನವನ್ನು ಬಳಿಸಿ  ಈ ವಿಮಾನ 45 ನಿಮಿಷಗಳ ಯಾನವನ್ನು  ಯಶಸ್ವಿಯಾಗಿ ಪೂರೈಸಿತು. ಈ ವಿಮಾನದಲ್ಲಿ  ಇಂಧನಕ್ಕೆ ಐಐ ಜೇಟ್ರೋಫಾದ (ಕಾನನೇರಂಡ) ಬೀಜಗಳಿಂದ ವಿಶಿಷ್ಟವಾಗಿ ತಯಾರಿಸಿದ 25% ಜೈವಿಕ ಇಂಧಂನ ವನ್ನು ಬೆರೆಸಿತ್ತು. ಈ ಯಶಸ್ಸಿನ ನಂತರ ನಿಯಮಿತ ವಾಗಿ ವಾಣಿಜ್ಯಿಕ ವಿಮಾನಗಳಲ್ಲೂ ಜೈವಿಕ ಇಂಧನ ಉಪಯೋಗಿಸುವ ಯೋಜನೆ ಇದೆ.

ಜೈವಿಕ ಇಂಧನ ಬಳಸಿ  ಯಶಸ್ವಿ ವಿಮಾನ ಹಾರಾಟ ನಡೆಸಿದ  ಆಸ್ಟ್ರೇಲಿಯಾ, ಅಮೆರಿಕಾ ಮತ್ತು ನೆದರ್ಲೆಂಡ್ ದೇಶಗಳ ಸಾಲಿಗೆ ಭಾರತವು ಸೇರಿ ಸ್ವಚ್ಛ ಇಂಧನದ ಬಳಕೆಯತ್ತ ದಾಪುಗಾಲಿಕ್ಕಿದೆ. ಮಾನವನ ಪರಂಪರೆ ಬೆಳೆದಂತೆ  ತಾಂತ್ರಿಕತೆ ಯಲ್ಲೂ ಹೊಸ   ಮಾಡುತ್ತಾ ವಿಕಾಸದತ್ತ ಹೆಜ್ಜೆಯಿಡತೊಡಗಿದ.  ಈ ವಿಕಾಸ ಯಾತ್ರೆಯ ಬಹುಮುಖ್ಯ ಪಾಲುದಾರ ಇಂಧನ, ಆದರೆ ಭೂಮಿಯ ಮೇಲೆ ಇಂಧನದ ಸೀಮಿತ ಪ್ರಮಾಣ ಮಾನವನಿಗೆ ಅನ್ಯ ವಿಕಲ್ಪಗಳ ಶೋಧಿ ಸುವ ಅನಿವಾರ್ಯತೆ ತಂದೊಡ್ಡಿತು. ಭವಿಷ್ಯದಲ್ಲಿ ಪಾರಂಪರಿಕ ಇಂಧನ ಮೂಲಗಳ/ಆಕರಗಳ ಮೇಲೆ ಅವಲಂಬನೆಯನ್ನು  ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಲಿರುವ  ಜೈವಿಕ ಇಂಧ ದತ್ತ (ಬಯೋಫ್ಯುಯೆಲ್) ಎಲ್ಲರ ಚಿತ್ತ ನೆಟ್ಟಿದೆ. ಬಯೋಫ್ಯೂಯೆಲ್ನ್ನು 21ನೇ ಶತಮಾನದ ಇಂಧನವೆನ್ನಲಾಗುತ್ತಿದೆ.

ಪೆಟ್ರೋಲ್, ಡೀಸೆಲ್  ಮುಂತಾದ ಭೂಗರ್ಭ ದಾಳದಲ್ಲಿ ಅಡಗಿರುವ  ಫಾಸಿಲ್ ಫ್ಯೂಯೆಲ್ ಅಥವಾ   ಜೀವಾಷ್ಣುವಿನಿಂದ (ಜೀವಿ ಗಳ ಅವಶೇಷ/ಪಳೆಯುಳಿಕೆಯಿಂದ) ತಯಾರಿ ಸಿದ ಇಂಧನವೆನ್ನುತ್ತಾರೆ. ಫಾಸಿಲ್ ಫ್ಯೂಯೆಲ್ನ ಉತ್ಪಾದನೆಯಲ್ಲಿ ಬಹಳ ಸಮಯ ತಗಲುವುದು, ಕೆಲವು ಬಾರಿ ಅನೇಕ ವರ್ಷಗಳೇ ಬೇಕಾಗ ಬಹುದು. ಹೀಗೆ ಜೀವಿಗಳ ಅವಶೇಷಗಳು  ಇಂಧನವಾಗಿ ಮಾರ್ಪಾಡುಗುವ  ಲಕ್ಷ ಲಕ್ಷ ವರ್ಷಗಳ ನೈಸರ್ಗಿಕ ಪ್ರಕ್ರಿಯೆಯನ್ನು ವೈಜ್ಞಾನಿಕ ವಾಗಿ ಕೆಲ ಘಂಟೆಗಳ ಅಥವಾ ದಿನಗಳಲ್ಲಿ ಪೂರ್ಣ ಗೊಳಿಸುವ ವಿಧಾನವಾಗಿ ಪರಿವರ್ತಿಸಿದಾಗ ತಯಾರಿಸಲ್ಪಡುವ ಇಂಧನವೇ ಜೈವಿಕ ಇಂಧನ ಅಥವಾ ಬಯೋಫ್ಯೂಯೆಲ್. ಬಯೋ  ಬಯೋಮಾಸ್‌ನಿಂದ ತಯಾರಿಸ ಲ್ಪಟ್ಟ  ಜ್ವಲನಶೀಲ ಇಂಧನ. ಬಯೋಮಾಸ್ (ಜೀವರಾಶಿ) ಜೀವಿತ ಜೀವಿಗಳ ಅಥವಾ ನಿಕಟ ಭೂತಕಾಲದಲ್ಲಿ ಮೃತ್ಯುಹೊಂದಿದ ಜೀವಿಗಳಿಂದ ಪ್ರಾಪ್ತ ಜೈವ ಇಂಧನವಾಗಿರುತ್ತದೆ. ಅರ್ಥಾತ್ ಇತ್ತೀಚಿನ ಗಿಡ ಮೂಲಿಕೆಗಳು ಮತ್ತು ಪದಾರ್ಥ ಗಳಿಂದ ತಯಾರಿಸಿದ ಇಂಧನ. ಬಯೋಮಾಸ್ ಶಕ್ತಿಯ ಬಹೋಪಯೋಗಿ ಮೂಲವಾಗಿದ್ದು, ಇದನ್ನು ಉರಿಸುವದರಿಂದ ನೇರವಾಗಿ ಬಳಸ ಬಹುದು ಅಥವಾ ವಿವಿಧ ಪ್ರಕ್ರಿಯೆಗಳ ಮೂಲಕ ಜೈವಿಕ ಇಂಧನವಾಗಿ ಪರಿವರ್ತಿಸಿ ಉಪಯೋಗಿಸ ಬಹುದು. ಸಾಮಾನ್ಯವಾಗಿ ಕಾರ್ಬನ್, ನೀರು ಮತ್ತು ಕಾರ್ಬೊನಿಕ್  ಅಸ್ಥಿರ ಭೌತಿಕ ಸಂರಚನೆಯನ್ನು ಹೊಂದಿರುವ ಬಯೋಮಾಸ್‌ನ್ನು ಉಷ್ಣೀಯ ವಿಧಾನ, ರಾಸಾಯನಿಕ ವಿಧಾನ ಮತ್ತು ಜೈವ ರಾಸಾಯನಿಕ ವಿಧಾನಗಳ ಮುಖಾಂತರ ಜೈವಿಕ ಇಂಧನವಾಗಿ ಪರಿವರ್ತಿಸಬಹುದು. ಸಾಮಾನ್ಯವಾಗಿ ಬಯೋ ಫ್ಯೂಯೆಲ್ ಶಬ್ದವನ್ನು ದ್ರವರೂಪದ ಇಂಧನ ಗಳಾದ ಇಥೆನಾಲ್ ಮತ್ತು ಬಯೋಡೀಸೆಲ್‌ಗಳ ಸಂದರ್ಭದಲ್ಲಿ ಬಳಸಲಾಗುತ್ತದೆ.  ಆದರೆ ಜೈವಿಕ ಇಂಧನವನ್ನು ಎಲ್ಲ ವಿಧದ ಬೆಳೆಗಳು, ಸಸ್ಯಗಳು/ಗಿಡಗಳು, ಗೊಬ್ಬರ ಮತ್ತು  ಮಾನವನ ಮಲ ಮುಂತಾದ   ಜೈವಿಕ ಪದಾರ್ಥಗಳಿಂದ ಉತ್ಪಾದಿಸ ಬಹುದು. ಜೈವಿಕ ಇಂಧನವನ್ನು ಮುಖ್ಯವಾಗಿ ಇಥೆನಾಲ್,ಬಯೋಡೀಸೆಲ್  ಬಯೋ ಜೆಟ್ ಎಂದು   ಮೂರು ಪ್ರಕಾರವಾಗಿ ವರ್ಗೀಕರಿ ಸಬಹುದು. ಪೆಟ್ರೋಲ್ನಂತೆ ಉರಿಯುವ ಇಥೆನಾಲ್ನ್ನು ವಾಹನಗಳ  ಎಂಜಿನ್‌ಗಳಲ್ಲಿ ಉಪಯೋಗಿಸಲಾಗುತ್ತದೆ, ಬಯೋಡೀಸೆಲ್ ಜೈವಿಕ ಮೂಲಗಳಿಂದ ಪ್ರಾಪ್ತ ಡೀಸೆಲ್ನಂತೆ ಅಪರಂಪರಾಗತ  ಇಂಧನವಾಗಿದ್ದು ಇದನ್ನು ನವೀಕರಣೀಯ ಇಂಧನ ಆಕರಗಳಿಂದ ತಯಾರಿ ಸಲಾಗುತ್ತದೆ. ಬಯೋಡೀಸೆಲ್ನ್ನು ಬೃಹತ್ತ ವಾಹನಗಳಲ್ಲಿ ಬಳಸಿದರೆ ಬಯೋಜೆಟ್‌ನ್ನು ವೈಮಾನಿಕ ಇಂಧನವಾಗಿ ಉಪಯೋಗಿ ಸಲಾಗುತ್ತದೆ.

ಸಾಮಾನ್ಯವಾಗಿ ಜೈವಿಕ ಇಂಧನವನ್ನು ಯಾವುದೇ ಕಾರ್ಬನ್ ಮೂಲದಿಂದ ಉತ್ಪಾದಿಸ ಬಹುದಾದರೂ ಹೆಚ್ಚಾಗಿ ಸಸ್ಯಗಳನ್ನು ಉಪಯೋ ಗಿಸಲಾಗುತ್ತದೆ. ಇಥೆನಾಲ್ ಒಂದು  ಅಲ್ಕೋಹಾಲ್ ಆಗಿದ್ದು ಇದನ್ನು ಪೆಟ್ರೋಲ್ನೊಂದಿಗೆ ಬೆರಿಸಿ ವಾಹನಗಳಲ್ಲಿ ಬಳಸಲಾಗುತ್ತದೆ. ಇಥೆನಾಲ್ನ್ನು ಕಬ್ಬಿನಿಂದ ಸಕ್ಕರೆಯನ್ನು ತಯಾರಿ ಸುವಾಗ ದೊರೆತ ಮೊಲ್ಯಾಸಿಸ್‌ನಿಂದ ಉತ್ಪಾದಿಸ ಲಾಗುತ್ತದೆ. ವನಸ್ಪತಿ ತೈಲ, ಪಶುಗಳ ಕೊಬ್ಬು, ತ್ಯಾಜ್ಯ ಖಾದ್ಯ ತೈಲಗಳನ್ನು ಉಪಯೋಗಿಸಿ ಟ್ರಾನ್‌ಸ್ ಈಸ್ಟರೀಕರಣವೆಂಬ ಪ್ರಕ್ರಿಯೆಯಿಂದ ಗ್ಲೀಸರಿನ್‌ನ್ನು ಬೇರ್ಪಡಿಸಿ ಬಯೋಡೀಸೆಲ್ನ್ನು ಉತ್ಪಾದಿಸಲಾಗುತ್ತದೆ. ಬಯೋ ಡಿಸೆಲ್ ಉತ್ಪಾದಿಸಲು ಜೇಟ್ರೋಫಾದ (ಕಾನನೇರಂಡ) ಸಸ್ಯಗಳು, ಕ್ಯಾಮಲಿನಾ ಹೂವುಗಳನ್ನು, ಸೋಯಾಬಿನ್, ಪಾಮ್ಆಯಿಲ್, ಶೇಂಗಾ ಎಣ್ಣೆ ಇತ್ಯಾದಿಗಳನ್ನು ಬಳಸಲಾಗುತ್ತದೆ. ತ್ಯಾಜವನ್ನು ಉಪಯೋಗಿಸಿ ಪರಿಸರ ಸ್ನೇಹಿ  (compressed natural gas) ಉತ್ಪಾದಿಸುವ ಕಾರ್ಯವೂ ಗತಿ ಪಡೆಯುತ್ತಿದೆ. ಪೆಟ್ರೋಲ್ ಡೀಸೆಲ್‌ನಿಂದಾಗುವ ಮಾಲಿನ್ಯವನ್ನು ಕಡಿಮೆ ಮಾಡಲು  ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಸಿ.ಎನ್.ಜಿ.ಯ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಈ ಸಿ.ಎನ್.ಜಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಬಯೋ ಸಿ.ಎನ್.ಜಿ. ದೇಶದಲ್ಲೇ ಉತ್ಪಾದಿಸಲು ಸಾಧ್ಯವಾದರೆ ಆಮದು ಹೊರೆಯನ್ನು ಇಳಿಸಿ ಸ್ವಾವಲಂಬಿ ಯಾಗಬಹುದು. ಭಾರತ ಕೇವಲ 20% ಪೆಟ್ರೋಲಿಯಮ್ ಇಂಧನವನ್ನು ಮಾತ್ರ ಉತ್ಪಾ ದಿಸುವಲ್ಲಿ ಸಮರ್ಥವಾಗಿದ್ದು ಉಳಿದ ಇಂಧನ ಕ್ಕಾಗಿ ವಿದೇಶಗಳ ಮೇಲೆ ಅವಲಂಬಿತರಾಗಿದೆ.   ಅಭಿವೃದ್ಧಿಯಿಂದ ಈ ಹೊರೆಯನ್ನು ಇಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.

ಬಯೋಫ್ಯೂಯೆಲ್ನ ಬಳಕೆಯ ಪರಿಕಲ್ಪನೆ ಇಂದು ನಿನ್ನೆಯದಲ್ಲ, 20ನೇ ಶತಮಾನದಲ್ಲಿ ಹೆನ್ರಿ ಫೋರ್ಡ್ ತಮ್ಮ ಪ್ರಥಮ ಕಾರನ್ನು ತಯಾರಿಸಿ ದಾಗ, ಅದನ್ನು ಇಥೆನಾಲ್ನಿಂದ ಓಡಿಸುವ ಯೋಜನೆಯಿತ್ತು! ಆದರೆ ಶತಮಾನ ಕಳೆದರೂ ಈ ನಿಟ್ಟಿನಲ್ಲಿ ಗಣನೀಯ ಸಾಧನೆಯಾಗಿಲ್ಲ. ಭೂಗರ್ಭದಲ್ಲಿ ಸರಳವಾಗಿ ದೊರೆಯುವ ಪೆಟ್ರೋಲಿಯಮ್ ಇಂಧನಗಳು ಮಾನವನನ್ನು ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡಲಿಲ್ಲ. ಆದರೆ ವಾತಾವರಣದ ಮೇಲೆ  ಪೆಟ್ರೋಲಿಯ ಯಮ್ ಇಂಧನಗಳಿಂದಾಗುವ ಮಾಲಿನ್ಯದ  ದುಬಾರಿ ಬೆಲೆ ಮತ್ತು ಕೆಲ ದಶಕಗಳಲ್ಲೇ ಫಾಸಿಲ್ ಇಂಧನಗಳ ಖಾಲಿಯಾ ಗುವ ಚಿಂತೆ ಮಾನವನಲ್ಲಿ ಜೈವಿಕ ಇಂಧನ ಕುರಿತು ಮತ್ತೆ ಉತ್ಸುಕತೆ ಮೂಡಿಸಿದೆ. ಬ್ರೆಜಿಲ್ನಲ್ಲಿ ಪೆಟ್ರೋಲ್ ಮತ್ತು ಇಥೆನಾಲ್ನ್ನು 20:80 ಅನುಪಾತದಲ್ಲಿ  ಬಳಸಲಾಗುತ್ತದೆ! ವಿಶ್ವದ ಕೆಲ ದೇಶಗಳು ಸೂಕ್ಷ್ಮ ಶೈವಲಗಳನ್ನು (ಮೈಕ್ರೋ ಅಲ್ಗಿ) ಬೆಳಸಿ ಅವುಗಳಿಂದ  ಜೈವಿಕ ಇಂಧನವಾದ ಇಥೆನಾಲ್ ತಯಾರಿಸುವವಲ್ಲಿ ಕಾರ್ಯಪ್ರವೃತ್ತ ವಾಗಿವೆ. ಇದೆ ರೀತಿ ಮೀನಿನ ಕಾರ್ಖಾನೆಗಳ ತ್ಯಾಜ್ಯದಿಂದ ಜೈವಿಕ ಇಂಧನ ಉತ್ಪಾದಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು  ಮಾಡುತ್ತಿ ದ್ದಾರೆ. ಈ ತಂತ್ರಜ್ಞಾನಕ್ಕೆ ತಗುಲುವ ವೆಚ್ಚವನ್ನು ಕಡಿಮಾದುವ ನಿಟ್ಟಿನಲ್ಲೂ ಕೆಲಸ ನಡೆಯುತ್ತಿದೆ. ಇದೇ ರೀತಿ ಸೂರ್ಯಕಾಂತಿಯ ಬೆಳೆಯಿಂದ ಖಾದ್ಯ ತೈಲದ ಜತೆಗೆ, ವಿಘರ್ಷಕ (ಲುಬ್ರಿಕಂಟ್) ಮತ್ತು ಬಯೋ ಡೀಸೆಲ್ ತಯಾರಿಸಲಾಗುತ್ತಿದೆ. ಇದಕ್ಕೆಂದೆ ಬರಿ ಜರ್ಮನಿ ಯಲ್ಲೆ 4.5ಲಕ್ಷ ಹೆಕ್ಟೇರ್‌ನಲ್ಲಿ ಸೂರ್ಯ ಕಾಂತಿಯನ್ನು ಬೆಳೆಯಲಾಗುತ್ತಿದೆ!   ಭವಿಷ್ಯದಲ್ಲಿ ಬಯೋಮಾಸ್,ಬಯೋಫ್ಯೂಯೆಲ್ ಮತ್ತು ಬಯೋಎನರ್ಜಿ ಇಂಧನದ ಆಕ ಗಳಾಗಿ ಬಳಕೆಯಾಗುವಾದಕ್ಕೆ ಚಾಲನೆ ದೊರೆತು ವಿದೇಶಗಳ ಮೇಲಿನ ನಮ್ಮ ಅವಲಂಬನೆ ಕಡಿಮೆ ಮಾಡಲು ಸರಕಾರ   ಜೈವಿಕ ಇಂಧನ ನೀತಿಯನ್ನು ಘೋಷಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close