ಪ್ರಭಾವ ಸೋಲಬೇಕು

Posted In : ಸಂಪಾದಕೀಯ-1

ಐಎಎಸ್ ಅಧಿಕಾರಿ ಪುತ್ರಿಯನ್ನು ಕಾರಿನಲ್ಲಿ ಹಿಂಬಾಲಿಸಿ, ಅಪಹರಣಕ್ಕೆ ಯತ್ನಿಸಿದ ಆರೋಪದ ಮೇರೆಗೆ ಹರಿಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಾಲಾ ಪುತ್ರ ವಿಕಾಸ್ ಹಾಗೂ ಆತನ ಸಹಪಾಠಿ ಆಶಿಶ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿರು ವುದು ಸರಿಯಷ್ಟೇ. ಈ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯದ ಮೂಲಕ ಪೊಲೀಸ್ ವಶಕ್ಕೆ ಪಡೆಯು ವಷ್ಟರಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದಿವೆ.

ಅಂತಿಮವಾಗಿ ಅವರ ಬಂಧನವಾಗಿರುವುದು, ವ್ಯಕ್ತಿ ಎಷ್ಟೇ ದೊಡ್ಡವ ನಾಗಿದ್ದರೂ, ಪ್ರಭಾವಶಾಲಿಯಾಗಿದ್ದರೂ ಈ ನೆಲದ ಕಾನೂನಿನ ಮುಂದೆ ಒಂದೇ ಎಂಬುದು ಈ ಪ್ರಕರಣದಲ್ಲಿ ಸಾಬೀತಾಗಿದೆ. ಆದರೆ ಇಲ್ಲಿ ವಿಚಾರ ಮಾಡಬೇಕಿರುವ ಅಂಶವೇನೆಂದರೆ ಸಂತ್ರಸ್ತೆ ಐಎಎಸ್ ಅಧಿಕಾರಿ ಪುತ್ರಿ ಯಾಗಿದ್ದರಿಂದ, ಆಕೆಯೂ ಸಹ ಪ್ರಭಾವಶಾಲಿಯಾಗಿದ್ದರಿಂದ ಆರೋಪಿ ಗಳನ್ನು ಕಾನೂನಿನ ವ್ಯಾಪ್ತಿಗೆ ತಂದು ಸರಳುಗಳ ಹಿಂದೆ ತಳ್ಳಲು ಸಾಧ್ಯ ವಾಯಿತು.  ಒಂದೊಮ್ಮೆ ಆಕೆ ಸಾಮಾನ್ಯ ಕುಟುಂಬದಿಂದ ಬಂದಿದ್ದರೆ, ಕಾನೂನು ಕಟ್ಟಳೆಗಳನ್ನು ಎಟುಕಿಸಿಕೊಳ್ಳಲು ಅಸಮರ್ಥಳಾಗಿದ್ದರೆ ಪೊಲೀಸರು ಇದೇ ರೀತಿ ಕ್ರಮ ತೆಗೆದುಕೊಳ್ಳುತ್ತಿದ್ದರೆ, ಆರೋಪಿಗಳನ್ನು ಬಂಧಿಸುತ್ತಿದ್ದರೆ, ಆರೋಪಿಗಳು ತಮಗಿರುವ ಪ್ರಭಾವ ಬಳಸಿ ನುಣುಚಿ ಕೊಳ್ಳುತ್ತಿರಲಿಲ್ಲವೇ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಈ ರೀತಿ ಪ್ರಶ್ನೆ ಬೇರೆಯವರಿಗಿರಲಿ, ಸ್ವತಃ ಸಂತ್ರಸ್ತೆಗೆ ಮೂಡಿದೆ. ನಾನೇನಾದರೂ ಐಎಎಸ್ ಅಧಿಕಾರಿ ಮಗಳಾಗದೇ ಹೋಗಿದ್ದಿದ್ದರೆ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿರಲಿಲ್ಲ ಎಂಬ ಆಕೆಯ ಮಾತು ಈ ನೆಲದ ಕಾನೂನು ಹೇಗೆ ವ್ಯಕ್ತಿಗಳು ಹಾಗೂ ಪ್ರಭಾವಕ್ಕೆ ಅನುಗುಣವಾಗಿ ತಿರುಚಿಕೊಳ್ಳುತ್ತವೆ ಎಂಬುದಕ್ಕೆ ಸ್ಪಷ್ಟ ನಿದರ್ಶನ.

ನಿಜಕ್ಕೂ ಸಂತ್ರಸ್ತೆ ಮಾತು ಸತ್ಯ. ಗಣ್ಯ ವ್ಯಕ್ತಿಗಳ ಮಕ್ಕಳು ಎಂಬ ಕಾರಣಕ್ಕೆ ಅಮಾಯಕ ಹೆಣ್ಣುಮಕ್ಕಳ ಮೇಲೆ ನಡೆದ ಅದೆಷ್ಟೋ ದೌರ್ಜನ್ಯ ಪ್ರಕರಣಗಳು ಮುಚ್ಚಿ ಹೋಗಿವೆ. ಪೊಲೀಸ್ ಠಾಣೆ ಮೆಟ್ಟಿಲನ್ನೇ ಹತ್ತಿ. ಅಪ್ಪಿತಪ್ಪಿ ಠಾಣೆ ಮೆಟ್ಟಿಲು ಹತ್ತಿದರೂ ಪ್ರಭಾವ ಮುಂದೆ ಸೋತು ತಣ್ಣಗೆ ಮಲಗಿವೆ. ಒಂದೊಮ್ಮೆ ಪ್ರಕರಣ ದಾಖಲಾಗಿ ನ್ಯಾಯಾಲಯದ ಮುಂದೆ ಹೋದರೂ ಹಣ ಮತ್ತಿತರ ಪ್ರಭಾವಗಳಿಗೆ ಮಣಿದು ರಾಜಿಯಾಗಿ ಹೋಗಿವೆ. ದುಷ್ಕರ್ಮಿಗಳಲ್ಲಿ ಏನೂ ಮಾಡಿದರೂ ಜಯಿಸಿಕೊಳ್ಳಬಹುದೆಂಬ ಹುಂಬತನ ಪೋಷಿಸಿವೆ. ಇಂಥದ್ದಕ್ಕೆ ತಿಲಾಂಜಲಿ ಬೀಳಬೇಕಾದರೆ ಕಾನೂನು ಎಲ್ಲರಿಗೂ ಸಮಾನವಾಗಿ ಬಳಕೆ ಆಗಬೇಕು. ಪ್ರಭಾವಗಳು ಸೋಲಬೇಕು.

ಆಲೋಚಿಸುವ ಅಗತ್ಯವಿತ್ತು

ಮಂಗಳೂರು ವಿವಿ ಪ್ರಥಮ ಬಿಸಿಎ ಪದವಿ ತರಗತಿ ಪಠ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಯೋಧರ ಕುರಿತ ಬರಹ ವಿವಾದಕ್ಕೆ ಕಾರಣವಾಗಿದೆ. ಯುದ್ಧ ಎಂಬ ಪಠ್ಯದಲ್ಲಿ ಬರಗೂರು ಅವರು ಯುದ್ಧ ಎನ್ನುವುದು ಒಂದು ಉದ್ಯಮ ವಾಗು ತ್ತಿದೆಯಲ್ಲವೇ? ದೇಶಭಕ್ತಿಯ ಗೌರವಾರ್ಥವಾಗಿ ಬೇಕಾದರೆ ಯುದ್ಧವನ್ನು ದೇಶಪ್ರೇಮೋದ್ಯಮ ಎಂದು ಕರೆಯಬಹುದು ಎಂಬ ಒಕ್ಕಣಿಕೆಯೊಂದಿಗೆ ಪಾಠ ಮುಗಿಸಿದ್ದಾರೆ. ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಯುದ್ಧದ ಸಂದರ್ಭದಲ್ಲಿ ಉಭಯ ದೇಶದ ಸೈನಿಕರು ಗಡಿ ಪ್ರದೇಶದ ಹಳ್ಳಿಗಳಲ್ಲಿ ಅತ್ಯಾಚಾರ ಎಸಗುತ್ತಾರೆ ಎಂದು ಬರೆದಿದ್ದಾರೆ. ತನ್ನ ಗೆಳೆಯನೊಬ್ಬ ನೀಡಿದ ಮಾಹಿತಿ ಆಧಾರದ ಮೇಲೆ ಈ ವಾಕ್ಯ ಜೋಡಿಸಲಾಗಿದೆ ಎಂಬ ಸ್ಪಷ್ಟೀಕರಣ ನೀಡಿದ್ದಾರೆ. ಸೈನಿಕರ ವಿಚಾರದಲ್ಲೂ ಅವರು ಇಂಥ ಬರಹವನ್ನು ವಿವಿಯೊಂದರ ಪಠ್ಯಕ್ಕೆ ನೀಡುವಾಗ ಯೋಚಿಸದೇ ಇರುವುದು ಹಲವು ಅನುಮಾನಕ್ಕೆ ಕಾರಣ ವಾಗಿದೆ. ಇಂಥ ಪಠ್ಯವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ವಿವಿಯಾದರೂ ಸ್ವಲ್ಪ ಯೋಚನೆ ಮಾಡುವ ಅಗತ್ಯವಿತ್ತು.

Leave a Reply

Your email address will not be published. Required fields are marked *

eight + 11 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top