About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ಇಂಡೋ-ಆಸೀಸ್ 3ನೇ ಟೆಸ್ಟ್: 443/7ಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್

ಮೆಲ್ಬೋರ್ನ್​: ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 443 ರನ್ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದೆ.

ಭಾರತ ಪರ ಚೇತೇಶ್ವರ ಪೂಜಾರ ಅಮೋಘ ಶತಕ (106) ಮತ್ತು ನಾಯಕ ವಿರಾಟ್ ಕೊಹ್ಲಿ (82) ಹಾಗೂ ರೋಹಿತ್ ಶರ್ಮಾ (63) ಆಕರ್ಷಕ ಅರ್ಧಶತಕದ ನೆರವಿನಿಂದ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿತು. ಈ ಮೂಲಕ ಟೀಮ್​ ಇಂಡಿಯಾ 7 ವಿಕೆಟ್​ಗಳಿಗೆ 443 ರನ್​ ಗಳಿಸಿ ಡಿಕ್ಲೇರ್​ ಘೋಷಿಸಿತು.

2 ವಿಕೆಟ್​ ನಷ್ಟಕ್ಕೆ 215 ರನ್​ ಕಲೆಹಾಕಿ ಮೊದಲ ದಿನದಾಟ ಮುಗಿಸಿದ್ದ ಭಾರತ ಇಂದು ಉತ್ತಮ ಆಟವನ್ನೇ ಪ್ರದರ್ಶಿಸಿತು. ಆರಂಭಿಕ ದಾಂಡಿಗರು ಮಾತ್ರ  ಎರಡಂಕಿ ದಾಟುವಲ್ಲಿ ತಲುಪುವಲ್ಲಿ ವಿಫಲರಾದರು. ಮೂರನೇ ವಿಕೆಟಿಗೆ ಕೊಹ್ಲಿ-ಪೂಜಾರ 170 ರನ್​ ಜೊತೆಯಾಟ ನೀಡಿದ್ರೆ, ನಂತರ 5ನೇ ವಿಕೆಟಿಗೆ ಜೊತೆಯಾದ ಅಜಿಂಕ್ಯ ರಹಾನೆ ಮತ್ತು ರೋಹಿತ್​ ಶರ್ಮ ಜೋಡಿ 62 ರನ್​ಗಳ ಜೊತೆಯಾಟ ನೀಡಿದ್ರು. 6ನೇ ವಿಕೆಟಿಗೆ ರಿಷಬ್​ ಪಂತ್​ ಜೊತೆ ಸೇರಿ ರೋಹಿತ್ 76 ರನ್​ ಜೊತೆಯಾಟವಾಡಿದ್ರು.

ಅಂತಿಮವಾಗಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಡೇಜಾ ಒಂದು ಬೌಂಡರಿ ಬಾರಿಸಿ ವಿಕೆಟ್​ ಒಪ್ಪಿಸಿದ ನಂತರ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಇನ್ನಿಂಗ್ಸ್​ ಡಿಕ್ಲೇರ್​ ಘೋಷಿಸಿದ್ರು.

ಆಸಿಸ್ ಪರ ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ 2 ಮತ್ತು ಹೇಜಲ್ ವುಡ್, ಲೈಯಾನ್ ತಲಾ 1 ವಿಕೆಟ್ ಪಡೆದರು.

Tags

Related Articles

Leave a Reply

Your email address will not be published. Required fields are marked *

Language
Close