About Us Advertise with us Be a Reporter E-Paper

ವಿವಾಹ್

ಲಿವ್ ಇನ್‌ಗೆ ಭಾರತದ ಬೇರು..!

ಮಧುರ

ಲಿವ್ ಇನ್ ರಿಲೇಷನ್‌ಶಿಪ್ ಪರಿಕಲ್ಪನೆ ಸಾಕಷ್ಟು ಆಧುನಿಕ. ಮನಸುಗಳು ಪರಸ್ಪರ ಅರಿತುಕೊಂಡು, ಹೊಂದಿಕೊಂಡು ಜೀವಿಸುವ ಪದ್ದತಿಗೆ ಅದೇನೋ ಒಂದು ರೀತಿಯ ರೊಮ್ಯಾಂಟಿಕ್ ಕಿರೀಟಿ ಇದೆ. ಆಧುನಿಕ ಯುಗಮಾನದಲ್ಲಿ ಕಂಡುಬರುತ್ತಿರುವ ಇಂತಹ ಲಿವ್‌ಇನ್ ರಿಲೇಷನ್‌ಶಿಪ್‌ನ್ನು ಹೋಲುವ ಬಾಂಧವ್ಯವು ನೂರಾರು ವರ್ಷಗಳ ಹಿಂದೆಯೇ ಭಾರತದ ಕೆಲವು ಜನಾಂಗಗಳಲ್ಲಿ ರೂಢಿಯಲ್ಲಿತ್ತು ಎಂದರೆ ಅಚ್ಚರಿ ಎನಿಸೀತು. ಛತ್ತೀಸ್‌ಗಡ್ ಪ್ರದೇಶದ ಬಸ್ತಾರ್ ಜಿಲ್ಲೆಯ ಹಲವು ಜನಾಂಗಗಳಲ್ಲಿ ಲಿವ್ ಇನ್ ರಿಲೇಷನ್‌ಶಿಪ್ ಬಹು ಸಾಮಾನ್ಯ ಮತ್ತು ಪದ್ದತಿಯು ಪುರಾತನ ರೂಢಿಯಲ್ಲಿದೆ ಎನ್ನುತ್ತಾರೆ ಅಲ್ಲಿನ ಹಳ್ಳಿಯ ಜನ.

ಆದರೆ ವ್ಯತ್ಯಾಸವೆಂದರೆ, ಅಲ್ಲಿ ಚಾಲ್ತಿಯಲ್ಲಿರುವ ಪದ್ದತಿಯು ನೈಸರ್ಗಿಕವಾಗಿ ಸಹಜವೆನಿಸುವ ಹುಡುಗಹುಡುಗಿ ಸ್ನೇಹದ ತಳಹದಿಯ್ನು ಹೊಂದಿದೆ. ಅಲ್ಲಿನ ಲಿವ್‌ಇನ್ ಬಾಂಧವ್ಯವು ಸ್ಥಳೀಯ ಸಮಾಜದ ದೃಷ್ಟಿಯಲ್ಲಿ ತಪ್ಪು ಎನಿಸುವುದಿಲ್ಲ. ರೀತಿ ಒಟ್ಟಿಗೇ ವಾಸಿಸುವ ಯುವಕಯುವತಿಯರನ್ನು ಸಮಾಜವು ಬಹಿಷ್ಕರಿಸುವುದಿಲ್ಲ. ಇನ್ನೂ ವಿಶೇಷ ಎಂದರೆ, ಹುಡುಗ ಮತ್ತು ಹುಡುಗಿ ಪರಸ್ಪರ ಒಪ್ಪಿದ ನಂತರ, ಕೆಲಕಾಲ ಒಟ್ಟಿಗೇ ಜೀವಿಸಿ ಮಕ್ಕಳಾದ ನಂತರ, ಅವರ ಆರ್ಥಿಕ ಸ್ಥಿತಿಯನ್ನು ನಂತರು ಮದುವೆಯಾಗುತ್ತಾರೆ. ಅಂದರೆ, ಮಕ್ಕಳಾದವರು ಸಹ ಮದುವೆಯಾಗುವುದು ಅಲ್ಲಿನ ಸಮಾಜದಲ್ಲಿ ಸ್ವೀಕೃತ ಪದ್ದತಿ! ಸ್ಥಳೀಯ ಸಂತೆಯ ದಿನ ಹುಡುಗ ಮತ್ತು ಹುಡುಗಿಯರು ಪರಸ್ಪರ ಭೇಟಿಯಾಗಿ, ಒಪ್ಪಿಕೊಳ್ಳುವ ದಿನ. ಹುಡುಗಿಯ ಜೊತೆಯಲ್ಲಿ ಅವರ ಹೆತ್ತರವರೂ ಬಂದಿದ್ದು, ಹುಡುಗನೊಬ್ಬನು ಹುಡುಗಿಯನ್ನು ಅಧಿಕೃತವಾಗಿ ಒಪ್ಪಿಕೊಂಡರೆ, ಹುಡುಗಿಯ ತಂದೆಗೆ ಹುಡುಗನು ಕನ್ಯಾಶುಲ್ಕವನ್ನು ಕೊಡಬೇಕು! ‘ಮಹಾಲಎಂದು ಕರೆಯುವ ಕನ್ಯಾಶುಲ್ಕ ತುಂಬಾ ದುಬಾರಿ ಇರುವುದಿಲ್ಲ. ರು. 500ರಿಂದ ಆರಂಭಿಸಿ ರು.5,000 ತನಕದ ಮೊತ್ತವನ್ನು ಹುಡುಗನು ತಂದೆ ಕೊಟ್ಟು, ಹುಡುಗಿಯನ್ನು ಕರೆದುಕೊಂಡು ಹೋಗಬಹುದು. ಅವರಿಬ್ಬರೂ ಒಟ್ಟಿಗೇ ವಾಸಿಸಿ, ಪರಸ್ಪರ ಅರಿತುಕೊಂಡ ನಂತರ ಮದುವೆ. ಮದುವೆಯು ಹದಿನೈದು ದಿನಗಳ ನಂತರವೂ ಆಗಬಹುದು, ಮೂರು ವರ್ಷದ ನಂತರವೂ ಆಗಬಹುದು. ಬಸ್ತಾರ್ ಪ್ರದೇಶದ ಉದ್ದಗಲಕ್ಕೂ ರೀತಿಯ ಲಿವ್‌ಇನ್ ಬಾಂಧವ್ಯಕ್ಕೆ ಸಮಾಜದ ಅಧಿಕೃತ ಒಪ್ಪಿಗೆ ಇರುವುದು ವಿಶೇಷ.

ಇದಕ್ಕಿಂತ ತುಸು ಬೇರೆಯಾಗಿ ಕಾಣುವ ಬಾಂಧವ್ಯ ಬೆಸುಗೆಯೂ ಬಸ್ತಾರ್ ಪ್ರದೇಶದಲ್ಲಿದೆ. ಹಳ್ಳಿಯ ಜಾತ್ರೆ ಅಥವಾ ಸಂತೆಯ ಸಂದರ್ಭದಲ್ಲಿ, ನೆರೆದಿರುವ ಜನರ ಎದುರಿನಲ್ಲೇ, ತನಗೆ ಒಪ್ಪುವ ಹುಡುಗಿ ಕೈಯನ್ನು ಹಿಡಿಯುತ್ತಾನೆ. ಆಗ ಹುಡುಗಿಯು ನಾಚಿ, ಒಪ್ಪಿಕೊಂಡರೆ, ಹುಡುಗನ ಅವಳನ್ನು ಕರೆದುಕೊಂಡು ತನ್ನ ಮನೆಗೆ ಹೋಗಬಹುದು. ಇದನ್ನು ಉಧಲ್ಕಾಮದುವೆ ಎನ್ನುತ್ತಾರೆ! ಮುಂದಿನ ಒಂದೆರಡು ದಿನಗಳಲ್ಲಿ, ಹುಡುಗ ಮತ್ತು ಅವನ ಕಡೆಯವರು ಹುಡುಗಿಯ ಮನೆಗೆ ಹೋಗಿ, ಸವಿನಯದಿಂದಲೇ ಕನ್ಯಾ ಶುಲ್ಕವನ್ನು ಕೊಡುತ್ತಾರೆ. ಕನ್ಯಾಶುಲ್ಕವು ಹಣ, ಕುರಿ, ಹಸು, ಎತ್ತುಗಳ ರೂಪದಲ್ಲಿ ಇರಬಹುದು! ಸಾಕು ಹಂದಿ ಮತ್ತು ಮದ್ಯದ ಬಾಟಲಿಗಳು ಸಹ ಕನ್ಯಾಶುಲ್ಕವಾಗಬಹುದು. ಭಾತ್ರ, ದೊರಲು ಮಹರ‌್ಲ ಬುಡಕಟ್ಟಿನ ಜನರಲ್ಲಿ ರೀತಿಯ ಉಧಲ್ಕಾಮದುವೆಯ ಪದ್ದತಿ ಹೆಚ್ಚು ಜನಪ್ರಿಯ. ಸಂತೆಯ ಸಂದರ್ಭದಲ್ಲಿ ಹುಡುಗನು ತನಗಿಷ್ಟವಾದ ಹುಡುಗಿಯ ಕೈ ಹಿಡಿದು, ನಂತರ ಮದುವೆಯಾಗುವ ಪದ್ದತಿ ಸಾಕಷ್ಟು ಜನಪ್ರಿಯ. ಆದರೆ, ಹುಡುಗ ಮತ್ತು ಹುಡುಗಿಯರು ಬೇರೆ ಬೇರೆ ಕುಲದವರಾಗಿದ್ದರೆ, ಕೆಲವು ಬಾರಿ ದೂರು ಮತ್ತು ಗಲಾಟೆ ಆಗುವ ಸಂದರ್ಭ ಉಂಟು. ಆದರೆ ಅಂತಹ ಘಟನೆಗಳು ತುಸು ಕಡಿಮೆ ಎಂದೇ ಹೇಳಬೇಕು.

ಅದೇನಿದ್ದರೂ, ಇಂದಿಗೂ ಬಸ್ತಾರ್ ಪ್ರದೇಶದ ಜನಾಂಗದಲ್ಲಿ ಲಿವ್‌ಇನ್ ಬಾಂಧವ್ಯದ ಮೂಲಕ ಹುಡುಗ ಹುಡುಗಿ ಒಟ್ಟಿಗೇ ವಾಸಿಸುವ ಪದ್ದತಿ ಇರುವುದು ಮತ್ತು ಬಾಂಧವ್ಯಗಳೇ ಮುಂದೆ ಅವರಿಬ್ಬರ ಮದುವೆಗೆ ದಾರಿ ಮಾಡಿಕೊಡುವುದು ನಿಜಕ್ಕೂ ವಿಶೇಷ.

Tags

Related Articles

Leave a Reply

Your email address will not be published. Required fields are marked *

Language
Close