About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಕ್ರಾಕಟೋ ಜ್ವಾಲಾಮುಖಿಯಿಂದ ಧೂಳಿನ ಪ್ರಮಾಣ ಹೆಚ್ಚಳ: ಮಾರ್ಗ ಬದಲಾಯಿಸಿದ ಎಲ್ಲಾ ವಿಮಾನಗಳು

ಜಕಾರ್ತ: ಇಂಡೋನೇಷ್ಯಾದಲ್ಲಿ ಅನಾಕಾ ಕ್ರಾಕಟೋ ಜ್ವಾಲಾಮುಖಿ ಸ್ಫೋಟ ಮುಂದುವರಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ವಿಮಾನಗಳ ಹಾರಾಟ ಮಾರ್ಗವನ್ನು ಬದಲಾಯಿಸಲಾಗಿದೆ. ಜ್ವಾಲಾಮುಖಿಯು ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಯಿದ್ದು ಹೈ ಅಲರ್ಟ್​ ಘೋಷಿಸಲಾಗಿದೆ.

‘ಕ್ರಾಕಟೋ ಜ್ವಾಲಾಮುಖಿಯಿಂದ ಧೂಳಿನ ಪ್ರಮಾಣ ಹೆಚ್ಚಾಗಿದ್ದು ಎಲ್ಲ ವಿಮಾನಗಳ ಮಾರ್ಗ ಬದಲಿಸಲಾಗಿದೆ ಹಾಗೂ ಹೈ ಅಲರ್ಟ್​ ಘೋಷಿಸಲಾಗಿದೆ’ ಎಂದು ಇಂಡೋನೇಷ್ಯಾದ ವಾಯು ಸಂಚಾರ ನಿಯಂತ್ರಣ ಸಂಸ್ಥೆ ಏರ್​ನೇವ್​ ತಿಳಿಸಿರುವುದು ವರದಿಯಾಗಿದೆ.

ಜತೆಗೆ ಗುರುವಾರ ವಾಲ್ಕನೊಲಾಜಿಕಲ್​ ಸರ್ವೆ ಆಫ್​ ಇಂಡೋನೇಷ್ಯಾ (ಇಂಡೋನೇಷ್ಯಾದ ಜ್ವಾಲಾಮುಖಿ ಸಮೀಕ್ಷೆ) ಅಪಾಯದ ವಲಯವನ್ನು 2 ಕಿ.ಮೀ.ನಿಂದ 5 ಕಿ.ಮೀಗೆ ಹೆಚ್ಚಿಸಿದೆ. ಡಿ.22ರಂದು ಘಟಿಸಿದ ಜ್ವಾಲಾಮುಖಿ ಸ್ಫೋಟದಿಂದ ಸಮುದ್ರದ ಆಳದಲ್ಲಿ ಭೂಕುಸಿತ ಸಂಭವಿಸಿ ಕರಾವಳಿ ಪ್ರದೇಶದಲ್ಲಿ ಸುನಾಮಿ ಅಪ್ಪಳಿಸಿತ್ತು. ಬೃಹತ್​ ಅಲೆಗಳಿಗೆ ಇಲ್ಲಿಯವರೆಗೂ ಸುಮಾರು 429 ಜನರು ಬಲಿಯಾಗಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close