About Us Advertise with us Be a Reporter E-Paper

ಅಂಕಣಗಳು

ಪ್ರೇಮಭಂಗ ತರುವ ಅಪರಿಮಿತ ಭಾವನಾತ್ಮಕ ಶಕ್ತಿ

ಓಂಕಾರ್ ಕಿಷನ್ ಖುಲ್ಲರ್

ಇಂದಿನ ಈ ಭಾಷಣ ನನ್ನ ಬಗ್ಗೆ ಅಲ್ಲ, ನಿಮ್ಮೆಲ್ಲರನ್ನು ಕುರಿತಾಗಿದೆ. ನಿಮ್ಮಲ್ಲಿ ಎಷ್ಟು ಜನ ಏಕಾಕಿ (ಸಿಂಗಲ್) ಆಗಿದ್ದೀರಿ, ದಯವಿಟ್ಟು ಕೈ ಎತ್ತಿ…ಒಳ್ಳೆಯದು, ಒಂದಷ್ಟು ಮಂದಿ ಸಭಾಂಗಣದಲ್ಲಿ ಇದ್ದಾರೆ. ಈಗ, ಸಂಗಾತಿಯನ್ನು ಹೊಂದಿರುವವರು ಯಾರಿದ್ದೀರಿ? ಫೈನ್, ಒಂದಷ್ಟು  ಜನ ‘ಜೋಡಿ’ಗಳು ಇನ್ನೂ ಇದ್ದಾರೆ. ಯಾರೆಲ್ಲಾ ಪ್ರೇಮಿಸಿದ್ದೀರಿ? ಗ್ರೇಟ್, ಎಲ್ಲರೂ ಪ್ರೀತಿ ಮಾಡಿದ್ದೀರಿ…ಆದರೆ  ಅನುಭವಿಸಿದವರು ಎಷ್ಟು ಜನ? ಹ್ಞಾಂ, ಆರಂಭಿಸುವ ಮುನ್ನ ಒಂದು ಎಚ್ಚರಿಕೆ. ನನ್ನ ಮಾತು ಮುಗಿಯುವ ವೇಳೆ ಈ ಕೋಣೆಯಲ್ಲಿ ಒಂದು ಹೃದಯ ಒಡೆದಿರುತ್ತದೆ…ಹೊಸ ಬಂಧವೊಂದು ಹುಟ್ಟಿಕೊಳ್ಳುತ್ತದೆಯೇ ಎಂಬುದನ್ನು ಖಚಿತ ಪಡಿಸಲಾರೆನಾದರೂ ಒಂದು ಪ್ರೀತಿ ಭಗ್ನಗೊಳ್ಳುವುದು ಖಂಡಿತ!

ಬಾಲಿವುಡ್ ಸಿನಿಮಾಗಳು ಸಾಮಾನ್ಯ ಪ್ರೇಮದಲ್ಲಿಯೇ ಕೊನೆಗೊಳ್ಳುತ್ತವಾದ್ದರಿಂದ ಅದೇ ಅಂತಿಮ ಎಂಬ ಭಾವನೆ ನಮ್ಮಲ್ಲಿ ಬೇರೂರಿದೆ. ನಾಯಕ, ನಾಯಕಿ ಭೇಟಿಯಾಗುತ್ತಾರೆ ಹಾಗೂ ಪ್ರೀತಿಯಲ್ಲಿ ಸಿಲುಕುತ್ತಾರೆ ಎಂಬಲ್ಲಿಗೆ ಕತೆ ಮುಗಿಯುತ್ತದೆ. ಆದರೆ ಆಮೇಲೇನಾಯಿತು ಎಂದು  ಹೇಳಿದ್ದಾರೆಯೇ? ಹೇಳುತ್ತಾರೆಯೇ? ಆ ಪ್ರೀತಿ ಮುಗಿದುಹೋದರೆ ಏನಾಗುತ್ತದೆ?

ಸಾವಿರಾರು ವರ್ಷಗಳ ಹಿಂದೆ ಮನುಷ್ಯ ದೇವರಷ್ಟೇ ಸರ್ವಶಕ್ತನಾಗಿದ್ದ. ಆದರೆ ಇದ್ದಕ್ಕಿದ್ದಂತೆ ತನ್ನ ಶಕ್ತಿಯ ದುರುಪಯೋಗಕ್ಕೆ ತೊಡಗಿದ. ದೇವರಿಗೆ ಇದು ಸರಿ ಕಾಣಲಿಲ್ಲ. ಒಂದಷ್ಟು ಶಕ್ತಿಯನ್ನು ಮನುಷ್ಯರಿಂದ ಪಡೆದು ಬೇರೆಲ್ಲಾದರೂ ಅಡಗಿಸಿಡಬೇಕೆಂದು ಯೋಚಿಸಿದ. ಎಲ್ಲಿ ಇಡಬಹುದು ಎಂದು ತನ್ನ ಅನುಚರರ ಸಲಹೆ ಕೇಳಿದ. ಭೂಗರ್ಭದಲ್ಲಿ ಹುದುಗಿಸು, ಸಾಗರದ ಆಳದಲ್ಲಿ ಅವಿತಿಡು,  ಪರ್ವತ ಶಿಖರದಲ್ಲಿ ಬಚ್ಚಿಡು ಎಂದು ಅವರು ನೀಡಿದ ಸಲಹೆಗಳನ್ನೆಲ್ಲಾ ದೇವರು  ಈ ಸ್ಥಳಗಳನ್ನು ಮನುಷ್ಯ ಹೇಗಾದರೂ ಮಾಡಿ ತಲುಪುತ್ತಾನೆ ಎಂಬುದು ಅವನ ಸಂದೇಹ. ಕಡೆಗೆ ಮನುಷ್ಯನ ಹೃದಯವೇ ತಕ್ಕ ಜಾಗ ಎಂದು ನಿರ್ಧರಿಸಿದ. ದೇವರು ಅಡಗಿಸಿಟ್ಟ ಈ ಶಕ್ತಿಯನ್ನು ಪಡೆದುಕೊಳ್ಳಲು ಎರಡು ಕೀಲಿಕೈಗಳಿವೆ; ಒಂದು ಪ್ರೀತಿ, ಇನ್ನೊಂದು ಭಗ್ನಪ್ರೀತಿ.

ಮೊದಲು ಎಲ್ಲರಿಗೂ ಮೆಚ್ಚುಗೆಯಾಗುವ ಪ್ರೀತಿಯ ಕುರಿತು ಮಾತನಾಡೋಣ. ಈಗ ಎಲ್ಲರೂ 20 ಸೆಕೆಂಡ್  ನಿಮ್ಮ ಬಲ ಅಥವಾ ಎಡ ಬದಿಗೆ ಕುಳಿತಿರುವವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಮುಗುಳ್ನಕ್ಕು ಒಂದು ಹಸ್ತ  ಕೊಡುವಿರಾ? (ಬದಿಗೆ ಯಾರೂ ಕುಳಿತಿಲ್ಲವಾದರೆ ನಿಮಗೆ ನನ್ನ ವಿಷಾದ) ಏನೋ ಒಂದು ಶಕ್ತಿ ಸಂಚಯ ಉಂಟಾಯಿತಲ್ಲವೇ? ಚಾಕೊಲೆಟ್ ತಿಂದಾಗ, ಕಸರತ್ತು ಮಾಡಿ ಬೆವರಿಳಿಸಿದಾಗಲೂ ಇಂತಹುದೇ ಸಂಚಲನ ಉಂಟಾಗುತ್ತದೆ. ‘ಡೋಪಮೈನ್’ ರಾಸಾಯನಿಕ ರಕ್ತ ಪ್ರವಾಹದಲ್ಲಿ ಧುಮ್ಮಿಕ್ಕಿ ಜಗತ್ತನ್ನೇ ಜಯಿಸುವೆ ಎಂಬ ಹುಮ್ಮಸ್ಸು ಇದ್ದಕ್ಕಿದ್ದಂತೆ ಮೂಡುತ್ತದೆ. ಇಂತಹುದೇ ರಾಸಾಯನಿಕ ಕ್ರಿಯೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರೀತಿಯಲ್ಲಿ ಬಿದ್ದಾಗ ಜರುಗಿ, ಅಸಾಧ್ಯ ಶಕ್ತಿ ಉತ್ಪಾದನೆಯಾಗುತ್ತದೆ. ಇದು ಪ್ರೀತಿ ಸಂಬಂಧದಲ್ಲಿರುವಾತ/ಆಕೆಗೆ ಮಾತ್ರ ಸೀಮಿತವಾಗದೆ, ವೈರಸ್‌ನಂತೆ  ಇತರರಿಗೂ ಹರಡುವುದು ಇನ್ನೂ ಅದ್ಭುತ. ಇದು ಸಾಧ್ಯವೇ ಎಂದು ಶಂಕಿಸುತ್ತಿರುವವರಿಗೆ ಈ ಕುರಿತು ನಡೆದಿರುವ ಸಂಶೋಧನೆಗಳು ‘ಶಕ್ತಿ ಪ್ರಸಾರ’ವನ್ನು ಸಾಬೀತುಪಡಿಸಿವೆ ಎಂದು ಹೇಳಬಯಸುತ್ತೇನೆ.

ಹೃದಯದಲ್ಲಿ ಶೇಖರವಾದ ಪ್ರೀತಿಯ ಶಕ್ತಿಯನ್ನು ಸಾಹಿತಿ, ಕಲಾವಿದರು ತಮ್ಮ ಕೃತಿಗಳಲ್ಲಿ ಹರಿಯಬಿಡುತ್ತಾರೆ. ತನ್ನ ಹೊಸ ಉದ್ದಿಮೆ ಕುರಿತು ಪ್ಯಾಶನೇಟ್ ಆಗಿರುವ ವ್ಯಕ್ತಿ, ಶಕ್ತಿಯನ್ನು ಆ ಕಡೆ ತಿರುಗಿಸುತ್ತಾನೆ. ಒಂದು ಶ್ರೇಷ್ಠ ಪುಸ್ತಕ, ಒಂದು ಮನೋಹರ ಪೇಂಟಿಂಗ್, ಒಂದು ಯಶಸ್ವಿ ಕಂಪನಿ, ಅಷ್ಟೇಕೆ ಪ್ರೀತಿಯ ಶಕ್ತಿ  ಎರೆದು ತಯಾರಿಸಿದ ಸ್ವಾದಿಷ್ಟ ಖಾದ್ಯ…ಹೀಗೆ ಮನುಷ್ಯ ಭಾವನಾಶಕ್ತಿ ಅನೇಕ ಸೃಷ್ಟಿಗೆ ಕಾರಣವಾಗುತ್ತದೆ. ಆದರೆ ಪ್ರೀತಿಯಲ್ಲಿ ಒಂದು ದೋಷವಿದೆ. ಅದೆಂದರೆ, ನಿಮ್ಮೆಲ್ಲ ಶಕ್ತಿಯನ್ನೂ ಒಂದು ವ್ಯಕ್ತಿಯ ಮೇಲೆ ಮತ್ರ ಕೇಂದ್ರೀಕರಿಸುತ್ತೀರಿ. ಅವರಿಗಾಗಿ ಚಂದ್ರನನ್ನು ಭೂಮಿಗೆ ಕರೆ ತರುವಂತಹ ಅಸಾಧ್ಯ ಪ್ರಯತ್ನಗಳಿಗೂ ಮುಂದಾಗುತ್ತೀರಿ. ನಿಮ್ಮನ್ನು ನೀವು ಪರಿವರ್ತಿಸಿಕೊಳ್ಳುತ್ತೀರಿ…ಆದರೆ ಈ ಎಲ್ಲವನ್ನೂ ಕೇವಲ ಒಬ್ಬ ವ್ಯಕ್ತಿಗಾಗಿ ಮಾಡುತ್ತೀರಿ.

ಆದರೆ ಹೃದಯ ಒಡೆದಾಗ ಏನಾಗುತ್ತದೆ? ಹೃದಯ ಒಡೆಯುವುದು ಪ್ರೇಮಸಂಬಂಧದಲ್ಲಿ ಮಾತ್ರ ಎಂದು ಯೋಚಿಸಬೇಕಿಲ್ಲ; ಸ್ನೇಹದಲ್ಲಿಯೂ  ತೀವ್ರನೋವಿನ ಈ ಅನುಭವ ಮೂರು ಕಾರಣಗಳಿಂದ ಉಂಟಾಗಲು ಸಾಧ್ಯ. ಒಂದು, ನೀವು ಪ್ರೀತಿಸುವ ವ್ಯಕ್ತಿಯಿಂದ ಪ್ರೀತಿ ನಿರಾಕರಣೆ, ಸಂಗಾತಿ ಅಥವಾ ಗೆಳೆಯ/ಗೆಳತಿಯರಿಂದ ವಂಚನೆ ಅಥವಾ ಪ್ರೀತಿಪಾತ್ರರ ಸಾವು. ನನ್ನ ನೆನಪನ್ನು ಕೆದಕಿದರೆ 14ನೇ ವಯಸ್ಸಿನಲ್ಲಿ (2004) ಮೊದಲ ಸಾರಿ ಉಂಟಾದ ಭಗ್ನಪ್ರೀತಿ ನನ್ನಿಂದ ಒಂದು ಚಿತ್ರ ಬರೆಸಿತು. ಎರಡು ವರ್ಷ ಕಳೆದು ಮತ್ತೆ ಭಗ್ನಪ್ರೇಮಿಯಾದವನು ಒಂದು ಶಿಲ್ಪ ನಿರ್ಮಿಸಿದೆ.

ಆಮೇಲೆ ಒಂದಲ್ಲ, ಎರಡೆರಡು ಕಾಲೇಜು ಬಿಟ್ಟೆ. ನಮ್ಮ ಕುಟುಂಬದ  ತೊಡಗಿಸಿಕೊಳ್ಳಲಿಲ್ಲ. ಮಗನಿಗೆ ಹುಚ್ಚು ಹಿಡಿಯಿತೇ ಎಂದು ಚಿಂತೆಗೊಳಗಾದ ನನ್ನ ತಂದೆ-ತಾಯಿ ಮನೋವೈದ್ಯರಲ್ಲಿಗೆ ಕರೆದೊಯ್ದರು. ಸ್ವಾಮಿ, ಬಾಬಾ…ಎಂದು ಸಾಧ್ಯವಿದ್ದ ಪ್ರಯತ್ನಗಳನ್ನೆಲ್ಲ ಮಾಡಿದರು. ಈ ಮಧ್ಯೆ, 2014ರಲ್ಲಿ, ಥಂಬ್‌ಪಿನ್(ಹೆಬ್ಬೆರಳ ಸೂಜಿ)ಗಳನ್ನು ಬಳಸಿ ನಾನೊಂದು ಕಲಾಕೃತಿ ರಚಿಸಿದೆ. ಸುಮಾರು 16,000 ಪಿನ್ ಬಳಕೆಯಾದ ಅದನ್ನು ನಿರ್ಮಿಸಲು ಮೂರು ವಾರ ಹಿಡಿಸಿತು. ನೋವಿನಿಂದ ಬೆರಳುಗಳು ಚಲಿಸಲು ಆಗದಂತೆ ಜಡವಾದವು. ಆದರೆ ಅದರ ಫಲವಾಗಿ ರೂಪು ತಳೆದ ಶಿವ-ಶಕ್ತಿಯರ ಸುಂದರ ಕಲಾಕೃತಿ ನೋಡುತ್ತ ನನಗ್ಯಾವ ನೋವೂ  ಈಗ ನೆನೆಸಿಕೊಂಡರೆ, ಬೇರೆಯದೇ ಒಂದು ಶಕ್ತಿ ನನ್ನಿಂದ ಅದನ್ನುಮಾಡಿಸಿತು ಎಂದು ಅನ್ನಿಸುತ್ತದೆ.

ಸದ್ಯದ ಲೆಕ್ಕ ಹೇಳಬೇಕೆಂದರೆ, ಮೂರು ಕಾಲೇಜುಗಳನ್ನು ಬಿಟ್ಟಿದ್ದೇನೆ, ಹಲವು ಸಂಸ್ಥೆಗಳನ್ನು ಮುಚ್ಚಿದ್ದೇನೆ, ಅನೇಕ ಪುಸ್ತಕಗಳನ್ನು ಬರೆದಿದ್ದೇನೆ, ಬೇಕಾದಷ್ಟು ಪೇಂಟಿಗ್‌ಸ್ ಮಾಡಿದ್ದೇನೆ, ಸಂಗೀತ ಸಂಯೋಜಿಸಿದ್ದೇನೆ ಮತ್ತು ಈಗಲೂ ಹಲವು ವಿಶ್ವ ದಾಖಲೆಗಳನ್ನು ಮುರಿಯುವ ಸನ್ನಾಹ ನಡೆಸಿದ್ದೇನೆ. ಸಾಕಷ್ಟು ಕಿರಿಯ ವಯಸ್ಸಿನಲ್ಲಿಯೇ ಇಷ್ಟೆಲ್ಲ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎಂದರೆ ಅದಕ್ಕೊಂದು ವಿನ್ಯಾಸವಿದೆ: ಪ್ರತಿ ಬಾರಿ ಹೃದಯ ಒಡೆದಾಗಲೂ  ಸಾಹಸವನ್ನು ಮಾಡಿದ್ದೇನೆ! ನನ್ನ ಕಾರ್ಯ ಚಟುವಟಿಕೆಗಳ ಹಿಂದೆ ಇರುವ  ಸರಳ, ನೇರ ಕಾರಣ ಇಷ್ಟೇ. ಬಿಂದುಗಳನ್ನೆಲ್ಲಾ ಸೇರಿಸಿದಾಗ ಸಿಕ್ಕ ರೇಖೆ.

ನಾನು ಮಾತ್ರ ಹೀಗೆಯೋ ಅಥವಾ ಇತರರ ವಿಷಯದಲ್ಲಿಯೂ ಇದು ನಿಜವೋ ಎಂದು ಪರೀಕ್ಷಿಸಿದಾಗ ನನಗೆ ಅಚ್ಚರಿ ಕಾದಿತ್ತು. ಚರಿತ್ರೆಯಲ್ಲಿ ಸಹ ಪ್ರೇಮಭಂಗದ ಫಲವಾಗಿ ಶ್ರೇಷ್ಠ ಕಲೆ ಸೃಷ್ಟಿಯಾದ ದೃಷ್ಟಾಂತಗಳಿದ್ದವು. ಹದಿನೇಳನೇ ಶತಮಾನದಲ್ಲಿ, ತೀರಿಕೊಂಡ ಪ್ರೀತಿಯ ಪತ್ನಿ ಮುಮ್ತಾಜ್ ಮಹಲ್‌ಳಿಗಾಗಿ ತಾಜಮಹಲ್ ಸ್ಮಾರಕ ನಿರ್ಮಿಸಿದ ಶಹಜಹಾನ್ ಕತೆಯನ್ನು ಮತ್ತೇನೆಂದು  ‘ಭಗ್ನಪ್ರೇಮದ ಸಂಸ್ಮರಣೆ’ ಎಂಬ ಸರಳ, ನೇರ ಕಾರಣಕ್ಕಾಗಿ ಮೇಲೆದ್ದ  ಆ ಪ್ರೇಮಸೌಧ ಕೋಟಿಗಟ್ಟಲೆ ಹಣ ಹಾಗೂ 20 ವರ್ಷಗಳನ್ನು ತೆಗೆದುಕೊಂಡಿತು ಎಂದರೆ ಆ ಶಕ್ತಿಯ ಅಂದಾಜು ಸಿಗುತ್ತದೆ.

ವಿಶ್ವಾದ್ಯಂತ, ಕಲಾವಿದರೆಲ್ಲರೂ-ಆ್ಯಮಿ ವೈನ್‌ಹೌಸ್, ಅಲೆಗ್ಸಾಂಡರ್, ಶೇಕ್‌ಸ್ಪಿಯರ್, ಅಡೀಲ್ ಮುಂತಾಗಿ ಯಾರೇ ಆಗಿರಬಹುದು-ತಮ್ಮ ನೋವಿನ ಕಲೆಗಳನ್ನು ತೋರಿಸಿದ್ದಾರೆ; ಇದರಿಂದಾಗಿಯೇ ತಮ್ಮ ಕಲೆ ಅರಳಿದ್ದು ಎಂದು ಜಗತ್ತಿಗೆ ಹೇಳಿದ್ದಾರೆ. ನೋವನ್ನು ಅಪ್ಪಿಕೊಂಡಿದ್ದಾರೆ. ಸ್ವಲ್ಪವೂ ಸಂಕೋಚಪಡದೆ, ಹೆಮ್ಮೆಯಿಂದ ಕಲೆಗಳನ್ನು ಲೋಕಕ್ಕೇ ಪ್ರದರ್ಶಿಸಿದ್ದಾರೆ. ಇದು ಯಾರೋ  ಬಾಬಾ, ಸ್ವಾಮಿ ಮಾಡಿದ ಪವಾಡವಲ್ಲ, ತಮ್ಮದೇ ಹೃದಯದಲ್ಲಿ ಬಂದಿಯಾಗಿದ್ದ ಅಸೀಮ ಭಾವನಾತ್ಮಕ ಶಕ್ತಿ ಎಂದು ಸಾರಿದ್ದಾರೆ.

ನಂಬಿಕೆ ಬರುತ್ತಿಲ್ಲವೇ? ಹಾಗಾದರೆ ಎಲ್ಲ ಸೇರಿ ಈಗೊಂದು ಪ್ರಯೋಗ ಮಾಡೋಣ. ನೀವೆಲ್ಲ ಮನೆಗೆ-ಅಥವಾ ಬೇರೆಲ್ಲಿಗಾದರೂ ಇರಬಹುದು-ಮರಳಿದ ಕೂಡಲೆ ಒಂದು ಪ್ರೇಮಭಂಗ ಅನುಭವಿಸಲು ಮುಂದಾಗಿ. ನಾನು ಅನುಭವಿಸಿರುವೆನಾದ್ದರಿಂದ ಇಂದು ಅದನ್ನು ಹಂಚಿಕೊಂಡಿದ್ದೇನೆ. ಭಗ್ನಪ್ರೇಮಿ ಗಳಾದಾಗ, ಅತೀವ ನಿರಾಶೆ ಅನುಭವಿಸುತ್ತೇವೆ. ಛಿದ್ರಗೊಂಡಿರುತ್ತೇವೆ. ಘನತೆ, ಗೌರವ ಕಳೆದುಹೋಗಿರುತ್ತದೆ…ಮತ್ತು ಒಂದು ಗೊತ್ತಾದ ವಿನ್ಯಾಸದಲ್ಲಿ ಅದು ಮುಂದುವರಿಯುತ್ತದೆ. ಕಡಿದಾದ  ತುತ್ತತುದಿಯಲ್ಲಿರುವಂತೆ ಅನಿಸುವ ಮನಃಸ್ಥಿತಿ ಎರಡು ಫಲಿತಾಂಶಗಳನ್ನು ಹೊಂದಿರುತ್ತದೆ: ನೀವು ಬೀಳಲೂಬಹುದು, ಹಾರಲೂಬಹುದು! ಆದರೆ ನಿಮಗದರ ಧ್ಯಾಸವಿಲ್ಲ. ಏಕೆಂದರೆ ಕಳೆದುಕೊಳ್ಳಲಿಕ್ಕೆ ಏನೂ ಉಳಿದಿಲ್ಲವಲ್ಲ? ಜತೆಗೆ ಈ ಭಾವನಾತ್ಮಕ ಶಕ್ತಿಯ ಚರಮ ತಲುಪಿದ್ದೀರಿ. ಅಸುರಕ್ಷಿತ ಭಾವ, ಅಸೂಯೆ, ನೋವು-ಹತಾಶೆಗಳ ಮಿಶ್ರಣ ಉತ್ಪಾದಿಸಿದ ಆ ಸ್ಫೋಟಕ ಶಕ್ತಿ ಹೇಗಾದರೂ ನಿಮ್ಮಿಂದ ಬಿಡುಗಡೆಗೊಳ್ಳಬೇಕಿರುತ್ತದೆ.

ಪ್ರೇಮಭಂಗದ ಇನ್ನೊಂದು ಲಾಭವೆಂದರೆ ನಿಮ್ಮ ಮನಸ್ಸೀಗ ಖಾಲಿಯೋ ಖಾಲಿ! ಪ್ರಪಂಚದ ಅತ್ಯಂತ ಬಿಝಿ ಮನುಷ್ಯನಿಗೂ ಈಗ ‘ಇದೇನಾಯಿತು, ಏಕೆ ಹೀಗಾಯಿತು?’  ಆತ್ಮಾವಲೋಕನ ಮಾಡಿಕೊಳ್ಳಲು ಭರಪೂರ ಅವಕಾಶ. ತನಗೆ ನಿಜವಾಗಿ ಬೇಕಾಗಿರುವುದೇನು ಎಂಬುದು ಆಗ ಸ್ಪಷ್ಟವಾಗಿ ಹೊಳೆದು ತೋರುತ್ತದೆ. ಎಲ್ಲ ಯಶಸ್ಸಿನ ಕತೆಗಳಲ್ಲಿಯೂ ಕಾಣುವುದು ಇದೇ ಸಿದ್ಧ ಸೂತ್ರ: ಅಪರಿಮಿತ ಭಾವನಾತ್ಮಕ ಶಕ್ತಿ, ಧೈರ್ಯ ಮತ್ತು ಮುಕ್ತ ಮನಸ್ಸು. ಈ ಶಕ್ತಿಯಿಂದ ಪ್ರಯತ್ನ ಉದ್ದೀಪಿಸಿಕೊಂಡು ನೀವು ಗೆಲ್ಲಬಹುದು ಅಥವಾ ಸೋಲಬಹುದು. ಒಂದು ಉತ್ತಮ ಪೇಂಟಿಂಗ್ ಮಾಡಲು, ಪುಸ್ತಕ ಬರೆಯಲು, ಚಳವಳಿ ಕಟ್ಟಲು, ಉದ್ದಿಮೆ ಆರಂಭಿಸಲು…ಹೀಗೆ ಯಾವುದಕ್ಕೆ ಬೇಕಾದರೂ ಆ ಶಕ್ತಿಯನ್ನು ತಿರುಗಿಸಿಕೊಳ್ಳಬಹುದು.

 ಮುನ್ನ ನನ್ನದೊಂದು ‘ಡಿಸ್‌ಕ್ಲೇಮರ್’: ನಿಮ್ಮ ಹೃದಯದ ಹಾದಿ ಆರಿಸಿಕೊಳ್ಳಲು ದಯವಿಟ್ಟು ಕಾಲೇಜುಗಳಿಂದ ಹೊರಬೀಳಬೇಡಿ. ಕೆಲಸ ಬಿಡಬೇಡಿ. ನಿಮಗೆ ನಿಜವಾಗಿ ಏನನ್ನು ಮಾಡಬೇಕೆಂದಿದೆ, ಅಂತರಂಗ ಏನು ಹೇಳುತ್ತಿದೆ ಎಂದು ಕಂಡುಕೊಂಡು ಈ ಶಕ್ತಿಯ ಸಮರ್ಪಕ ಬಳಕೆ ಮಾಡಿಕೊಳ್ಳಿ.

Tags

Related Articles

Leave a Reply

Your email address will not be published. Required fields are marked *

Language
Close