ಅಂತರಂಗದ ಒಲವು ವ್ಯಕ್ತಿತ್ವದ ರೂಪಾಂತರ

Posted In : ಗುರು

ಶ್ರೀನಿವಾಸ ಅರ್ಕ

ಯಾರು ಏಕಾಂಗಿಯಾಗಿರುತ್ತಾರೋ, ಅವರಿಗೆ ಅಪರಿಚಿತವಾದದ್ದು ಭಯ ಹುಟ್ಟಿಸು ತ್ತದೆ. ನೀವು ಪ್ರೀತಿಯ ಮಹಾಪೂರದಲ್ಲಿ ಹರಿದು ಹೋಗುತ್ತಿರು ವಾಗ ನಿಮಗೆ ನಿರಾಶ ರಾಗುವುದಕ್ಕೆ ಕಾರಣವಿಲ್ಲ. ನೀವು ಏನನ್ನೂ ನಿರೀಕ್ಷಿಸುವುದಿಲ್ಲ, ವಾಸ್ತವವಾಗಿ ನೀವು ಪ್ರೀತಿಸಿದ ವ್ಯಕ್ತಿಯ ಎಲ್ಲವನ್ನೂ ಪ್ರೀತಿಯಿಂದ ಸ್ವೀಕರಿಸುತ್ತೀರಿ. ಇಲ್ಲಿ ನೀವು ಕೊಡು ತ್ತಿರುತ್ತೀರಿ. ನೀವು ಕೊಡುತ್ತಿರುವುದು ಕಾಲಾತೀತವಾದ ಅವಕಾಶದಲ್ಲಿ ಮರೆಯಾಗಿರು ತ್ತದೆ. ಇಲ್ಲಿ ಒಂದೇ ನಿಯಮ ಎಂದರೆ, ಪಡೆಯುವ ವ್ಯಕ್ತಿ ಯಾವುದೇ ಬಂಧನಗಳನ್ನು ಹೇರಬಾರದು. ಹಾಗಾದಾಗ ನಿಮ್ಮ ಕೊಡುವಿಕೆ ಸೀಮಾತೀತವಾಗಿರುತ್ತದೆ.

ಹೀಗಾದಾಗ, ಪ್ರತಿದಿನ ಪ್ರೀತಿ ಅರಳುತ್ತ ಹೋಗುತ್ತದೆ. ಲೌಕಿಕ ಪ್ರಪಂಚದಲ್ಲಿ ನಾವು ಕಾಣುವ ಹೂವಿನ ಅರಳುವಿಕೆ, ಸೀಮಾತೀತವಾದ ಈ ಹೃದಯದ-ಹೂವಿನ ಅರಳು ವಿಕೆಯ ಮುಂದೆ ಏನೇನೂ ಅಲ್ಲ. ನಿಮ್ಮ ಪ್ರೀತಿಯ ಮಹಾಪೂರವನ್ನು ತಡೆಯುವ ಶಕ್ತಿ ಯಾವುದಕ್ಕೂ ಇರುವುದಿಲ್ಲ. ಇದು ನದಿಯ ಪ್ರವಾಹಕ್ಕಿಂತ ಮಿಗಿಲಾದದ್ದು. ನದಿಯ ಪ್ರವಾಹ ಬಂದಾಗ ಭಯಾ ನಕವಾದ ಭೋರ್ಗರೆತ ಕೇಳಿಸುತ್ತದೆ. ಆದರೆ ಪ್ರೀತಿಯ ಕೇಳಿಯೂ ಕೇಳಿಸದ ನಾದ ಸಂಗೀತದಂತೆ ಸುಮಧುರ. ಯಾರೂ ಇದನ್ನು ಕಾಣ ಲಾರರು. ಯಾರು ಇದನ್ನು ಅನುಭವಿಸುತ್ತಾರೋ, ಅವರು ಮಾತ್ರ ಇದರ ಆಳವನ್ನು ಗ್ರಹಿಸಬಲ್ಲರು.

ಇಂತಹ ಪ್ರಜ್ಞಾ ಪೂರ್ವಕವಾದ ಅಧ್ಯಾತ್ಮಿಕ ಮಟ್ಟದ ಪ್ರೀತಿ, ನಿರಾಸೆಗಾಗಲೀ ತಪ್ಪಾಗಿ ಅರ್ಥೈಸುವುದಕ್ಕಾಗಲೀ ಅವಕಾಶ ಕೊಡು ವುದಿಲ್ಲ. ಇಂತಹ ಪ್ರೀತಿಯ ಅನುಭವ ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ನೋವು ದೂರವಾಗುತ್ತದೆ. ನಕಾರಾತ್ಮಕ ಭಾವ ನೆಗಳು ಗಾಳಿಯಲ್ಲಿ ಹಾರಿಹೋಗುತ್ತವೆ. ನೀವು ಲವಲವಿಕೆಯವರಾಗಿ ಕಾಣಿಸುತ್ತೀರಿ. ಈ ಲವಲವಿಕೆ, ಈ ಚೈತನ್ಯ ನಿಮ್ಮೊಳಗಿನಿಂದ ಬಂದಿರುತ್ತದೆ; ಹೊರಗಿನಿಂದಲ್ಲ. ಪ್ರೀತಿಯ ಚೇತೋಹಾರಿ ಪ್ರವೃತ್ತಿ ಸಹಜವಾದಷ್ಟು ಹೆಚ್ಚು ಬೆಳಗುತ್ತದೆ. ಈ ಭೌತಿಕ ದೇಹ ನಿಮ್ಮ ಜೀವನದ ಕ್ಷಣಗಳನ್ನು ಮೆಲುಕು ಹಾಕುವ ಸಾಧನವಾಗುತ್ತದೆ. ನಿಮ್ಮ ಒಳಪ್ರಜ್ಞೆಗೆ ಸಂತೋಷ ಎಂಬುದು ಆಮ್ಲಜನಕದಂತೆ ಕೆಲಸ ಮಾಡುತ್ತದೆ. ಈ ಸಂತೋಷವನ್ನು, ಈ ಅಂತರಂಗದ ನಿಜವಾದ ಪ್ರೀತಿಯನ್ನು ಅನುಭವಿಸದವರು ದೈಹಿಕವಾಗಿ ಆರೋಗ್ಯವಂತರಾಗಿ ಕಂಡರೂ, ಮಾನಸಿಕವಾಗಿ ನಿರ್ಬಲರಾಗಿರುತ್ತಾರೆ. ಅಂತಹವರು ಪ್ರೀತಿಯನ್ನು ಕೊಟ್ಟಿರು ವುದೂ ಇಲ್ಲ, ಪಡೆದಿರುವುದೂ ಇಲ್ಲ.

ಅವರಿಗೆ ತಮ್ಮ ಜೀವನದ ದೃಷ್ಟಿ ತಿಳಿದಿರುವುದಿಲ್ಲ. ಅವರು, ಗೆದ್ದಲು ಗೂಡನ್ನು ಕಟ್ಟುವ ಹಾಗೆ, ಕೆಲಸವನ್ನು ಮತ್ತ ಮತ್ತೆ ಮಾಡುತ್ತಿರುತ್ತಾರೆ. ಇದು ಸೃಷ್ಟಿ ವಿಕಾಸದ ಹೆಜ್ಜೆಗಳನ್ನು ಬಿಡಿಸುವ ಭಾಗವೇ ಆಗಿದೆ. ನಿಮ್ಮ ಅಂತರಾಳದಲ್ಲಿ ನೀವು ನಿಜವಾದ ಪ್ರೀತಿಯನ್ನು ಅನುಭವ ಮಾಡುತ್ತಿದ್ದಂತೆ, ನಿಮ್ಮಲ್ಲಿ ಬದಲಾವಣೆಗಳಾಗುವುದನ್ನು ಕಾಣುತ್ತೀರಿ. ನಿಮ್ಮ ಧ್ವನಿಯಲ್ಲಿ, ನಿಮ್ಮ ಆಲೋಚನೆಯ ರೀತಿಯಲ್ಲಿ, ಮತ್ತೆ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗಳಾಗುತ್ತವೆ. ಎಲ್ಲವೂ ಸುಧಾರಣೆಗೊಳ್ಳುತ್ತವೆ. ನಿಮ್ಮ ಪ್ರೀತಿಯ ಅಯಸ್ಕಾಂತ ಶಕ್ತಿಯಿಂದಾಗಿ ನಿಮ್ಮ ಸಂಪರ್ಕಕ್ಕೆ ಬಂದವರೆಲ್ಲ ಬದಲಾವಣೆಗೊಳ್ಳುತ್ತಾರೆ. ತಮ್ಮದೇ ಆಭಿಪ್ರಾ ಯಗಳಿಂದಾಗಿ ತಮ್ಮನ್ನು ಕಟ್ಟು ಹಾಕಿಕೊಂಡಿರುವವರಿಗೆ ಪ್ರೀತಿಯ ಈ ಅಗಾಧವಾದ ತಿಳಿಯಲು ಸ್ವಲ್ಪ ಕಾಲ ಬೇಕಾಗಬಹುದು.

ಸಾಕ್ಷಾತ್ಕಾರ ಮತ್ತು ಪ್ರೀತ್ಯಾನುಭವಗಳು ನೀವು ಮಾತನಾಡುವ ರೀತಿಯನ್ನು ಬದಲಾಯಿಸುತ್ತವೆ. ನೀವು ಹೇಳುವ ಪದಗಳು ಅತಿ ಅರ್ಥವತ್ತಾಗುತ್ತವೆ, ಶಕ್ತಿವಂತವಾಗಿರುತ್ತವೆ. ಆ ಪದಗಳಿಗೆ ಸಿಹಿಯ ಲೇಪನವಾದಂತನಿಸುತ್ತದೆ. ಕಾರಣ, ಈ ಪದಗಳು ನಿಮ್ಮ ಅಂತರಾಳದಿಂದ ಮೂಡಿಬಂದಿರುತ್ತವೆ, ಮೇಲ್ಮೈಯಿಂದಲ್ಲ. ನಿಮಗೂ ನಿಮ್ಮ ಜೀವನ ಅರ್ಥವತ್ತಾಗಿ ಕಾಣಿಸುತ್ತದೆ. ನೀವು ಅತೀವ ತೃಪ್ತಿಯ ಅನುಭವ ಮಾಡುತ್ತೀರಿ. ಯಾರು ಈ ಪ್ರೀತ್ಯಾನುಭವದಿಂದ ಜಾಗೃತರಾಗಿರುವು ದಿಲ್ಲವೋ ಅಂತಹವರು ಚಿಂತಿತರಾಗಿರುತ್ತಾರೆ, ಆತಂಕಗೊಂಡಿರುತ್ತಾರೆ. ಏನಾಗುತ್ತದೆ? ನಾನೆಲ್ಲಿ ಹೋಗುತ್ತೇನೆ? ಪ್ರಶ್ನೆಗಳು ಅವರನ್ನು ಕಾಡುತ್ತಿದ್ದು, ಅವರಿಗೆ ನಿದ್ರಿಸಲೂ ಬಿಡುವುದಿಲ್ಲ, ಸ್ವಪ್ನದಲ್ಲಿ ಸಹ ಸಂತೋಷವಾಗಿರಲೂ ಬಿಡುವುದಿಲ್ಲ. ಅವರ ಹೃದಯದಲ್ಲಿ ಅತೃಪ್ತಿಯ ನೆರಳು ಕವಿದಿರುತ್ತದೆ, ಕಾರಣ, ಅವರು ತಮ್ಮ ಅಂತರಾಳದ ಭಾವನೆಗಳಲ್ಲಿ, ಆಲೋಚನೆಗಳಲ್ಲಿ, ಮುಳುಗಬಲ್ಲ ಕ್ಷಮತೆಯನ್ನು ಹೊಂದಿರುವುದಿಲ್ಲ.ಅಂತೇ, ನಾವೆಲ್ಲಾ ನಮ್ಮ ಹೃದಯಗಳನ್ನು ತೆರೆದುಕೊಳ್ಳಬೇಕು.

ನಮ್ಮ ಅಂತರಾಳದಲ್ಲಿ ಹುದುಗಿ ಕುಳಿತಿರುವ ಪ್ರೀತಿಯನ್ನು ಎಬ್ಬಿಸಬೇಕು. ಹಾಗೆ ಮಾಡುತ್ತಾ ಈ ಪ್ರಪಂಚದಲ್ಲಿ ಗೆಲುವನ್ನು, ಚೈತನ್ಯವನ್ನು, ಹೆಚ್ಚಿನ ತಿಳುವಳಿಕೆಯನ್ನು ಮತ್ತು ಶಾಂತಿಯನ್ನು ನಾವೆಲ್ಲಾ ಸ್ಥಾಪಿಸೋಣ.

Leave a Reply

Your email address will not be published. Required fields are marked *

ten − two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top