About Us Advertise with us Be a Reporter E-Paper

ಅಂಕಣಗಳು

ರಾಹುಲ್ ಬದಲು, ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗಲಿ

ಸಂದರ್ಶನ: ಪ್ರಭಾಕರ ಟಿ.

ಮಾಜಿ ಸಂಸದ ಎಚ್.ವಿಶ್ವನಾಥ್ ಜೆಡಿಎಸ್‌ನ ರಾಜ್ಯಾಧ್ಯಕ್ಷ ಗದ್ದುಗೆ ಏರಿದ್ದಾರೆ. ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಪಕ್ಷ ಸಂಘಟನೆಗೆ ಹಾಕಿಕೊಂಡಿರುವ ಯೋಜನೆಗಳನ್ನು ‘ವಿಶ್ವವಾಣಿ’ಯೊಂದಿಗೆ  ಅವರು  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಸ್ಥಾನಕ್ಕೆ ಸೂಕ್ತರಲ್ಲ. ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸೂಕ್ತ ಆಯ್ಕೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭತ್ತದ ಸಸಿ ನಾಟಿ ಮಾಡಿರುವುದನ್ನು ಹಾಸ್ಯಾಸ್ಪದ ಎಂದು ಬಿಜೆಪಿ ಮುಖಂಡರು ಲೇವಡಿ ಮಾಡಿದ್ದಾರಲ್ಲಾ ?

 -ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಮಗ, ಮಣ್ಣಿ ಮಗ. ಸಕಾಲದಲ್ಲಿ ಮಳೆಯಾಗದೆ ಮತ್ತು ನೀರಿನ ಕೊರತೆಯಿಂದ ಕಳೆದ ಮೂರು ನಾಲ್ಕು  ಮಂಡ್ಯ ಭಾಗದಲ್ಲಿ ಭತ್ತ ನಾಟಿ ಸರಿಯಾಗಿ ಆಗಿಲ್ಲ. ಈ ವರ್ಷ ದೈವಿಚ್ಛೆಯಿಂದ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರೈತರೊಂದಿಗೆ ಭತ್ತದ ಸಸಿ ನಾಟಿ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ನಾಟಿ ಮಾಡಿರುವುದರಲ್ಲಿ ತಪ್ಪೇನಿದೆ?  ಬಿಜೆಪಿ ಮುಖಂಡರಿಗೆ ಭತ್ತನೂ ಗೊತ್ತಿಲ್ಲ, ನಾಟಿನೂ ಗೊತ್ತಿಲ್ಲ, ರೈತನೂ ಗೊತ್ತಿಲ್ಲ. ಎರಡು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಚರಕ ಮುಂದೆ ಕೂತು ನೂಲು ತೆಗೆದಿದ್ದರು. ಅವರು ಇನ್ನೂ ನೂಲೂ ತೆಗೆಯುತ್ತಿದ್ದಾರಾ? ಅದಕ್ಕೂ ಮೊದಲು  ಚರಕ ಸುತ್ತಿದ ಸಾಕ್ಷಿಗಳಿಲ್ಲ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುತ್ತಾರೆ. ಎಲ್ಲವನ್ನೂ ವ್ಯಂಗ್ಯ ಮಾಡುವುದು ಸರಿಯಲ್ಲ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಕ್ಷದಲ್ಲಿ ಮಹತ್ತರ ಬದಲಾವಣೆಯಾಗಿದೆಯೇ?

 ಅಧಿಕಾರ ಸ್ವೀಕರಿಸಿ ಇನ್ನೂ ಹತ್ತು ದಿನಗಳು ಕಳೆದಿಲ್ಲ. ಒಂದೇ ದಿನದಲ್ಲಿ ಬದಲಾವಣೆ ತರಲು ಆಗಲ್ಲ. ಪಕ್ಷದೊಳಗೆ ಕ್ರಾಂತಿಕಾರಿ ಬದಲಾವಣೆ ತರಬೇಕು ಎನ್ನುವ ಗುರಿಯಿದೆ. ಇದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದಲ್ಲಿ ಬಹಿರಂಗವಾಗಲಿದೆ. ಪಕ್ಷದಲ್ಲಿ ಮಹತ್ವರ ಬದಲಾವಣೆ ತರಲು ಎಲ್ಲ  ಪ್ರಯತ್ನ ಮಾಡುವೆ. ಲೋಕಸಭಾ ಚುನಾವಣೆಗೆ ಪಕ್ಷವನ್ನು ಸನ್ನದ್ಧಗೊಳಿಸಲು ಜನತಾ ಪರಿವಾರದಿಂದ ದೂರ ಸರಿದಿರುವ ನಾಯಕರನ್ನು ಒಗ್ಗೂಡಿಸಲು ಪ್ರಯತ್ನಿಸುವೆ.

 ಪಕ್ಷ ಸಂಘಟನೆಗೆ ರೂಪುರೇಷೆಯ ಸಿದ್ಧತೆ ಹೇಗಿದೆ?

ಸಹಭಾಗಿತ್ವದಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ಎಲ್ಲರನ್ನು ಒಳಗೊಂಡ ರಾಜನೀತಿ ರೂಪಿಸಲು ಸಿದ್ಧತೆ ನಡೆಸಿಕೊಂಡಿದ್ದೇನೆ. ಕಿರಿಯರಿಂದ ಹಿರಿಯವರೆಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಮರ್ಥವಾಗಿ ಕಟ್ಟಲು ಶ್ರಮಿಸುವೆ. ದೇಶದಲ್ಲಿ ಪ್ರಾಂತೀಯ ಪಕ್ಷಗಳ ಕ್ರಾಂತಿ ಉದಯವಾಗಿದೆ. ಸೀಮಾಂಧ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ,  ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲವಾಗಿ ಬೇರೂರಿವೆ. ರಾಜ್ಯದಲ್ಲಿ ಪ್ರಾಂತೀಯ ಪಕ್ಷಕ್ಕೆ ನೆಲೆ ಸಿಕ್ಕಿದ್ದು ಜೆಡಿಎಸ್‌ನಿಂದ. ಅಲ್ಲಿಂದ ಹಲವು ಪ್ರಾಂತೀಯ ಪಕ್ಷಗಳು ಹುಟ್ಟಿ ಮರೆಯಾಗಿವೆ. ಆದರೆ ಜೆಡಿಎಸ್ ತನ್ನ ನೆಲೆಯನ್ನು ಉಳಿಸಿಕೊಂಡು ಪ್ರಬಲ ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಉಳಿದಿದೆ. ಇದನ್ನು ಇನ್ನಷ್ಟು ಸುಭದ್ರಗೊಳಿಸಲುವ ಜವಾಬ್ದಾರಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನ ಹೆಗಲಿಗೆ ನೀಡಿದ್ದಾರೆ. ಪಕ್ಷ ನನ್ನ ಮೇಲಿಟ್ಟಿರುವ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ.

ಸ್ಥಳೀಯ ಚುನಾವಣೆಯಲ್ಲಿ ಮೈತ್ರಿಗೆ ನಿರಾಕರಣೆ ಮತ್ತು  ಚುನಾವಣೆಯಲ್ಲಿ ಮೈತ್ರಿಗೆ ಬೆಂಬಲ ಸೂಚಿಸಿರುವುದರಿಂದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದಿಲ್ಲವೇ ?

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡರೆ ಕಾರ್ಯಕರ್ತರಿಗೆ ಗೊಂದಲವಾಗುವುದಿಲ್ಲ. ಆದರೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಗೊಂದಲಗಳು ಸೃಷ್ಟಿಯಾಗಲಿವೆ.  ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ  ಮೈತ್ರಿ ಮಾಡಿಕೊಂಡಿದ್ದೇ ಆದರೆ ಸ್ಥಳೀಯ ಸಂಸ್ಥಗಳ ಟಿಕೆಟ್ ಆಕಾಂಕ್ಷಿಗಳಲ್ಲಿ ಒಡುಕು ಮೂಡಬಹುದು. ಇದು ಪಕ್ಷದ ಸಂಘಟನೆಯ ಮೇಲೂ ಪ್ರಭಾವ ಬೀರಲಿದೆ. ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸುವ ಚುನಾವಣೆ. ಈ  ಎಲ್ಲ ಪ್ರಾದೇಶಿಕ ಪಕ್ಷಗಳು ಜತೆಗೂಡಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಹೋರಾಟ ನಡೆಸಬೇಕಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅವಶ್ಯಕ.

 ಜೆಡಿಎಸ್ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆಯೇ?

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಒತ್ತಾಸೆಯಂತೆ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ವಾರಕ್ಕೊಮ್ಮೆ ಪಕ್ಷದ ಸಚಿವರು, ಶಾಸಕರು ಕಚೇರಿಗೆ ಬಂದು ಸಾರ್ವಜನಿಕರ ಅಹವಾಲು, ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ  ಸಾರ್ವಜನಿಕ ವಲಯದಲ್ಲಿ  ವ್ಯಕ್ತವಾಗಿದೆ.

ನಿಮ್ಮ ಕಾಲಿಗೆ ಶಸ್ತ್ರ ಚಿಕಿತ್ಸೆ ಆಗಿದೆ, ನೋವು ಇನ್ನೂ ಮಾಸಿಲ್ಲ. ಇದು ಪಕ್ಷ ಸಂಘಟನೆಯ ಮೇಲೆ ಪರಿಣಾಮ ಬೀರುವುದಿಲ್ಲವೇ?

 ಪಕ್ಷ  ಸಂಘಟನೆಗೆ ಕಾಲು ನೋವಿದ್ದರೇನಂತೆ, ತಲೆ ಸರಿಯಾಗಿದೆಯಲ್ಲ. ಕಾಲಿನ ನೋವು ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರುವುದಿಲ್ಲ. ಕಾಲಿನ ಶಸ್ತ್ರ ಚಿಕಿತ್ಸೆ ಆದಾಗ ನನ್ನ ರಾಜಕೀಯ ವಿರೋಧಿಗಳು ಅವನು ಮುಗಿದೇ ಹೋದ. ಇನ್ನು ರಾಜಕೀಯದತ್ತ ತಲೆ ಹಾಕುವುದಿಲ್ಲ ಎಂದು ವ್ಯಂಗ್ಯವಾಡಿದರು. ದೇವರು ಇಂದು ನನ್ನನ್ನು ಕಾಪಾಡಿದ್ದಾನೆ.  ಸಂಘಟಿಸುವ ಮೂಲಕ ನನ್ನ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಲಿದ್ದೇನೆ. ಎಲ್ಲದಕ್ಕೂ ಕಾದು ನೋಡಿ.

ಪದಾಧಿಕಾರಿಗಳ ಪರಿಷ್ಕರಣೆ ಯಾವಾಗ?

ಪಕ್ಷಕ್ಕೆ ಹೆಚ್ಚಾಗಿ ಯುವಕರನ್ನು ಸೆಳೆಯಲಾಗುವುದು. ಕಳ ಹಂತದಿಂದ ಯುವಕರಿಗೆ ಜವಾಬ್ದಾರಿಯುತ ಹುದ್ದೆಗಳನ್ನು ನೀಡಿ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲಾಗುವುದು. ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವವರು ಸ್ವಯಂಪ್ರೇರಿತವಾಗಿ ಬಂದರೆ ಪಕ್ಷದ ಯಾವಾಗಲು ಬಾಗಿಲು ತೆರೆದಿರುತ್ತದೆ. ಜೆಡಿಎಸ್ ಅನ್ನು ಸಮರ್ಥವಾಗಿ ಕಟ್ಟಬೇಕಿದೆ. ಪ್ರಾಂತೀಯ ಪಕ್ಷಗಳ ಯುಗದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಿ ದೇವೇಗೌಡರ ನಾಯಕತ್ವದಲ್ಲಿ  ಪರ್ಯಾಯ ಶಕ್ತಿ ಅಧಿಕಾರಕ್ಕೆ ತರಬೇಕಿದೆ. ಪಕ್ಷದ ಸಮಿತಿಗಳನ್ನು ವಿಸರ್ಜನೆ ಮಾಡಿ ಹಿರಿಯರು ಹಾಗೂ ಯುವ ಪಡೆಯನ್ನೊಳಗೊಂಡ ಹೊಸ ತಂಡ ರಚನೆಗೆ ರೂಪುರೇಷೆ ಸಿದ್ಧತೆಯಲ್ಲಿದೆ.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ನೆಲೆ ಕಲ್ಪಿಸಲು ಹಾಕಿಕೊಂಡಿರುವ ಯೋಜನೆಗಳೇನು?

ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ನೆಲೆ ಕಲ್ಪಿಸಲು ಹೆಚ್ಚು ಒತ್ತು ನೀಡಲು ನಿರ್ಧರಿಸಲಾಗಿದೆ. ಪಕ್ಷ ಸಂಘಟನೆಯೂ ಉತ್ತರ ಕರ್ನಾಟಕದಿಂದಲೇ ಶುರುವಾಗಲಿದೆ. ಈ ಭಾಗದಿಂದಲ್ಲಿ ಪ್ರವಾಸ ಆರಂಭಿಸಲು ಯೋಜನೆ ಸಿದ್ಧಗೊಂಡಿದೆ. ಉತ್ತರ ಕರ್ನಾಟಕಕ್ಕೆ ತನ್ನದೇ ಆದ  ಹಿನ್ನೆಲೆಯಿದೆ. ಸ್ವಾತಂತ್ರ್ಯ ಸಂಗ್ರಾಮ, ಗೋಕಾಕ್ ಚಳವಳಿ, ಏಕೀಕರಣ, ಮಹದಾಯಿ ಹೋರಾಟಗಳು ನಮಗೆ ಪ್ರೇರಣೆ. ಈ ಭಾಗದ ಯುವಕರನ್ನು ಸಂಘಟಿಸಿ ಪ್ರಾದೇಶಿಕ ಪಕ್ಷದ ಭೂಮಿಕೆಗೆ ಶಕ್ತಿ ತುಂಬಲಾಗುವುದು. ಜೆಡಿಎಸ್‌ಗೆ ಆ ಭಾಗದ ಜನತೆ ಬೆಂಬಲ ನೀಡುವ ನಿರೀಕ್ಷೆ ಇದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಯ ಹಿಂದೆ  ಒಕ್ಕಲಿಗರ- ಕುರುಬರ  ಮತಗಳ ಧೃವೀಕರಣದ ತಂತ್ರ ಆಡಗಿದೆ ಎಂಬ ಮಾತು ಕೇಳಿ ಬಂದಿದೆಯಲ್ಲ?

 ಈ ಎರಡು ಜಾತಿಗಳಿಂದಲೇ ರಾಜಕೀಯ ಮಾಡಲು ಆಗುವುದಿಲ್ಲ.  ಎಲ್ಲ ಜಾತಿಗಳೂ ಬೇಕು. ವಿಶ್ವನಾಥ್ ಅವರನ್ನುಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಿದ್ದರಾಮಯ್ಯ ಅವರ ಅಹಿಂದಕ್ಕೆ ಪೈಪೋಟಿ ನೀಡಲು ಎಂದು ಕೆಲವರು ಹೇಳುತ್ತಿದ್ದಾರೆ. ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದವರು ಅಹಿಂದವನ್ನು ಒಡೆದು ಹೋಳು ಮಾಡಿದ್ದಾರೆ. ಜಾತಿಗಳನ್ನು ನುಚ್ಚು ನೂರು ಮಾಡಿದ್ದಾರೆ. ಜೆಡಿಎಸ್‌ಗೆ ಎಲ್ಲ ಜಾತಿ ಜನಾಂಗದವರ ವಿಶ್ವಾಸಬೇಕು. ಇವರ ಶ್ರೇಯೋಭಿವೃದ್ಧಿಯೇ ಜೆಡಿಎಸ್‌ನ ಗುರಿ.

ರಾಹುಲ್‌ರದ್ದು ಮಕ್ಕಳಾಟ ಎಂದು ಜರಿದಿದ್ದು ಸರಿಯೇ?

ಜು.20ರಂದು ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯ ವೇಳೆ ಎಐಸಿಸಿ  ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದರು. ವಾಗ್ದಾಳಿ ನಡೆಸಿದ ನಂತರ ಪ್ರಧಾನಿ ಬಳಿಗೆ ತೆರಳಿ ಅವರನ್ನು ಅಪ್ಪಿಕೊಂಡಿದ್ದಲ್ಲದೆ, ಕಣ್ಣು ಮಿಟುಕಿಸಿದರು. ಇದು ಭಾರತದ ಸಂಸ್ಕೃತಿಗೆ ಅವಹೇಳನ ಮಾಡಿದಂತೆ. ಕಾಂಗ್ರೆಸ್‌ನ ಅಧ್ಯಕ್ಷರಾಗಿ ಹೀಗೆ ಮಾಡಿದ್ದು ತಪ್ಪು. ಈ ರೀತಿಯ ನಡತೆ ಕಲಾಪದಲ್ಲಿ ತೋರಿಸಿದ್ದು ಸರಿಯಲ್ಲ. ಈ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ.

ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಸಮರ್ಥರೇ?

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಧಾನಿ ಸ್ಥಾನಕ್ಕೆ ಸೂಕ್ತರಲ್ಲ. ಈ  ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸೂಕ್ತ. ಅವರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತದ ಚಾಣಾಕ್ಷತನವಿದೆ. ಅವರ ನಡೆ-ನುಡಿಯಲ್ಲಿ ಇಂದಿರಾ ಗಾಂಧಿಯವರನ್ನು ಕಾಣಬಹುದು. ಆದರೆ ರಾಹುಲ್‌ರಲ್ಲಿ ರಾಜಕೀಯದಲ್ಲಿರಬೇಕಾದ ಗಾಂಭೀರ್ಯತೆ ಇಲ್ಲ. ಹಾಗಾಗಿ ಪ್ರಿಯಾಂಕ ಗಾಂಧಿ ಪ್ರಧಾನಿ ಸ್ಥಾನಕ್ಕೆ ಸೂಕ್ತ. ಅವರು ಮತ್ತೆ ರಾಜಕೀಯಕ್ಕೆ ಬರುವುದಾದರೆ ಸ್ವಾಗತ.

Tags

Related Articles

Leave a Reply

Your email address will not be published. Required fields are marked *

Language
Close